ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರನ್ನು ರೂಪಿಸಿದ ಬಗ್ಗೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಮನೋಗತ !
ಪರಾತ್ಪರ ಗುರು ಡಾ. ಆಠವಲೆ ಯವರು ಸಾಧನೆಯನ್ನು ಕಲಿಸು ವಾಗ ಸಾಧಕರಿಗೆ ಸೂಕ್ಷ್ಮ ಜಗತ್ತಿನ ಜ್ಞಾನವನ್ನೂ ನೀಡಿದರು. ಅವರು ಸೂಕ್ಷ್ಮ ಪರೀಕ್ಷಣೆಯ ಸೇವೆಯಿಂದ ಸಾಧಕರ ಆಧ್ಯಾತ್ಮಿಕ ಪ್ರವಾಸವನ್ನು ಕ್ರಮೇಣ ನಿರ್ಗುಣ ಈಶ್ವರನ ಪರಿಚಯ ಆಗುವ ಹಂತದವರೆಗೆ ಕರೆದೊಯ್ದರು. ಅವರು ‘ಸೂಕ್ಷ್ಮ ಜಗತ್ತಿನ ಘಟನಾವಳಿಗಳ ಪರೀಕ್ಷಣೆಯನ್ನು ಮಾಡಲು ಕಲಿಸಿದರು ಮತ್ತು ಸೂಕ್ಷವನ್ನು ತಿಳಿಯಬಲ್ಲ ಸಾಧಕರನ್ನು ತಯಾರಿಸಿದರು. |
೧. ಪರಾತ್ಪರ ಗುರು ಡಾಕ್ಟರರು ಸಾಧಕರಿಗೆ, ‘ಆಧ್ಯಾತ್ಮಿಕ ತೊಂದರೆ ಇರುವ ಸಾಧಕರ ಮೇಲೆ ನಾಮಜಪ ಮುಂತಾದ ಉಪಾಯಗಳಿಂದ ಯಾವ ರೀತಿಯ ಪರಿಣಾಮವಾಗುತ್ತದೆ ?’, ಎಂಬುದರ ಅಧ್ಯಯನವನ್ನು ಮಾಡಲು ಕಲಿಸುವುದು
‘ಪರಾತ್ಪರ ಗುರು ಡಾಕ್ಟರರು ಸೂಕ್ಷ್ಮವನ್ನು ತಿಳಿಯಬಲ್ಲ ಸಾಧಕ ರಾದ ನಮಗೆಲ್ಲರಿಗೆ ಕೇವಲ ಸೂಕ್ಷ್ಮದ ಪರೀಕ್ಷಣೆಯನ್ನು ಮಾತ್ರವಲ್ಲ, ಆಧ್ಯಾತ್ಮಿಕ ತೊಂದರೆಗಳಿರುವ ಸಾಧಕರಿಗೆ ಉಪಾಯಗಳನ್ನು ಮಾಡಲೂ ಕಲಿಸಿದರು. ಪರಾತ್ಪರ ಗುರು ಡಾಕ್ಟರರು ಆಧ್ಯಾತ್ಮಿಕ ತೊಂದರೆ ಇರುವ ಸಾಧಕರಿಗಾಗಿ ಸ್ವತಃ ಅನೇಕ ಗಂಟೆಗಳ ಕಾಲ ನಾಮಜಪ ಇತ್ಯಾದಿ ಉಪಾಯಗಳನ್ನು ಮಾಡುತ್ತಿದ್ದರು ಮತ್ತು ಆ ಉಪಾಯಗಳಿಂದ ಹೇಗೆ ಪರಿಣಾಮವಾಗುತ್ತಿದೆ ?’, ಎಂಬುದನ್ನು ನಮಗೆ ಅಧ್ಯಯನ ಮಾಡಲು ಹೇಳಿದಾಗ ಸೂಕ್ಷ್ಮದ ವಿಷಯ ಗಳನ್ನು ತಿಳಿದುಕೊಳ್ಳುವ ಸಾಧಕರು ಅಧ್ಯಯನ ಮಾಡುತ್ತಿದ್ದರು.
