US MP Urges Bangladesh Hindus Safety : ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದಾಳಿಗಳನ್ನು ತಕ್ಷಣ ನಿಲ್ಲಿಸಿ ! – ಅಮೇರಿಕಾ ಸಂಸದ ರಾಜಾ ಕೃಷ್ಣಮೂರ್ತಿ

ಅಮೇರಿಕಾ ಸಂಸದ ರಾಜಾ ಕೃಷ್ಣಮೂರ್ತಿ ಅವರಿಂದ ಬಾಂಗ್ಲಾದೇಶ ಸರಕಾರದ ಬಳಿ ವಿನಂತಿ

ವಾಷಿಂಗ್ಟನ (ಅಮೇರಿಕಾ) – ಬಾಂಗ್ಲಾದೇಶದಲ್ಲಿ ಹಿಂದೂ ಮತ್ತು ಇತರರ ವಿರುದ್ಧ ನಡೆಯುತ್ತಿರುವ ಹಿಂಸಾಚಾರವನ್ನು ಒಪ್ಪಿಕೊಳ್ಳಲಾಗದು. ಅದನ್ನು ತಕ್ಷಣ ನಿಲ್ಲಿಸಬೇಕಾಗಿದೆ. ನಾನು ಬಾಂಗ್ಲಾದೇಶ ಸರಕಾರಕ್ಕೆ ಶಾಂತಿಯಿಂದ ಕ್ರಮಕೈಗೊಳ್ಳುವಂತೆ ಮನವಿ ಮಾಡುತ್ತೇನೆ ಎಂದು ಅಮೇರಿಕಾದ ಸಂಸದ ರಾಜಾ ಕೃಷ್ಣಮೂರ್ತಿ ಹೇಳಿದ್ದಾರೆ. ಇಸ್ಕಾನ್ ನ ಚಿನ್ಮಯ ಪ್ರಭು ಅವರ ಬಂಧನದ ನಂತರ ಬಾಂಗ್ಲಾದೇಶದಲ್ಲಿ ನಡೆದ ಅಶಾಂತಿಯ ಬಗ್ಗೆ ಅವರು ತೀವ್ರವಾಗಿ ಕಳವಳ ವ್ಯಕ್ತಪಡಿಸಿದ್ದಾರೆ.

ಕೃಷ್ಣಮೂರ್ತಿ ಅವರು ಮಾತು ಮುಂದುವರೆಸಿ, ಬಾಂಗ್ಲಾದೇಶ ಸರಕಾರವು ಶಾಂತಿಪೂರ್ಣ ಪ್ರತಿಭಟನೆ ಮತ್ತು ಸೂಕ್ತ ಕಾನೂನು ಪ್ರತಿನಿಧಿಸುವ ಅಧಿಕಾರದೊಂದಿಗೆ ಮಾನವನ ಹಕ್ಕು ಮತ್ತು ಮೂಲಭೂತ ಸ್ವಾತಂತ್ರ್ಯಗಳನ್ನು ಬೆಂಬಲಿಸುವ ಹಾಗೂ ಸಂರಕ್ಷಣೆ ಮಾಡಬೇಕು. ಸಧ್ಯದ ಒತ್ತಡವನ್ನು ಕಡಿಮೆ ಮಾಡಲು ಇಂತಹ ಕ್ರಮಗಳು ಮಹತ್ವದ್ದಾಗಿವೆ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಸರಕಾರದ ಆದೇಶದ ಮೇರೆಗೆ ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ದಾಳಿಗಳು ನಡೆಯುತ್ತಿರುವುದರಿಂದ ಸರಕಾರ ಎಂದಿಗೂ ಅವುಗಳನ್ನು ನಿಲ್ಲಿಸುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಆದುದರಿಂದ ಅಮೇರಿಕಾ ಸರಕಾರಕ್ಕೆ ಬಾಂಗ್ಲಾದೇಶದಲ್ಲಿ ತುರ್ತು ಕಾರ್ಯಾಚರಣೆ ಕೈಗೊಳ್ಳಬೇಕೆಂದು ಕೃಷ್ಣಮೂರ್ತಿ ಅವರು ತಮ್ಮ ಸರಕಾರಕ್ಕೆ ತಿಳಿಸಬೇಕು !