ಭಾರತದ್ವೇಷಿ ಮತ್ತು ಕಾಂಗ್ರೆಸ್‌ಪ್ರೇಮಿ ಅಮೇರಿಕಾ-ಜರ್ಮನಿ !

ಇಸ್ರೈಲ್ ಸರಕಾರವು ತನ್ನ ಕಾನೂನುಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡುತ್ತಿದೆ. ಅಲ್ಲಿನ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ನೇಮಕಾತಿಯಲ್ಲಿ ಸಂಸದರಿಗೂ ಅಧಿಕಾರ ಸಿಗಬೇಕೆಂಬ ಅಂಶವು ಈ ಕಾನೂನಿನಲ್ಲಿ ವಿಶೇಷವಾಗಿ ಒಳಗೊಂಡಿದೆ. ಭ್ರಷ್ಟಾಚಾರದ ಆರೋಪದಿಂದ ಪ್ರಧಾನಿ ನೇತಾನ್ಯಾಹು ಇವರನ್ನು ಮುಕ್ತಗೊಳಿಸಲು ಈ ಅಟ್ಟಹಾಸ ನಡೆಯುತ್ತಿದೆ ಎಂಬ ವಿಚಾರದಲ್ಲಿ ಸತ್ಯವೂ ಇದೆ; ಆದರೆ ಅಲ್ಲಿನ ವೆಸ್ಟ್ ಬ್ಯಾಂಕ್‌ನಲ್ಲಿ ಹೇಳಲಾಗುತ್ತಿರುವ ಇಸ್ರೈಲಿ ಜ್ಯೂಗಳ ಅಕ್ರಮ ವಸಾಹತುಗಳನ್ನು ಖಾಯಂ ಮಾಡುವ ಕಾನೂನನ್ನು ಅಮೇರಿಕಾವು ವಿರೋಧಿಸುತ್ತಿದೆ. ಈ ಕಾನೂನು ಪ್ರಚೋದನಕಾರಿಯಾಗಿದೆ ಎಂದು ಹೇಳಿ ಅದನ್ನು ರದ್ದು ಪಡಿಸುವಂತೆ ಅಮೇರಿಕಾ ಕರೆ ನೀಡಿದೆ. ಇಸ್ರೈಲ್‌ನ ಆಂತರಿಕ ಸಮಸ್ಯೆಗಳಲ್ಲಿ ಮೂಗು ತೂರಿಸಲು ಅಮೇರಿಕಾಗೆ ಅಧಿಕಾರ ಏನಿದೆ ? ಮಧ್ಯ-ಪೂರ್ವದ ರಾಜಕೀಯ ಅಸ್ಥಿರತೆಗೆ ಕಡಿವಾಣ ಹಾಕಲು ಅಮೇರಿಕಾ ಯಾರು ? ಆದರೆ ಚಾಣಾಕ್ಷ ಇಸ್ರೈಲ್ ಆಡಳಿತಗಾರರು ಇದಕ್ಕೆ ಪ್ರತ್ಯುತ್ತರ ನೀಡುವರೆಂಬುದು ಖಂಡಿತ !

ಅಮೇರಿಕಾದ ಬಾಯಿಗೆ ಬೀಗ ಹಾಕಿ !

