ರೈಲು ಪಯಾಣದಲ್ಲಿ ಹೆಚ್ಚುತ್ತಿರುವ ಕಳ್ಳತನದ ಘಟನೆಗಳನ್ನು ಗಮನದಲ್ಲಿರಿಸಿ ಸತರ್ಕರಾಗಿರಿ !

ಸಾಧಕರಿಗೆ ಸೂಚನೆ ಮತ್ತು ವಾಚಕರಿಗೆ, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಲ್ಲಿ ಸವಿನಯ ವಿನಂತಿ !

ರೈಲು ನಿಲ್ದಾಣಗಳಲ್ಲಿ, ಹಾಗೆಯೇ ರೈಲುಗಳಲ್ಲಿ ಪ್ರಯಾಣಿಕರ ಸಂಚಾರವಾಣಿ, ಲ್ಯಾಪಟಾಪ್ (ಸಂಚಾರಿಗಣಕಯಂತ್ರ), ಹಣ, ಸಾಮಾನುಗಳು ಮತ್ತು ಬೆಲೆಬಾಳುವ ವಸ್ತುಗಳು ಕಳ್ಳತನವಾಗುವ ಪ್ರಮಾಣ ಹೆಚ್ಚಾಗಿದೆ. ರೈಲುಗಳಲ್ಲಿ ಕಳ್ಳತನ ಮಾಡುವ ಕಳ್ಳರು ೧೬ ರಿಂದ ೪೦ರ ವಯಸ್ಸಿನವರಾಗಿರುತ್ತಾರೆ, ಎಂದು ಗಮನಕ್ಕೆ ಬಂದಿದೆ. ಹಾಗೆಯೇ ಕಳ್ಳತನವಾದ ಸಾಮಾನುಗಳೂ ಸಿಗುವುದಿಲ್ಲ. ಇದರಿಂದ ಪ್ರಯಾಣಿಕರಿಗೆ ಭಾರಿ ಆರ್ಥಿಕ ಹಾನಿಯಾಗುತ್ತದೆ. ಇದನ್ನು ತಡೆಯಲು, ಹಾಗೆಯೇ ಜಾಗರೂಕರಾಗಿರಲು ಏನು ಮಾಡಬಹುದು ?, ಈ ಬಗೆಗಿನ ಅಂಶಗಳನ್ನು ಮುಂದೆ ಕೊಡಲಾಗಿದೆ.

೧. ಪ್ರಯಾಣದಲ್ಲಿ ಕಳ್ಳತನ ಮಾಡುವ ಕೆಲವು ಪದ್ಧತಿಗಳು !

ಅ. ರೈಲಿನಲ್ಲಿ ಹತ್ತುವಾಗ ಮತ್ತು ಇಳಿಯುವಾಗ ರೈಲಿನ ಡಬ್ಬದ (ಬೋಗಿಯ) ಬಾಗಿಲ ಬಳಿಗೆ ಪ್ರಯಾಣಿಕರ ದಟ್ಟಣೆಯಿರುತ್ತದೆ. ೨-೩ ಬ್ಯಾಗ್‌ಗಳಿರುವ ಪಯಾಣಿಕರು ರೈಲಿನಲ್ಲಿ ಹತ್ತುವಾಗ ಅವರ ಪಾಕೀಟು ಅಥವಾ ಇತರ ವಸ್ತುಗಳು (ಸಂಚಾರವಾಣಿ ಮತ್ತು ಆಭರಣಗಳು) ಕಳ್ಳತನವಾಗುವ ಪ್ರಮಾಣ ಹೆಚ್ಚಿರುತ್ತದೆ

