ಚುನಾವಣೆ ಪದ್ಧತಿ

ಪ್ರಸ್ತುತ ಪ್ರಜಾಪ್ರಭುತ್ವದಲ್ಲಿನ ರಾಜಕಾರಣಿಗಳ ಚುನಾವಣೆಯನ್ನು ನಡೆಸುವ ಪದ್ಧತಿಯೂ ನಮ್ಮದಲ್ಲ. ಈ ಮೊದಲು ಭಾರತದಲ್ಲಿ ಋಷಿಮುನಿಗಳು ಆಯ್ಕೆ ಮಾಡಿದ ಅಂದರೆ ಯೋಗ್ಯ ವ್ಯಕ್ತಿಯ ಕೈಯಲ್ಲಿ ಅಧಿಕಾರ ಕೊಡುತ್ತಿದ್ದರು. ಈಗ ಆಯ್ಕೆಯಾದ ಅಂದರೆ ಬಹುಮತಗಳ ಮೂಲಕ ಆಯ್ಕೆಯಾದ ವ್ಯಕ್ತಿಯು ಆಡಳಿತ ಮಾಡುತ್ತಾನೆ. ಈ ಹಿಂದೆ ರಾಜಗುರುಗಳು, ಧರ್ಮಾಚಾರ್ಯರು ಮತ್ತು ವಿದ್ವಾಂಸರು, ರಾಜ್ಯವನ್ನು ನಿಭಾಯಿಸುವ ಅಧಿಕಾರ ಯಾರಿಗಿದೆ ? ಎಂಬುದನ್ನು ನಿರ್ಧರಿಸುತ್ತಿದ್ದರು.

ಇಲ್ಲಿನ ಹಿಂದೂ ಸಂಸ್ಕೃತಿ, ಧರ್ಮ ಮತ್ತು ಹಿಂದೂ ಜನತೆ ಇವುಗಳ ರಕ್ಷಣೆಗಾಗಿ ಈಶ್ವರೀ ರಾಜ್ಯದ ಅವಶ್ಯಕತೆ ಇದೆ.