ಭಾರತದ ಕಾಂಗ್ರೆಸ್ ನಾಯಕ ರಾಹುಲ ಗಾಂಧಿ ಇವರನ್ನು ಭಾರತದ ಸಂಸತ್ತಿನಿಂದ ಅನರ್ಹಗೊಳಿಸಿದ್ದನ್ನು  ಇದೇ ಅಮೇರಿಕಾ ವಿರೋಧಿಸುತ್ತಿದೆ. ಭಾರತೀಯ ನ್ಯಾಯಾಲಯದಲ್ಲಿ ನಡೆಯುತ್ತಿರುವ ರಾಹುಲ ಗಾಂಧಿ ಇವರ ಪ್ರಕರಣವನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಕಾನೂನು ರಾಜ್ಯ ಮತ್ತು ನ್ಯಾಯಾಂಗದ ಸ್ವಾತಂತ್ರ್ಯವು ಪ್ರತಿಯೊಂದು ಪ್ರಜಾಪ್ರಭುತ್ವಕ್ಕಾಗಿ ಅಮೂಲ್ಯವಾಗಿದೆ’, ಎಂದು ಅಮೇರಿಕಾದ ವಿದೇಶಾಂಗ ಸಂಬಂಧಗಳ ಪ್ರಧಾನ ಉಪವಕ್ತಾರರಾದ ವೇದಾಂತ ಪಟೇಲ ಇವರು ಹೇಳಿಕೆ ನೀಡಿ ಗಾಂಧಿ ಮಹಾಶಯರಿಗೆ ಬೆಂಬಲ ನೀಡಿದ್ದಾರೆ. ‘ಜಗತ್ತಿನ ಶ್ರೇಷ್ಠ ಪ್ರಜಾಪ್ರಭುತ್ವವೆಂದು ತನ್ನನ್ನು ಬಿಂಬಿಸುತ್ತಿರುವ ಅಮೇರಿಕಾದಲ್ಲಿನ ಪ್ರಜಾಪ್ರಭುತ್ವದ ದಯನೀಐ ಸ್ಥಿತಿ ಬಗ್ಗೆ ಜಗತ್ತು ಆಯಾ ಸಮಯದಲ್ಲಿ ನೋಡಿದೆ. ‘ಬ್ಲ್ಯಾಕ್ ಅಮೇರಿಕನ್ಸ್’ (ಕಪ್ಪು ವರ್ಣೀಯ)ರಿಗೆ  ಕಾನೂನಿನ ರಾಜ್ಯವನ್ನು ನೀಡಲು ಅಮೇರಿಕಾಕ್ಕೆ ಇಂದಿಗೂ ಏಕೆ ಸಾಧ್ಯವಾಗಿಲ್ಲ ? ತನ್ನ ‘ವೈಟ್ ಸುಪ್ರಮೆಸಿಸ್ಟ್ ಐಡಿಯಾಲಜಿ’ಗೆ (ಬಿಳಿ ವರ್ಣೀಯರ ವರ್ಚಸ್ವವಾದಿ ಮಾನಸಿಕತೆಗೆ) ಏಕೆ ಕಡಿವಾಣ ಹಾಕಲಾಗಲಿಲ್ಲ ?

೨೦೧೨ ರಲ್ಲಿ ರಾಷ್ಟ್ರಾಧ್ಯಕ್ಷ ಪದವಿಯ ಚುನಾವಣೆಯಲ್ಲಿ ಸೋತ ಡೊನಾಲ್ಡ್ ಟ್ರಂಪ್ ಇವರ ಸಾವಿರಾರು ಬೆಂಗಲಿಗರು ವಾಶಿಂಗ್‌ಟನ್‌ನ ಕ್ಯಾಪಿಟಲ್ ಹಿಲ್ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದರು. ಆಧುನಿಕ ಅಮೇರಿಕಾದ ಈ ನಾಟಕೀಯ ಚಿತ್ರಣವು ಖಂಡಿತವಾಗಿಯೂ ಈ ಬಲಿಷ್ಠ ದೇಶದ ಪ್ರಜಾಪ್ರಭುತ್ವದ ದುರವಸ್ಥೆಯನ್ನು ತೋರಿಸುತ್ತದೆ. ಟ್ರಂಪ್ ಇವರ ಆಡಳಿತಾವಧಿಯಲ್ಲಿ ಅವರು ಪ್ರಮುಖ ದಾಖಲೆಗಳಲ್ಲಿ ತಿದ್ದುಪಡಿ ಮಾಡಿರುವ ಆರೋಪವನ್ನು ಹೊರಿಸುತ್ತಾ ‘ಎಫ್.ಬಿ.ಐ.’ ಅವರ ಫ್ಲೊರಿಡಾದ ಮನೆಯ ಮೇಲೆ ಕಳೆದ ಆಗಸ್ಟ್‌ನಲ್ಲಿ ದಾಳಿ ಮಾಡಿತು. ಇದರಿಂದ ‘ಅಮೇರಿಕಾ ಸರಕಾರ ತನ್ನ ವಿರೋಧಿಗಳ ಬಾಯಿ ಮುಚ್ಚಿಸುತ್ತದೆ’, ಎಂದು ಹೇಳಬೇಕೇ ? ಆದುದರಿಂದ ಭಾಷೆ, ಪಂಥ, ಧರ್ಮ, ಭೌಗೋಲಿಕ ಸ್ಥಿತಿ ಮುಂತಾದ ಅನೇಕ ಸ್ತರಗಳಲ್ಲಿ ಅಮೇರಿಕಾಗಿಂತ ಅನೇಕ ಪಟ್ಟುಗಳಲ್ಲಿ ವೈವಿಧ್ಯತೆಯಿರುವ ಮತ್ತು ೧೪೦ ಕೋಟಿ ನಾಗರಿಕರನ್ನು ಒಂದೇ ಆಶ್ರಯದಲ್ಲಿಟ್ಟು ಸಂರಕ್ಷಣೆ ಮಾಡುವ ಭಾರತಕ್ಕೆ ಅಮೇರಿಕಾವು ಪ್ರಜಾಪ್ರಭುತ್ವದ ಪಾಠ ಕಲಿಸುವ ಆವಶ್ಯಕತೆ ಖಂಡಿತವಾಗಿಯೂ ಇಲ್ಲ.

