ನ್ಯಾಯವ್ಯವಸ್ಥೆಯನ್ನು ಕಳಂಕಿಸುವ ಕೆಲವು ನ್ಯಾಯಾಧೀಶರ ವರ್ತನೆ

೧. ಜಾಮೀನಿನ ಮಂಜೂರಾತಿಗಾಗಿ ೫ ಲಕ್ಷ ರೂಪಾಯಿಗಳ ಬೇಡಿಕೆಯಿಟ್ಟ ನ್ಯಾಯಾಧೀಶ ಧನಂಜಯ ನಿಕಮ್‌

‘ಧನಂಜಯ ನಿಕಮ್‌ ಎಂಬವರು ಮಹಾರಾಷ್ಟ್ರದ ಸಾತಾರಾದಲ್ಲಿ ಸೆಷನ್‌ ನ್ಯಾಯಾಧೀಶರಾಗಿದ್ದಾಗ, ಆರೋಪಿಗೆ ಜಾಮೀನು ನೀಡಲು ಅವರು ೫ ಲಕ್ಷ ರೂ. ಲಂಚವನ್ನು ಕೇಳಿದ್ದರು. ಇದರ ದೂರಿನ ನಂತರ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಂಧನದಿಂದ ತಪ್ಪಿಸಿಕೊಳ್ಳಲು ಅವರು ಜಾಮೀನು ಪಡೆಯಲು ಓಡಾಡಲು ಪ್ರಾರಂಭಿಸಿದರು. ತನಿಖಾ ಸಂಸ್ಥೆಯು ಕಳೆದ ೬ ತಿಂಗಳಲ್ಲಿ ನಿಕಮ ಮತ್ತು ಅವರ ಗುಂಪು ೪ ಮೊಬೈಲ್‌ ಫೋನ್‌ಗಳಲ್ಲಿ ಮಾಡಿಕೊಂಡ ಸಂಪರ್ಕಗಳ ಮಾಹಿತಿಯನ್ನು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಮುಂದಿರಿಸಿ, ಈ ಜಾಮೀನು ಅರ್ಜಿಯನ್ನು ವಿರೋಧಿಸಿತು. ಇದರಿಂದ ನ್ಯಾಯಾಲಯವು ನಿಕಮ್‌ ಅವರ ನಿರೀಕ್ಷಣಾ ಜಾಮೀನನ್ನು ನಿರಾಕರಿಸಿತು.

ಶ್ರೀಮಂತರು, ರಾಜಕಾರಣಿಗಳು, ಉನ್ನತ ಹುದ್ದೆಯಲ್ಲಿರುವವರು ಮತ್ತು ಭ್ರಷ್ಟರು ಹಣಬಲದಿಂದ ಸರಕಾರ, ಆಡಳಿತ, ಪೊಲೀಸ ಮತ್ತು ಇತರ ವ್ಯವಸ್ಥೆಗಳಿಂದ ತಮಗೆ ಬೇಕಾದುದನ್ನು ಮಾಡಿಸಿಕೊಳ್ಳುತ್ತಾರೆ. ಈ ಜನರಿಂದ ಅನ್ಯಾಯವಾಗುತ್ತಿದ್ದರೂ, ಸಾರ್ವಜನಿಕರಿಗೆ ಈಗಲೂ ನ್ಯಾಯವ್ಯವಸ್ಥೆಯ ಮೇಲೆ ಶೇಕಡಾ ೧೦೦ ರಷ್ಟು ನಂಬಿಕೆಯಿದೆ. ತಮಗೆ ನ್ಯಾಯ ಸಿಗುತ್ತದೆ ಎನ್ನುವ ಆಸೆಯ ಕಣ್ಣುಗಳಿಂದ ಅವರು ಕುಳಿತಿರುತ್ತಾರೆ. ನ್ಯಾಯಾಧೀಶರೇ ಈ ರೀತಿ ವರ್ತಿಸಿದರೆ ಜನಸಾಮಾನ್ಯರು ಎಲ್ಲಿಗೆ ಹೋಗಬೇಕು?’

