ಮಂಗಳಸೂತ್ರಗಳಲ್ಲಿನ ಬಟ್ಟಲುಗಳನ್ನು ತೆಗೆಯಬೇಡಿ !

ಇತ್ತೀಚೆಗೆ ಮಂಗಳಸೂತ್ರದ ಮಧ್ಯಭಾಗದಲ್ಲಿರುವ ೨ ಬಟ್ಟಲುಗಳ ಸ್ಥಾನದಲ್ಲಿ ವಿಭಿನ್ನ ವಿನ್ಯಾಸಗಳಿರುವ  (‘ಡಿಝೈನ್), ಹಾಗೆಯೇ ಮಂಗಳಸೂತ್ರದ ೨ ಪದರುಗಳ ಬದಲಿಗೆ ಒಂದೇ ಪದರವಿರುವ ಮಂಗಳ ಸೂತ್ರದ ‘ಫ್ಯಾಶನ್ ಬಂದಿದೆ. ಮಂಗಳಸೂತ್ರದಲ್ಲಿನ ೨ ಬಟ್ಟಲುಗಳ ಬದಲಿಗೆ ವಜ್ರದ ಅಥವಾ ಮುತ್ತುಗಳ ಅಥವಾ ಇತರ  ಧಾತುವಿನ ‘ಪೆಂಡೆಂಟ್ (ಪದಕ)ಗಳು ನೋಡಲು ಸಿಗುತ್ತವೆ.

ಮಂಗಳಸೂತ್ರವು ಸೌಭಾಗ್ಯದ ಮಹತ್ವದ ಆಭರಣವಾಗಿದೆ ಮತ್ತು ಅದರಲ್ಲಿನ ಪ್ರತಿಯೊಂದು ಘಟಕಕ್ಕೆ ಆಧ್ಯಾತ್ಮಿಕ ಅರ್ಥವೂ ಇದೆ. ಮಂಗಳಸೂತ್ರದಲ್ಲಿ ಎರಡು ಪದರುಗಳ ದಾರಗಳಲ್ಲಿ ಕಪ್ಪು ಮಣಿಗಳನ್ನು ಪೋಣಿಸಲಾಗಿರುತ್ತದೆ. ಮಧ್ಯಭಾಗದಲ್ಲಿ ೪ ಚಿಕ್ಕ ಬಂಗಾರದ ಮಣಿಗಳು ಮತ್ತು ೨ ಚಿಕ್ಕ ಬಟ್ಟಲುಗಳಿರುತ್ತವೆ. ೪ ಚಿಕ್ಕ ಮಣಿಗಳೆಂದರೆ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಈ ೪ ಪುರುಷಾರ್ಥಗಳು ಮತ್ತು ೨ ಬಟ್ಟಲುಗಳೆಂದರೆ ಶಿವ-ಶಕ್ತಿಯ ಪ್ರತೀಕವಾಗಿವೆ. ಮಂಗಳಸೂತ್ರದ ಬಟ್ಟಲುಗಳ ಟೊಳ್ಳಿನಲ್ಲಿನ ತೇಜಸ್ವರೂಪ ಲಹರಿಗಳಿಂದ ವಿವಾಹಿತ ಮಹಿಳೆಯ ಅನಾಹತಚಕ್ರ ಜಾಗೃತವಾಗುತ್ತದೆ. ಆಭರಣಗಳಲ್ಲಿನ ತೇಜವು ರಜ-ತಮ ಲಹರಿಗಳಿಂದ, ಹಾಗೆಯೇ ನಕಾರಾತ್ಮಕ ಸ್ಪಂದನಗಳಿಂದ ಸ್ತ್ರೀಯರನ್ನು ರಕ್ಷಿಸುತ್ತದೆ. ಆಭರಣಗಳನ್ನು ಧರಿಸುವುದರ ಹಿಂದೆ ಕೇವಲ ಚೆನ್ನಾಗಿ ಕಾಣಿಸುವುದು ಅಥವಾ ಸಿಂಗರಿಸಿಕೊಳ್ಳುವ ಉದ್ದೇಶ ಇಲ್ಲ. ಆಭರಣಗಳಿಂದ ವ್ಯಕ್ತಿಗೆ ಆಧ್ಯಾತ್ಮಿಕ ಊರ್ಜೆ (ಶಕ್ತಿ) ಸಿಗುತ್ತದೆ. ಆದುದರಿಂದ ಈ ಆಭರಣಗಳು ಶಾಸ್ತ್ರಕ್ಕನುಸಾರವಾಗಿದ್ದಷ್ಟು ಆ ವ್ಯಕ್ತಿಗೆ ಆಧ್ಯಾತ್ಮಿಕ ಸ್ತರದಲ್ಲಿ ಹೆಚ್ಚು ಲಾಭವಾಗುತ್ತದೆ.