ಜರ್ಮನಿಯ ಬೂಟಾಟಿಕೆ !

ಯುರೋಪ್‌ನ ಮಹಾಶಕ್ತಿ ಜರ್ಮನಿಯು ಸಹ ರಾಹುಲ ಗಾಂಧಿ ಇವರನ್ನು ಅಮಾನತುಗೊಳಿಸಿದ ಬಗ್ಗೆ ಭಾರತವನ್ನು ದೂಷಿಸುವ ಪ್ರಯತ್ನಗಳನ್ನು ಪ್ರಾರಂಭಿಸಿದೆ. ಜರ್ಮನಿಯು ಗಾಂಧಿ ಇವರ ಮೇಲಾದ ಕಾರ್ಯಾಚರಣೆ ಬಗ್ಗೆ ಭಾರತಕ್ಕೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ನೆನಪಿಸಿಕೊಟ್ಟು ‘ಗಾಂಧಿಯವರು ತಮ್ಮನ್ನು ಅಮಾನತುಗೊಳಿಸಿದುದರ ವಿರುದ್ಧ ನ್ಯಾಯಾಲಯದಲ್ಲಿ ನ್ಯಾಯ ಕೇಳಬಹುದು. ನ್ಯಾಯಾಂಗದ ತೀರ್ಪಿಗನುಸಾರ ಈ ಕಾರ್ಯಾಚರಣೆಯು ಯೋಗ್ಯವೋ-ಅಯೋಗ್ಯವೋ ಎಂದು ನಿರ್ಧರಿತವಾಗಲಿದೆ’, ಎಂಬುದು ಜರ್ಮನಿನ ವಕ್ತಾರರ ಹೇಳಿಕೆಯಾಗಿದೆ. ಇದಕ್ಕೆ ಕೇಂದ್ರೀಯ ಕಾನೂನುಮಂತ್ರಿ ಕಿರೆನ್ ರಿಜಿಜು ಇವರು ‘ನಾನು ರಾಹುಲ ಗಾಂಧಿ ಇವರಿಗೆ ಧನ್ಯವಾದಗಳನ್ನು ತಿಳಿಸಲು ಇಚ್ಛಿಸುತ್ತೇನೆ, ಭಾರತದ ಆಂತರಿಕ ಸಮಸ್ಯೆಗಳಲ್ಲಿ ಅವರು ಅಂತರರಾಷ್ಟ್ರೀಯ ಶಕ್ತಿಗಳನ್ನು ಆಮಂತ್ರಿಸಿದ್ದಾರೆ. ಆದರೆ ಭಾರತೀಯ ನ್ಯಾಯವವ್ಯಸ್ಥೆಯು ಅಂತರರಾಷ್ಟ್ರೀಯ ಒತ್ತಡಕ್ಕೆ ಬಗ್ಗುವುದಿಲ್ಲ ! ಭಾರತವು ಅಂತರರಾಷ್ಟ್ರೀಯ ಸ್ತರದ ಪ್ರಭಾವವನ್ನು ಸಹಿಸದು; ಏಕೆಂದರೆ ಮೋದಿ ಇವರು ಭಾರತದ ಪ್ರಧಾನಿಯಾಗಿದ್ದಾರೆ’, ಎಂದು ತೀಕ್ಷ್ಣವಾಗಿ ಪ್ರತ್ಯುತ್ತರ ನೀಡಿದ್ದಾರೆ ಈ ತೀಕ್ಷ್ಣ ಉತ್ತರಕ್ಕಾಗಿ ಅವರನ್ನು ಪ್ರಶಂಸಿಸಲೇಬೇಕು; ಆದರೆ ಜರ್ಮನಿಗೆ ಅಷ್ಟೇ ಕಠೋರವಾಗಿ ಪಾಠ ಕಲಿಸುವುದು ಸಹ ಇಲ್ಲಿ ತುಂಬ ಆವಶ್ಯಕವಾಗಿದೆ.

