ಸಾಧನೆಯಿಂದ ವ್ಯಸನಗಳನ್ನು ಕಡಿಮೆ ಕಾಲಾವಧಿಯಲ್ಲಿ ತಡೆಯಬಹುದು ! – ಸಂಶೋಧನೆಯ ನಿಷ್ಕರ್ಷ

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಐರ್ಲ್ಯಾಂಡ್ ನಲ್ಲಿ ‘ವ್ಯಸನಾಧೀನತೆ’ ಬಗ್ಗೆ ಶೋಧ ಪ್ರಬಂಧ ಮಂಡನೆ !

ಶ್ರೀ. ಶಾನ್ ಕ್ಲಾರ್ಕ್

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರು ಶೋಧ ಪ್ರಬಂಧದ ಲೇಖಕರು ಹಾಗೂ ಶ್ರೀ. ಶಾನ್ ಕ್ಲಾರ್ಕ್ ಇವರು ಸಹಲೇಖಕರಾಗಿದ್ದಾರೆ ಎಲ್ಲಾ ಪ್ರಯೋಗದ ನಿಷ್ಕರ್ಷ ಮಂಡಿಸುವಾಗ ಶ್ರೀ. ಕ್ಲಾರ್ಕ್ ಇವರು, ‘ವೈದ್ಯಕೀಯ ಸಮುದಾಯಕ್ಕೆ ಸಮಾಜದ ಮಾನಸಿಕ ಆರೋಗ್ಯ ಸುಧಾರಿಸಬೇಕಿದ್ದರೆ, ಅವರು ಅವರ ಸಂಶೋಧನೆಯಲ್ಲಿ ಆಧ್ಯಾತ್ಮಿಕ ಪರಿಣಾಮ ಸಮಾವೇಶಗೊಳಿಸಬೇಕು ಮತ್ತು ಅವರ ಚಿಕಿತ್ಸಾ ಪದ್ಧತಿಯಲ್ಲಿ ಆಧ್ಯಾತ್ಮಿಕ ಸಾಧನೆಯ ಉಪಯೋಗ ಮಾಡಬೇಕು; ಏಕೆಂದರೆ ಮನುಷ್ಯನ ಕಲ್ಯಾಣಕ್ಕಾಗಿ ಆಧ್ಯಾತ್ಮ ಅತ್ಯಂತ ಮಹತ್ವದ್ದಾಗಿದೆ’ ಎಂದರು.

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಮಾರ್ಗಕ್ರಮಣ

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಇದುವರೆಗೆ ೧೮ ರಾಷ್ಟ್ರೀಯ ಮತ್ತು ೮೬ ಅಂತಾರಾಷ್ಟ್ರೀಯ ಹೀಗೆ ಒಟ್ಟು ೧೦೪ ವೈಜ್ಞಾನಿಕ ಪರಿಷತ್ತುಗಳಲ್ಲಿ ಶೋಧಪ್ರಬಂಧವನ್ನು  ಮಂಡಿಸಲಾಗಿದೆ. ವಿಶ್ವವಿದ್ಯಾಲಯಕ್ಕೆ ಇದು ವರೆಗೆ ಒಟ್ಟು ೧೨ ಅಂತಾರಾಷ್ಟ್ರೀಯ ಪರಿಷತ್ತುಗಳಲ್ಲಿ ‘ಸರ್ವೋತ್ತಮ ಶೋಧಪ್ರಬಂಧ ಪ್ರಶಸ್ತಿ’ ಲಭಿಸಿದೆ.

