ಸಪ್ತರ್ಷಿಗಳ ಆಜ್ಞೆಯಂತೆ ಸಚ್ಚಿದಾನಂದ ಪರಬ್ರಹ್ಮ ಇವರ ರಥಾರೂಢ ಶ್ರೀವಿಷ್ಣುವಿನ ರೂಪದಲ್ಲಿ ಸಾಧಕರಿಗೆ ದರ್ಶನ !
ಫಾರ್ಮಾಗುಡಿ (ಗೋವಾ) – ಸನಾತನದ ಸದ್ಗುರು ಮತ್ತು ಸಂತರ ಮುಖದ ಮೇಲೆ ಕಾಣುವ ಆರ್ತ ಭಾವ, ಮಹಾರಾಷ್ಟ್ರ, ಗೋವಾ, ಕರ್ನಾಟಕ ಇತ್ಯಾದಿ ರಾಜ್ಯಗಳಿಂದ ಬಂದ ಸಾವಿರಾರು ಸಾಧಕರಿಗೆ ತುಂಬಿ ಬಂದ ಭಗವಂತನ ಭೇಟಿಯ ವ್ಯಾಕುಲತೆ, ವಿಷ್ಣುಲೋಕದ ಅನುಭೂತಿಯನ್ನು ಕೊಡುವ ಭವ್ಯ ಸಭಾಮಂಟಪ ಮತ್ತು ಈ ಎಲ್ಲರಿಗೂ ಕೇವಲ ದರ್ಶನದಿಂದಲೇ ಕೃತಾರ್ಥ ಮತ್ತು ಕೃತಜ್ಞ ಮಾಡುವ ಸನಾತನದ ಮೂವರು ಗುರುಗಳಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಮತ್ತು ಅವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ದಿವ್ಯ ದರ್ಶನ ! ಇಂತಹ ಭಾವಮಯ, ಭಕ್ತಿಮಯ ಮತ್ತು ವಿಷ್ಣುಮಯ ವಾತಾವರಣದಲ್ಲಿ ಸಪ್ತರ್ಷಿಗಳ ಆಜ್ಞೆಯಂತೆ ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಬ್ರಹ್ಮೋತ್ಸವ ವನ್ನು ಆಚರಿಸಲಾಯಿತು.
ಇಲ್ಲಿಯ ಅಭಿಯಾಂತ್ರಿಕ ಮಹಾವಿದ್ಯಾಲಯದ ಮೈದಾನದಲ್ಲಿ ಸಾಧಕರು ಶ್ರೀಮನ್ನಾರಾಯಣ ಸ್ವರೂಪ ಗುರುದೇವರಿಗಾಗಿ ಭೂವೈಕುಂಠವನ್ನೇ ರಚಿಸಿದರು ! ಮೊದಲ ಬಾರಿಗೇ ಇಂತಹ ಭವ್ಯ ಸ್ವರೂಪದಲ್ಲಿ ಆಚರಿಸಿದ ಈ ಬ್ರಹ್ಮೋತ್ಸವವು ಸನಾತನದ ಎಲ್ಲೆಡೆಯ ಸಾಧಕರನ್ನು ಕೃತಕೃತ್ಯರನ್ನಾಗಿ ಮಾಡಿತು. ರಥಾರೂಢ ಭಗವಾನ ಶ್ರೀವಿಷ್ಣುವನ್ನು ನೃತ್ಯ, ಗಾಯನ ಮತ್ತು ವಾದ್ಯವೃಂದಗಳಿಂದ ಸ್ತುತಿಸುವುದೆಂದರೆ ಬ್ರಹ್ಮೋತ್ಸವ ! ಆಂಧ್ರಪ್ರದೇಶದಲ್ಲಿ ಸುವರ್ಣ ರಥದಲ್ಲಿ ವಿರಾಜಮಾನರಾದ ತಿರುಪತಿ ಬಾಲಾಜಿಯ ಬ್ರಹ್ಮೋತ್ಸವವನ್ನು ಈ ರೀತಿ ಆಚರಿಸಲಾಗುತ್ತದೆ. ಈ ದಿವ್ಯ ಬ್ರಹ್ಮೋತ್ಸವದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ದಿವ್ಯ ರಥದಿಂದ ಕಾರ್ಯಸ್ಥಳಕ್ಕೆ ಆಗಮನವಾಯಿತು.
