ಭಾರತೀಯ ಸಂಸ್ಕೃತಿಯ ಜಾಗತೀಕರಣ ನಡೆಯುತ್ತಿದೆ ! – ವಿದೇಶಾಂಗ ಸಚಿವ ಎಸ್. ಜೈಶಂಕರ್

ಸ್ಟಾಕ್‌ಹೋಮ್ (ಸ್ವೀಡನ್) – ಭಾರತೀಯ ಸಂಸ್ಕೃತಿ ಜಾಗತೀಕರಣಗೊಳ್ಳುತ್ತಿದೆ. ಭಾರತೀಯ ಸಂಸ್ಕೃತಿಯನ್ನು ಉತ್ತೇಜಿಸಲು ಹೊಸ ಮಾರ್ಗಗಳನ್ನು ಶೋಧಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಯೋಗ ದಿನ ಇದಕ್ಕೆ ಉತ್ತಮ ಉದಾಹರಣೆವಾಗಿದೆ. ಅಂತರಾಷ್ಟ್ರೀಯ ಯೋಗ ದಿನವನ್ನು ಇಡೀ ವಿಶ್ವವು ಉತ್ಸಾಹದಿಂದ ಸ್ವೀಕರಿಸಿದೆ ಎಂದು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ‘ಇಂಡೋ-ಪೆಸಿಫಿಕ್ ಮಿನಿಸ್ಟ್ರಿಯಲ್ ಫೋರಂ’ನ ಕಾರ್ಯಕ್ರಮದಲ್ಲಿ ಹೇಳಿದರು. ಅದಕ್ಕಾಗಿ ಅವರು ೩ ದಿನಗಳ ಕಾಲ ಸ್ವೀಡನ್ ಪ್ರವಾಸದಲ್ಲಿದ್ದಾರೆ. ಇದರೊಂದಿಗೆ ಭಾರತದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಉಪಕ್ರಮಗಳು ಮತ್ತು ವಿದೇಶದಲ್ಲಿ ನೆಲೆಸಿರುವ ಭಾರತೀಯರಿಗೆ ಸೃಷ್ಟಿಸಲಾದ ಅವಕಾಶಗಳ ಕುರಿತು ಜೈಶಂಕರ್ ಅವರು ಚರ್ಚಿಸಿದರು.

…ಮತ್ತು ವಿದೇಶಾಂಗ ಸಚಿವರು ಹಿಂದಿ ಗಾದೆ ಮಾತನ್ನು ಬಳಸಿದ್ದರು !

ಇಲ್ಲಿಯ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸುವಾಗ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಭಾರತೀಯ ಸಂಸ್ಕೃತಿಯ ಜಾಗತೀಕರಣದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸುವಾಗ ಹಿಂದಿ ಗಾದೆಯೊಂದನ್ನು ಬಳಸಿದ್ದಾರೆ. ಭಾರತೀಯ ಸಂಸ್ಕೃತಿಯ ಜಾಗತೀಕರಣದ ಈ ಯುಗದಲ್ಲಿ ಜನರು ಪಾಶ್ಚಿಮಾತ್ಯ ‘ಹ್ಯಾಂಬರ್ಗರ್’ ಬದಲಿಗೆ ‘ಪಾನಿ ಪುರಿ’ ತಿನ್ನಲು ಪ್ರಾರಂಭಿಸುತ್ತಾರೆಯೇ ? ಮತ್ತು ಎಚ್ ಆಂಡ್ ಎಮ್ ಟಿ-ಶರ್ಟ್‌ಗಳ’ ಮೇಲೆ ನ್ಯೂಯಾರ್ಕ್ ಬದಲಿಗೆ ‘ನವ ದೆಹಲಿ’ ಎಂದು ಮುದ್ರಿಸಲಾಗುತ್ತದೆಯೇ ? ಇದಕ್ಕೆ ಪ್ರತಿಕ್ರಿಯಿದ ಜೈಶಂಕರ್ ಅವರು ಹಿಂದಿಯಲ್ಲಿ ‘ಆಪ್ ಕೆ ಮುಹ ಮೆ ಘೀ ಶಕ್ಕರ್’ (ನಿಮ್ಮ ಬಾಯಿಯಲ್ಲಿ ತುಪ್ಪ-ಸಕ್ಕರೆ) (ಅರ್ಥ: ನೀವು ಹೇಳುವುದು ನಿಜವಾಗಲಿ). ಎಂದು ಹಿಂದಿ ವಾಕ್ಯವನ್ನು ಬಳಸಿದರು. ಪ್ರೇಕ್ಷಕರು ಅದಕ್ಕೆ ನಗುತ್ತಾ ಚಪ್ಪಾಳೆ ತಟ್ಟಿದರು.