ಭಾರತದಲ್ಲಿ ಪ್ರತಿ 27ರಲ್ಲಿ ಒಬ್ಬರು ನ್ಯಾಯದ ನಿರೀಕ್ಷೆಯಲ್ಲಿ!

ನವದೆಹಲಿ – ದೇಶಾದ್ಯಂತ ಕೆಳ ನ್ಯಾಯಾಲಯಗಳಿಂದ ಸುಪ್ರೀಂ ಕೋರ್ಟ್‌ವರೆಗೆ 5 ಕೋಟಿ 25 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇವೆ. ಅಂದರೆ ಪ್ರತಿ 27 ಭಾರತೀಯರಲ್ಲಿ ಕನಿಷ್ಠ ಒಬ್ಬ ನಾಗರಿಕ ಯಾವುದಾದರೂ ಒಂದು ಪ್ರಕರಣದಲ್ಲಿ ಸಿಲುಕಿದ್ದು, ನ್ಯಾಯಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾನೆ. ಒಂದು ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾದರೆ ಸಾಕು ಎನ್ನುವಂತಿಲ್ಲ, ಹೆಚ್ಚಿನ ಪ್ರಕರಣಗಳಲ್ಲಿ ದೂರುದಾರರು ಅಥವಾ ಅರ್ಜಿದಾರರು ಮುಂದಿನ ನ್ಯಾಯಾಲಯಕ್ಕೆ ಹೋಗುತ್ತಾರೆ. ಆದ್ದರಿಂದ “ಬುದ್ಧಿವಂತರು ನ್ಯಾಯಾಲಯದ ಬಾಗಿಲು ತುಳಿಯಬಾರದು” ಎಂದು ಹೇಳುತ್ತಾರೆ, ಕಾನೂನು ಮತ್ತು ನ್ಯಾಯ ಸಚಿವಾಲಯದ ಈ ಅಧಿಕೃತ ಅಂಕಿಅಂಶಗಳು ನೇರವಾಗಿ ಸಾಬೀತುಪಡಿಸುತ್ತವೆ. 5 ಕೋಟಿ 25 ಲಕ್ಷ ಬಾಕಿ ಪ್ರಕರಣಗಳಲ್ಲಿ, ಸುಪ್ರೀಂ ಕೋರ್ಟ್‌ನಲ್ಲಿ 60 ಸಾವಿರ, ವಿವಿಧ ಹೈಕೋರ್ಟ್‌ಗಳಲ್ಲಿ 58 ಲಕ್ಷ ಮತ್ತು ಉಳಿದ ಪ್ರಕರಣಗಳು ದೇಶಾದ್ಯಂತದ ಕೆಳ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿವೆ.
‘ನ್ಯಾಯವಲ್ಲ, ಅನ್ಯಾಯ’ವನ್ನು ತೋರಿಸುವ ಆಘಾತಕಾರಿ ಅಂಕಿಅಂಶಗಳು ಇಲ್ಲಿವೆ!
1. ದೇಶದ ಎರಡು ಹೈಕೋರ್ಟ್‌ಗಳಲ್ಲಿ 52 ವರ್ಷಗಳಿಂದ ಮೂರು ಪ್ರಕರಣಗಳು ಬಾಕಿ ಇವೆ. ಕೋಲಕಾತಾ ಹೈಕೋರ್ಟ್‌ನಲ್ಲಿ ಎರಡು ಮತ್ತು ಮದ್ರಾಸ್ ಹೈಕೋರ್ಟ್‌ನಲ್ಲಿ ಒಂದು ಪ್ರಕರಣ ಸೇರಿವೆ.
2. ಹೈಕೋರ್ಟ್‌ಗಳಲ್ಲಿ 62 ಸಾವಿರಕ್ಕೂ ಹೆಚ್ಚು ಪ್ರಕರಣಗಳು 30 ವರ್ಷಗಳಿಗಿಂತಲೂ ಹಳೆಯದಾಗಿವೆ.
3. ದೇಶಾದ್ಯಂತ ಕೆಳ ನ್ಯಾಯಾಲಯಗಳಲ್ಲಿ 7 ಲಕ್ಷ 10 ಸಾವಿರಕ್ಕೂ ಹೆಚ್ಚು ಪ್ರಕರಣಗಳು 30 ವರ್ಷಗಳಿಗಿಂತಲೂ ಹೆಚ್ಚು ಕಾಲ ಬಾಕಿ ಇವೆ.