ಆ. ಕೆಲವೊಮ್ಮೆ ಸಿಗ್ನಲ್‌ಗಾಗಿ ರೈಲು ೧೦ ರಿಂದ ೨೦ ನಿಮಿಷಗಳ ಕಾಲ ನಿರ್ಜನಸ್ಥಳದಲ್ಲಿ ಅಥವಾ ಚಿಕ್ಕ ರೈಲುನಿಲ್ದಾಣದಲ್ಲಿ ನಿಲ್ಲುತ್ತದೆ. ಆ ಸಮಯದಲ್ಲಿ ಈ ಗುಂಪಿನ ಕಳ್ಳರು ಬೇರೆ ಬೇರೆ ಡಬ್ಬಗಳಲ್ಲಿ ಹತ್ತುತ್ತಾರೆ. ಅವರು ಮಹಿಳೆಯರ ಮತ್ತು ಇತರ ಪ್ರಯಾಣಿಕರ ಸಾಹಿತ್ಯಗಳ ನಿರೀಕ್ಷಣೆ ಮಾಡುತ್ತಾರೆ. ರೈಲಿಗೆ ಗ್ರೀನ್ ಸಿಗ್ನಲ್ ಸಿಗುವವರೆಗೆ ಈ ಕಳ್ಳರು ಯಾವುದೇ ಕೃತಿ ಮಾಡುವುದಿಲ್ಲ. ರೈಲು ಬಿಟ್ಟ ನಂತರ ಅವರು ಮಹಿಳಾ ಪ್ರಯಾಣಿಕರ ಪರ್ಸ್ ಮತ್ತು ಆಭರಣಗಳನ್ನು ಚುರುಕಾಗಿ ಸೆಳೆದುಕೊಂಡು ಚಲಿಸುತ್ತಿರುವ ರೈಲಿನಿಂದ ರೈಲ್ವೆ ಪ್ಲ್ಯಾಟಫಾರ್ಮ್‌ನ ವಿರುದ್ಧ ದಿಕ್ಕಿಗೆ ಹಾರಿ ಓಡಿಹೋಗುತ್ತಾರೆ. ಇದರಿಂದ ಕಳ್ಳರನ್ನು ಹಿಡಿಯುವ ಅವಕಾಶ ಸಿಗುವುದಿಲ್ಲ. ಸಾಮಾನ್ಯವಾಗಿ ಈ ಕಳ್ಳತನಗಳು ಚಲಿಸುವ ರೈಲುಗಳಲ್ಲಿ ರಾತ್ರಿ-ತಡರಾತ್ರಿ ಅಥವಾ ಪ್ರಯಾಣಿಕರು ಗಮನಿಸದಿರುವಾಗ ನಡೆಯುತ್ತವೆ.

ಇ. ಕೆಲವೊಮ್ಮೆ ಕಳ್ಳರ ಗುಂಪು ಬಂದು ಸಾಮಾನ್ಯ ವ್ಯಕ್ತಿಯಂತೆ ಅಥವಾ ಮಧ್ಯಮವರ್ಗದವರಂತೆ ವ್ಯವಹರಿಸುತ್ತಾರೆ. ಆದುದರಿಂದ ಪ್ರವಾಸಿಗರಿಗೆ ಅವರ ಬಗ್ಗೆ ಸಂಶಯ ಬರುವುದಿಲ್ಲ. ನಂತರ ಈ ಕಳ್ಳರು ಪ್ರಯಾಣಿಕರೊಂದಿಗೆ ಆತ್ಮೀಯತೆಯನ್ನು ಸಾಧಿಸಿ ಅವರನ್ನು ಮೋಸ ಮಾಡುತ್ತಾರೆ. ಪ್ರಯಾಣಿಕರಿಗೆ ಮಂಪರು ಬರುವ ತಿನ್ನುವ-ಕುಡಿಯುವ ಪದಾರ್ಥಗಳನ್ನು ನೀಡಿ ಪ್ರಯಾಣಿಕನು ಪ್ರಜ್ಞೆ ತಪ್ಪಿದಾಗ ಅಥವಾ ಪ್ರಯಾಣಿಕನು ಎಚ್ಚರ ತಪ್ಪಿದಾಗ ಕಳ್ಳತನವನ್ನು ಮಾಡಲಾಗುತ್ತದೆ. ಹೀಗೆ ಅನೇಕ ಕೃತ್ಯಗಳು ಬೆಳಕಿಗೆ ಬಂದಿವೆ.

೨. ರೈಲುಗಳಲ್ಲಿ ಕಳ್ಳತನವಾದರೆ ಪ್ರಯಾಣಿಕನಿಗೆ ರೈಲ್ವೆಯಿಂದ ನಷ್ಟಪರಿಹಾರ ಸಿಗುತ್ತದೆ ಎಂಬುದನ್ನು ಗಮನದಲ್ಲಿಡಿ !

