ಸಾತ್ತ್ವಿಕ ಮತ್ತು ಅಸಾತ್ತ್ವಿಕ ಆಭರಣಗಳ ಉದಾಹರಣೆಗಳು ಆಭರಣ ಖರೀದಿಸಲು ಅಂಗಡಿಗೆ ಹೋದಾಗ ಅಲ್ಲಿ ನಮಗೆ ವಿವಿಧ ಮಾದರಿಯ ಆಭರಣಗಳು ಕಾಣಿಸುತ್ತವೆ. ಕೆಲವೊಮ್ಮೆ ಆಭರಣಗಳ ವಿವಿಧ ವಿನ್ಯಾಸದ ಪುಸ್ತಕವನ್ನೂ (ಕ್ಯಾಟಲಾಗ್)ತೋರಿಸುತ್ತಾರೆ. ಅನೇಕ ಬಾರಿ ನಾವು ಬಾಹ್ಯ ಸೌಂದರ್ಯಕ್ಕೆ ಮನಸೋತು ತಾಮಸಿಕ ಆಭರಣಗಳನ್ನು ಖರೀದಿಸುತ್ತೇವೆ. ಹೀಗಾಗದಂತೆ ಕೆಳಗಿನ ಉಪಾಯ ಮಾಡಿ.
೧. ಸನಾತನದ ಗ್ರಂಥಗಳಲ್ಲಿ ವಿವಿಧ ಆಭರಣಗಳ ಛಾಯಾಚಿತ್ರ ಮತ್ತು ಸೂಕ್ಷ್ಮದ ಪ್ರಯೋಗಗಳನ್ನು ನೀಡಲಾಗಿದೆ. ಅವುಗಳಿಂದ ಆಭರಣಗಳು ಸಾತ್ತ್ವಿಕವಾಗಿವೆಯೋ ಅಥವಾ ತಾಮಸಿಕವಾಗಿ ವೆಯೋ ಎಂಬುದು ಗೊತ್ತಾಗುತ್ತದೆ.
೨. ಆಭರಣಗಳನ್ನು ಖರೀದಿಸುವಾಗ ಅಧ್ಯಾತ್ಮದ ಬಗ್ಗೆ ತಿಳುವಳಿಕೆಯಿರುವ ಅಥವಾ ಸೂಕ್ಷ್ಮದ ಸ್ಪಂದನ ಅರಿತುಕೊಳ್ಳುವ ಕ್ಷಮತೆಯಿರುವವರಿಗೆ ವಿಚಾರಿಸಿ.
೩. ಅಧ್ಯಾತ್ಮದಲ್ಲಿ ತಿಳುವಳಿಕೆಯಿರುವ (ಜ್ಞಾನಿ) ವ್ಯಕ್ತಿ ಅಥವಾ ಸೂಕ್ಷ್ಮದ ಸ್ಪಂದನಗಳನ್ನು ತಿಳಿದುಕೊಳ್ಳುವ ಕ್ಷಮತೆಯಿರುವ ವ್ಯಕ್ತಿಗಳು ಸಿಗದಿದ್ದರೆ, ನೀವೇ ಆ ಆಭರಣವನ್ನು ಸೂಕ್ಷ್ಮದಿಂದ ನೋಡಿ ಒಳ್ಳೆಯದೆನಿ ಸುತ್ತದೆಯೋ ಅಥವಾ ತ್ರಾಸದಾಯಕವೆನಿಸುತ್ತದೆಯೋ ಎಂಬುದನ್ನು ನಿರ್ಧರಿಸಲು ಪ್ರಯತ್ನಿಸಿ. ೧೦ ನಿಮಿಷ ನಿಮ್ಮ ಕುಲದೇವಿ, ಕುಲದೇವ ಅಥವಾ ಉಪಾಸ್ಯ ದೇವತೆಯ ಪೈಕಿ ಯಾರಾದರೊಬ್ಬರ ನಾಮಜಪಿಸಿ. ಮಧ್ಯಮಧ್ಯದಲ್ಲಿ ‘ಆಭರಣದ ಮೇಲೆ ಮಾಯಾವೀ ಶಕ್ತಿಯ ಆವರಣವು ಬಂದಿದ್ದರೆ ಅದು ದೂರವಾಗಲಿ ಎಂದು ಪ್ರಾರ್ಥನೆ ಮಾಡಿ. ೧೦ ನಿಮಿಷಗಳ ನಂತರ ಮತ್ತೊಮ್ಮೆ ಆ ಆಭರಣದೆಡೆಗೆ ಸೂಕ್ಷ್ಮದಿಂದ ನೋಡಿ ಒಳ್ಳೆಯದೆನಿಸುತ್ತದೆಯೋ ಅಥವಾ ತ್ರಾಸದಾಯಕವೆನಿಸುತ್ತದೆಯೋ ಎಂಬುದನ್ನು ನೋಡಿ. ಆಮೇಲೆ ಆಭರಣವನ್ನು ಖರೀದಿಸಬೇಕೋ ಅಥವಾ ಬೇಡವೋ ಎಂಬುದನ್ನು ನಿರ್ಧರಿಸಿ.
* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. |