೨. ಸಚ್ಚಿದಾನಂದ ಅವಸ್ಥೆಯಲ್ಲಿದ್ದರೂ ಸತತ ಕಲಿಯುವ ಸ್ಥಿತಿಯಲ್ಲಿರುವ ಪರಾತ್ಪರ ಗುರು ಡಾ. ಆಠವಲೆ !
ಆಗ ಗುರುದೇವರು, “ನೀವು ಮಾಡಿದ ಪರೀಕ್ಷಣೆಯಿಂದ ನನಗೂ ಕಲಿಯಲು ಸಿಗುತ್ತದೆ”, ಎಂದು ಹೇಳುತ್ತಿದ್ದರು. ಈಗಲೂ ಪರಾತ್ಪರ ಗುರುದೇವರು “ಪ್ರತಿಯೊಬ್ಬ ಸಾಧಕನಿಂದ ನಾನು ಪ್ರತಿನಿತ್ಯ ಕಲಿಯುತ್ತಿರುತ್ತೇನೆ. ಆದುದರಿಂದ ನನಗೆ ಎಂದಿಗೂ ಬೇಸರ ಬರುವುದಿಲ್ಲ. ಅಧ್ಯಾತ್ಮವು ಅನಂತದ ಶಾಸ್ತ್ರವಾಗಿದೆ. ಯಾರೂ ಪರಿ ಪೂರ್ಣರಲ್ಲ. ಈಶ್ವರನೊಬ್ಬನೇ ಪರಿಪೂರ್ಣನಾಗಿದ್ದಾನೆ. ಸತತ ಕಲಿಯುವುದರಿಂದ ಆನಂದ ಸಿಗುತ್ತದೆ. ಜ್ಞಾನದಲ್ಲಿ ಆನಂದವಿದೆ. ಆನಂದದಲ್ಲಿ ಸಾತತ್ಯ ಬಂದರೆ, ನಮಗೆ ಸಚ್ಚಿದಾನಂದ ಅವಸ್ಥೆಯನ್ನು ಬೇಗನೆ ಪ್ರಾಪ್ತಮಾಡಿಕೊಳ್ಳಲು ಬರುತ್ತದೆ”, ಎಂದು ಹೇಳುತ್ತಾರೆ.
೩. ಪರಾತ್ಪರ ಗುರು ಡಾಕ್ಟರರು ಸಾಧಕರ ಜಿಜ್ಞಾಸೆಯನ್ನು ಜಾಗೃತಗೊಳಿಸಿ ಅವರಿಗೆ ಜ್ಞಾನ ಪಡೆಯಲು ಈಶ್ವರೀ ಪ್ರಕ್ರಿಯೆಯ ಮಾಧ್ಯಮವನ್ನಾಗಿ ಮಾಡುವುದು
ಈ ರೀತಿ ‘ಮೋಕ್ಷಪ್ರಾಪ್ತಿಯಲ್ಲಿ ಅಧ್ಯಾತ್ಮದ ಜ್ಞಾನವನ್ನು ಪ್ರಾಪ್ತಮಾಡಿಕೊಳ್ಳುವ ಪ್ರಕ್ರಿಯೆಯ ಮಹತ್ವ ಹೇಗಿದೆ ?’, ಇದರ ಸಂಸ್ಕಾರವನ್ನು ಪರಾತ್ಪರ ಗುರು ಡಾಕ್ಟರರು ಸಾಧಕರಾದ ನಮಗೆ ಎಲ್ಲರಿಗೂ ಮಾಡಿಸಿದರು. ಜ್ಞಾನಪ್ರಾಪ್ತಿಯ ಮಹತ್ವವನ್ನು ಹೇಳಿ ಅವರು ನಮ್ಮ ಜಿಜ್ಞಾಸೆಯನ್ನು ಜಾಗೃತಗೊಳಿಸಿದರು. ಮುಂದೆ ಈ ಜಿಜ್ಞಾಸೆಯೇ ಸನಾತನದ ಸಾಧಕರಿಗೆ ಜ್ಞಾನ ಪಡೆಯುವ ಈಶ್ವರೀ ಪ್ರಕ್ರಿಯೆಯ ಮಾಧ್ಯಮವಾಯಿತು.