ಚಲಿಸುವ ರೈಲಿನಲ್ಲಿ ಕಾಯ್ದಿರಿಸಲಾದ ಪ್ರಯಾಣಿಕರ ಸಾಮಾನುಗಳು ಪ್ರಯಾಣದ ಸಮಯದಲ್ಲಿ ಕಳ್ಳತನವಾದರೆ ಪ್ರಯಾಣಿಕನಿಗೆ ರೈಲ್ವೆಯು ಅದರ ನಷ್ಟಪರಿಹಾರವನ್ನು ನೀಡ ಬೇಕು, ಎಂದು ಸರ್ವೋಚ್ಚ ನ್ಯಾಯಾಲಯವು ಆದೇಶವನ್ನು ನೀಡಿದೆ. ಅದು ಹೆಚ್ಚಿನ ಜನರಿಗೆ ಗೊತ್ತಿಲ್ಲ. ಆದುದರಿಂದ ಅವರು ಆ ಸಂದರ್ಭದಲ್ಲಿ ಕೃತಿ ಮಾಡುವುದಿಲ್ಲ. ಚಲಿಸುವ ರೈಲಿನಲ್ಲಿ ಕಾಯ್ದಿರಿಸಲಾದ ಪ್ರಯಾಣಿಕನ ಸಾಹಿತ್ಯಗಳ ಕಳ್ಳತನವಾದರೆ ಅವರು ಸರಕಾರಿ ರೈಲ್ವೆ ಪೊಲೀಸ್ ಪಡೆಯ (Government Railway Police Force – GRPF ಬಳಿಗೆ) ಹೋಗಿ ಪ್ರಥಮ ಮಾಹಿತಿ ವರದಿ (FIR)ಯನ್ನು ನೋಂದಾಯಿಸಬೇಕು, ಹಾಗೆಯೇ ಪ್ರಥಮ ಮಾಹಿತಿ ವರದಿ (FIR) ಯನ್ನು ದಾಖಲಿಸಿದ ನಂತರ  ರೈಲ್ವೆ ಪೊಲೀಸರಿಂದ (GRPF ನಿಂದ) ಪ್ರಯಾಣಿಕನು ಗ್ರಾಹಕ ವೇದಿಕೆಯ ಫಾರ್ಮ್‌ನಲ್ಲಿ ಅವರ ಮುದ್ರೆ(seal)ಯನ್ನು ಪಡೆಯಬೇಕು. ಒಂದು ವೇಳೆ ಪ್ರಯಾಣಿಕನಿಗೆ ೬ ತಿಂಗಳೊಳಗೆ ಅವನ ಸಾಮಾನುಗಳು ವಾಪಾಸು ಸಿಗದಿದ್ದರೆ, ಅವರು ಆ ಸಾಮಾನುಗಳ ನಷ್ಟಪರಿಹಾರ ವನ್ನು ಪಡೆಯಲು ಗ್ರಾಹಕ ವೇದಿಕೆಯ ಕಡೆಗೆ ಹೋಗಬಹುದು ಎಂದು ಅದರಲ್ಲಿ ಉಲ್ಲೇಖವಿರುತ್ತದೆ. ಸರಕುಗಳ ಬೆಲೆಯನ್ನು ನಿರ್ಣಯಿಸಿದ ನಂತರ ಗ್ರಾಹಕ ವೇದಿಕೆಯು ರೈಲ್ವೆಗೆ ನಷ್ಟಪರಿಹಾರ ನೀಡಲು ಆದೇಶ ನೀಡುತ್ತದೆ. ಕೇವಲ ಕಳ್ಳತನವಷ್ಟೇ ಅಲ್ಲ ಆದರೆ ರೈಲ್ವೆ ಪ್ರವಾಸದಲ್ಲಿ ಇಲಿಗಳು ನಿಮ್ಮ ಪಾದರಕ್ಷೆಗಳು, ಸಾಮಾನು ಅಥವಾ ಬೆಲೆಬಾಳುವ ಸಾಹಿತ್ಯಗಳನ್ನು ಕಚ್ಚಿದರೂ, ರೈಲ್ವೆಯಿಂದ ನಷ್ಟಪರಿಹಾರವನ್ನು  ಪಡೆಯಬಹುದು.

೩.  ರೈಲ್ವೆ ಯಲ್ಲಿ ಕಳ್ಳತನವಾದರೆ ನಿರ್ಧಿಷ್ಟವಾಗಿ ಏನು ಮಾಡಬೇಕು ?

ಅ. ಮೊದಲನೆಯದಾಗಿ ಚಲಿಸುತ್ತಿರುವ ರೈಲಿನಲ್ಲಿ ಕಳ್ಳತನವಾದರೆ, ಅದನ್ನು ರೈಲ್ವೆ ಟಿಕೆಟ್ ಪರೀಕ್ಷಕ (TTE) ಕೊಚ್ ಅಟೆಂಡಂಟ್ (Coach Attendant), ರೈಲ್ವೆ ರಕ್ಷಣಾ ದಳ (Railway Protection Force – RPF) ಅಥವಾ ರೈಲ್ವೆ ಪೊಲೀಸ್ ಫೋರ್ಸ್ (GRPF) ಇವರಿಗೆ ವರದಿ ಮಾಡಬೇಕು. ಅವರು ನಿಮಗೆ ನಿಮ್ಮ ಕಳ್ಳತನವಾದ ಅಥವಾ ಕಳೆದು ಹೋದ ವಸ್ತುಗಳ ಬಗ್ಗೆ ದೂರು ಸಲ್ಲಿಸಲು ಸಹಾಯ ಮಾಡುತ್ತಾರೆ.

