ಗೊಹಾಟಿ (ಅಸ್ಸಾಂ) – ಅಸ್ಸಾಂನ ಜಿಲ್ಲೆಗಳಲ್ಲಿ ಬೃಹತ್ ಪ್ರಮಾಣದಲ್ಲಿ ಬಾಂಗ್ಲಾದೇಶಿಗಳ ವಿರುದ್ಧ ಪ್ರತಿಭಟನೆಗಳನ್ನು ಮಾಡಲಾಗುತ್ತಿವೆ. ಇಲ್ಲಿನ ಬರಾಕ್ ಕಣಿವೆಯ ಕಚರ್, ಶ್ರೀಭೂಮಿ ಮತ್ತು ಹೈಲಕಂಡಿ ಜಿಲ್ಲೆಗಳ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಬಾಂಗ್ಲಾದೇಶಿ ಗ್ರಾಹಕರ ಪ್ರವೇಶವನ್ನು ನಿಷೇಧಿಸಲಾಗಿದೆ. ‘ಹಿಂದೂಗಳ ಮೇಲಿನ ದಾಳಿ ನಿಲ್ಲುವವರೆಗೂ ಯಾವುದೇ ಬಾಂಗ್ಲಾದೇಶದವರಿಗೆ ಸಹಾಯ ಮಾಡುವುದಿಲ್ಲ’, ಎಂದು ವ್ಯಾಪಾರಿಗಳು ಹೇಳಿದ್ದಾರೆ. ಈ ಹಿಂದೆ, ಶ್ರೀಭೂಮಿ ಜಿಲ್ಲೆಯ ಆಮದು-ರಫ್ತು ಸಂಘವು ಬಾಂಗ್ಲಾದೇಶದೊಂದಿಗಿನ ಎಲ್ಲಾ ವ್ಯಾಪಾರ ಸಂಬಂಧಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿತ್ತು.
1. ಬರಾಕ್ ವ್ಯಾಲಿ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಶನ್ ಅಧ್ಯಕ್ಷ ಬಾಬುಲ್ ರೈ ಇವರು, ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಪರಿಸ್ಥಿತಿ ಆತಂಕಕಾರಿಯಾಗಿದೆ. ಇದನ್ನು ನಾವು ಸ್ವೀಕರಿಸಲು ಸಾಧ್ಯವಿಲ್ಲ. ಅಲ್ಲಿ ಪರಿಸ್ಥಿತಿ ಸುಧಾರಿಸಿದರೆ ಮಾತ್ರ ನಾವು ನಮ್ಮ ನಿರ್ಧಾರವನ್ನು ಮರುಪರಿಶೀಲಿಸಬಹುದು’ ಎಂದು ಹೇಳಿದರು.
2. ಈ ಹಿಂದೆ ತ್ರಿಪುರಾದಲ್ಲಿ, ‘ಆಲ್ ತ್ರಿಪುರಾ ಹೋಟೆಲ್ ಮತ್ತು ರೆಸ್ಟೋರೆಂಟ್ ಒನರ್ಸ ಅಸೊಶಿಎಷನ್’ ಬಾಂಗ್ಲಾದೇಶಿ ಜನರಿಗೆ ರೆಸ್ಟೋರೆಂಟ್‌ಗಳಲ್ಲಿ ಆಹಾರವನ್ನು ನೀಡಲು ನಿರಾಕರಿಸಿತ್ತು. ಅಲ್ಲದೆ, ಇಲ್ಲಿನ ಖಾಸಗಿ ಆಸ್ಪತ್ರೆಯು ಬಾಂಗ್ಲಾದೇಶದ ಯಾವುದೇ ರೋಗಿಗೆ ಚಿಕಿತ್ಸೆ ನೀಡುವುದಿಲ್ಲ ಎಂದು ಈ ಹಿಂದೆ ಘೋಷಿಸಿತ್ತು.
ಸಂಪಾದಕೀಯ ನಿಲುವುಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಪ್ರತಿಭಟಿಸಲು ಅಸ್ಸಾಂನ ಹೋಟೆಲ್ ಮಾಲೀಕರು ಈ ಕ್ರಮ ಕೈಗೊಂಡಿರುವುದು ಶ್ಲಾಘನೀಯ ನಿರ್ಧಾರವಾಗಿದೆ. ಭಾರತದಲ್ಲಿನ ಹಿಂದೂಗಳು ಬಾಂಗ್ಲಾದೇಶಿ ಹಿಂದೂಗಳ ಮೇಲಿನ ದಾಳಿಯ ವಿರುದ್ಧ ಅಲ್ಪ ಪ್ರಮಾಣದಲ್ಲಿ ಸಕ್ರಿಯರಾಗುತ್ತಿದ್ದಾರೆ. ಹಿಂದೂಗಳ ಮೇಲಿನ ದಾಳಿಯ ಸ್ಥಿತಿಯನ್ನು ನೋಡಿದರೆ, ದೇಶದ 100 ಕೋಟಿ ಹಿಂದೂಗಳು ಹಿಂದೂಗಳ ರಕ್ಷಣೆಗಾಗಿ ಭಾರತ ಮತ್ತು ಬಾಂಗ್ಲಾದೇಶ ಸರಕಾರದ ಮೇಲೆ ಒತ್ತಡವನ್ನು ಹೇರುವುದು ಅಪೇಕ್ಷಿತವಿತ್ತು ! |