೪. ಪರಾತ್ಪರ ಗುರು ಡಾಕ್ಟರರು ಸಾಧಕರಿಗೆ ಕೈಗಳ ಬೆರಳುಗಳ ವಿವಿಧ ಪ್ರಕಾರದ ಮುದ್ರೆಗಳ ಅಧ್ಯಯನ ಮಾಡಲು ಕಲಿಸುವುದು
ಪರಾತ್ಪರ ಗುರು ಡಾಕ್ಟರರು ಕೈಗಳ ಬೆರಳುಗಳ ವಿವಿಧ ಮುದ್ರೆ ಗಳನ್ನು ಮಾಡಿ ಆಧ್ಯಾತ್ಮಿಕ ಉಪಾಯಗಳನ್ನು ಮಾಡುತ್ತಿದ್ದರು. ಅವರು, “ಈ ಜಗತ್ತು ಪಂಚಮಹಾಭೂತಗಳಿಂದ ತಯಾರಾಗಿದೆ. ಪ್ರತಿಯೊಂದು ಮುದ್ರೆಗೆ ಏನಾದರೊಂದು ಅರ್ಥವಿದೆ. ಈ ಮುದ್ರೆ ಯಿಂದ ಯಾವ ಪಂಚತತ್ತ್ವದ (ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ) ಸ್ಪಂದನಗಳ ಪ್ರಕ್ಷೇಪಣೆಯಾಗುತ್ತದೆ ?’, ಎಂದು ಹುಡುಕಿ. ಆ ಸ್ಪಂದನಗಳನ್ನು ಶಕ್ತಿ, ಭಾವ, ಚೈತನ್ಯ, ಆನಂದ ಮತ್ತು ಶಾಂತಿ ಈ ದೇಹದಲ್ಲಿಡಗಿದ ಮತ್ತು ಕಾರ್ಯದ ಆವಶ್ಯಕತೆಗನುಸಾರ ಜಾಗೃತವಾಗುವ ಆಧ್ಯಾತ್ಮಿಕ ಊರ್ಜೆಗೆ ಜೋಡಿಸಿ !”, ಎನ್ನುತ್ತಿದ್ದರು.
೪ ಅ. ಸಾಧಕರಿಗೆ ಸೂಕ್ಷ್ಮ ಪರೀಕ್ಷಣೆಯನ್ನು ಆಧ್ಯಾತ್ಮಿಕ ಭಾಷೆಯಲ್ಲಿ ಹೇಳಲು ಕಲಿಸುವುದು : ‘ಸೂಕ್ಷ್ಮ ಪರೀಕ್ಷಣೆಯನ್ನು ಕಲಿಸುವಾಗ ಅದನ್ನು ನಿಖರವಾಗಿ ಹೇಗೆ ಹೇಳಬೇಕು ?’, ಇದನ್ನು ಸಹ ಪರಾತ್ಪರ ಗುರು ಡಾಕ್ಟರರು ನಮಗೆ ಕಲಿಸಿದರು, ಉದಾ. ‘ಈಗ ಮಾಡಿದ ಕೈಯ ಮುದ್ರೆಯಿಂದ ತೇಜತತ್ತ್ವದ ಸ್ಪಂದನಗಳು ಶಕ್ತಿಯ ರೂಪದಲ್ಲಿ ಹೊರ ಬೀಳುತ್ತಿವೆ.’ ಕಾಲಾಂತರದಲ್ಲಿ ನಮಗೆ ಆಧ್ಯಾತ್ಮಿಕ ಭಾಷೆಯಲ್ಲಿ ಪರೀಕ್ಷಣೆಯನ್ನು ಹೇಳಲು ಸಾಧ್ಯವಾಗತೊಡಗಿತು. ಈ ಭಾಷೆಯನ್ನು ಪರಾತ್ಪರ ಗುರು ಡಾಕ್ಟರರೇ ನಮಗೆ ಕಲಿಸಿದರು.