ಆ. ನೀವು ರೈಲ್ವೆ ರಕ್ಷಣಾ ದಳ (RPF) ಅಥವಾ ಟಿಕೆಟ್ ಪರೀಕ್ಷಕ (TTE)ರಿಂದ ಪ್ರಥಮ ಮಾಹಿತಿ ವರದಿ (FIR) ಅರ್ಜಿಯನ್ನು ತೆಗೆದುಕೊಂಡು ಅದನ್ನು ತುಂಬಿಸಿರಿ. ರೈಲಿನಲ್ಲಿಯೇ ದೂರು ನೋಂದಾಯಿಸುವ ಸೌಲಭ್ಯವಿದೆ. ಆದುದರಿಂದ ಅರ್ಜಿಯನ್ನು ತುಂಬಿದ ನಂತರ ಅದನ್ನು ಅರ್ಜಿ ನೀಡುವವರಿಗೆ ಸಲ್ಲಿಸಿರಿ, ಅಂದರೆ ನಿಮ್ಮ ದೂರು ದಾಖಲಾಗುತ್ತದೆ. ನಿಮ್ಮ ದೂರನ್ನು ಹತ್ತಿರದ ರೈಲ್ವೆ ಪೊಲೀಸ್ ಫೋರ್ಸ್ (GRPF) ಪೊಲೀಸ್ ಠಾಣೆಗೆ ರವಾನಿಸಲಾಗುತ್ತದೆ. ಇಲ್ಲಿ ಗಮನದಲ್ಲಿಡಬೇಕಾದ ಅಂಶವೆಂದರೆ ರೈಲಿನಲ್ಲಿ ಪ್ರಯಾಣಿಕರ ಸಾಮಾನುಗಳ ಕಳ್ಳತನ ವಾದರೆ ರೈಲ್ವೆ ಪೊಲೀಸ್ ಫೋರ್ಸ್ ಬಳಿಗೆ, ಅಂದರೆ ಜಿ.ಆರ್.ಪಿ.ಎಫ್. ಬಳಿಗೆ (GRPF) ಕಾನೂನುಬದ್ಧ ಕಾರ್ಯಾಚರಣೆ ಮಾಡುವ ಅಧಿಕಾರವಿದೆ.

ಇ. ರೈಲುಗಳಲ್ಲಿ ಸಾಮಾನುಗಳ ಕಳ್ಳತನವಾದರೆ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಲು ಪ್ರಯಾಣಿಕನು ಪ್ರವಾಸವನ್ನು  ಮುಂದುವರಿಸುವುದನ್ನು ಬಿಟ್ಟು ರೈಲ್ವೆ ನಿಲ್ದಾಣದಲ್ಲಿ ಇಳಿಯುವ ಆವಶ್ಯಕತೆ ಇಲ್ಲ. ನೀವು ಚಲಿಸುವ ರೈಲಿನಲ್ಲಿಯೇ ಪ್ರಥಮ ಮಾಹಿತಿ ವರದಿಯನ್ನು (FIR) ದಾಖಲಿಸಬಹುದು; ಆದರೆ ಒಂದು ವೇಳೆ ಪರಿಸ್ಥಿತಿ ಗಂಭೀರವಾಗಿದ್ದರೆ ಮತ್ತು ಪಯಾಣಿಕರ ಸಾಕ್ಷಿ ಬೇಕಿದ್ದರೆ, ನೀವು ಮುಂದಿನ ರೈಲ್ವೆ ನಿಲ್ದಾಣದಲ್ಲಿ ಇಳಿದು ರೈಲ್ವೆ  ಪೊಲೀಸ್ ಪಡೆಗೆ (GRPF ಗೆ ) ಸಾಕ್ಷ್ಯವನ್ನು ನೀಡಬೇಕು.

