ಭಾರತದಲ್ಲಿನ ಯುವತಿಯರ ಮತ್ತು ಮಹಿಳೆಯರ ಸದ್ಯದ ಸ್ಥಿತಿ !

ಕುಟುಂಬದ ಪ್ರಾಣವಾದ ಸ್ತ್ರೀಯರೇ ಭ್ರಷ್ಟರಾದುದರಿಂದ ಭಾರತದ ಭವಿಷ್ಯ ಅಂಧಃಕಾರಮಯ ‘ಶೀಲ ಮತ್ತು ಧರ್ಮವನ್ನು ಮರೆತಿರುವ ಸ್ತ್ರೀಯರಿಂದ ಧರ್ಮದ, ಹಾಗೆಯೇ ಹಿಂದುತ್ವದ ಅಪಹಾಸ್ಯವಾಗುತ್ತಿದೆ. ಇದರಿಂದಾಗಿ ದೇಶವೂ ರಸಾತಳಕ್ಕೆ ಹೋಗುತ್ತಿದೆ. ಕುಟುಂಬದ ಪ್ರಾಣವಾಗಿರುವ ಸ್ತ್ರೀಯರೇ ಭ್ರಷ್ಟರಾಗಿರುವುದರಿಂದ ಭಾರತದ ಭವಿಷ್ಯವು ಅಂಧಃಕಾರಮಯವಾಗಿದೆ. – ಓರ್ವ ವಿದ್ವಾಂಸರು (ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಮಾಧ್ಯಮದಿಂದ (೫.೪.೨೦೧೧), ಮಧ್ಯಾಹ್ನ ೩.೧೫)

ಸಂಸ್ಕೃತಿಹೀನ ಪಾಶ್ಚಾತ್ಯ ಸ್ತ್ರೀಯರು ಮತ್ತು ರಾಷ್ಟ್ರಗಳು !

‘ಪಾಶ್ಚಾತ್ಯ ಸ್ತ್ರೀಯರು ಜಗತ್ತಿಗೆ ಅಸಭ್ಯತೆ, ಅಶ್ಲೀಲತೆ ಮತ್ತು ಚಾರಿತ್ರ್ಯ್ರಹೀನತೆಯನ್ನು ಕೊಟ್ಟರು. ತದ್ವಿರುದ್ಧ ಹಿಂದೂ ಸ್ತ್ರೀಯರು ಜಗತ್ತಿಗೆ ಸಭ್ಯತೆ, ಸುಸಂಸ್ಕೃತಿ ಮತ್ತು ಧರ್ಮಶೀಲತೆಯನ್ನು ನೀಡಿದರು. ಇಷ್ಟು ಮಾತ್ರವಲ್ಲ, ಜೀಜಾಮಾತಾ, ರಾಣಿ ಲಕ್ಷ್ಮೀ ಬಾಯಿ, ಅಹಿಲ್ಯಾಬಾಯಿ ಹೋಳ್ಕರರಂತಹ ವಿರಾಂಗನೆಯರು ಜಗತ್ತಿಗೆ ಪರಾಕ್ರಮ ಮತ್ತು ರಾಜಧರ್ಮವನ್ನೂ ಕಲಿಸಿದರು. ಸ್ತ್ರೀ ರಾಷ್ಟ್ರದ ಸಂಸ್ಕೃತಿಯ ಕನ್ನಡಿಯೇ ಆಗಿದ್ದಾಳೆ ! ಸ್ತ್ರೀಯರ ಸ್ಥಿತಿ ಕನಿಕರ ಹುಟ್ಟುವಂತೆ ಆಗಿರುವ ಪಾಶ್ಚಾತ್ಯ ತಥಾಕಥಿತ ಸಂಸ್ಕೃತಿಯ ಅಂಧಾನುಕರಣೆಯನ್ನು ಮಾಡಲು ನಮ್ಮ ದೇಶದಲ್ಲಿನ ಸ್ತ್ರೀಯರಿಗೆ ಏಕೆ ನಾಚಿಕೆ ಆಗುವುದಿಲ್ಲ ?

ಪೂ. ಸಂದೀಪ ಆಳಶಿ (೧೨.೪.೨೦೧೭)

ಸ್ತ್ರೀಯರು ಸ್ತ್ರೀಧರ್ಮವನ್ನು ಮರೆತಿದ್ದಾರೆ !