೫. ಪರಾತ್ಪರ ಗುರು ಡಾಕ್ಟರರು ‘ತಮ್ಮಲ್ಲಿನ ಈಶ್ವರೀ ಊರ್ಜೆಯನ್ನು (ದೈವೀ ಶಕ್ತಿಯನ್ನು) ಸ್ಮರಿಸಿ ಅಧ್ಯಾತ್ಮದಲ್ಲಿನ ಉತ್ತರಗಳನ್ನು ಕಂಡು ಹಿಡಿಯಿರಿ’, ಎಂದು ಹೇಳುವುದು ಮತ್ತು ಹಾಗೆ ಪ್ರಯತ್ನಿಸಿದಾಗ ‘ಗುರುದೇವರೇ ಮಾರ್ಗದರ್ಶನ ಮಾಡುತ್ತಿದ್ದಾರೆ’, ಎಂಬ ಅನುಭೂತಿ ಬರುವುದು
ಒಂದು ಸಲ ಗುರುದೇವರು, “ನಮ್ಮೆಲ್ಲರಲ್ಲಿ ಒಂದು ಈಶ್ವರೀ ಊರ್ಜೆ ಅಡಗಿದೆ. ಅದುವೇ ನಮ್ಮ ಆಧ್ಯಾತ್ಮಿಕ ಗುರುವಾಗಿದೆ. ಈಗ ಅದನ್ನು ಸ್ಮರಿಸಿ ಉತ್ತರಗಳನ್ನು ಹುಡುಕಿ !”, ಎಂದರು. ಆಗ ನಾವು ಗುರುದೇವರಿಗೇ ಪ್ರಾರ್ಥನೆ ಯನ್ನು ಮಾಡಿ ಅಧ್ಯಾತ್ಮದಲ್ಲಿನ ಉತ್ತರಗಳನ್ನು ಹುಡುಕತೊಡಗಿದೆವು ಮತ್ತು ಏನಾಶ್ಚರ್ಯ ! ನಮಗೆ ಗುರುದೇವರೇ ಮುಂದು ಮುಂದಿನ ಹಂತದ ಸೂಕ್ಷ್ಮದಲ್ಲಿನ ಉತ್ತರಗಳ ಬಗ್ಗೆ ಒಳಗಿನಿಂದ ಮಾರ್ಗದರ್ಶನ ಮಾಡತೊಡಗಿದರು. ಅನಂತರ ಸೂಕ್ಷ್ಮ ಪರೀಕ್ಷಣೆಯನ್ನು ಮಾಡಲು ನಾವು ಎಂದಿಗೂ ಹಿಂತಿರುಗಿ ನೋಡಲೇ ಇಲ್ಲ. ನಾವು ಪ್ರತ್ಯಕ್ಷದಲ್ಲಿ ಗುರುದೇವರಿಗೆ ಇದೆಲ್ಲವನ್ನು ಹೇಳುತ್ತಿದ್ದೆವು. ಆಗ ಅವರು ಬಹಳ ಒಳ್ಳೆಯ ದಾಯಿತು ಎಂದು ನಕ್ಕು, “ದೇವರು ನಮಗಾಗಿ ಎಷ್ಟೆಲ್ಲ ಮಾಡುತ್ತಾನಲ್ಲ !” ಎಂದು ಹೇಳುತ್ತಿದ್ದರು. ಆಗ ನಾವು ಅವರಿಗೆ, “ಗುರುದೇವರೇ, ನಮ್ಮ ಕಣ್ಣುಗಳೆದುರು ನೀವೇ ಇರುತ್ತೀರಿ. ನಾವು ನಿಮ್ಮನ್ನೇ ನೆನಪಿಸಿಕೊಳ್ಳುತ್ತೇವೆ. ನಾವು ನಿಮಗೇ ಪ್ರಾರ್ಥನೆಯನ್ನು ಮಾಡಿ ಪರೀಕ್ಷಣೆಯನ್ನು ಮಾಡುತ್ತೇವೆ ಮತ್ತು ನಮಗೆ ತಕ್ಷಣ ಸೂಕ್ಷ್ಮದಲ್ಲಿನ ಉತ್ತರಗಳು ಸಿಗುತ್ತವೆ !”, ಎಂದು ಹೇಳುತ್ತಿದ್ದೆವು.ಇದನ್ನು ಕೇಳಿ ಅವರು ಬಹಳ ನಗುತ್ತಿದ್ದರು. ಈ ರೀತಿ ಪರಾತ್ಪರ ಗುರು ಡಾಕ್ಟರರು ನಮಗೆ ‘ಸಾಧಕರ ಜೀವನದಲ್ಲಿ ಗುರುಗಳ ಮಹತ್ವ ಎಷ್ಟು ಅನನ್ಯ ಸಾಧಾರಣವಾಗಿದೆ ?’, ಎಂಬುದನ್ನು ಕಲಿಸಿದರು.