ಈ. ಈಗ ಪಯಾಣಿಕರು ಸಹಜವಾಗಿ ಆನ್‌ಲೈನ್ ದೂರನ್ನು ದಾಖಲಿಸಬಹುದು. ಅಂಡ್ರೈಡ್ ಅಥವಾ ಐ.ಓ.ಎಸ್. ವ್ಯವಸ್ಥೆಯನ್ನು ಬಳಸುವ ಸಂಚಾರವಾಣಿ ಇರುವವರು ಗೂಗಲ್ ಪ್ಲೆಸ್ಟೋರ್ ಅಥವಾ ಆಪೆಲ್ ಸ್ಟೋರ್ ಇವುಗಳಿಗೆ ಹೋಗಿ ರೆಲ್‌ಮದದ್ (RailMadad) ಈ ಸೈಟ್‌ನಲ್ಲಿಯೂ ತಕರಾರು ಸಲ್ಲಿಸುವ ಸೌಲಭ್ಯ ಪಡೆಯಬಹುದಾಗಿದೆ. (https://railmadad.indianrailways.gov.in) ಜಾಲತಾಣದಲ್ಲಿ ದೂರನ್ನು ದಾಖಲಿಸಿದ ನಂತರ ಇದನ್ನು ಶೂನ್ಯ-ಪ್ರಥಮ ಮಾಹಿತಿ ವರದಿಯೆಂದು (0-FIR) ತಿಳಿಯಲಾಗುತ್ತದೆ ಮತ್ತು ಅದರ ತನಿಖೆಯನ್ನು ತಕ್ಷಣ ಆರಂಭಿಸಲಾಗುತ್ತದೆ. ಶೂನ್ಯ-ಪ್ರಾಥಮಿಕ ಮಾಹಿತಿ ವರದಿ (0-FIR) ಅಂದರೆ ಯಾವುದಾದರೊಂದು ಪೊಲೀಸ್ ಠಾಣೆಯಲ್ಲಿ ಈ ಪ್ರಥಮ ಮಾಹಿತಿ ವರದಿ (FIR)ಯನ್ನು ದಾಖಲಿಸಲಾಗುತ್ತದೆ ಮತ್ತು ಅದನ್ನು ನಂತರ ಸೂಕ್ತವಾದ ಪೊಲೀಸ್ ಠಾಣೆಗೆ ವರ್ಗಾಯಿಸಲಾಗುತ್ತದೆ.

ಉ. ಈ ರೆಲ್‌ಮದದ ಆಪನಲ್ಲಿ ಕೇವಲ ಕಳ್ಳತನವಷ್ಟೇ ಅಲ್ಲ, ಆದರೆ ಇತರ ಯಾವುದೇ ರೀತಿಯ ದೂರನ್ನು ಸಲ್ಲಿಸಬಹುದು, ಉದಾ. ಬಾಥರೂಮ್ (ಶೌಚಾಲಯ) ಸ್ವಚ್ಛ ಇಲ್ಲ, ಚೂಡಾಯಿಸುವಿಕೆಯ ಘಟನೆಗಳು ಅಥವಾ ಇತರ ಯಾವುದೇ ಸೂಚನೆಗಳನ್ನು ನೀಡಬಹುದು.

ಊ. ಒಂದು ವೇಳೆ ಪ್ರಯಾಣಿಕನಿಗೆ ೬ ತಿಂಗಳುಗಳಲ್ಲಿ ಸಾಮಾನುಗಳು ಸಿಗದಿದ್ದರೆ, ನೀವು ಗ್ರಾಹಕ ವೇದಿಕೆಯಲ್ಲಿ (Consumer forum) ದೂರನ್ನು ಸಲ್ಲಿಸಬಹುದು. ಗ್ರಾಹಕ ವೇದಿಕೆಯು ಅದರ ಮೌಲ್ಯವನ್ನು ನಿಗದಿಪಡಿಸಿ ಹಿಡಿದು ನಿಮಗೆ ನಿಮ್ಮ ಮೊತ್ತವನ್ನು ದೊರಕಿಸಿಕೊಡುತ್ತದೆ. ಗ್ರಾಹಕ ವೇದಿಕೆಯು ಅನೇಕ ಬಾರಿ ರೈಲ್ವೆಗೆ ದಂಡ ನೀಡಿ ಪ್ರವಾಸಿಗನ ನಷ್ಟಪರಿಹಾರ ವನ್ನು ದೊರಕಿಸಿ ಕೊಟ್ಟಿದೆ.

೪. ಪ್ರವಾಸದಲ್ಲಿ ಕಳ್ಳತನವನ್ನು ತಪ್ಪಿಸಲು ಮುಂದಿನ ಕಾಳಜಿಯನ್ನು ವಹಿಸಿ !

