ಪೂರ್ವ ಲಡಾಖ್ ನಲ್ಲಿ ಭಾರತ-ಚೀನಾ ನಡುವಿನ ಸಮಸ್ಯೆಯ ಮೇಲೆ ಉಪಾಯವನ್ನು ಕಂಡು ಹಿಡಿಯೋಣ ! – ಚೀನಾ

ಬೀಜಿಂಗ (ಚೀನ) – ಪೂರ್ವ ಲಡಾಖ್ ನಲ್ಲಿ ಬಹಳ ಕಾಲಾವಧಿಯಿಂದ ಭಾರತ ಮತ್ತು ಚೀನಾ ನಡುವೆ ನಡೆಯುತ್ತಿರುವ ಘರ್ಷಣೆಯ ಕುರಿತು ಆದಷ್ಟು ಬೇಗನೆ ಉಪಾಯವನ್ನು ಕಂಡು ಹಿಡಿಯಲಾಗುವುದು. ಈ ದೃಷ್ಟಿಯಿಂದ ಉಭಯ ದೇಶಗಳ ಹಿರಿಯ ಸೈನ್ಯಾಧಿಕಾರಿಗಳ ನಡುವೆ ನಡೆದ ಸಭೆಯಲ್ಲಿ ಚರ್ಚಿಸಲಾಗಿದೆಯೆಂದು ಚೀನಾ ರಕ್ಷಣಾ ಸಚಿವಾಲಯ ಜಾರಿಗೊಳಿಸಿರುವ ಹೇಳಿಕೆಯಲ್ಲಿ ಮಾಹಿತಿ ನೀಡಿದೆ. ಪ್ರತ್ಯಕ್ಷ ಗಡಿರೇಖೆಯ ಮೇಲೆ ಶಾಂತಿಯನ್ನು ಕಾಪಾಡುವ ಅಂಶದ ಮೇಲೆಯೂ ಸೈನ್ಯಾಧಿಕಾರಿಗಳ ನಡುವೆ ಚರ್ಚಿಸಲಾಗಿದೆಯೆಂದು ಇದರಲ್ಲಿ ಹೇಳಲಾಗಿದೆ.

ಎಪ್ರಿಲ್ 23 ರಂದು ಪೂರ್ವ ಲಡಾಖ್ ನ ವಿವಾದಿತ ಅಂಶಗಳ ಮೇಲೆ `ಕೋರ ಕಮಾಂಡರ’ ಮಟ್ಟದಲ್ಲಿ ನಡೆದ 18ನೇ ಸುತ್ತಿನಲ್ಲಿ ಮಾತುಕತೆ ನಡೆದವು. ಎಪ್ರಿಲ್ 27 ಮತ್ತು 28 ರಂದು ಶಾಂಘೈ ಸಹಕಾರ ಸಂಘದ ರಕ್ಷಣಾ ಸಚಿವರ ಸಭೆ ನವ ದೆಹಲಿಯಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಚೀನಾ ಈ ಹೇಳಿಕೆ ಜಾರಿಗೊಳಿಸಿದೆಯೆಂದು ಹೇಳಲಾಗುತ್ತಿದೆ.

ಸಂಪಾದಕರ ನಿಲುವು

ದೂರ್ತ ಚೀನಾದ ಹೇಳಿಕೆಯ ಮೇಲೆ ವಿಶ್ವಾಸವನ್ನಿಡದೇ ಅದರ ವಿರುದ್ಧ ಯಾವಾಗಲೂ ಆಕ್ರಮಣಕಾರಿ ನಿಲುವು ಇಡುವುದು ಅವಶ್ಯಕ !