ಹಿಂದೂ ಜನಜಾಗೃತಿ ಸಮಿತಿ ಹಾಗೂ ಅನೇಕ ಹಿಂದುತ್ವನಿಷ್ಠ ಸಂಘಟನೆಗಳ ವಿರೋಧದ ಪರಿಣಾಮ
ಹಾಸನ – ಬೇಲೂರಿನ ವಿಶ್ವವಿಖ್ಯಾತ ಚನ್ನಕೇಶವ ದೇವಸ್ಥಾನದ ರಥೋತ್ಸವದ ಪ್ರಾರಂಭದಲ್ಲಿ ಕುರಾನ್ ಪಠಿಸುವ ಕೆಟ್ಟ ಪದ್ಧತಿ ನಡೆದುಕೊಂಡು ಬಂದಿತ್ತು. ಹಿಂದೂ ಜನಜಾಗೃತಿ ಸಮಿತಿಸಹಿತ ಅನೇಕ ಹಿಂದುತ್ವನಿಷ್ಠ ಸಂಘಟನೆಗಳು ಅದನ್ನು ವಿರೋಧಿಸಿದ ಬಳಿಕ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು `ಕುರಾನ್ ಪಠಣಕ್ಕೆ ಅವಕಾಶ ಇಲ್ಲ’, ಎಂದು ಆದೇಶ ಹೊರಡಿಸಿದ್ದರು. ತದನಂತರ ಈ ವರ್ಷ ಎಪ್ರಿಲ್ 4 ರಂದು ನಡೆದ ರಥೋತ್ಸವದ ಪ್ರಾರಂಭದಲ್ಲಿ ಕುರಾನ್ ಪಠಣ ನಡೆದಿಲ್ಲ.
ಅ. `ಎಪ್ರಿಲ್ 4 ರಂದು ಬೆಳಿಗ್ಗೆ ನಡೆಯುವ ರಥೋತ್ಸವದ ಸಮಯದಲ್ಲಿ ರಥದ ಮುಂದೆ ಕುರಾನ್ ಪಠಣ ಮಾಡುವಂತಿಲ್ಲ. ಮೇದೂರುನ ಖಾಜಿಯವರು (ಮುಸಲ್ಮಾನ ಧರ್ಮ ಶಾಸ್ತ್ರದಂತೆ ತೀರ್ಪು ನೀಡುವ ನ್ಯಾಯಾಧೀಶರು) ಬಂದು ಕೇವಲ ಗೌರವವನ್ನು ಸ್ವೀಕರಿಸಬೇಕು’, ಎಂದು ಧರ್ಮಾದಾಯ ಇಲಾಖೆಯ ಆಯುಕ್ತರು ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿತ್ತು. ಆದೇಶದಂತೆ ಖಾಜಿಯವರು ದೇವಸ್ಥಾನದ ಗೋಡೆಯ ಹತ್ತಿರ ನಿಂತು ಚನ್ನಕೇಶವನಿಗೆ ವಂದಿಸಿ ಪ್ರಾರ್ಥನೆ ಸಲ್ಲಿಸಿದರು.
ಆ. ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ. ನಾರಾಯಣ ಸ್ವಾಮಿಯವರು, ”ಖಾಜಿಯವರು ಕುರಾನ ಪಠಣ ಮಾಡುವುದಿಲ್ಲವೆಂದು ನಮಗೆ ಬರೆದು ಕೊಟ್ಟಿದ್ದರು. ಎಂದು ಹೇಳಿದರು. ಚನ್ನಕೇಶವನಿಗೆ ವಂದಿಸಿದ ಬಳಿಕ ಖಾಜಿಯವರನ್ನು ಭದ್ರತಾ ಸಿಬ್ಬಂದಿಯವರು ಸುರಕ್ಷಿತವಾಗಿ ವಾಹನದಲ್ಲಿ ಕಳುಹಿಸಿಕೊಟ್ಟರು.”
ಇ. ಕೆಲವು ವರ್ಷಗಳಿಂದ ರಥದ ಎದುರಿಗೆ ಕುರಾನ್ ಪಠಿಸಿದ ಬಳಿಕ ರಥೋತ್ಸವವನ್ನು ಪ್ರಾರಂಭಿಸುವ ಕೆಟ್ಟ ಪದ್ಧತಿ ನಡೆದುಕೊಂಡು ಬಂದಿತ್ತು. ಹಿಂದುತ್ವನಿಷ್ಠ ಸಂಘಟನೆಗಳು ವಿರೋಧಿಸಿ ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯು ಪಂಡಿತರನ್ನು ಕರೆಸಿ ಈ ವಿಷಯದಲ್ಲಿ ಮಾಹಿತಿಯನ್ನು ಸಂಗ್ರಹಿಸಿತು. ಪಂಡಿತರು `ದೇವಾಲಯದ ರಥದ ಎದುರಿಗೆ ಕುರಾನ್ ಪಠಣ ಮಾಡಲು ಬರುವುದಿಲ್ಲ’ ಎಂದು ಹೇಳಿದರು.
ಈ. ಧರ್ಮಾದಾಯ ಇಲಾಖೆಯ ಆಯುಕ್ತರು ಕುರಾನ್ ಪಠಣಕ್ಕೆ ಅವಕಾಶವಿಲ್ಲ ಎಂದು ಆದೇಶ ಹೊರಡಿಸಿದ ಬಳಿಕ ರಥೋತ್ಸವದ ಸ್ಥಳದಲ್ಲಿ 400 ಕ್ಕಿಂತ ಹೆಚ್ಚು ಪೊಲೀಸರು, ಅರೆ ಸೈನಿಕ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.
ಬೇಲೂರಿನ ರಥೋತ್ಸವದ ವೇಳೆ ಕುರಾನ್ ಪಠಣ ಮಾಡಬೇಕೆಂದು ಎಲ್ಲೂ ಇಲ್ಲ: ರಾಜ್ಯ ಪುರಾತತ್ವ ಇಲಾಖೆ https://t.co/6PNZXtxHfB #ArchaeologyDepartment #Belur #ChennakeshavaTemple #Quran
— PublicTV (@publictvnews) March 30, 2023