ಬೆಂಗಳೂರಿನಲ್ಲಿ ಸಿದ್ಧಗಂಗಾ ಸ್ವಾಮೀಜಿಯವರ ಪ್ರತಿಮೆ ವಿರೂಪ

ಯೇಸು ಕನಸಿನಲ್ಲಿ ಹೇಳಿದ್ದರಿಂದ ಧ್ವಂಸಗೊಳಿಸಿದೆ ಆರೋಪಿಯ ದಾವೆ

ಬೆಂಗಳೂರು – ಗಿರಿನಗರ ವ್ಯಾಪ್ತಿಯ ವೀರಭದ್ರನಗರ ಬಸ್ ನಿಲ್ದಾಣದ ಬಳಿ ಇರುವ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಯವರ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ. ಸ್ವಾಮೀಜಿಯವರ ಪ್ರತಿಮೆಯ ಹಣೆಯ ಭಾಗ ಮುರಿದು ವಿರೂಪಗೊಂಡಿದೆ. ಈ ಪ್ರಕರಣದಲ್ಲಿ ಶಿವು ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಅವನು ವಿಚಾರಣೆಯಲ್ಲಿ, “ಯೇಸು ಕನಸಿನಲ್ಲಿ ಬಂದು ಹೀಗೆ ಮಾಡಲು ಕೇಳಿದರು” ಎಂದು ಹೇಳಿದ್ದಾನೆ. ಶಿವು ಮತ್ತು ಅವನ ಕುಟುಂಬವು ಕ್ರೈಸ್ತ ಧರ್ಮ, ಕ್ರೈಸ್ತ ಸಂಪ್ರದಾಯ ಮತ್ತು ಯೇಸು ಭಕ್ತಿಯ ಕಡೆಗೆ ವಿಶೇಷ ಒಲವನ್ನು ಹೊಂದಿದ್ದಾರೆಂದು ಸಹ ಬಹಿರಂಗವಾಗಿದೆ.

ಈ ಹಿಂದೆಯೂ ಈ ವ್ಯಕ್ತಿ ಬೈದರಹಳ್ಳಿ ಪ್ರದೇಶದಲ್ಲಿ ಹಿಂದೂ ದೇವತೆಯ ಚಿತ್ರವಿರುವ ಬೋರ್ಡ್ ಮೇಲೆ ಕಲ್ಲು ತೂರಾಟ ನಡೆಸಿರುವುದು ಬೆಳಕಿಗೆ ಬಂದಿತ್ತು; ಆದರೆ ಆಗ ಯಾವುದೇ ದೂರು ದಾಖಲಾಗಿರಲಿಲ್ಲ. (ಹಿಂದೂ ದ್ವೇಷಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳದ ಪರಿಣಾಮ! – ಸಂಪಾದಕರು)

(ಈ ಮೇಲಿನ ಚಿತ್ರ ಪ್ರಕಾಶಿಸುವುದರ ಉದ್ದೇಶ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ತರುವುದಾಗಿರದೇ ನಿಜ ಸ್ಥಿತಿ ತಿಳಿಸುವುದಾಗಿದೆ – ಸಂಪಾದಕರು)

ಸಂಪಾದಕೀಯ ನಿಲುವು

ಪ್ರೀತಿ ಮತ್ತು ಶಾಂತಿಯನ್ನು ಬೋಧಿಸುವ ಕ್ರೈಸ್ತ ಪಾದ್ರಿಗಳು ಈ ಬಗ್ಗೆ ಏನು ಹೇಳುತ್ತಾರೆ?