ಭಾರತಕ್ಕೆ ಪ್ರಜಾಪ್ರಭುತ್ವದ ಡೋಸ್‌ಅನ್ನು ನೀಡುವ ಜರ್ಮನಿಯ ತಂತ್ರವು ಹಳೆಯದಾಗಿದೆ !

ಒಂದೆಡೆ ಹಿಂದೂ ದೇವತೆಗಳ ವಿಡಂಬನೆ ಮಾಡಿದ್ದಕ್ಕಾಗಿ ‘ಆಲ್ಟ್ ನ್ಯೂಸ್ ಎಂಬ ಮುಸಲ್ಮಾನ ಪ್ರಾಬಲ್ಯದ ಭಾರತೀಯ ಸುದ್ದಿ ಸೈಟ್ ‘ಆಲ್ಟ್ ನ್ಯೂಸ್ನ ಸಂಪಾದಕ ಮಹಮ್ಮದ ಜುಬೆರ ಅವರನ್ನು ಕಳೆದ ವರ್ಷ ಬಂಧಿಸಿದ ಕಾರಣ ಜರ್ಮನಿಯು ಭಾರತಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಪಾಠ ಕಲಿಸಲು ಹೆಣಗಾಡಿತು. ಮತ್ತೊಂದೆಡೆ ಪೂರ್ವ ಉಕ್ರೇನ್ ನಿಂದ ಸುದ್ದಿ ಸಂಗ್ರಹ ಮಾಡುವಾಗ ಉಕ್ರೇನ್‌ನ ಸೈನ್ಯವು ಅಲ್ಲಿನ ಜನತೆಯ ನರಮೇಧ ಮಾಡುತ್ತಿದೆ ಎಂದು ಹೇಳಿದ ಎಲಿನಾ ಲಿಪ್ಪ್ ಈ ಸ್ವತಂತ್ರ ಜರ್ಮನ್ ಮಹಿಳಾ ಪತ್ರಕರ್ತೆಯ ಯೂಟ್ಯೂಬ್ ವಾಹಿನಿಯನ್ನು ಮುಚ್ಚಿಸಿದ, ಅವಳ ಬ್ಯಾಂಕ್ ಖಾತೆಯಿಂದ ೧ ಸಾವಿರದ ೩೦೦ ಯುರೋ (೧ ಲಕ್ಷದ ೧೬ ಸಾವಿರಗಳಿಗಿಂತ ಹೆಚ್ಚು ರೂಪಾಯಿಗಳನ್ನು) ತೆಗೆದುಕೊಂಡು ಅದನ್ನು ನುಂಗಿ ಹಾಕುವ ಮತ್ತು ಯಾವುದೇ ಪ್ರಕ್ರಿಯೆ ಮಾಡದೇ ಅವಳಿಗೆ ೩ ವರ್ಷಗಳ ಶಿಕ್ಷೆಯನ್ನು ಇದೇ ಜರ್ಮನಿಯು ವಿಧಿಸಿತ್ತು !

