ಸಾಧಕರೇ, ‘ಯೋಗ್ಯ ವಿಚಾರಪ್ರಕ್ರಿಯೆಯೊಂದಿಗೆ ಪರಿಪೂರ್ಣ ಕೃತಿ ಮಾಡುವುದು’, ಇದು ಸಾಧನೆಯ ಸಮೀಕರಣವಾಗಿರುವುದರಿಂದ ಅದರಂತೆ ಪ್ರಯತ್ನಿಸಿ ಸಾಧನೆಯಲ್ಲಿನ ಶುದ್ಧ ಆನಂದವನ್ನು ಅನುಭವಿಸಿರಿ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

‘ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಅನೇಕ ಜನ್ಮಗಳ ಸಂಸ್ಕಾರಗಳಿರುತ್ತವೆ ಮತ್ತು ಅದಕ್ಕನುಸಾರ ಅವಳ ವಿಚಾರಪ್ರಕ್ರಿಯೆ ಹಾಗೂ ವರ್ತನೆ ಇರುತ್ತದೆ. ಕೆಲವು ಸಾಧಕರ ಮನಸ್ಸಿನಲ್ಲಿ ಸಾಧನೆಯ ತಳಮಳವಿರುತ್ತದೆ; ಆದರೆ ಸ್ವಭಾವದೋಷ ಮತ್ತು ಅಹಂನಿಂದ ಕೃತಿಯಲ್ಲಿ ತಪ್ಪುಗಳಾಗಿರುವುದರಿಂದ ಕೃತಿ ಆಯೋಗ್ಯವಾಗುತ್ತದೆ. ಬಹಳಷ್ಟು ಸಾಧಕರಿಂದ ಯಾವುದಾದ ರೊಂದು ಕೃತಿಯು ಬಾಹ್ಯವಾಗಿ ಪರಿಪೂರ್ಣ ಮತ್ತು ತತ್ಪರತೆಯಿಂದಾಗುತ್ತದೆ; ಆದರೆ ಅದನ್ನು ಮಾಡುವಾಗ ಅವರ ಮನಸ್ಸಿನಲ್ಲಿ ‘ನಾನು ಒಳ್ಳೆಯ ಕೃತಿಯನ್ನು ಮಾಡುತ್ತೇನೆ. ನನಗೆ ಇತರರಿಗಿಂತ ಹೆಚ್ಚು ಚೆನ್ನಾಗಿ ಮಾಡಲು ಬರುತ್ತದೆ’, ಎಂಬ ಅಹಂಯುಕ್ತ ವಿಚಾರಗಳಿರುತ್ತವೆ. ಆದ್ದರಿಂದ ಕೃತಿಯು ಪೂರ್ಣವಾದರೂ, ಅಯೋಗ್ಯ ವಿಚಾರವಿರುವುದರಿಂದ ಸೇವೆಯು ಈಶ್ವರನ ಚರಣಗಳಲ್ಲಿ ಸಮರ್ಪಿತವಾಗುವುದಿಲ್ಲ.

ಕೆಲವು ಸಾಧಕರಲ್ಲಿ ‘ನಾನು ಎಷ್ಟು ಸೇವೆಯನ್ನು ಮಾಡುತ್ತೇನೆ  !’, ‘ನನಗೆ ಸೇವೆಯ ಜವಾಬ್ದಾರಿ ಸಿಗಬೇಕು’, ‘ನಾನು ಇಂತಿಂತಹ ಸೇವೆಯುನ್ನು ಒಳ್ಳೆಯ ರೀತಿಯಲ್ಲಿ ಮಾಡುತ್ತೇನೆ’, ಎಂಬ ಅಹಂಯುಕ್ತ ವಿಚಾರಪ್ರಕ್ರಿಯೆ ಇರುತ್ತದೆ. ಇಂತಹ ಅಹಂಯುಕ್ತ ವಿಚಾರಗಳಿಂದ ಅವರು ಮಾಡಿದ ಕೃತಿಯಲ್ಲಿ ಅನೇಕ ತಪ್ಪುಗಳಿದ್ದು ಅವರು ಸಾಧನೆಯಲ್ಲಿ ವೇಗವಾಗಿ ಕುಸಿಯುತ್ತಾರೆ. ಸೇವೆಯನ್ನು ಮಾಡುವಾಗ ಯೋಗ್ಯ ಕರ್ಮವನ್ನು ಮಾಡುವುದೊಂದಿಗೆ ಈಶ್ವರನ ಬಗ್ಗೆ ಭಾವವಿದ್ದರೆ, ಹಾಗೆಯೇ ಮನಸ್ಸು ಶುದ್ಧವಾಗಿದ್ದರೆ ಮಾತ್ರ ಸಾಧನೆಯಾಗಿ ತನು ಮತ್ತು ಮನಸ್ಸು ಈಶ್ವರನ ಚರಣಗಳಲ್ಲಿ ಸಮರ್ಪಿತವಾಗುತ್ತದೆ. ಅದಕ್ಕಾಗಿ ನಿಯಮಿತವಾಗಿ ‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ನಡೆಸುವುದು, ದಿನವಿಡೀ ಆಗಾಗ ಮನಸ್ಸಿನ ವರದಿಯನ್ನು ತೆಗೆದುಕೊಳ್ಳುವುದು, ಸಾಧನೆಯ ಕುರಿತು ಜವಾಬ್ದಾರ ಸಾಧಕರಿಂದ ಮಾರ್ಗದರ್ಶನ ಪಡೆದುಕೊಂಡು ಮನಸ್ಸು ಮತ್ತು ಕೃತಿಯ ಸ್ತರದಲ್ಲಿ ಪ್ರಯತ್ನಿಸುವುದು’, ಈ ರೀತಿ ಪ್ರಯತ್ನಗಳನ್ನು ಮಾಡಿದರೆ ವಿಚಾರ ಮತ್ತು ಕೃತಿಗಳ ಹೀಗೆ ಎರಡು ಸ್ತರಗಳಲ್ಲಿ ಯೋಗ್ಯ ಪ್ರಕ್ರಿಯೆ ಆಗಿ ಸಾಧನೆಯಲ್ಲಿನ ಶುದ್ಧ ಆನಂದವನ್ನು ಅನುಭವಿಸಬಹುದು. ಸಾಧಕರೇ, ‘ನಮ್ಮ ಪ್ರತಿಯೊಂದು ಕೃತಿ ಮತ್ತು ಅದರ ಹಿಂದಿನ ವಿಚಾರಗಳ ಕಡೆಗೆ ಭಗವಂತನ ಗಮನವಿದೆ’, ಎಂಬುದನ್ನು ಗಮನದಲ್ಲಿಟ್ಟು ಪ್ರಾಮಾಣಿಕವಾಗಿ ಸಾಧನೆಯನ್ನು ಮಾಡಿರಿ !’

– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧.೩.೨೦೨೩)