ಅ. ಪ್ರವಾಸದಲ್ಲಿ ಸಾಧ್ಯವಿದ್ದಷ್ಟು ತಮ್ಮೊಂದಿಗೆ ಬೆಲೆಬಾಳುವ ವಸ್ತು, ಹೆಚ್ಚು ಹಣ ಇತ್ಯಾದಿ ಇಟ್ಟುಕೊಳ್ಳಬಾರದು. ಸಾಧ್ಯವಿದ್ದಷ್ಟು ನಕಲಿ ಆಭರಣಗಳನ್ನು ಧರಿಸಬೇಕು. ಸಂಚಾರಿಗಣಕಯಂತ್ರ (ಲ್ಯಾಪ್‌ಟಾಪ್), ಕೆಲವು ಕಾರಣಗಳಿಂದ ಹಣ, ಬೆಲೆಬಾಳುವ ವಸ್ತುಗಳು ತಮ್ಮ ಬಳಿ ಇರಿಸಬೇಕಾದರೆ ಹೆಚ್ಚು ಕಾಳಜಿವಹಿಸಿರಿ.

ಆ. ನಿಲ್ದಾಣದಲ್ಲಿ ಅಥವಾ ರೈಲ್ವೆಯಲ್ಲಿ ಸಂಚಾರವಾಣಿಯನ್ನು ಬಳಸುವಾಗ ವಿಶೇಷ ಕಾಳಜಿ ವಹಿಸಿರಿ. ಸಾಧ್ಯವಿದ್ದರೆ ರೈಲಿನಲ್ಲಿ ಹತ್ತುವಾಗ ಮತ್ತು ಇಳಿಯುವಾಗ ಸಂಚಾರವಾಣಿ (ಮೊಬೈಲ್), ಹಣ ಅಥವಾ ಮಹತ್ವದ ಸಾಹಿತ್ಯಗಳನ್ನು ಕಿಸೆಯಲ್ಲಿ ಇಟ್ಟು ಕೊಳ್ಳದೇ ಬೆನ್ನಿಗೆ ಹಾಕುವ ಸ್ಯಾಕ್ (ಚೀಲ) ಅಥವಾ ಮಧ್ಯಮ ಆಕಾರದ ಬ್ಯಾಗ್(ಚೀಲ)ನಲ್ಲಿಡಬೇಕು.

ಇ. ಪ್ರಯಾಣಿಸುವಾಗ ಮಂಪರು ಬರುವ ಔಷಧಿ ನೀಡಿ ಲೂಟಿ ಮಾಡುವ ಘಟನೆಗಳು ಹೆಚ್ಚಾಗಿರುವುದರಿಂದ ಪ್ರಯಾಣದಲ್ಲಿ ಸಾಧ್ಯವಿದ್ದಷ್ಟು ಅಪರಿಚಿತ ವ್ಯಕ್ತಿಗಳಿಂದ ಯಾವುದೇ ತಿಂಡಿ ಅಥವಾ ಪಾನೀಯಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ಪ್ರವಾಸಕ್ಕೆ ಹೊರಡುವ ಮೊದಲು ಮನೆಯಿಂದ ಊಟದ ಡಬ್ಬಿ, ಒಣ ತಿನಿಸುಗಳು ಮತ್ತು ಕುಡಿಯುವ ನೀರನ್ನು ಜೊತೆಗೆ ಒಯ್ಯಬೇಕು; ಇದರಿಂದ ಹೊರಗೆ ಯಾವುದೇ ವಸ್ತುವನ್ನು ಖರೀದಿಸುವ ಆವಶ್ಯಕತೆ ಬೀಳುವುದಿಲ್ಲ.

ಈ. ಪ್ರವಾಸದಲ್ಲಿ ಆಸನದ ಕೆಳಗೆ ಸಾಹಿತ್ಯಗಳನ್ನು ಇಡುವಾಗ ಸಾಮಾನುಗಳ ರಕ್ಷಣೆಗಾಗಿ ಮಾರುಕಟ್ಟೆಯಲ್ಲಿ ದೊಡ್ಡ ಸರಪಳಿ ಸಿಗುತ್ತದೆ. ಸಾಮಾನುಗಳಿಗೆ ಸರಪಳಿ ಮತ್ತು ಚಿಕ್ಕ ಕೀಲಿಯನ್ನು ಹಾಕಿಡಬಹುದು.