ರಾಹುಲ ಗಾಂಧಿ ಇವರನ್ನು ಅಮಾನತುಗೊಳಿಸಿದ ಕಾರ್ಯಾಚರಣೆಗೆ ಸಂವಿಧಾನಾತ್ಮಕ ಆಧಾರವಿದೆ. ಗಾಂಧಿ  ಬಗ್ಗೆ ಪುಳಕ ಹೊಂದಿರುವ ಜರ್ಮನಿಯು ವಾಸ್ತವದಲ್ಲಿ ವಿರೋಧಿ ರಾಜಕೀಯ ಪಕ್ಷಗಳನ್ನು ಅಕ್ಷರಶಃ ನಿರ್ಬಂಧಗಳನ್ನು ವಿಧಿಸಿದೆ. ಇದಕ್ಕಾಗಿ ಅಲ್ಲಿನ ಸಂವಿಧಾನವೇ ಆಧಾರವಾಗಿದೆ, ಎಂಬುದು ವಿಶೇಷವಾಗಿದೆ ! ಆದುದರಿಂದಲೇ ೧೯೫೦ ನೇ ದಶಕದಲ್ಲಿ ಆಗಿನ ಜರ್ಮನಿ ಸರಕಾರವು ‘ಸೊಶಲಿಸ್ಟ್ ರಿಚ ಪಾರ್ಟಿ ಮತ್ತು ‘ಕಮ್ಯುನಿಸ್ಟ್ ಪಾರ್ಟಿ ಆಫ್ ಜರ್ಮನಿ’ ಇವುಗಳಿಗೆ ಪ್ರಜಾಪ್ರಭುತ್ವ ವಿರೋಧಿ ಎಂದು ನಿಷೇಧಿಸಿತು. ೨೦೧೩ ರಲ್ಲಿ ಮೂಲಭೂತ ರಾಷ್ಟ್ರವಾದಿ ‘ನ್ಯಾಶನಲ್ ಡೆಮೊಕ್ರಟಿಕ್ ಪಾರ್ಟಿಯನ್ನು ನಿಷೇಧಿಸಲು ಆಗಿನ ಅಂಜೆಲಾ ಮರ್ಕೆಲ ಸರಕಾರವು ಪರಾಕಾಷ್ಠೆಯ ಪ್ರಯತ್ನವನ್ನು ಮಾಡಿತು. ೨೦೧೭ ರಲ್ಲಿ ಮೂಲಭೂತ ರಾಷ್ಟ್ರನಿಷ್ಠ ಮತ್ತು ಎಲ್ಲಕ್ಕಿಂತ ದೊಡ್ಡ ವಿರೋಧಿ ಪಕ್ಷವಾಗಿರುವ ‘ಅಲ್ಟರನೆಟಿವ್ ಫಾರ್ ಜರ್ಮನಿ’ ಯನ್ನು ನಿಷೇಧಿಸುವ ಪ್ರಯತ್ನವೂ ಆಯಿತು. ‘ಅದರ ಮೂಲಭೂತವಾದದಿಂದಾಗಿ ಅದನ್ನು ನಿಷೇಧಿಸಿ ಅದರ ಪದಾಧಿಕಾರಗಳ ತನಿಖೆ ನಡೆಸಲಾಗುವುದು, ಎಂಬ ಸರಕಾರದ ಹೇಳಿಕೆಯು ಅದರ ಜನಪ್ರಿಯತೆಯನ್ನು ಕುಗ್ಗಿಸಿತು. ಇವೆಲ್ಲದರಿಂದ ಕಪಟಿ ಜರ್ಮನಿಯನ್ನು ಪ್ರಜಾಪ್ರಭುತ್ವದಿಂದ ಮೊದಲು ಕೆಳಗಿಸಬೇಕಾಗಿದೆ. ಇನ್ನುಳಿದ ಪ್ರಶ್ನೆಯೆಂದರೆ ರಾಹುಲ ಗಾಂಧಿಯವರದ್ದು, ಯಾವ ಗಾಂಧಿ ಮತ್ತು ಅವರ ಮೃತವತ್ ಪಕ್ಷಕ್ಕೆ ಭಾರತೀಯರ ಬೆಂಬಲ ಸಿಗದೇ ವಿದೇಶಿ ಶಕ್ತಿಗಳ ಸಹಾಯ ಪಡೆಯಬೇಕಾದ ಪ್ರಸಂಗ ಬಂದಿದೆಯೋ, ಅವರ ಮೇಲೆ ಶಾಶ್ವತ ರಾಜಕೀಯ ನಿಷೇಧ ಹೇರಲಾಗುವುದು ! ‘ಕ್ಷಮಾವೀರ’ ಎಂದು ಬೊಬ್ಬೆ ಹೊಡೆಯುವ ಗಾಂಧಿ ಇವರನ್ನು ಭಾರತೀಯರು ಎಂದಿಗೂ ಕ್ಷಮಿಸುವುದಿಲ್ಲ.