ಶಿರಾಳ (ಸಾಂಗ್ಲಿ ಜಿಲ್ಲೆ) – ಈಗ ಜಮ್ಮು ಕಾಶ್ಮೀರದ ವಿಧಾನ ಸಭೆಯಲ್ಲಿ ಕಲಂ ೩೭೦ ಮರುಸ್ತಾಪಿಸಲು ಪ್ರಯತ್ನ ನಡೆಯುತ್ತಿದೆ. ಕಲಂ ೩೭೦ ತೆರವುಗೊಳಿಸುವುದು ಅಗತ್ಯವಾಗಿತ್ತು ನಾವು ಅದನ್ನು ತೆರವುಗೊಳಿಸಿದೆವು. ವಿರೋಧಿಪಕ್ಷದ ‘ಇಂಡಿ’ ಮೈತ್ರಿಕೂಟದ ೪ ಪೀಳಿಗೆಗಳು ಬಂದರೂ ನಾವು ಜಮ್ಮು-ಕಾಶ್ಮೀರದಲ್ಲಿ ೩೭೦ ಕಲಂ ಹಿಂಪಡೆಯುವುದಿಲ್ಲ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಇವರ ಸರಕಾರ ಇದೆ, ಅವರ ನೇತೃತ್ವದಲ್ಲಿ ಭಾರತ ಜಗತ್ತಿನಲ್ಲಿ ಶಕ್ತಿಶಾಲಿ ದೇಶ ಆಗಿದೆ. ಆದ್ದರಿಂದ ರಾಜ್ಯದಲ್ಲಿ ಮೈತ್ರಿ ಸರಕಾರ ಬಂದ ನಂತರ ಕೇಂದ್ರದಲ್ಲಿನ ಸರಕಾರದ ಸಹಾಯದಿಂದ ಮಹಾರಾಷ್ಟ್ರವನ್ನು ಮೊದಲ ಸ್ಥಾನದ ರಾಜ್ಯ ಮಾಡಲಾಗುವುದು, ಎಂದು ಕೇಂದ್ರ ಗೃಹ ಸಚಿವ ಅಮಿತ ಶಾ ಇವರು ಆಶ್ವಾಸನೆ ನೀಡಿದರು. ಅವರು ಶಿರಾಳಾದಲ್ಲಿ ಭಾಜಪದ ಅಭ್ಯರ್ಥಿ ಸತ್ಯಜಿತ ದೇಶಮುಖ ಇವರ ಪ್ರಚಾರಕ್ಕಾಗಿ ಆಯೋಜಿಸಿರುವ ಸಭೆಯಲ್ಲಿ ಮಾತನಾಡುತ್ತಿದ್ದರು.
೧. ಪ್ರಧಾನಮಂತ್ರಿಯ ಮೋದಿ ಇವರು ಸಂಸತ್ತಿನಲ್ಲಿ ‘ವಕ್ಫ್’ ಸುಧಾರಣಾ ಮಸೂದೆ ತಂದಿದ್ದಾರೆ. ಇದಕ್ಕೂ ಕೂಡ ‘ಇಂಡಿ’ ಮೈತ್ರಿಕೂಟ ವಿರೋಧಿಸಿದೆ. ಕಾಂಗ್ರೆಸ್ ಸರಕಾರವು ಓಲೈಕೆಯ ಎಲ್ಲಾ ಮಿತಿಗಳನ್ನು ದಾಟಿದೆ. ಕರ್ನಾಟಕ ಸರಕಾರವು ಅನೇಕ ಗ್ರಾಮಗಳು ದೇವಸ್ಥಾನಗಳ ಸಹಿತ ‘ವಕ್ಫ್’ ಆಸ್ತಿ ಎಂದೂ ಘೋಷಿಸಿದೆ. ಮಹಾರಾಷ್ಟ್ರದಲ್ಲಿ ‘ಇಂಡಿ’ ಮೈತ್ರಿ ಸರಕಾರ ಬಂದರೆ ರೈತರ ಭೂಮಿ ‘ವಕ್ಫ್’ ಹೆಸರಿಗೆ ಮಾಡುವರು. ‘ವಕ್ಫ್’ ಬಗ್ಗೆ ಶರದ್ ಪವರ್ ಮತ್ತು ಉದ್ದವ ಠಾಕ್ರೆ ಇವರು ತಮ್ಮ ನಿಲುವನ್ನು ಘೋಷಿಸಬೇಕು. ‘ವಕ್ಫ್’ ಗೆ ಅವರ ಬೆಂಬಲ ಇದೆಯೇ ? ಇದು ಅವರು ಹೇಳಬೇಕು.