ತಾಳನೃತ್ಯ, ಧ್ವಜನೃತ್ಯದೊಂದಿಗೆ ಕಾರ್ಯಸ್ಥಳದಲ್ಲಿ ಅವತರಿಸಿದ ಈ ದಿವ್ಯ ರಥದ ಜೊತೆಗೆ ಚೈತನ್ಯ, ಭಾವ ಮತ್ತು ಆನಂದದ ಸಂಚಾರವಾದಂತಾಯಿತು. ಸಮಾರಂಭದ ಮುಕ್ತಾಯ ಮಾಡುವಾಗ ಶ್ರೀವಿಷ್ಣು ಸ್ವರೂಪ ಅವತಾರಿ ದಿವ್ಯ ಗುರುಪರಂಪರೆಯ ಚರಣಗಳಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವ ವಿದ್ಯಾಲಯದ ಸಾಧಕರು ನೃತ್ಯ, ಗಾಯನ ಮತ್ತು ವಾದ್ಯವೃಂದದೊಂದಿಗೆ ಸೇವೆಯನ್ನು ಸಲ್ಲಿಸಿದರು. ದಿವ್ಯ ಅವತಾರಿ ಗುರುಪರಂಪರೆಯ ದರ್ಶನದಿಂದ ಅನನ್ಯ ಕೃತಜ್ಞತೆ ಮತ್ತು ಭಾವಭಕ್ತಿ ತುಂಬಿ ಬಂದ ಉಪಸ್ಥಿತ ಸಾವಿರಾರು ಸಾಧಕರ ನೇತ್ರಗಳಿಂದ ಬಂದ ಭಾವಾಶ್ರುಗಳೊಂದಿಗೆ ಈ ಭಾವಸಮಾರಂಭ ಮುಕ್ತಾಯವಾಯಿತು.
ಪರಾತ್ಪರ ಗುರು ಡಾ. ಆಠವಲೆಯವರಿಗೆ ಅವತಾರ ಎಂದು ಸಂಬೋಧಿಸುವುದರ ಕಾರಣ !‘ಪರಾತ್ಪರ ಗುರು ಡಾ. ಆಠವಲೆ ಅವರು ಎಂದಿಗೂ ತಮ್ಮನ್ನು ಅವತಾರ ಎಂದು ಹೇಳಿಕೊಂಡಿಲ್ಲ. ಸನಾತನ ಸಂಸ್ಥೆ ಕೂಡ ಹಾಗೆ ಹೇಳುವುದಿಲ್ಲ. ‘ನಾಡಿಭವಿಷ್ಯ ಈ ಪ್ರಾಚೀನ ಮತ್ತು ಪ್ರಗಲ್ಭ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಸಪ್ತರ್ಷಿಗಳು ಪ್ರತಿಯೊಬ್ಬ ವ್ಯಕ್ತಿಯ ಭವಿಷ್ಯ ಬರೆದಿಟ್ಟಿದ್ದಾರೆ. ತಮಿಳುನಾಡಿನ ಜೀವನಾಡಿಪಟ್ಟಿಯ ವಾಚಕರಾದ ಪೂ. ಡಾ. ಓಂ ಉಲಗನಾಥನ ಇವರ ಮಾಧ್ಯಮ ದಿಂದ ಸಪ್ತರ್ಷಿಗಳು ಜೀವನಾಡಿಪಟ್ಟಿಗಳಲ್ಲಿ ಪರಾತ್ಪರ ಗುರು ಡಾ. ಆಠವಲೆ ಇವರು ಶ್ರೀವಿಷ್ಣುವಿನ ಅವತಾರವೆಂದು ಬರೆದಿಡಲಾಗಿದೆ. ಸಪ್ತರ್ಷಿಗಳು ಮಾಡಿದ ಆಜ್ಞೆಯಿಂದ ಮತ್ತು ನಾಡಿಪಟ್ಟಿಯಲ್ಲಿ ಹೇಳಿದ ಪ್ರಕಾರ ಜನ್ಮೋತ್ಸವದ ದಿನ ಪರಾತ್ಪರ ಗುರು ಡಾ. ಆಠವಲೆಯವರು ಶ್ರೀವಿಷ್ಣುವಿನ ರೂಪದಲ್ಲಿ ವಸ್ತ್ರಾಲಂಕಾರ ಧಾರಣೆ ಮಾಡಿದ್ದಾರೆ. |