ಉ. ಒಬ್ಬಂಟಿ ಇರುವಾಗ ಪ್ರಯಾಣದಲ್ಲಿ ರೈಲು ನಿಂತಿರುವಾಗ ಶೌಚಾಲಯಕ್ಕೆ ಹೋಗದೇ ರೈಲು ಚಲಿಸುವಾಗ ಶೌಚಾಲಯಕ್ಕೆ ಹೋಗಬೇಕು, ಹಾಗೆಯೇ ಬೆಲೆಬಾಳುವ ವಸ್ತುಗಳ ಬ್ಯಾಗ್ ಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಬೇಕು. ಪ್ರವಾಸ ದಲ್ಲಿ ಜೊತೆಗೆ ಸಂಬಂಧಿಕರು ಅಥವಾ ಇತರ ಸ್ನೇಹಿತರಿದ್ದರೆ ಶೌಚಾಲಯಕ್ಕೆ ಹೋಗುವಾಗ ಅವರಿಗೆ ಹೇಳಿ ಹೋಗಬೇಕು.

ಊ. ಹಣ ಅಥವಾ ಮಹತ್ವದ ಸಾಹಿತ್ಯಗಳನ್ನು ಒಂದೇ ಕಡೆಗೆ ಇಡುವ ಬದಲು ೨ – ೩ ಕಡೆಗೆ ಹಂಚಿ ಇಡಬೇಕು.

ಎ. ರೈಲಿನಲ್ಲಿ ಲೋವರ್ ಬರ್ಥ್ (ಕೆಳಗಿನ ಅಥವಾ ಕಿಟಕಿಯ ಹತ್ತಿರದ ಆಸನ) ಇದ್ದರೆ ರಾತ್ರಿ ಮಲಗುವಾಗ ಬೆಲೆಬಾಳುವ ವಸ್ತುಗಳ ರಕ್ಷಣೆಯ ದೃಷ್ಟಿಯಿಂದ ಎರಡೂ ಕಿಟಕಿಗಳನ್ನು ಮುಚ್ಚಬೇಕು. ಹಗಲಿನಲ್ಲಿ ರೈಲು ನಿಂತಿರುವಾಗ ಬೆಲೆಬಾಳುವ ವಸ್ತುಗಳು, ಉದಾ. ಸಂಚಾರವಾಣಿ, ಲ್ಯಾಪ್‌ಟಾಪ್, ಪರ್ಸ್ ಇತ್ಯಾದಿಗಳನ್ನು ಕಿಟಕಿಯ ಬಳಿ ಇಡಬಾರದು.

ಏ. ಪ್ರಯಾಣಿಸುವಾಗ ಅಕ್ಕಪಕ್ಕದಲ್ಲಿ ಯಾರು ಕುಳಿತಿದ್ದಾರೆ ?, ಎಂಬುದರ ನಿರೀಕ್ಷಣೆ ಮಾಡಿ ಜಾಗರೂಕತೆ ವಹಿಸಬೇಕು.

ಐ. ಪ್ರವಾಸ ಮಾಡುವಾಗ ಸಾಧ್ಯವಿದ್ದಷ್ಟು ಕಾಗದಪತ್ರಗಳ ಛಾಯಾಂಕಿತ (ಝೆರಾಕ್ಸ್) ಪ್ರತಿಗಳನ್ನು ಜೊತೆಯಲ್ಲಿಟ್ಟು ಕೊಳ್ಳಬೇಕು. ಮೂಲ ಪ್ರತಿ ಇಟ್ಟುಕೊಳ್ಳುವುದು ಆವಶ್ಯಕವಾಗಿದ್ದರೆ ಅವುಗಳನ್ನು ಸುರಕ್ಷಿತ ಸ್ಥಳದಲ್ಲಿ ಇಡಬೇಕು.

ಒ. ಪ್ರಯಾಣಿಸುವಾಗ ವೃದ್ಧ ವ್ಯಕ್ತಿಗಳ ವಿಶೇಷ ಕಾಳಜಿ ವಹಿಸಬೇಕು.