ಫೋಂಡಾ (ಗೋವಾ) – ಯಾವುದಾದರೂ ವ್ಯಸನಕ್ಕೆ ಶೇಕಡಾ ೩೦ ರಷ್ಟು ಶಾರೀರಿಕ ಕಾರಣವಿರುತ್ತದೆ, ಎಂದರೆ ವ್ಯಸನಾಧೀನ ಪದಾರ್ಥಗಳ ಮೇಲೆ ಅವಲಂಬಿಸಿರುತ್ತಾರೆ ಹಾಗೂ ಶೇಕಡಾ ೩೦ ರಷ್ಟು ಮಾನಸಿಕ ಮತ್ತು ಶೇಕಡಾ ೪೦ ರಷ್ಟು ಆಧ್ಯಾತ್ಮಿಕ ಕಾರಣವಿರುತ್ತದೆ ಎಂದು ಒಂದು ಆಧ್ಯಾತ್ಮಿಕ ಸಂಶೋಧನೆಯಿಂದ ಕಂಡು ಬಂದಿದೆ. ‘ಅಧ್ಯಾತ್ಮ ಶಾಸ್ತ್ರಕ್ಕನುಸಾರ ಯೋಗ್ಯ ಆಧ್ಯಾತ್ಮಿಕ ಸಾಧನೆ ಮಾಡಿದರೆ ಕಡಿಮೆ ಸಮಯದಲ್ಲಿ ವ್ಯಸನಗಳನ್ನು ಹಿಡಿತಕ್ಕೆ ತರಬಹುದು ಹಾಗೂ ವ್ಯಸನಗಳಿಂದ ಸಂಪೂರ್ಣ ಮುಕ್ತರಾಗಲು ಆಧ್ಯಾತ್ಮಿಕ ಸಾಧನೆ ಅತ್ಯಂತ ಶಕ್ತಿಶಾಲಿ ಸಾಧನವಾಗಿದೆ’, ಎಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಶೋಧನಾ ತಂಡದ ಸದಸ್ಯರು ಹಾಗೂ ಶೇ. ೬೫ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಶ್ರೀ. ಶಾನ್ ಕ್ಲಾರ್ಕ್ ಇವರು ಹೇಳಿದರು.

ಅವರು ಐರ್ಲ್ಯಾಂಡ್‌ನ ಡಬ್ಲಿನ್‌ನಲ್ಲಿ ಇತ್ತೀಚಿಗೆ ನಡೆದ ‘ಕಾನ್ಫರೆನ್ಸ್ ಸೀರೀಸ್ನಿಂದ ಆಯೋಜಿಸಿರುವ ೧೦ ನೇ ವಾರ್ಷಿಕ ಕಾಂಗ್ರೆಸ್ ಆನ್ ಮೆಂಟಲ್ ಹೆಲ್ತ್’ (ಎಸಿಎಮ್‌ಎಚ್ ೨೦೨೩)ನ ಆನ್‌ಲೈನ್ ಅಂತಾರಾಷ್ಟ್ರೀಯ ವೈಜ್ಞಾನಿಕ ಪರಿಷತ್ತಿನಲ್ಲಿ ಮಾತನಾಡುತ್ತಿದ್ದರು. ಶ್ರೀ. ಕ್ಲಾರ್ಕ್ ಇವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ’ ವತಿಯಿಂದ ‘ಆಧ್ಯಾತ್ಮಿಕ ಕಾರಣಗಳಿಂದ ವ್ಯಸನಗಳು ಹೇಗೆ ಅಂಟುತ್ತವೆ ಮತ್ತು ಅದನ್ನು ಹೇಗೆ ಹಿಡಿತಕ್ಕೆ ತರಬೇಕು ? ಈ ವಿಷಯದ ಬಗ್ಗೆ ೧೦೨ ನೇ ಶೋಧ ಪ್ರಬಂಧವನ್ನು ಈ ಪರಿಷತ್ತಿನಲ್ಲಿ ಮಂಡಿಸಿದರು. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರು  ಈ ಶೋಧಪ್ರಬಂಧದ ಲೇಖಕರಾಗಿದ್ದು ಶ್ರೀ. ಶಾನ್ ಕ್ಲಾರ್ಕ್ ಇವರು ಸಹಲೇಖಕರಾಗಿದ್ದಾರೆ.

