26/11 ದಾಳಿಯ ಆರೋಪಿ ತಹವ್ವೂರ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೇರಿಕಾದಿಂದ ಒಪ್ಪಿಗೆ !

ತಹವ್ವೂರ ರಾಣಾ

ವಾಶಿಂಗ್ಟನ್ (ಅಮೇರಿಕಾ) – ಮುಂಬಯಿಯಲ್ಲಿ ನವೆಂಬರ 26, 2008 (26/11)ರಲ್ಲಿ ನಡೆದ ಮುಂಬಯಿಯ ಮೇಲಿನ ಭಯೋತ್ಪಾದಕ ದಾಳಿಯಲ್ಲಿ ಕೈವಾಡವಿರುವ ಪಾಕಿಸ್ತಾನಿ ಮೂಲದ ಕೆನೆಡಿಯನ ಉದ್ಯಮಿ ತಹವ್ವೂರ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೇರಿಕಾ ನ್ಯಾಯಾಲಯ ಅನುಮತಿ ನೀಡಿದೆ.

1. ಲಾಸ ಎಂಜಲೀಸ ಜಿಲ್ಲಾ ನ್ಯಾಯಾಲಯವು ನೀಡಿರುವ ಆದೇಶದಲ್ಲಿ, ರಾಣಾನ ಮೇಲೆ ಇರುವ ಆರೋಪಗಳನ್ನು ನೋಡಿದರೆ, ಅವನನ್ನು ಹಸ್ತಾಂತರಿಸುವುದು ಸರಿಯಾಗಿದೆ. 26/11 ರ ದಾಳಿಯಲ್ಲಿ ರಾಣಾನ ಕೈವಾಡವಿತ್ತು.

2. ಅವನನ್ನು ಹಸ್ತಾಂತರಿಸುವ ಭಾರತದ ಮನವಿಯ ಬಳಿಕ ಅಮೇರಿಕಾದಲ್ಲಿ ರಾಣಾನನ್ನು ಬಂಧಿಸಲಾಗಿತ್ತು.

3. ನ್ಯಾಯಾಲಯದ ಆಲಿಕೆಯ ಸಮಯದಲ್ಲಿ, ಸರಕಾರಿ ನ್ಯಾಯವಾದಿಗಳು, ರಾಣಾನ ಬಾಲ್ಯಸ್ನೇಹಿತ ಮತ್ತು ಪಾಕಿಸ್ತಾನ –ಅಮೇರಿಕೆಯ ನಾಗರಿಕ ಡೇವಿಡ್ ಕೋಲಮನ ಹೆಡ್ಲಿ ಇವನಿಗೆ ಲಷ್ಕರ-ಎ-ತೊಯಬಾದೊಂದಿಗೆ ಸಂಬಂಧವಿತ್ತು. ರಾಣಾ ಹೆಡ್ಲಿಗೆ ಸಹಾಯ ಮಾಡಿದ್ದನು. ಹೆಡ್ಲಿಯ ನಿಯೋಜನೆಯ ವಿಷಯ ರಾಣಾನಿಗೆ ತಿಳಿದಿತ್ತು ಎಂದು ಹೇಳಿದ್ದಾರೆ.