ಓ. ನಿಮ್ಮೊಂದಿಗೆ ಕೆಲವು ಬೆಲೆಬಾಳುವ ವಸ್ತುಗಳನ್ನು ತೆಗೆದು ಕೊಂಡು ಹೋಗಬೇಕಾಗಿ ಬಂದಲ್ಲಿ ಪ್ರಯಾಣ ವಿಮೆಯನ್ನು ಖರೀದಿಸಿ ಮತ್ತು ಅದರಲ್ಲಿ ನಿಮ್ಮ ಬೆಲೆಬಾಳುವ ವಸ್ತುಗಳ ಸಮಾವೇಶವಿದೆ ಎಂದು ಖಚಿತಪಡಿಸಿಕೊಳ್ಳಿ. ಆನ್‌ಲೈನ್ ರೈಲ್ವೆ ಟಿಕೆಟನ್ನು ಕಾಯ್ದಿರಿಸುವಾಗ ಅದರಲ್ಲಿ ಪ್ರಯಾಣ ವಿಮೆ (Travel Insurance) ಯ ಆಯ್ಕೆ ಇರುತ್ತದೆ, ಅದನ್ನು ಆಯ್ಕೆ ಮಾಡಬೇಕು. ಅದರ ಶುಲ್ಕ ಹೆಸರಿಗೆ ಮಾತ್ರ ಇರುತ್ತದೆ. ಚಲಿಸುವ ರೈಲಿನಲ್ಲಿರುವಾಗ ಅಪಘಾತವಾದರೆ, ನಿಮಗೆ ೧೦ ಲಕ್ಷ ರೂಪಾಯಿಗಳು ಸಿಗುತ್ತವೆ. ಅದಕ್ಕಾಗಿ ವಿಮೆ ಮಾಡಿದಾಗ ತಮ್ಮ ವಿ-ಅಂಚೆಯಲ್ಲಿ ವಿಮಾ ಕಂಪನಿಯಿಂದ ಬಂದ ಫಾರ್ಮ್‌ನಲ್ಲಿ ನಾಮಿನಿ(ಉತ್ತರಾಧಿಕಾರಿ)ಯ ಹೆಸರನ್ನು ತುಂಬಿ ಕಳುಹಿಸಿದರೆ, ಮಾತ್ರ ವಿಮೆ ಸಿಗುತ್ತದೆ.

ದೇಶದಾದ್ಯಂತದ ೮೬೪ ರೈಲುನಿಲ್ದಾಣಗಳು ಮತ್ತು ೬ ಸಾವಿರದ ೬೪೬ ಬೋಗಿಗಳಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಹೀಗಿರುವಾಗಲೂ ಜನವರಿಯಿಂದ ಜೂನ್ ೨೦೨೨ ಈ ೬ ತಿಂಗಳುಗಳ ಕಾಲಾವಧಿಯಲ್ಲಿ ರೈಲು ಗಳಲ್ಲಿ ೧ ಸಾವಿರದ ೬೫೫ ಕಳ್ಳತನಗಳ ಅಪರಾಧಗಳನ್ನು ದಾಖಲಿಸಲಾಗಿತ್ತು ಮತ್ತು ದರೋಡೆಗಳ ಸಂಖ್ಯೆ ೩೮ ಇತ್ತು. ಹಾಗೆಯೇ ಪ್ರಯಾಣಿಕರನ್ನು ಎಚ್ಚರ ತಪ್ಪಿಸಿ ಅವರ ಸಾಮಾನುಗಳನ್ನು ಲೂಟಿ ಮಾಡುವ ಕೃತ್ಯಗಳೂ ಘಟಿಸಿವೆ. ಕೇವಲ ಮುಂಬಯಿಯಲ್ಲಿ ೨೦೨೧ ರಲ್ಲಿ ೬ ಸಾವಿರದ ೭೨೦ ಕಳ್ಳತನಗಳ ಘಟನೆಗಳಾಗಿವೆ. ದೇಶದಾದ್ಯಂತ ಇತರ ಸ್ಥಳಗಳ ಅಂಕಿಅಂಶಗಳು ಇದಕ್ಕಿಂತಲೂ ಹೆಚ್ಚಿರಬಹುದು.

ಸಮಾಜದಲ್ಲಿ ಘಟಿಸುವ ಈ ಘಟನೆಗಳು ಹಿಂದೂ ರಾಷ್ಟ್ರದ ಅನಿವಾರ್ಯತೆಯನ್ನು ದರ್ಶಿಸುತ್ತವೆ. ಎಲ್ಲಿಯವರೆಗೆ ಹಿಂದೂ ರಾಷ್ಟ್ರ ಸ್ಥಾಪನೆಯಾಗುವುದಿಲ್ಲವೋ, ಅಲ್ಲಿಯವರೆಗೆ ಮೇಲ್ಕಾಣಿಸಿದ ಹಾನಿಯನ್ನು ತಡೆಗಟ್ಟಲು ಕಾಳಜಿ ವಹಿಸುವುದಷ್ಟೇ ನಮ್ಮ ಕೈಯಲ್ಲಿದೆ ಎಂದು ಗಮನದಲ್ಲಿಡಿ.

ಹೊಮಿಯೋಪಥಿ ವೈದ್ಯ ಅಂಜೇಶ ಕಣಗಲೇಕರ, ರಾಮನಾಥಿ, ಗೋವಾ (೨೧.೨.೨೦೨೩)