೨. ಹಿಂದೆ ದೇಶದ್ರೋಹದ ಆರೋಪ ಹೊತ್ತಿದ್ದ ಪ್ರದೀಪ ಕುಮಾರ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾಗಿ ನೇಮಕ

ಉತ್ತರಪ್ರದೇಶದಲ್ಲಿ ಪ್ರದೀಪ ಕುಮಾರ ಅವರನ್ನು ಸೆಷನ್‌ ನ್ಯಾಯಾಧೀಶರಾಗಿ ನೇಮಿಸಿರುವುದು ಸದ್ಯ ದೊಡ್ಡ ಸುದ್ದಿಯಾಗಿದೆ. ಅವರ ನೇಮಕಾತಿಯಿಂದಲೂ ನ್ಯಾಯ ವ್ಯವಸ್ಥೆಯ ಬಗ್ಗೆಯೂ ಪ್ರಶ್ನೆಗಳು ಉದ್ಭವವಾದವು. ಹೊಸದಾಗಿ ನೇಮಕಗೊಂಡ ಈ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಪ್ರದೀಪ ಕುಮಾರ ಅವರನ್ನು ೨೨ ವರ್ಷಗಳ ಹಿಂದೆ ಬೇಹುಗಾರಿಕೆ ಆರೋಪದ ಮೇಲೆ ಬಂಧಿಸಲಾಗಿತ್ತು. ಅವರ ಮೇಲೆ ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪವನ್ನು ಹೊರಿಸಲಾಗಿತ್ತು ಮತ್ತು ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿತ್ತು. ಗುಪ್ತಚರ ಇಲಾಖೆಯಿಂದ ಪಡೆದ ಮಾಹಿತಿಯ ಆಧಾರದಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಪ್ರದೀಪ ಕುಮಾರ ಅವರನ್ನು ೧೩.೬.೨೦೦೨ ರಂದು ಬಂಧಿಸಲಾಯಿತು ಮತ್ತು ೨೦೧೪ ರಲ್ಲಿ ಅವರನ್ನು ನಿರಪರಾಧಿಯೆಂದು ಖುಲಾಸೆ ಗೊಳಿಸಲಾಯಿತು. ಸಾವಿರಾರು ಬುದ್ಧಿವಂತರು, ಸದ್ಗುಣಶೀಲರು ಮತ್ತು ಚಾರಿತ್ರ್ಯವಂತರು ಇರುವಾಗ ಪ್ರದೀಪ ಕುಮಾರ ಅವರಂತಹ ಜನರನ್ನು ನ್ಯಾಯಾಧೀಶರನ್ನಾಗಿ ಮಾಡುವ ಅಗತ್ಯವೇನಿದೆ ? ಅವರ ವಿರುದ್ಧ ಗಂಭೀರ ಆರೋಪಗಳಿದ್ದವು ಇಷಟ್Ä ಮಾತ್ರವಲ್ಲ, ಅವರ ತಂದೆಯವರನ್ನು ೧೯೯೦ ರಲ್ಲಿ ಲಂಚದ ಆರೋಪದಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರ ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಈ ಪ್ರಕರಣದಲ್ಲಿ ಉತ್ತರಪ್ರದೇಶ ಉಚ್ಚ ನ್ಯಾಯಾಲಯದಲ್ಲಿ ಪ್ರದೀಪ ಕುಮಾರ ಅವರ ನೇಮಕಾತಿಯನ್ನು ಪ್ರಶ್ನಿಸಲಾಗಿದೆ ಎಂದು ತಿಳಿದುಬಂದಿದೆ.

(ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ

೩. ಆತ್ಮಹತ್ಯೆಗೂ ಮೊದಲು ನ್ಯಾಯಾಧೀಶರ ವಿರುದ್ಧ ಅತುಲ ಸುಭಾಷ ಅವರ ಆಘಾತಕಾರಿ ಆರೋಪ

ಗಂಡ-ಹೆಂಡತಿಯ ನಡುವಿನ ಜಗಳ, ಮಾನಸಿಕ ಹಿಂಸೆ ಮತ್ತು ಅವರ ಪತ್ನಿ ದಾಖಲಿಸಿದ ಕ್ರಿಮಿನಲ್‌ ಪ್ರಕರಣ ಇವು ಮಾತ್ರ ಬೆಂಗಳೂರಿನ ಅತುಲ ಸುಭಾಷ ಎಂಬ ಎಂಜಿನಿಯರ್‌ ಆತ್ಮಹತ್ಯೆಗೆ ಕಾರಣಗಳಾಗಿರಲಿಲ್ಲ. ಅತುಲ ಸುಭಾಷ ಅವರು ತಮ್ಮ ಜಾಮೀನು ಅರ್ಜಿಯೊಂದಿಗೆ ಸೆಷನ್ಸ್ ನ್ಯಾಯಾಧೀಶರ ಮುಂದೆ ನಿಂತಿದ್ದಾಗ, ಜಾಮೀನು ಸಿಗದಿದ್ದಕ್ಕಾಗಿ ಪೊಲೀಸರು ತನಗೆ ಯಾವ ರೀತಿ ಕಿರುಕುಳ ನೀಡುತ್ತಿದ್ದರು. ಸಾಮಾಜಿಕ ಮಾಧ್ಯಮ ಮತ್ತು ದೂರದರ್ಶನ ವಾಹಿನಿಗಳಲ್ಲಿ ಹೇಗೆ ತಮ್ಮ ಮಾನಹಾನಿ ಮಾಡಲಾಗುತ್ತಿದೆ ಎಂದು ಕಣ್ಣೀರಿಡುತ್ತಾ ನ್ಯಾಯಾಲಯಕ್ಕೆ ಹೇಳುತ್ತಿದ್ದಾಗ, ನ್ಯಾಯಾಲಯವು ಅದನ್ನು ಗಂಭೀರ ವಾಗಿ ಪರಿಗಣಿಸಲಿಲ್ಲವೆಂದು ಹೇಳಿದ್ದಾರೆ. ಇದೆಲ್ಲವನ್ನೂ ಅತುಲ ಸುಭಾಷ ಅವರು ಸಾಯುವ ಮುನ್ನ ತಮ್ಮ ೨೪ ಪುಟಗಳ ಹೇಳಿಕೆಯಲ್ಲಿ ಮತ್ತು ೮೦ ನಿಮಿಷಗಳ ವಿಡಿಯೋ ಟೇಪ್‌ನಲ್ಲಿ ದಾಖಲಿಸಿದ್ದಾರೆ. ಅದರಲ್ಲಿ ಅವರು ಹೀಗೆ ಹೇಳುತ್ತಾರೆ, ‘ತುಂಬಿದ ನ್ಯಾಯಾಲಯದಲ್ಲಿ ತನ್ನ ಪತ್ನಿ ತನ್ನೊಂದಿಗೆ ಯಾವ ರೀತಿ ಕ್ರೂರವಾಗಿ ವರ್ತಿಸುತ್ತಿದ್ದಳು, ಕಿರುಕುಳ ನೀಡುತ್ತಿದ್ದಳು ಎಂದು ಹೇಳುತ್ತಿರುವಾಗ, ನ್ಯಾಯಪೀಠದಲ್ಲಿ ಕುಳಿತಿದ್ದ ನ್ಯಾಯಾಧೀಶರು ಕುಲುಕುಲು ನಗುತ್ತಿದ್ದರು.’ ಇಂತಹ ನಿರ್ದಯ ಹೃದಯದ ನ್ಯಾಯಾಧೀಶರನ್ನು ಈ ಅಪರಾಧ ಪ್ರಕರಣದಲ್ಲಿ ಆರೋಪಿ ಯನ್ನಾಗಿ ಮಾಡಬೇಕೆಂದು ಅನಿಸುತ್ತದೆ. ಅರ್ಥಾತ್‌ ಈ ವಿಷಯವನ್ನು ಉಚ್ಚ ನ್ಯಾಯಾಲಯವು ಉತ್ತಮ ರೀತಿಯಲ್ಲಿ ನಿಭಾಯಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಪತ್ನಿಯ ಕ್ರೂರ ಚಿತ್ರಹಿಂಸೆ ಮತ್ತು ನ್ಯಾಯಾಧೀಶರ ಸಂವೇದನಾಶೂನ್ಯ ವರ್ತನೆಯಿಂದಾಗಿ ಉದಯೋನ್ಮುಖ ಎಂಜಿನಿಯರ್‌ ಒಬ್ಬರು ಪ್ರಾಣ ಕಳೆದುಕೊಂಡರು. ಈಗ ದಾಖಲಾಗಿರುವ ಕ್ರಿಮಿನಲ್‌ ಮೊಕದ್ದಮೆ ಸಿಂಘಾನಿಯಾ ಕುಟುಂಬದ ವಿರುದ್ಧ, ಅಂದರೆ ಅತುಲ ಸುಭಾಷ ಅವರ ಪತ್ನಿ ಮತ್ತು ಇತರರ ವಿರುದ್ಧವಾಗಿದೆ. ವಾಸ್ತವದಲ್ಲಿ, ವಿಷಯದ ಗಾಂಭೀರ್ಯವನ್ನು ಅರ್ಥಮಾಡಿಕೊಳ್ಳದೆ ಅತುಲ ಸುಭಾಷ ಅವರನ್ನು ಕ್ರೂರವಾಗಿ ಅಣಕಿಸಿದ ಸೆಷನ್ಸ್ ನ್ಯಾಯಾಧೀಶರ ವಿರುದ್ಧವೂ ಉಚ್ಚ ನ್ಯಾಯಾಲಯವು ಇಲಾಖಾ ವಿಚಾರಣೆ ನಡೆಸಿ ಅತುಲ ಸುಭಾಷರಿಗೆ ನ್ಯಾಯ ಒದಗಿಸಬೇಕು.