೨. ಭಾಜಪ ಸರಕಾರವು ‘ಔರಂಗಾಬಾದ್’ ಹೆಸರನ್ನು ‘ಸಭಾಜೀನಗರ’ ಮಾಡಿದೆ; ಆದರೆ ಮೈತ್ರೀಕೂಟದ ನಾಯಕರು ಸಂಭಾಜಿನಗರ ಹೆಸರವನ್ನು ವಿರೋಧಿಸುತ್ತಿದ್ದಾರೆ. ಮುಂದಿನ ಸಮಯದಲ್ಲಿ ಕೂಡ ಇದೇ ಹೆಸರು ‘ಛತ್ರಪತಿ ಸಂಭಾಜಿನಗರ’ ಹೀಗೆ ಇರುವುದು, ಅದು ಈಗ ಯಾರೂ ಕೂಡ ಬದಲಾಯಿಸಲು ಸಾಧ್ಯವಿಲ್ಲ.
೩. ರಾಜ್ಯದಲ್ಲಿ ಮೈತ್ರಿಕೂಟದ ಸರಕಾರ ಇರುವಾಗ ಶರತ್ ಪವಾರ್ ಇವರು ಏನು ಮಾಡಿದರೂ? ತದ್ವಿರುದ್ಧ ಪ್ರಧಾನಮಂತ್ರಿ ಮೋದಿ ಇವರು ಮಹಾರಾಷ್ಟ್ರ ರಾಜ್ಯದ ವಿಕಾಸಕ್ಕಾಗಿ ಎಲ್ಲಕ್ಕಿಂತ ಹೆಚ್ಚಿನ ನಿಧಿ ನೀಡಿದರು. ಪಶ್ಚಿಮ ಮಹಾರಾಷ್ಟ್ರದಲ್ಲಿನ ರಾಷ್ಟ್ರೀಯ ಮಹಾಮಾರ್ಗದ ಜಾಲ ನಿರ್ಮಿಸಿದರು. ೧೦ ಲಕ್ಷ ಜನರು ‘ಆಯುಷ್ಯಮಾನ ಭಾರತ’ ಯೋಜನೆನ ಲಾಭ ಪಡೆದರು ಹಾಗೂ ೭ ಲಕ್ಷ ಮಹಿಳೆಯರು ‘ಲಾಡಲಿ ಬಹನ್ ಯೋಜನೆ’ಯ ಲಾಭ ಪಡೆಯುತ್ತಿದ್ದಾರೆ.
೪. ಸೋನಿಯಾ ಗಾಂಧಿ, ಮನಮೋಹನ ಸಿಂಹ ಇವರ ಸರಕಾರ ಇರುವಾಗ ಪ್ರತಿದಿನ ಭಯೋತ್ಪಾದಕರ ದಾಳಿಗಳು ನಡೆಯುತ್ತಿದ್ದವು. ನಮ್ಮ ಸರಕಾರ ಇರುವಾಗ ಪುಲ್ವಾಮ ದಾಳಿ ನಂತರ ಕೇವಲ ೧೦ ದಿನದಲ್ಲಿ ಪಾಕಿಸ್ತಾನದಲ್ಲಿ ನುಗ್ಗಿ ‘ಏರ್ ಸ್ಟೈಕ್’ ನಡೆಸಿತು. ಮೈತ್ರಿಕೂಟದ ಪಕ್ಷ ದೇಶವನ್ನು ಸುರಕ್ಷಿತಗೊಳಿಸಲು ಸಾಧ್ಯವಿಲ್ಲ.
೧ ಬತ್ತಿಸ ಶಿರಾಳದಲ್ಲಿ ನಾಗ ಪೂಜೆ ಆರಂಭಿಸುವೆವು !
ಇಂಡಿ ಮೈತ್ರಿಕೂಟದ ಸರಕಾರವು ಬತ್ತಿಸ ಶಿರಾಳದಲ್ಲಿ ನಾಗಪೂಜೆಯನ್ನು ನಿಲ್ಲಿಸಿತ್ತು; ಆದರೆ ನಮ್ಮ ಸರಕಾರ ಬಂದ ನಂತರ ಅದನ್ನು ವಿಧಿವತ್ತಾಗಿ ಆರಂಭಿಸುವೆವು.
ಮಹಾರಾಷ್ಟ್ರ ಇದು ಪವಿತ್ರ ಭೂಮಿ ಆಗಿದ್ದು ಸಮರ್ಥ ರಾಮದಾಸಸ್ವಾಮಿ ಇವರ ಪಾದಸ್ಪರ್ಷವಾಗಿರುವ ಪವಿತ್ರ ಭೂಮಿ ಇದೇ ಆಗಿದೆ. ರಾಮದಾಸ ಸ್ವಾಮಿ ಇವರು ಛತ್ರಪತಿ ಶಿವಾಜಿ ಮಹಾರಾಜರಿಗೆ ಸ್ವರಾಜ್ಯ ರಕ್ಷಣೆಯ ಹೋರಾಟದಲ್ಲಿ ಬೆಂಬಲ ನೀಡುವ ಕಾರ್ಯ ಮಾಡಿದರು. ಮಹಾರಾಷ್ಟ್ರ ಇದು ವೀರರ ಭೂಮಿ ಆಗಿದ್ದು ಇದು ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಛತ್ರಪತಿ ಸಂಭಾಜಿ ಮಹಾರಾಜ್ ಇವರದ್ದಾಗಿದೆ ಎಂದು ಹೇಳಿದರು.