೧. ಶ್ರೀ. ಶಾನ್ ಕ್ಲಾರ್ಕ್ ಇವರು ಮಾತನಾಡುತ್ತಾ, ನಕಾರಾತ್ಮಕ ಶಕ್ತಿಯ ಪ್ರಭಾವ ಅಥವಾ ಅತೃಪ್ತ ಪೂರ್ವಜರಿಂದಾಗುವ  ತೊಂದರೆಯಿಂದ ವ್ಯಕ್ತಿಯ ಜೀವನದ ಮೇಲೆ ಪರಿಣಾಮವಾಗುತ್ತದೆ, ಹಾಗೂ ಆ ವ್ಯಕ್ತಿಯ ನಕಾರಾತ್ಮಕ ಊರ್ಜೆಯ ಪ್ರಭಾವಲಯ ಹೆಚ್ಚಿಸಲು ಕಾರಣವಾಗುತ್ತದೆ. ಆದರೆ, ಯಾವುದಾದರೂ ವ್ಯಕ್ತಿ ಆಧ್ಯಾತ್ಮಿಕ ಸಾಧನೆ ಆರಂಭಿಸಿದರೆ, ಅವನ ನಕಾರಾತ್ಮಕ ಊರ್ಜೆಯ ಪ್ರಭಾವಲಯ ಕಡಿಮೆಯಾಗುತ್ತದೆ ಎಂದು ಹೇಳಿದರು.

೨. ಶ್ರೀ. ಕ್ಲಾರ್ಕ್ ಇವರು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ‘ಯುನಿವರ್ಸಲ್ ಔರಾ ಸ್ಕ್ಯಾನರ್ ಉಪಕರಣದ ಮೂಲಕ ಮಾಡಿದ ಪ್ರಯೋಗದ ನಿಷ್ಕರ್ಷವನ್ನು ಮಂಡಿಸಿದರು.

೩. ಈ ಪ್ರಯೋಗಗಳಲ್ಲಿ ಫ್ರಾನ್ಸ್‌ನ ಒಬ್ಬ ಸಂತರ ಮೂರು ಚಿತ್ರದ ಪ್ರಭಾವಲಯ ಅಳೆಯಲಾಯಿತು. ಮೊದಲನೆಯ, ಸಾಧನೆ ಆರಂಭಿಸುವ ಮೊದಲು ಯಾವಾಗ ಅವರಿಗೆ ಸಿಗರೇಟ್‌ನ  ವ್ಯಸನವಿತ್ತು. ಎರಡನೆಯ, ಆಧ್ಯಾತ್ಮಿಕ ಸಾಧನೆ ಆರಂಭ ಮಾಡಿದ ನಂತರ ಮತ್ತು ಮೂರನೆಯ, ಆಧ್ಯಾತ್ಮಿಕ ಪ್ರಗತಿಯಾಗಿ ಸಂತರಾದ ನಂತರ. ಇದರಲ್ಲಿನ ನಿಷ್ಕರ್ಷದಿಂದ ಕಂಡುಬಂದದ್ದೇನೆಂದರೆ, ಮೊದಲನೆಯ ಚಿತ್ರದಲ್ಲಿ ಅವರಿಗೆ ಸಿಗರೇಟ್ ವ್ಯಸನವಿತ್ತು, ಅದರಲ್ಲಿ ನಕಾರಾತ್ಮಕ ಊರ್ಜೆಯ ಪ್ರಭಾವಲಯ ದೊಡ್ಡ ಪ್ರಮಾಣದಲ್ಲಿ ಕಂಡಿತು. ಎರಡನೆಯ ಚಿತ್ರದಲ್ಲಿ, ಅವರ ನಕಾರಾತ್ಮಕ ಊರ್ಜೆಯ ಪ್ರಭಾವಲಯ ಅರ್ಧದಷ್ಟು ಕಡಿಮೆ ಆಗಿತ್ತು ಹಾಗೂ ಸಂತರಾದ ನಂತರ ತೆಗೆದಿರುವ ಅವರ ಮೂರನೇ ಚಿತ್ರದಲ್ಲಿ ಸಕಾರಾತ್ಮಕ ಊರ್ಜೆಯ ಪ್ರಭಾವಲಯ ದೊಡ್ಡ ಪ್ರಮಾಣದಲ್ಲಿ ಕಂಡು ಬಂತು.

೪. ಈ ವೇಳೆ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದಲ್ಲಿ ಆಧ್ಯಾತ್ಮಿಕ ಸಾಧನೆ ಮಾಡಿ ಕೆಲವು ತಿಂಗಳು ಅಥವಾ ವರ್ಷಗಳಲ್ಲಿ ವ್ಯಸನಗಳು ಹಿಡಿತಕ್ಕೆ ತಂದಿರುವ ಸಾಧಕರ ಸಾಧನೆಯ ಉದಾಹರಣೆಗಳನ್ನೂ ನೀಡಿದರು.