ಹಿಂದೂ ಸಂಘಟನೆಗಾಗಿ ಆಧ್ಯಾತ್ಮಿಕ ಶಕ್ತಿಯ ಮಾರ್ಗವನ್ನು ಗುರೂಜಿಯವರು ತೋರಿಸಿದರು ! – (ಪೂ.) ನ್ಯಾಯವಾದಿ ಹರಿಶಂಕರ ಜೈನ್, ಸರ್ವೋಚ್ಚ ನ್ಯಾಯಾಲಯ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಬ್ರಹ್ಮೋತ್ಸವವನ್ನು ಆಚರಿಸಲಾಗುತ್ತಿರುವುದು ತುಂಬಾ ಆನಂದದ ವಿಷಯವಾಗಿದೆ. ವಾಸ್ತವಿಕವಾಗಿ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಈಶ್ವರ ಸ್ವರೂಪದಲ್ಲಿ ಅವತರಿಸಿದ್ದಾರೆ. ಅವರು ಪ್ರೇರಣಾಸ್ಥಾನವಾಗಿದ್ದಾರೆ. ಅವರು ಸಂಪೂರ್ಣ ಸಮಾಜ ಮತ್ತು ಮನುಕುಲಕ್ಕೆ ನೀಡಿರುವ ಬೋಧನೆ ಮತ್ತು ತೋರಿಸಿದ ಮಾರ್ಗದಲ್ಲಿ ಪ್ರಯಾಣ ಮಾಡಿ ನಾವು ಸಂಪೂರ್ಣ ದೇಶವನ್ನು ತುಂಬಾ ಮುಂದೆ ಒಯ್ಯಬಹುದು ಹಾಗೂ ಸಂಪೂರ್ಣ ಮನುಕುಲದ ಸೇವೆ ಮಾಡಬಹುದು. ಇಂದು ಹಿಂದೂ ಸಮಾಜ ಸಂಘಟಿತವಾಗುವ ಅವಶ್ಯಕತೆಯಿದೆ ಹಾಗೂ ಸಂಘಟನೆಗಾಗಿ ಆಧ್ಯಾತ್ಮಿಕ ಶಕ್ತಿಯ ಅಧಿಷ್ಠಾನವಿರಬೇಕು. ಈ ಆಧ್ಯಾತ್ಮಿಕ ಶಕ್ತಿಯ ಮಾರ್ಗವನ್ನು ಮಾನ್ಯ ಗುರೂಜಿಯವರು (ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು) ತೋರಿಸಿದ್ದಾರೆ. ಅನೇಕ ಜನರು ಅದರ ಲಾಭಪಡೆದಿದ್ದಾರೆ. ಪ್ರತಿವರ್ಷ ಅನೇಕ ಜನರು ಗೋವಾದ ರಾಮನಾಥಿಯಲ್ಲಿನ ಸನಾತನ ಆಶ್ರಮಕ್ಕೆ ಬರುತ್ತಾರೆ ಹಾಗೂ ಕೃತಾರ್ಥರಾಗುತ್ತಾರೆ. ಈ ಜನ್ಮೋತ್ಸವದ ಶುಭಪ್ರಸಂಗದಲ್ಲಿ ಈಶ್ವರನು ಅವರಿಗೆ ದೀರ್ಘಾಯುಷ್ಯ ಹಾಗೂ ನಿರೋಗಿ ಜೀವನವನ್ನು ಕರುಣಿಸಲಿ. ನಮ್ಮೆಲ್ಲರಿಗೂ ಅವರಿಂದ ಸಾಕಷ್ಟು ಆಶೀರ್ವಾದ ಸಿಗಲಿ ಎಂದು ನಾನು ಈಶ್ವರನ ಚರಣಗಳಲ್ಲಿ ಪ್ರಾರ್ಥಿಸುತ್ತೇನೆ. (೨.೫.೨೦೨೩)