Canada Survey Report : ಕೆನಡಾದಲ್ಲಿ ಕೇವಲ ಶೇ. 26 ರಷ್ಟು ಜನರು ಭಾರತದ ಬಗ್ಗೆ ಸಕಾರಾತ್ಮಕರಾಗಿದ್ದಾರೆ ! – ಸಮೀಕ್ಷೆಯ ನಿಶ್ಕರ್ಷ

ಜಸ್ಟಿನ್ ಟ್ರುಡೊ ಅವರ ನಾಯಕತ್ವದಲ್ಲಿ ಭಾರತದೊಂದಿಗಿನ ಸಂಬಂಧ ಸುಧಾರಿಸುವುದಿಲ್ಲ ಎಂದು ಶೇ. 39 ರಷ್ಟು ಜನರ ಅಭಿಪ್ರಾಯ

ಒಟಾವಾ (ಕೆನಡಾ) – ಕೆನಡಾದ ‘ಆಂಗಸ್ ರೀಡ್ ಇನ್‌ಸ್ಟಿಟ್ಯೂಟ್’ ಮತ್ತು ‘ಏಷ್ಯಾ ಪೆಸಿಫಿಕ್ ಫೌಂಡೇಶನ್’ ನಡೆಸಿದ ಸಮೀಕ್ಷೆಯ ಪ್ರಕಾರ, ಕೇವಲ ಶೇ. 26 ರಷ್ಟು ಕೆನಡಾದವರು ಭಾರತ ಮತ್ತು ಕೆನಡಾ ನಡುವೆ ನಡೆಯುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಭಾರತದ ಬಗ್ಗೆ ಸಕಾರಾತ್ಮಕ ದೃಷ್ಟಿಕೋನವನ್ನು ಹೊಂದಿದ್ದಾರೆ. 2020 ರಲ್ಲಿ, ಈ ಅನುಪಾತವು ಶೇಕಡಾ 56 ರಷ್ಟಿತ್ತು.

1. ಸಮೀಕ್ಷೆಯಲ್ಲಿ, ಶೇ. 39 ರಷ್ಟು ನಾಗರಿಕರು, ಜಸ್ಟಿನ್ ಟ್ರುಡೊ ಕೆನಡಾದ ಪ್ರಧಾನಿಯಾಗಿರುವವರೆಗೆ ಭಾರತದೊಂದಿಗಿನ ಸಂಬಂಧ ಸುಧಾರಿಸುವುದಿಲ್ಲ ಎಂದು ನಂಬಿದ್ದಾರೆ. ಶೇ. 34 ರಷ್ಟು ಜನರು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅದೇ ರೀತಿ ಭಾವಿಸುತ್ತಾರೆ.

2. ಟ್ರೂಡೊ ಸರಕಾರವು ಭಾರತದೊಂದಿಗಿನ ಸಂಬಂಧವನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದು ಶೇ. 39 ರಷ್ಟು ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ, ಹಾಗೂ ಶೇ. 32 ರಷ್ಟು ಜನರು ಇದಕ್ಕೆ ವಿರುದ್ಧವಾದ ಅಭಿಪ್ರಾಯವನ್ನು ಹೊಂದಿದ್ದಾರೆ. ಶೇ. 29 ರಷ್ಟು ಜನರಿಗೆ ಇದರ ಬಗ್ಗೆ ಸ್ಪಷ್ಟ ಅಭಿಪ್ರಾಯವಿರಲಿಲ್ಲ.

3. ಹದಗೆಟ್ಟ ಸಂಬಂಧದ ಹೊರತಾಗಿಯೂ, ಕೆನಡಾವು ಭಾರತದೊಂದಿಗೆ ವ್ಯಾಪಾರ ಸಂಬಂಧಗಳನ್ನು ಪುನರಾರಂಭಿಸಲು ಪ್ರಯತ್ನಿಸಬೇಕು ಎಂದು ಶೇ. 64 ರಷ್ಟು ಜನರು ನಂಬಿದ್ದಾರೆ. ಈ ಸಾರ್ವಜನಿಕ ಅಭಿಪ್ರಾಯದ ಹಿಂದಿನ ಮುಖ್ಯ ಕಾರಣವೆಂದರೆ ಕೆನಡಾದ ರಫ್ತುಗಳ ಮೇಲೆ ಶೇ. 25 ರಷ್ಟು ಸುಂಕವನ್ನು ವಿಧಿಸುವ ಅಮೇರಿಕಾದ ಅಧ್ಯಕ್ಷ ಟ್ರಂಪ್ ಅವರ ಬೆದರಿಕೆಯಾಗಿದೆ.

4. ರಷ್ಯಾ ಮತ್ತು ಚೀನಾಕ್ಕಿಂತ ಕೆನಡಾದಲ್ಲಿ ಭಾರತವನ್ನು ಇನ್ನೂ ಹೆಚ್ಚು ಸಕಾರಾತ್ಮಕವಾಗಿ ನೋಡಲಾಗುತ್ತದೆ ಎಂದು ಸಮೀಕ್ಷೆಯು ಬಹಿರಂಗಪಡಿಸಿದೆ; ಆದರೆ ಭಾರತದಲ್ಲಿ ಅವರ ನಂಬಿಕೆ ಕೇವಲ ಶೇ.28ರಷ್ಟು ಮಾತ್ರ ಇದೆ.

5. 2025 ರಲ್ಲಿ ಕೆನಡಾದಲ್ಲಿ ಸಂಸತ್ತಿನ ಚುನಾವಣೆಗಳು ನಡೆಯಲಿವೆ ಮತ್ತು ವಿರೋಧ ಪಕ್ಷದ ಕನ್ಸರ್ವೇಟಿವ್ ಪಕ್ಷವು ಗೆಲುವಿನ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿದೆ. ಸಾರ್ವಜನಿಕರ ಪ್ರಕಾರ, ಕನ್ಸರ್ವೇಟಿವ್ ಪಕ್ಷವು ಗೆದ್ದರೆ, ಪಿಯರೆ ಪೊಯ್ಲಿವ್ರೆ ಕೆನಡಾದ ಪ್ರಧಾನಿಯಾಗುತ್ತಾರೆ, ಇದು ದ್ವಿಪಕ್ಷೀಯ ಸಂಬಂಧಗಳನ್ನು ಪುನರುಜ್ಜೀವನಗೊಳಿಸುವ ಅವಕಾಶವನ್ನು ನೀಡುತ್ತದೆ.

ಸಂಪಾದಕೀಯ ನಿಲುವು

ಇದಕ್ಕಾಗಿಯೇ ಕೆನಡಾದಲ್ಲಿ ಭಾರತೀಯರ ಮೇಲೆ ವಿಶೇಷವಾಗಿ ಹಿಂದೂಗಳ ಮೇಲಿನ ದಾಳಿಗಳ ಬಗ್ಗೆ ಸ್ಥಳೀಯ ಜನರು ಧ್ವನಿ ಎತ್ತುವುದಿಲ್ಲ ಎಂಬುದು ಗಮನಕ್ಕೆ ಬರುತ್ತದೆ. ಹೀಗಿದ್ದರೆ ಭಾರತ ಹೆಚ್ಚು ಯೋಚಿಸಬೇಕಾಗುತ್ತದೆ !