‘ಎಂತಹ ದಿನಗಳು ಬಂದಿವೆ ? ಸ್ತ್ರೀಯರು ತಮ್ಮ ಸೌಂದರ್ಯ ಕಡಿಮೆಯಾಗುವುದೆಂದು ಜನ್ಮ ನೀಡಿದ ಎಳೆಮಕ್ಕಳಿಗೆ ತಮ್ಮ ಎದೆ ಹಾಲು ಕುಡಿಸುವುದಿಲ್ಲ. ಸದ್ಯ ಈ ಪಾಪ ನಡೆಯುತ್ತಿದೆ. ಭಗವಂತನು ನಿರ್ಮಿಸಿದ ಸಿದ್ಧ ಹಾಲನ್ನು ಅವರು ಮಕ್ಕಳಿಗೆ ಕುಡಿಸುವುದಿಲ್ಲ. ಹೀಗಾದರೆ ಮಕ್ಕಳು ತಾಯಿಯನ್ನು ಹೇಗೆ ಪ್ರೇಮಿಸುವರು ? ಸದ್ಯ ಇದು ಕೆಲವು ಕಡೆಗಳಲ್ಲಿ ಹೊಸರೂಢಿ (‘ಫ್ಯಾಶನ್) ಆಗಿದೆ. ‘ಫ್ಯಾಶನ್ ಇರಬೇಕು; ಆದರೆ ಇಂತಹ ನಾಚಿಕೆಗೇಡಿ ‘ಫ್ಯಾಶನ್ ಇರಬಾರದು. ಮದುವೆ ಆಗಿರುವುದು ತಿಳಿಯಬಾರದೆಂದು ಕೆಲವು ಸ್ತ್ರೀಯರು ಪಂಜಾಬಿ ಅಥವಾ ಪಾಶ್ಚಾತ್ಯ ಉಡುಪುಗಳನ್ನು ಧರಿಸುತ್ತಾರೆ. ಮಂಗಳಸೂತ್ರವನ್ನು (ತಾಳಿಯನ್ನು) ಮನೆಯಲ್ಲಿಟ್ಟು ನೌಕರಿಗೆ ಹೋಗುತ್ತಾರೆ. ಕುಂಕುಮವನ್ನು ಚಿಕ್ಕ ಕಡ್ಡಿಯಿಂದ ಹಚ್ಚುತ್ತಾರೆ. ಅದು ಕಾಣಿಸುವುದೇ ಇಲ್ಲ. ನಮ್ಮ ಹಿಂದೂ ಧರ್ಮದಲ್ಲಿ ಮೊದಲು ಕುಂಕುಮಕ್ಕೆ ದೊಡ್ಡ ಗೌರವವಿತ್ತು. ಸ್ತ್ರೀಯರ ಹಣೆಯ ಮೇಲೆ ಚಂದ್ರನಂತೆ ದುಂಡಗೆ ದೊಡ್ಡದಾದ ಕುಂಕುಮವಿರಬೇಕು. ಇದರಿಂದ ‘ಗಂಡನ ಆಯುಷ್ಯ ಹೆಚ್ಚುತ್ತದೆ. ಈಗ ಸದ್ಯ ಟಿಕಲಿಗಳನ್ನು ಹಚ್ಚುತ್ತಿದ್ದಾರೆ. ಹಿಂದೂ ಸ್ತ್ರೀಯರು ತಮ್ಮ ಸ್ವಧರ್ಮವನ್ನು ಪಾಲಿಸಬೇಕು. ಪಾಶ್ಚಾತ್ಯ ಪರದೇಶಿ ಸಂಸ್ಕೃತಿಯ ಹಿಂದೆ ಹೋಗಬಾರದು.

– ಪೂ. (ಹ.ಭ.ಪ.) ಸಖಾರಾಮ ರಾಮಜಿ ಬಾಂದ್ರೆ (ವಯಸ್ಸು ೭೦ ವರ್ಷಗಳು), ಕಾತಳವಾಡಿ, ತಾ. ಚಿಪಳೂಣ, ಜಿಲ್ಲೆ ರತ್ನಾಗಿರಿ, ಮಹಾರಾಷ್ಟ್ರ.