ಅನ್ನವನ್ನು ತಯಾರಿಸುವಾಗ ಅದರಲ್ಲಿ ಅಕ್ಕಿ ಮತ್ತು ನೀರಿನ ಪ್ರಮಾಣ ಸರಿಯಾಗಿದ್ದರೆ ಮಾತ್ರ ಅದು ವ್ಯವಸ್ಥಿತವಾಗಿ ತಯಾರಾಗುತ್ತದೆ. ‘ಫ್ಯಾಶನ್ ಎಂದು ಅಕ್ಕಿಯಲ್ಲಿ ಬಹಳಷ್ಟು ನೀರು ಸುರಿದರೆ, ಅನ್ನ ಚೆನ್ನಾಗಿ ಆಗುವುದಿಲ್ಲ, ಹಾಗೆಯೇ ‘ಫ್ಯಾಶನ್, ಎಂದು ನಾವು ಧರ್ಮಶಾಸ್ತ್ರದ ಸಂಕಲ್ಪನೆಯಲ್ಲಿ ನಮ್ಮ ಮನಸ್ಸಿನಂತೆ ಬದಲಾವಣೆಯನ್ನು ಮಾಡಿದರೆ ಅದು ಅಯೋಗ್ಯವಾಗುತ್ತದೆ. ಆದುದರಿಂದ ಬಟ್ಟಲುಗಳಿಲ್ಲದ ಮಂಗಳಸೂತ್ರಗಳಿಗೆ ‘ಮಂಗಳಸೂತ್ರ ಎನ್ನಬೇಕೋ ಅಥವಾ ಮಂಗಳಸೂತ್ರದಂತೆ ಕಾಣಿಸುವ ಕೊರಳಲ್ಲಿನ ಆಭರಣವೆನ್ನಬೇಕೋ ?, ಇದು ಸಹ ಒಂದು ಪ್ರಶ್ನೆಯೇ ಆಗಿದೆ.

ಧರ್ಮಶಿಕ್ಷಣದ ಕೊರತೆಯಿಂದಾಗಿ ಮಹಿಳೆಯರು ಎಲ್ಲಿ ಬೇಕಿಲ್ಲವೋ, ಅಲ್ಲಿ ಫ್ಯಾಶನಕ್ಕಾಗಿ ಆಗ್ರಹ ಮಾಡುತ್ತಾರೆ. ‘ಫ್ಯಾಶನ್ನ ಅಟ್ಟಹಾಸವನ್ನು ಬಿಟ್ಟು ಧರ್ಮ, ಪರಂಪರೆ ಅಂದರೇನು ಮತ್ತು ಅದು ಹಾಗೆ ಏಕೆ ಹೇಳುತ್ತದೆ ? ಎಂಬುದನ್ನು ತಿಳಿದುಕೊಳ್ಳುವುದು ಮತ್ತು ಅದಕ್ಕನುಸಾರ ಕೃತಿ ಮಾಡುವುದು ಮಹತ್ವದ್ದಾಗಿದೆ. ‘ಫ್ಯಾಶನ್ ಎಂದು ಮಂಗಳಸೂತ್ರದಲ್ಲಿನ ‘ಬಟ್ಟಲುಗಳನ್ನು ತೆಗೆದು ಅವುಗಳ ಮಾಧ್ಯಮದಿಂದ ‘ಸೂಕ್ಷ್ಮ ರಕ್ಷಣಾ ಕವಚ ನಿರ್ಮಾಣ ವಾಗುವ ಮಾರ್ಗವನ್ನೇ ತಡೆಗಟ್ಟಲಾಗುತ್ತದೆ !

– ಸೌ. ಗೌರಿ ಕುಲಕರ್ಣಿ, ಫೋಂಡಾ, ಗೋವಾ.

ಸ್ತ್ರೀಯರ ಆಭರಣಗಳು ಹೇಗಿರಬೇಕು ?

 

ಮಂಗಳಸೂತ್ರ : ವಿನ್ಯಾಸರಹಿತ, ಅನಾಹತ ಚಕ್ರದವರೆಗೆ ಅಂದರೆ ಎದೆಯ ಮಧ್ಯಭಾಗದ ವರೆಗೆ ಉದ್ದವಿರುವ, ಕರಿಮಣಿಗಳನ್ನು ಎರಡೆಳೆಯಲ್ಲಿ ಪೋಣಿಸಿದ ಬಟ್ಟಲುಗಳಿರುವ ಮಂಗಳಸೂತ್ರವನ್ನು ಧರಿಸಬೇಕು.

ಕರ್ಣಾಭರಣಗಳು : ಒಂದು ಕಿವಿಯಲ್ಲಿ ಒಂದೇ ಓಲೆ ಧರಿಸಬೇಕು. ಕಿವಿಗೆ ಹೆಚ್ಚು ತೂತುಗಳನ್ನು ಮಾಡಿ ಮೂಗುತಿಯಂಥ ಆಭರಣಗಳನ್ನು ಧರಿಸಬಾರದು.

ಬಳೆಗಳು : ಎರಡೂ ಕೈಗಳಲ್ಲಿ ಗಾಜಿನ ಹಸಿರು ಅಥವಾ ಕೆಂಪು ಬಣ್ಣದ ಬಳೆಗಳನ್ನು ತೊಡಬೇಕು. ಪ್ಲಾಸ್ಟಿಕ್‌ನ ಬಳೆಗಳನ್ನು ತೊಡಬಾರದು. ಆಭರಣಗಳು ಸ್ತ್ರೀಯಲ್ಲಿರುವ ದೇವತ್ವವನ್ನು ಜಾಗೃತಗೊಳಿಸಿ ಅವಳನ್ನು ಕೆಟ್ಟ ಶಕ್ತಿಗಳಿಂದ ರಕ್ಷಿಸುತ್ತವೆ.