Allahabad High Court Order : ಮನುಸ್ಮೃತಿಯ ಪುಟಗಳನ್ನು ಹರಿದಿದ್ದಕ್ಕಾಗಿ ರಾಷ್ಟ್ರೀಯ ಜನತಾ ದಳದ ವಕ್ತೆ ಪ್ರಿಯಾಂಕಾ ಭಾರತಿ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದಾಗುವುದಿಲ್ಲ!  

ಅಲಹಾಬಾದ್ ಹೈಕೋರ್ಟ್ ನೀಮದ ಸ್ಪಷ್ಟನೆ

 

ಪ್ರಯಾಗರಾಜ (ಉತ್ತರ ಪ್ರದೇಶ): ವಾರ್ತಾ ವಾಹಿನಿಯ ಕಾರ್ಯಕ್ರಮದ ಸಮಯದಲ್ಲಿ ಮನುಸ್ಮೃತಿಯ ಪುಟಗಳನ್ನು ಹರಿದ ಕಾರಣ ರಾಷ್ಟ್ರೀಯ ವಕ್ತೆ ಜನತಾ ದಳದ ಪ್ರಿಯಾಂಕಾ ಭಾರತಿ ವಿರುದ್ಧ ದಾಖಲಾದ ಪ್ರಕರಣವನ್ನು ರದ್ದು ಮಾಡಲು ಅಲಹಾಬಾದ್ ಹೈಕೋರ್ಟ್ ನಿರಾಕರಿಸಿದೆ. ಹೈಕೋರ್ಟ್ ಇದನ್ನು ಗಂಭೀರ ಅಪರಾಧ ಎಂದು ಘೋಷಿಸಿದೆ. ಅಲೀಗಢನಲ್ಲಿ ಪ್ರಿಯಾಂಕಾ ಭಾರತಿ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆಯೇ, ಅವರು ಈ ಪ್ರಕರಣವನ್ನು ರದ್ದುಗೊಳಿಸಲು ಅರ್ಜಿ ಸಲ್ಲಿಸಿದ್ದರು.

1. ಹೈಕೋರ್ಟ್ ಹೇಳಿಕೆಯ ಪ್ರಕಾರ, ‘ಇಂಡಿಯಾ ಟಿವಿ’ ಮತ್ತು ‘ಟಿವಿ 9 ಭಾರತವರ್ಷ’ ಎಂಬ ನ್ಯೂಸ್ ಚಾನೆಲ್‌ಗಳಲ್ಲಿ ನಡೆದ ಚರ್ಚೆ ವೇಳೆ, ಪ್ರಿಯಾಂಕಾ ಭಾರತಿ ಅವರು ‘ಮನುಸ್ಮೃತಿ’ ಎಂಬ ಪವಿತ್ರ ಗ್ರಂಥದ ಪುಟಗಳನ್ನು ಹರಿದುಹಾಕುವುದು ಅವರ ಉದ್ದೇಶಿತ ನಿಲುವಿನ ಸಂಕೇತವಾಗಿದೆ ಮತ್ತು ಅದು ಯಾವುದೇ ನ್ಯಾಯಸಮ್ಮತ ಕಾರಣವಿಲ್ಲದೇ ಮಾಡಲಾಗಿದೆ. ಪ್ರಿಯಾಂಕಾ ಭಾರತಿ ಅವರು ಶಿಕ್ಷಣ ಪಡೆದ, ರಾಜಕೀಯ ಪಕ್ಷದ ಪ್ರಮುಖ ನಾಯಕಿಯಾಗಿದ್ದು, ಅವರು ಈ ಕಾರ್ಯ ಅಜಾಣತೆಯಿಂದ ಮಾಡಿದರೆಂಬುದನ್ನು ನಂಬಲು ಸಾಧ್ಯವಿಲ್ಲ. ನೇರ ಪ್ರಸಾರದಲ್ಲಿಯೇ ಪವಿತ್ರ ಗ್ರಂಥದ ಪುಟಗಳನ್ನು ಹರಿದಿರುವುದು ಗಂಭೀರ ಅಪರಾಧ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

2. ರಾಷ್ಟ್ರೀಯ ಸ್ವರ್ಣ ಪರಿಷತ್ ಸಂಘಟನೆಯ ಕಾರ್ಯದರ್ಶಿ ಭರತ್ ತಿವಾರಿ ಅವರು 2024 ಡಿಸೆಂಬರ್ 28ರಂದು ಅಲೀಗಢದಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದರು. ಭರತ್ ತಿವಾರಿ ಪ್ರಿಯಾಂಕಾ ಭಾರತಿ ಅವರ ಈ ಕೃತ್ಯದಿಂದ ಸಮಾಜದಲ್ಲಿ ದ್ವೇಷ ಹರಡಬಹುದು ಎಂದು ತಿಳಿಸಿದ್ದಾರೆ. ಇದಲ್ಲದೇ, ಇಂಡಿಯಾ ಟಿವಿ ಮಾಲೀಕರಾದ ರಜತ್ ಶರ್ಮಾ ಮತ್ತು ಟಿವಿ 9 ಮಾಲೀಕರಾದ ವರುಣ್ ದಾಸ್ ಅವರು ಟಿಆರ್‌ಪಿ ಹೆಚ್ಚಿಸಿಕೊಳ್ಳಲು ಈ ಕೃತಿಗೆ ಪ್ರೋತ್ಸಾಹ ಕೊಟ್ಟಿದ್ದಾರೆ ಎಂದು ದೂರಿದ್ದರು. ಈ ಕೃತ್ಯದಿಂದ ಅವರ ಧಾರ್ಮಿಕ ಭಾವನೆಗಳಿಗೆ ನೋವುಂಟಾಗಿದೆ ಎಂದು ಅವರು ದೂರಿದ್ದರು.

ಸಂಪಾದಕೀಯ ನಿಲುವು

  • ಮನುಸ್ಮೃತಿಯನ್ನು ಹರಿದುಹಾಕುವುದು ಅಥವಾ ಸುಡುವುದು ಈಗ ಜನಪ್ರಿಯತೆಗಾಗಿ ಮಾಡಲಾಗುತ್ತಿದೆ. ಆದರೆ, ಅಂಥವರು ನಿಜಕ್ಕೂ ಮನುಸ್ಮೃತಿಯ ಅಧ್ಯಯನ ಮಾಡಿಕೊಂಡಿರುತ್ತಾರಾ? ಎಂಬುದು ಚರ್ಚಿಸಬೇಕಾದ ವಿಷಯ.
  • ಇಂತಹವರಿಗೆ ಕಠಿಣ ಶಿಕ್ಷೆ ಆದ್ರೆ ಮಾತ್ರ ಇತರರು ಈ ರೀತಿಯ ಅಪರಾಧ ಕೃತ್ಯಗಳನ್ನು ಮಾಡುವುದನ್ನು ತಡೆಯಬಹುದು!