೬. ‘ಗುರು ಇದು ದೇಹವಾಗಿರದೇ ಒಂದು ತತ್ತ್ವವಾಗಿದೆ’, ಎಂಬ ಬೋಧನೆಯನ್ನು ನೀಡಿ ಸಾಧಕರನ್ನು ಈಶ್ವರೀ ತತ್ತ್ವದೊಂದಿಗೆ ಜೋಡಿಸುವ ಪರಾತ್ಪರ ಗುರು ಡಾ. ಆಠವಲೆ !
೬ ಅ. ಪರಾತ್ಪರ ಗುರು ಡಾಕ್ಟರರು ಸಾಧಕರನ್ನು ತಮ್ಮ ಸ್ಥೂಲ ದೇಹದಲ್ಲಿ ಸಿಲುಕಿಸದಿರುವುದು : ಕ್ರಮೇಣ ಪರಾತ್ಪರ ಗುರು ಡಾಕ್ಟರರು ನಮ್ಮನ್ನು ಅವರ ದೇಹದಲ್ಲಿ ಸಿಲುಕಿಸದೇ ಗುರುತತತ್ತ್ವದ ಸೂಕ್ಷ್ಮ ಪ್ರಕಾಶದ ಕಡೆಗೆ ಕರೆದೊಯ್ಯಲು ಆರಂಭಿಸಿದರು. ಅವರು ‘ಗುರು ಎಂದರೆ ಒಂದು ದೇಹವಲ್ಲ, ಒಂದು ತತ್ತ್ವವಾಗಿದೆ’, ಎಂಬ ಶಿಕ್ಷಣವನ್ನು ನಮ್ಮಲ್ಲಿ ಬಿಂಬಿಸಿದರು. ಇಲ್ಲದಿದ್ದರೆ ನಾವು ಅವರ ಸ್ಥೂಲ ದೇಹದಲ್ಲಿಯೇ ಸಿಲುಕುತ್ತಿದ್ದೆವು. ಪರಾತ್ಪರ ಗುರು ಡಾಕ್ಟರರ ಸತತ ಬೋಧನೆಯಿಂದಾಗಿ ಸನಾತನದ ಯಾವುದೇ ಸಾಧಕನು ಅವರ ಸ್ಥೂಲ ದೇಹದಲ್ಲಿ ಸಿಲುಕಿಲ್ಲ.
