ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರು ೨೦೦೨ ರಿಂದ ಅಧ್ಯಾತ್ಮದ ಪ್ರಚಾರಕ್ಕಿಂತ ಹಿಂದೂ ರಾಷ್ಟ್ರ ಕ್ಕಾಗಿ ಕಾರ್ಯ ಮಾಡಲು ಆದ್ಯತೆ ನೀಡಲು ಕಾರಣ !
ಸಾಧನೆಯನ್ನು ಮಾಡಲು ಪ್ರಾರಂಭಿಸಿದ ನಂತರ ನನ್ನ ಆಧ್ಯಾತ್ಮಿಕ ಪ್ರಗತಿ ಚೆನ್ನಾಗಿ ಆಗುತ್ತಿರುವ ಬಗ್ಗೆ ಅನೇಕ ಸಂತರು ನನ್ನ ಪ್ರಶಂಸೆ ಮಾಡಿದರು. ಆಗ ನನ್ನ ಮನಸ್ಸಿನಲ್ಲಿ, ಈಗ ನನ್ನ ಆಧ್ಯಾತ್ಮಿಕ ಪ್ರಗತಿಗೆ ಮಹತ್ವವನ್ನು ನೀಡುವುದಕ್ಕಿಂತ ಹಿಂದೂ ರಾಷ್ಟ್ರಕ್ಕಾಗಿ ಕಾರ್ಯವನ್ನು ಮಾಡಬೇಕು; ಏಕೆಂದರೆ ಹಿಂದೂಗಳ ಮತ್ತು ಭಾರತದ ಸ್ಥಿತಿಯು ಅತ್ಯಂತ ಚಿಂತಾಜನಕವಾಗಿದೆ,’ ಎಂಬ ವಿಚಾರ ಬಂದಿತು. ಅದಕ್ಕಾಗಿ ನಾನು ಅಧ್ಯಾತ್ಮದ ಪ್ರಚಾರ ಮಾಡುವುದಕ್ಕಿಂತ ಹಿಂದೂ ರಾಷ್ಟ್ರಕ್ಕಾಗಿ ಕಾರ್ಯವನ್ನು ಮಾಡಲು ವರ್ಷ ೨೦೦೨ ರಿಂದ ಪ್ರಾರಂಭಿಸಿದೆನು.ಇದರ ಅಂತರ್ಗತ ಸಂತರ ಸಂಘಟನೆ ಮಾಡುವುದು, ರಾಷ್ಟ್ರಪ್ರೇಮಿ ಮತ್ತು ಧರ್ಮಪ್ರೇಮಿಗಳಿಗೆ ಆಧ್ಯಾತ್ಮಿಕ ಸ್ತರದಲ್ಲಿ ಮಾರ್ಗದರ್ಶನ ನೀಡುವುದು, ರಾಷ್ಟ್ರ ಮತ್ತು ಧರ್ಮದ ಬಗೆಗಿನ ಗ್ರಂಥಗಳನ್ನು ಸಂಕಲನ ಮಾಡುವುದು ಇತ್ಯಾದಿ ಕಾರ್ಯ ಮಾಡುತ್ತಿದ್ದೇನೆ. ನಾನು ಇದುವರೆಗೆ ಇದಕ್ಕೇ ಸಮಷ್ಟಿ ಸಾಧನೆಯ ದೃಷ್ಟಿಕೋನದಿಂದ ಆದ್ಯತೆ ನೀಡಿದ್ದೇನೆ. ಹಿಂದೂ ರಾಷ್ಟ್ರವನ್ನು ಸ್ಥಾಪಿಸಿದ ನಂತರ ನಾನು ಪುನಃ ಸಾಧಕರ ಆಧ್ಯಾತ್ಮಿಕ ಪ್ರಗತಿಗೆ ಮಹತ್ವವನ್ನು ನೀಡುವೆನು.
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೯.೨.೨೦೨೩)
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮೇಲಿನ ವಿಚಾರದಿಂದ ಸಾಧಕರು ಗಮನದಲ್ಲಿರಿಸಬೇಕಾದ ಅಂಶಗಳು !
೧. ಸಾಧಕರು ವ್ಯಷ್ಟಿ ಸಾಧನೆ ಮಾಡುತ್ತಿರುವಾಗ ತಮ್ಮ ಆಧ್ಯಾತ್ಮಿಕ ಉನ್ನತಿಯು ಆಗುತ್ತದೆಯೋ ಅಥವಾ ಇಲ್ಲ ?’, ಎಂಬ ವಿಚಾರದಲ್ಲಿ ಸಿಲುಕುವುದಕ್ಕಿಂತ ಸಮಷ್ಟಿ ಸಾಧನೆಗಾಗಿ ನಾನು ಹೆಚ್ಚೆಚ್ಚು ಪ್ರಯತ್ನಿಸುತ್ತಿದ್ದೇನೆಯೇ ?, ಎಂಬ ವಿಚಾರವನ್ನು ಮಾಡಬೇಕು.
೨. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಸನಾತನ ಸಂಸ್ಥೆಯ ಸ್ಥಾಪನೆಯಾದಾಗಿನಿಂದ ವೈಯಕ್ತಿಕ ಆಧ್ಯಾತ್ಮಿಕ ಉನ್ನತಿಯು ಸಾಧಕರ ಸಾಧನೆಯ ಕೇಂದ್ರಬಿಂದುವಾಗಿದೆ, ಎಂದು ಹೇಳುತ್ತಿದ್ದರು. ಹಿಂದೂ ರಾಷ್ಟ್ರದ ಸ್ಥಾಪನೆಯಾದ ನಂತರ ಹಿಂದೂ ರಾಷ್ಟ್ರದ ಸುವ್ಯವಸ್ಥೆಯ ಮುಂತಾದ ಕಾರ್ಯಗಳ ಕಡೆಗೆ ಗಮನ ನೀಡುವ ಬದಲು ಅವರು ಪುನಃ ಸಾಧಕರ ಆಧ್ಯಾತ್ಮಿಕ ಪ್ರಗತಿಗೆ ಮಹತ್ವವನ್ನು ನೀಡಲಿದ್ದಾರೆ. ಇದರಿಂದ ಸಾಧಕರ ಆಧ್ಯಾತ್ಮಿಕ ಉನ್ನತಿಯ ಬಗ್ಗೆ ಅವರಲ್ಲಿರುವ ಅಪಾರ ತಳಮಳವು ಗಮನಕ್ಕೆ ಬರುತ್ತದೆ. ಸಾಧಕರು ಸಹ ಸಮಷ್ಟಿ ಸಾಧನೆಯನ್ನು ಮಾಡುತ್ತಿದ್ದಾಗಲೇ ಬೇಗ ಆಧ್ಯಾತ್ಮಿಕ ಉನ್ನತಿಯಾಗಲು ಸ್ವಭಾವದೋಷ-ನಿರ್ಮೂಲನೆ, ಭಾವಜಾಗೃತಿ ಇಂತಹ ವ್ಯಷ್ಟಿ ಸಾಧನೆಯ ಕಡೆಗೂ ಅಷ್ಟೇ ಗಾಂಭೀರ್ಯದಿಂದ ಗಮನ ಕೊಡುವುದು ಆವಶ್ಯಕವಿದೆ.
– (ಪೂ.) ಸಂದೀಪ ಆಳಶಿ (೯.೨.೨೦೨೩)