ಭಾರತದ ಸಹ ಪ್ರಾಯೋಜಿತ ಪ್ರಸ್ತಾವನೆಯನ್ನು ವಿಶ್ವಸಂಸ್ಥೆಯಿಂದ ಅಂಗೀಕಾರ
ನ್ಯೂಯಾರ್ಕ್ (ಅಮೇರಿಕಾ) – ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ‘ಡಿಸೆಂಬರ್ 21’ ಅನ್ನು ‘ವಿಶ್ವ ಧ್ಯಾನ ದಿನ’ ಎಂದು ಘೋಷಿಸುವ ಭಾರತದ ಪ್ರಸ್ತಾಪವನ್ನು ಎಲ್ಲಾ ದೇಶಗಳು ಒಪ್ಪಿಕೊಂಡಿವೆ.
ಭಾರತ, ಲಿಚ್ಟೆನ್‌ಸ್ಟೈನ್, ಶ್ರೀಲಂಕಾ, ನೇಪಾಳ, ಮೆಕ್ಸಿಕೊ ಮತ್ತು ಅಂಡೋರಾ ಒಳಗೊಂಡ ದೇಶಗಳ ಗುಂಪು 193 ಸದಸ್ಯರ ಮುಂದೆ ಪ್ರಸ್ತಾವನೆಯನ್ನು ತಂದಿತ್ತು. ಈ ದೇಶಗಳು ವಿಶ್ವಸಂಸ್ಥೆಯ ದೇಶಗಳಿಗೆ ಈ ಪ್ರಸ್ತಾವನೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಪ್ರಸ್ತುತಪಡಿಸಿದವು. ಲಿಚ್ಟೆನ್‌ಸ್ಟೈನ್ ಮಂಡಿಸಿದ ನಿರ್ಣಯವನ್ನು ಬಾಂಗ್ಲಾದೇಶ, ಬಲ್ಗೇರಿಯಾ, ಬುರುಂಡಿ, ಡೊಮಿನಿಕನ್ ರಿಪಬ್ಲಿಕ್, ಐಸ್‌ಲ್ಯಾಂಡ್, ಲಕ್ಸೆಂಬರ್ಗ್, ಮಾರಿಷಸ್, ಮೊನಾಕೊ, ಮಂಗೋಲಿಯಾ, ಮೊರಾಕೊ, ಪೋರ್ಚುಗಲ್ ಮತ್ತು ಸ್ಲೊವೇನಿಯಾ ಸಹ-ಪ್ರಾಯೋಜಿಸಿದ್ದವು.
ಠರಾವನ್ನು ಅಂಗೀಕರಿಸಿದ ನಂತರ, ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ಪರ್ವತನೇನಿ ಹರೀಶ್ ಅವರು ಪೋಸ್ಟ್‌ನಲ್ಲಿ, ಸರ್ವತೋಮುಖ ಮಾನವ ಕಲ್ಯಾಣದಲ್ಲಿ ಭಾರತದ ನಾಯಕತ್ವವು ‘ವಸುಧೈವ ಕುಟುಂಬಕಂ’ ಈ ‘ಇಡೀ ಜಗತ್ತು ಒಂದೇ ಕುಟುಂಬ’ ಎಂಬ ಮೂಲಭೂತ ತತ್ವವನ್ನು ಆಧರಿಸಿದೆ ಎಂದು ಹೇಳಿದರು. 2014 ರಲ್ಲಿ, ಭಾರತವು ‘ಜೂನ್ 21’ ಅನ್ನು ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.