೬ ಆ. ಪರಾತ್ಪರ ಗುರು ಡಾಕ್ಟರರು ತಮ್ಮ ಬೋಧನೆಯ ಮೂಲಕ ಧರ್ಮಪ್ರಸಾರದ ಕಾರ್ಯವನ್ನು ನಿಭಾಯಿಸುವ ಸಾವಿರಾರು ಗುಣವಂತ ಮತ್ತು ನಿಷ್ಠಾವಂತ ಸಾಧಕರನ್ನು ತಯಾರಿಸುವುದು : ಕಲಿಯುಗದ ಗುರುಗಳನ್ನು ನೋಡಿರಿ ! ತಮ್ಮ ಹೆಸರಿನೊಂದಿಗೆ ತಮ್ಮ ದೊಡ್ಡಸ್ತಿಕೆಯನ್ನು ಹೆಚ್ಚಿಸಿ ಶಿಷ್ಯರನ್ನು ತಮ್ಮ ದೇಹದಲ್ಲಿ ಸಿಲುಕಿಸಿಡುವ ಕೆಲವು ಸಾಂಪ್ರದಾಯಿಕ ಗುರುಗಳನ್ನು ನೋಡಿದ್ದೇವೆ. ಇದರಿಂದ ಯಾವುದಾದರೊಂದು ಸಂಪ್ರದಾಯದ ಗುರುಗಳು ದೇಹತ್ಯಾಗ ಮಾಡಿದರೆ, ಆ ಸಂಪ್ರದಾಯದ ಪ್ರಚಾರ ಕ್ರಮೇಣ ಕಡಿಮೆಯಾಗುತ್ತದೆ. ಅವರ ಅನುಯಾಯಿಗಳನ್ನು ಆಧ್ಯಾತ್ಮಿಕ ಸ್ತರದಲ್ಲಿ ಸಂಭಾಳಿಸಲು ಮುಂದೆ ಯಾರೂ ಉಳಿಯುವುದಿಲ್ಲ. ಪರಾತ್ಪರ ಗುರು ಡಾಕ್ಟರರು ಮಾತ್ರ ಇಂದಿನವರೆಗೆ ಸಾವಿರಾರು ಶಿಷ್ಯರನ್ನು ತಯಾರಿಸಿದ್ದಾರೆ. ಅವರು ತಮ್ಮ ತಮ್ಮ ಸ್ತರದಲ್ಲಿ ಸಂಸ್ಥೆಯ ಆಧ್ಯಾತ್ಮಿಕ ಪ್ರಸಾರ ಕಾರ್ಯದ ಜವಾಬ್ದಾರಿಯನ್ನು ಅತ್ಯಂತ ಉತ್ತಮ ರೀತಿಯಲ್ಲಿ ನಿಭಾಯಿಸುತ್ತಿದ್ದಾರೆ. ಆ ಸಾಧಕರು ತಮ್ಮ ತಮ್ಮ ಕಾರ್ಯದಲ್ಲಿ ಗುರುದೇವರ ಸಕ್ಷಮ ಉತ್ತರಾಧಿಕಾರಿಗಳೇ ಆಗಿದ್ದಾರೆ. ಇಂತಹ ಗುಣವಂತ, ನಿಷ್ಠಾವಂತ ಮತ್ತು ಚೈತನ್ಯಸಂಪನ್ನ ಸಾಧಕರನ್ನು ತಯಾರಿಸುವ ಈ ದಿವ್ಯಾತ್ಮಾ ಅವತಾರಿಯೇ ಆಗಿರಬೇಕಲ್ಲವೇ !
‘ಗುರುದೇವರೇ, ‘ನೀವು ಶ್ರೀವಿಷ್ಣುವಿನ ಅವತಾರ ಆಗಿರುವಿರಿ’, ಎಂದು ಮಹರ್ಷಿಗಳು ಏಕೆ ಹೇಳುತ್ತಾರೆ ?’, ಎಂಬುದು ಈಗ ನಮಗೂ ಗೊತ್ತಾಗಿದೆ. ನಮ್ಮ ನಿಷ್ಠೆ (ಶ್ರದ್ಧೆ) ಈ ಗುರುಚರಣಗಳಲ್ಲಿ ಇದೇ ರೀತಿ ಸ್ಥಿರವಾಗಿ ಉಳಿಯಲಿ’, ಎಂದು ಈಶ್ವರನ ಚರಣಗಳಲ್ಲಿ ಕಳಕಳಿಯ ಪ್ರಾರ್ಥನೆ !’ – ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲಿ ಒಬ್ಬರು (೬.೨.೨೦೨೨)