ನವದೆಹಲಿ – ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸುವ ನಿರೀಕ್ಷೆಯಿದೆ. ಈ ಕಾಯಿದೆಯಲ್ಲಿ ಅಗತ್ಯ ಬದಲಾವಣೆಗಳನ್ನು ಸೂಚಿಸಲು ಜಂಟಿ ಸಂಸದೀಯ ಸಮಿತಿಯು ಆಳವಾದ ಚರ್ಚೆಯಲ್ಲಿದೆ. ಈ ಮಸೂದೆಯಲ್ಲಿ ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡದೆಯೇ ಮೂಲ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗುವ ನಿರೀಕ್ಷೆಯಿದೆ.
4 ಪ್ರಮುಖ ಸುಧಾರಣೆಗಳಿಗೆ ವಿರೋಧವಿದೆ
ಈ ಮಸೂದೆಯಲ್ಲಿ 48 ತಿದ್ದುಪಡಿಗಳನ್ನು ಸೂಚಿಸಲಾಗಿದೆ. ಈ ಪ್ರಮುಖ 4 ಸುಧಾರಣೆಗಳನ್ನು ಸಮಿತಿ ಸಭೆಗಳಲ್ಲಿ ‘ಇಂಡಿಯಾ’ ಮೈತ್ರಿಕೂಟದ ಸದಸ್ಯರು ಬಲವಾಗಿ ವಿರೋಧಿಸಿದ್ದಾರೆ. ಪ್ರಮುಖ ಸುಧಾರಣೆಗಳೆಂದರೆ ವಕ್ಫ್ ಬೋರ್ಡ್‌ಗಳಲ್ಲಿ ಮುಸ್ಲಿಮೇತರ ಸದಸ್ಯರ ನೇಮಕ, ವಕ್ಫ್ ಬೋರ್ಡ್‌ಗಳಲ್ಲಿ ಚುನಾವಣೆಗೆ ಬದಲಾಗಿ ನೇಮಕಾತಿ, ವಕ್ಫ್ ಜಮೀನುಗಳನ್ನು ನಿರ್ಧರಿಸಲು ಕಲೆಕ್ಟರ್‌ಗಳಿಗೆ ಅಧಿಕಾರವನ್ನು ನೀಡುವುದು ಮತ್ತು ವಕ್ಫ್ ಬೋರ್ಡ್‌ಗಳ ಭೂ ನೋಂದಣಿಗಳ ಹಿಂದಿನ ಪರಿಶೀಲನೆ ಇವುಗಳಾಗಿವೆ.
ವಕ್ಫ್ ಬೋರ್ಡ್ ವಿಸರ್ಜನೆ ಸಾಧ್ಯತೆ ಇಲ್ಲ !
ಜಂಟಿ ಸಂಸದೀಯ ಸಮಿತಿಯ ಕೆಲವು ಸದಸ್ಯರು ಹಾಗೂ ಸಭೆಯಲ್ಲಿ ಸಮಸ್ಯೆಗಳನ್ನು ಪ್ರಸ್ತಾಪಿಸಿದ ಹಲವರು ವಕ್ಫ್ ಬೋರ್ಡ್ ವಿಸರ್ಜನೆಗೆ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ; ಆದರೆ ಸಮಿತಿಯಲ್ಲಿ ಈ ಬಗ್ಗೆ ವಿವರವಾದ ಚರ್ಚೆ ನಡೆದಿಲ್ಲ. ಅಲ್ಲದೆ, ಈ ಸಲಹೆಯನ್ನು ಕೇಂದ್ರ ಸರಕಾರದ ಮಟ್ಟದಲ್ಲಿ ಗಂಭೀರವಾಗಿ ಪರಿಗಣಿಸಲಾಗಿಲ್ಲ. ಹಾಗಾಗಿ ಸಮಿತಿಯ ವರದಿಯಲ್ಲಿ ವಕ್ಫ್ ಬೋರ್ಡ್ ವಿಸರ್ಜನೆಗೆ ಶಿಫಾರಸು ಮಾಡುವ ಸಾಧ್ಯತೆ ಇಲ್ಲ.