Trudeau ‘Will Be Gone’ : ಮುಂದಿನ ಚುನಾವಣೆಯಲ್ಲಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊರಿಗೆ ಸೋಲು ! – ಎಲಾನ್ ಮಸ್ಕ್

ವಾಷಿಂಗ್ಟನ್ (ಅಮೇರಿಕಾ) – ಅಮೇರಿಕೆಯ ರಾಷ್ಟ್ರಾಧ್ಯಕ್ಷರಾಗಿ ಚುನಾಯಿತಗೊಂಡಿರುವ ಡೊನಾಲ್ಡ ಟ್ರಂಪ ಅವರ ನಿಕಟವರ್ತಿ ಹಾಗೂ ಚುನಾವಣೆಯಲ್ಲಿ ಟ್ರಂಪ ಬೆಂಬಲಿಗರಾಗಿದ್ದ ಟೆಸ್ಲಾ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲಾನ್ ಮಸ್ಕ ಇವರು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ರಾಜಕೀಯ ಪತನದ ಬಗ್ಗೆ ಭವಿಷ್ಯ ನುಡಿದಿದ್ದಾರೆ. `ಎಕ್ಸ್’ ನ ಮಾಲೀಕರಾಗಿರುವ ಮಸ್ಕ ಅವರು `ಎಕ್ಸ್’ ನಲ್ಲಿ ಈ ವರ್ಷ ಕೆನಡಾದಲ್ಲಿ ನಡೆಯುವ ಚುನಾವಣೆಯಲ್ಲಿ ಮತದಾರರು ಜಸ್ಟಿನ ಟ್ರುಡೋರಿಗೆ ಮನೆಯ ದಾರಿ ತೋರಿಸುವರು ಎಂದು ಬರೆದಿದ್ದಾರೆ. ಟ್ರುಡೊ ಮುಂದಿನ ಚುನಾವಣೆಯಲ್ಲಿ ಹೊರಬೀಳುತ್ತಾರೆ ಎಂದು ಹೇಳಿದರು.

1. 2015 ರಿಂದ ಕೆನಡಾ ಪ್ರಧಾನಿಯಾಗಿರುವ ಟ್ರುಡೊ ಸದ್ಯ ಕಠಿಣ ಪರೀಕ್ಷೆ ಎದುರಿಸುತ್ತಿದ್ದಾರೆ. ಕೆನಡಾದಲ್ಲಿ ಅಲ್ಪಮತದ ಸರಕಾರ ನಡೆಸುತ್ತಿರುವ ಟ್ರುಡೋ ಮೇಲೆ ಒತ್ತಡ ಹೆಚ್ಚುತ್ತಿದೆ.

2. ಸಧ್ಯಕ್ಕೆ ಕೆನಡಾದ ಸಂಸತ್ತಿನ 338 ಸದಸ್ಯರಲ್ಲಿ ಟ್ರುಡೊ ಅವರ ಲಿಬರಲ್ ಪಕ್ಷವು 153 ಸದಸ್ಯರನ್ನು ಹೊಂದಿದೆ. ಖಲಿಸ್ತಾನ್ ಪರ ಜಗಮೀತ ಸಿಂಗ್ ಅವರ ‘ನ್ಯೂ ಡೆಮಾಕ್ರಟಿಕ್ ಪಾರ್ಟಿ’ (ಎನ್ಡಿಪಿ) ಇತ್ತೀಚೆಗೆ ಟ್ರುಡೊಗೆ ನೀಡಿದ್ದ ಬೆಂಬಲವನ್ನು ಹಿಂಪಡೆದಿದೆ.

3. ಮುಂದಿನ ಚುನಾವಣೆಯಲ್ಲಿ, ಕೆನಡಾದ ಪ್ರಧಾನಿಯವರಿಗೆ ಪ್ರಮುಖ ವಿರೋಧ ಪಕ್ಷಗಳಾದ ‘ಕನ್ಸರ್ವೇಟಿವ್ ಪಕ್ಷ’ ಮತ್ತು ‘ಎನ್‌ಡಿಪಿ’ಯೊಂದಿಗೆ ಹೋರಾಡಬೇಕಾಗುತ್ತದೆ. ಹೆಚ್ಚಿನ ಸಮೀಕ್ಷೆಗಳಲ್ಲಿ ಟ್ರುಡೊ ಅವರ ಲಿಬರಲ್ ಪಕ್ಷವು ಹಿಂದುಳಿದಿದೆ ಎಂದು ಕಂಡು ಬಂದಿದೆ.

4. ಕಳೆದ ತಿಂಗಳು, ಅವರ ಪಕ್ಷದ 24 ಸದಸ್ಯರ ಗುಂಪು ಟ್ರುಡೊ ಅವರ ರಾಜೀನಾಮೆಗೆ ಒತ್ತಾಯಿಸಿತ್ತು ಮತ್ತು ಅವರಿಗೆ ಅಕ್ಟೋಬರ್ 28 ರವರೆಗೆ ಸಮಯ ನೀಡಿತ್ತು.