4. ರಾಜಧಾನಿ ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯದಲ್ಲಿ 39 ವರ್ಷಗಳ ನಂತರ ಒಂದು ಪ್ರಕರಣವು ಈಗಷ್ಟೇ ಇತ್ಯರ್ಥದತ್ತ ಸಾಗುತ್ತಿದೆ. ಇದರಲ್ಲಿ ಎಸ್.ಕೆ. ತ್ಯಾಗಿ ಮತ್ತು ಅವರ ಸಹೋದ್ಯೋಗಿಗಳು ಆರೋಪಿಗಳಾಗಿದ್ದು, ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ದೀಪಕ್ ಕುಮಾರ್ ಕೇವಲ 2 ವರ್ಷದವರಿದ್ದಾಗ, ಅಂದರೆ 1984-85 ರಲ್ಲಿ ಈ ಪ್ರಕರಣ ಪ್ರಾರಂಭವಾಯಿತು. ಆರೋಪಪಟ್ಟಿಯಲ್ಲಿ ಹೆಸರಿಸಲಾದ 13 ಆರೋಪಿಗಳಲ್ಲಿ ಇಬ್ಬರು ಈಗಾಗಲೇ ಮೃತಪಟ್ಟಿದ್ದಾರೆ. ಈಗ 41 ನೇ ವಯಸ್ಸಿನಲ್ಲಿ, ನ್ಯಾಯಮೂರ್ತಿ ದೀಪಕ್ ಕುಮಾರ್ ಈ ಪ್ರಕರಣದ ವಿಚಾರಣೆಯಲ್ಲಿ ಮತ್ತು ಅದನ್ನು ತೀರ್ಮಾನಕ್ಕೆ ತರುವಲ್ಲಿ ನಿರತರಾಗಿದ್ದಾರೆ.
5. ದೆಹಲಿಯ ತೀಸ್ ಹಜಾರಿ ನ್ಯಾಯಾಲಯದಲ್ಲಿ 1972 ರಲ್ಲಿ ದಾಖಲಾದ ಪ್ರಕರಣವು ಬಾಕಿ ಇದ್ದರೇ ರಾಜಸ್ಥಾನದಲ್ಲಿ 1956 ರಿಂದ ಒಂದು ಪ್ರಕರಣವು ಬಾಕಿ ಇದೆ.
ಸಂಪಾದಕೀಯ ನಿಲುವುಈ ಪರಿಸ್ಥಿತಿಗೆ ಸಮರೋಪಾದಿಯಲ್ಲಿ ಪರಿಣಾಮಕಾರಿ ಮತ್ತು ಶಾಶ್ವತ ಪರಿಹಾರಗಳನ್ನು ಕಂಡುಹಿಡಿಯುವುದು ಅವಶ್ಯಕ! |
‘ಪ್ರಧಾನಿಯವರು ಪ್ರಶ್ನೆಪತ್ರಿಕೆ ಸೋರಿಕೆಯ ಹೊಣೆಗಾರಿಕೆಯನ್ನು ನಿಗದಿಪಡಿಸಲೇ ಇಲ್ವಂತೆ !’
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡುವವರೆಗೆ ಹೋರಾಟ ಮುಂದುವರಿಯಲಿದೆ !
‘ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವಾದ ಭಾರತ ತನ್ನ ಜನರ ಸಮಸ್ಯೆಗಳತ್ತ ಗಮನ ಹರಿಸುತ್ತದೆ ಎಂದು ಭಾವಿಸುತ್ತೇವೆ!’
ಸರಕಾರದ ಮುಂದೆ ನಾವು ೩ ಬೇಡಿಕೆಗಳನ್ನು ಇಟ್ಟಿದ್ದೇವೆ!
ಭಾರತ-ನೇಪಾಳ ಗಡಿಯ ಮೂಲಕ ಆಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ಖಲಿಸ್ತಾನಿ ಪ್ರತ್ಯೇಕತಾವಾದಿ, ಅಮೆರಿಕನ್ ಪ್ರಜೆಯೊಂದಿಗೆ ಬಂಧನ
ಹಿಮಾಚಲ ಪ್ರದೇಶ – ನೈಸರ್ಗಿಕ ವಿಕೋಪದಿಂದ ₹೧,೦೦೦ ಕೋಟಿ ಹಾನಿ