‘ಹಿಂದೂ ಧರ್ಮದಲ್ಲಿ ಮಹಿಳೆಯರಿಗೆ ದ್ವಿತೀಯ ಸ್ಥಾನ ನೀಡಲಾಗಿದೆ, ಎಂದು ಕೂಗಾಡುವವರ ಸುಳ್ಳುತನ !

‘ಪ್ರಗತಿಪರರು ಮತ್ತು ಹಿಂದೂ ಧರ್ಮವನ್ನು ಟೀಕಿಸುವವರು, ‘ಹಿಂದೂ ಧರ್ಮದಲ್ಲಿ ಮಹಿಳೆಯರಿಗೆ ದ್ವಿತೀಯಸ್ಥಾನಮಾನ (ದರ್ಜೆ)ವನ್ನು ನೀಡಲಾಗಿದೆ, ಮಹಿಳೆಯರ ಮೇಲೆ ಅನೇಕ ನಿರ್ಬಂಧಗಳಿವೆ, ಹಿಂದೂ ಮಹಿಳೆಯರು ಅಸಹಾಯಕರಾಗಿದ್ದಾರೆ, ಈ ರೀತಿ ಟೀಕಿಸುತ್ತಾರೆ. ಇಂತಹ ಹಿಂದೂದ್ವೇಷೀ ಜನರ ಟೀಕೆಗಳೆಂದರೆ, ಕೇವಲ ನಿರಾಧಾರ ಆರೋಪಗಳಾಗಿವೆ.

ಹಿಂದೂಗಳ ಪುರಾಣಗಳಲ್ಲಿ ದುರ್ಗಾದೇವಿಯ ವಿವಿಧ ರೂಪಗಳ ಅನೇಕ ಕಥೆಗಳಿವೆ. ಈ ಕಥೆಗಳಲ್ಲಿ ‘ದೇವಿಯು ರಾಕ್ಷಸರನ್ನು ಹೇಗೆ ಸಂಹರಿಸಿದಳು ?, ಎಂಬ ವರ್ಣನೆಯಿದೆ. ದೇವಿಯ ಕೈಗಳಲ್ಲಿ ತ್ರಿಶೂಲ ಮುಂತಾದ ಶಸ್ತ್ರಗಳಿವೆ. ಮೃಗರಾಜ ಸಿಂಹವು ಕೆಲವು ದೇವಿಯರ ವಾಹನವಾಗಿದೆ. ಇಂತಹ ದೇವಿಯರ ಆರಾಧನೆಯನ್ನು ಮಾಡಲು ಹೇಳಿದ ಧರ್ಮದಲ್ಲಿ, ಮಹಿಳೆಯರಿಗೆ ಎಂದಾದರು ದ್ವಿತೀಯ ಸ್ಥಾನಮಾನವಿರಬಹುದೇ ? ಈಗ ‘ಈ ಎಲ್ಲ ಪುರಾಣಕಥೆಗಳೆಂದರೆ, ಕಾಲ್ಪನಿಕ ಕಥೆಗಳಾಗಿವೆ, ಎಂದು ಹೇಳಿ ಕೆಲವು ಜನರು ದೇವಿಯ ಮಹಾತ್ಮೆಯನ್ನು ನಿರಾಕರಿಸಬಹುದು. ವಾಸ್ತವದಲ್ಲಿ ವೇದ ಪುರಾಣಗಳಲ್ಲಿರುವ ಈ ಕಥೆಗಳು ಸುಳ್ಳಲ್ಲ; ಸತ್ಯವೇ ಆಗಿವೆ; ಆದರೆ ಚರ್ಚೆಗಾಗಿ ಒಂದು ವೇಳೆ ಈ ಪುರಾಣಕಥೆಗಳು ಕಾಲ್ಪನಿಕವಾಗಿವೆ, ಎಂದು ನಂಬಿದರೂ ಸಹ ಅದರಲ್ಲಿ ಹೇಳಿದ ಸುಂದರ ಕಲ್ಪನೆಗಳ ಮುಂದೆ ಮನಸ್ಸು ಮತ್ತು ಬುದ್ಧಿ ನತಮಸ್ತಕವಾಗುತ್ತವೆ. ಪ್ರಗತಿ ಪರರು ಅವರ ಕಲ್ಪನಾಶಕ್ತಿಯನ್ನು ಪಣಕ್ಕೆ ಹಚ್ಚಿದರೂ, ದೇವಿಗೆ ಅಂದರೆ, ಸ್ತ್ರೀಶಕ್ತಿಯನ್ನು ಇಷ್ಟೊಂದು ಸಾಮರ್ಥ್ಯಶಾಲಿ ಮತ್ತು ವೈಭವಶಾಲಿಯನ್ನಾಗಿ ತೋರಿಸಲು ಸಾಧ್ಯವಿಲ್ಲ. ‘ಓತಿ ಕಾಟದ ಓಟ ಬೇಲಿಯವರೆಗೆ ಎಂಬ ಗಾದೆಯಂತೆ ಪ್ರಗತಿಪರರ ಓಟವು ಮಹಿಳೆಯರನ್ನು ಆಧುನಿಕ, ವಿಜ್ಞಾನವಾದಿ ಅಥವಾ ಶಾರೀರಿಕ ದೃಷ್ಟಿಯಿಂದ ಸಕ್ಷಮವೆಂದು ತೋರಿಸುವವರೆಗೆ ಮಾತ್ರ ಸಾಧ್ಯವಾಗುತ್ತದೆ; ಆದರೆ ಓರ್ವ ಸ್ತ್ರೀಯು ಶಸ್ತ್ರಗಳ ಮಾಧ್ಯಮದಿಂದ ರಾಕ್ಷಸರ ಸಂಹರಿಸುವ ಅಥವಾ ಮೃಗರಾಜ ಸಿಂಹದ ಮೇಲೆ ಆರೂಢಳಾಗಿರುವ ಕಲ್ಪನೆಯನ್ನು ಸ್ತ್ರೀವಾದಿ ಅಥವಾ ಪ್ರಗತಿಪರರು ಮಾಡಲು ಸಾಧ್ಯವೇ ಇಲ್ಲ. ಇದರಿಂದ ‘ಹಿಂದೂ ಧರ್ಮದಲ್ಲಿ ಮಹಿಳೆಯರಿಗೆ ದ್ವಿತೀಯ ಸ್ಥಾನಮಾನವನ್ನು ನೀಡಲಾಗಿದೆ, ಎಂದು ಕೂಗಾಡುವವರ ಸುಳ್ಳುತನ ಬಹಿರಂಗವಾಗುತ್ತದೆ.

– ಸೌ. ಗೌರಿ ಕುಲಕರ್ಣಿ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೫.೧೦.೨೦೨೦)