೪. ಜನಸಾಮಾನ್ಯರು ನ್ಯಾಯ ವ್ಯವಸ್ಥೆಯ ನಿಂದನೆಯ ಅರ್ಜಿಗಳ ಪರಿಣಾಮದ ಬಗ್ಗೆ ಭಯಪಡುತ್ತಾರೆ

ಒಟ್ಟಾರೆ, ಜನಸಾಮಾನ್ಯರು ನ್ಯಾಯ ವ್ಯವಸ್ಥೆಯ ಬಗ್ಗೆ ಮಾತನಾಡಲು ಧೈರ್ಯವನ್ನು ಮಾಡುವುದಿಲ್ಲ; ಏಕೆಂದರೆ ಅವರ ಬಳಿ ಇರುವ ನ್ಯಾಯಾಂಗ ನಿಂದನೆ ಅರ್ಜಿ ಎಂಬ ಅಸ್ತ್ರವು ಜನಸಾಮಾನ್ಯರಲ್ಲಿ ಭಯವನ್ನು ಹುಟ್ಟುಹಾಕುತ್ತದೆ. ಆದ್ದರಿಂದ, ಈ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಯ ಅಗತ್ಯವಿದೆ. ಇಂದಿಗೂ ನ್ಯಾಯಾಂಗವನ್ನು ನಂಬುವ ಸಮಾಜದ ಒಂದು ದೊಡ್ಡ ಭಾಗವಿದೆ. ಆದ್ದರಿಂದ, ಇಂತಹ ಕೆಲವು ದುಷ್ಟಪ್ರವೃತ್ತಿಗಳ ಜನರನ್ನು ಮನೆಯಲ್ಲಿಯೇ ಕುಳ್ಳಿರಿಸುವುದು ಸೂಕ್ತವಾಗಿದೆಯೆಂದು ಜನರಿಗೆ ಅನಿಸುತ್ತದೆ.’

(ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ (೧೬.೧೨.೨೦೨೪)