‘ಭಗವಾನ್ ಶ್ರೀರಾಮನು ಶೋಭಾಯಾತ್ರೆಯಲ್ಲಿ ಆಯುಧಗಳನ್ನು ತಗೆದುಕೊಂಡು ಹೋಗಲು ಹೇಳಿದ್ದಾನೆಯೇ ?’ (ಅಂತೆ) – ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ಗಲಭೆ ಕುರಿತು ಭಾಜಪರನ್ನು ಪ್ರಶ್ನಿಸಿದ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ !

ಹಿಂದುಗಳ ದೇವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವ ಮುಸಲ್ಮಾನ ಪ್ರೇಮಿ ಮಮತಾ ಬ್ಯಾನರ್ಜಿ !

ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ಕೋಲಕಾತಾ (ಬಂಗಾಲ) – ನಾನು ಪ್ರತಿ ಕ್ಷಣವೂ ಎಚ್ಚರವಾಗಿರಬೇಕು. ಭಾಜಪದವರು ಎಲ್ಲಿ ಬೇಕಾದರೂ ಗಲಭೆ ಸೃಷ್ಟಿಸಬಹುದು. ಭಹವಾನ ಶ್ರೀ ರಾಮನು ಶೋಭಾಯಾತ್ರೆಯಲ್ಲಿ ಆಯುಧಗಳನ್ನು ತೆಗೆದುಕೊಂಡು ಹೋಗಲು ಹೇಳಿದ್ದಾನೆಯೇ ?” ಎಂದು ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಒಂದು ವಾರ್ತಾವಾಹಿನಿಯೊಂಗಿದೆ ಮಾತನಾಡುತ್ತಿರುವಾಗ ಹುರುಳಿಲ್ಲದಿರುವ ಪ್ರಶ್ನೆ ಕೇಳಿದ್ದಾರೆ. ರಾಜ್ಯದಲ್ಲಿ ರಾಮನವಮಿ ಸಂದರ್ಭದಲ್ಲಿ ಭಾಜಪ ಮತ್ತು ಹಿಂದೂ ಸಂಘಟನೆಗಳು ವಿವಿಧೆಡೆ ನಡೆಸಿದ ಶೋಭಾಯಾತ್ರೆಗಳ ಮೇಲೆ ದಾಳಿ ನಡೆಸಿದ ಬಗ್ಗೆ ಅವರು ಮಾತನಾಡುತ್ತಿದ್ದರು. (ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿರುವ ಮಮತಾ ಬ್ಯಾನರ್ಜಿಯವರ ಸರಕಾರ ವಿಸರ್ಜಿಸುವುದೆ ಯೋಗ್ಯವಿದೆ, ಎಂಬುದು ಈ ಹೇಳಿಕೆ ಸ್ಪಷ್ಟಪಡಿಸುತ್ತದೆ ! – ಸಂಪಾದಕರು)

೧. ಮಮತಾ ಬ್ಯಾನರ್ಜಿ ತಮ್ಮ ಮಾತನ್ನು ಮುಂದುವರೆಸುತ್ತಾ, ಇದೊಂದು ರೀತಿಯ ಹಿಂಸೆ. ನಾವು ಹಿಂಸೆ ಮಾಡುವುದಿಲ್ಲ. ಬಂಗಾಲದ ನಾಗರಿಕರು ಹಿಂಸೆಯನ್ನು ಇಷ್ಟಪಡುವುದಿಲ್ಲ. ಅವರು (ಭಾಜಪದವರು) ಹೊರಗಿನಿಂದ ಗೂಂಡಾಗಳನ್ನು ಬಂಗಾಲಕ್ಕೆ ಕರೆತಂದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

೨. ಭಾಜಪದ ರಾಜ್ಯಾಧ್ಯಕ್ಷ ಸುಕಾಂತ್ ಮಜುಂದಾರ್ ಇವರು ಈ ಹಿಂದೆ ‘ಮಮತಾ ಬ್ಯಾನರ್ಜಿ ಎಲ್ಲರ ಮುಖ್ಯಮಂತ್ರಿಯಲ್ಲ, ಒಂದೇ ಧರ್ಮದ ಮುಖ್ಯಮಂತ್ರಿಯಾಗಿದ್ದಾರೆ,’ ಎಂದು ಆರೋಪಿಸಿದ್ದರು. ಮಜುಂದಾರ್ ಅವರು ಹುಗಳಿಯ ಶ್ರೀ ರಾಮಪುರದಲ್ಲಿ ಧಾರಣಿ ಆಂದೋಲನ ಆಯೋಜಿಸಿದ್ದರು; ಆದರೆ ಆಡಳಿತದವರು ಅವಕಾಶ ನೀಡಲಿಲ್ಲ.

ಸಂಪಾದಕರ ನಿಲುವು

“ರಂಜಾನ್ ಸಮಯದಲ್ಲಿ ಮಸೀದಿಗಳಿಂದ ಹಿಂದೂಗಳ ಮೇಲೆ ದಾಳಿ ಮಾಡಲು ಮತಾಂಧ ಮುಸ್ಲಿಮರಿಗೆ ಯಾರು ಹೇಳಿದ್ದರು ?”, ಈ ಬಗ್ಗೆ ಮಮತಾ ಬ್ಯಾನರ್ಜಿ ಏಕೆ ತನಿಖೆ ನಡೆಸುತ್ತಿಲ್ಲ ?

ಯಾವಾಗಲು ‘ಶುಕ್ರವಾರ ನಮಾಜ್ ನಂತರ ಹಿಂದೂಗಳ ಮೇಲೆ ಆಗುವ ದಾಳಿ ಯಾರು ಹೇಳಿದರೆಂದು ಆಗುತ್ತವೆ ?’, ಇದರ ತನಿಖೆ ಯಾರು ನಡೆಸುವರು ?

ಶೋಭಾಯಾತ್ರೆಯಲ್ಲಿ ಹಿಂದೂಗಳು ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಹೋಗಿದ್ದರೆ, ಅವರಿಗೆ ಥಳಿಸುತ್ತಿರಲಿಲ್ಲ ಇದು ಎಲ್ಲರಿಗೂ ತಿಳಿದಿದ್ದರೂ ಮಮತಾ ಬ್ಯಾನರ್ಜಿ ಅವರು ಉದ್ದೇಶಪೂರ್ವಕವಾಗಿ ಗಲಭೆಗಳಿಗೆ ಹಿಂದೂಗಳ ಮೇಲೆ ಆರೋಪ ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಿ !