ಇಸ್ಲಾಮೀ ರಾಜ್ಯಾಡಳಿತದ ಸಮಯದಲ್ಲಿ ರಾಮನಾಮದ ಉಪಯೋಗ

ಶ್ರೀ. ದುರ್ಗೇಶ ಜಯವಂತ ಪರೂಳಕರ

ಶ್ರೀರಾಮರು ಸಂಪೂರ್ಣ ಹಿಂದೂ ಸಮಾಜದ ಆರಾಧ್ಯ ದೇವತೆಯಾಗಿದ್ದಾರೆ, ಆದ್ದರಿಂದ ಸ್ವಾತಂತ್ರ್ಯವೀರ ಸಾವರ್ಕರರು ಹೇಳುತ್ತಾರೆ, ‘ಯಾವ ದಿನ ಹಿಂದೂ ಸಮಾಜ ಪ್ರಭು ಶ್ರೀರಾಮರನ್ನು ಮರೆಯುವುದೋ, ಆ ದಿನ ಹಿಂದೂಸ್ಥಾನಕ್ಕೆ ‘ರಾಮ’ ಎಂದು ಹೇಳಬೇಕಾಗುವುದು.’ ಇದರ ಅರ್ಥ ಯಾವ ದಿನ ಹಿಂದೂ ಸಮಾಜಕ್ಕೆ ಶ್ರೀರಾಮರ ವಿಸ್ಮರಣೆಯಾಗುವುದೋ, ಆ ದಿನ ಹಿಂದೂಸ್ಥಾನ ‘ರಾಷ್ಟ್ರವೆಂದು ಈ ಭೂಮಿಯ ಮೇಲೆ ಅಸ್ತಿತ್ವದಲ್ಲಿರಲಾರದು. ರಾಮ ರಾಜ್ಯವು ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲ, ಸಂಪೂರ್ಣ ಜಗತ್ತಿನಲ್ಲಿ ಎಲ್ಲಕ್ಕಿಂತ ಆದರ್ಶ ರಾಜ್ಯವ್ಯವಸ್ಥೆ ಇರುವ ರಾಜ್ಯವೆಂದು ಮನ್ನಣೆಯನ್ನು ಪಡೆದಿದೆ. ಈ ರಾಜ್ಯದಲ್ಲಿನ ಮಾನವ ಸಮಾಜ ಸ್ವಯಂವಾಡಳಿತ ಸಮಾಜವಾಗಿತ್ತು. ಶ್ರೀರಾಮರು ನ್ಯಾಯನಿಷ್ಠ, ಧರ್ಮನಿಷ್ಠ, ಸಂಸ್ಕೃತಿನಿಷ್ಠ ಮತ್ತು ನೀತಿಮಾನ ಮರ್ಯಾದಾ ಪುರುಷೋತ್ತಮರೆಂದು ಎಲ್ಲರಿಗೂ ವಂದನೀಯರಾಗಿದ್ದಾರೆ. ನೈತಿಕತೆ ಉದಯವಾಯಿತೆಂದರೆ ವಿಕೃತಿಯ ಅಸ್ತವಾಗಿ ಸಂಸ್ಕೃತಿಯ ದೀಪಾವಳಿ ಆರಂಭವಾಗುತ್ತದೆ. ಅದಕ್ಕಾಗಿಯೇ ಪ್ರಭು ಶ್ರೀರಾಮರ ಸ್ಮರಣೆಯಿದ್ದರೆ ಹಿಂದೂ ಸಮಾಜ ರಾಜಕೀಯ ಪಾರತಂತ್ರ್ಯದಲ್ಲಿ ಹೋದರೂ ‘ಹಿಂದೂ ರಾಷ್ಟ್ರವೆಂದು ಜೀವಂತ ಇರುವುದು. ಕಳೆದ ಸಂಚಿಕೆಯಲ್ಲಿ ನಾವು ‘ಇಸ್ಲಾಮ್ ಅಂದರೆ ಅರಬೀ ಸಮಾಜದ ಅತೃಪ್ತ ಬಯಕೆಯ ಕ್ರೂರ ಆವಿಷ್ಕಾರ, ಪ್ರಭು ಶ್ರೀರಾಮರಿಂದಾಗಿಯೇ ಹಿಂದೂಸ್ಥಾನ ಇಸ್ಲಾಮೀ ರಾಷ್ಟ್ರವಾಗಿ ರೂಪಾಂತರವಾಗದಿರುವುದು, ಹಿಂದೂ ಧರ್ಮ ಮತ್ತು ಹಿಂದೂ ರಾಷ್ಟ್ರವನ್ನು ಜೀವಂತವಾಗಿಡಲು ಸಮಥರು ‘ದಾಸಬೋಧ’ದಿಂದ ಮಾಡಿದ ಮಾರ್ಗದರ್ಶನದ ವಿಷಯವನ್ನು ಓದಿದೆವು. ಈ ವಾರದ ಸಂಚಿಕೆಯಲ್ಲಿ ಈ ಲೇಖನದ ಕೊನೆಯ ಭಾಗವನ್ನು ಕೊಡುತ್ತಿದ್ದೇವೆ.

(ಮುಂದುವರಿದ ಭಾಗ)

ಈ ಲೇಖನದ ಹಿಂದಿನ ಭಾಗವನ್ನು ಓದಲು ಈ ಲಿಂಕಿನ ಮೇಲೆ ಕ್ಲಿಕ್ ಮಾಡಿ : https://sanatanprabhat.org/kannada/84317.html

೬. ಹಿಂದವೀ ಸ್ವರಾಜ್ಯ ಸ್ಥಾಪನೆಯಾದ ನಂತರ ಸಮರ್ಥರು ಮಾಡಿದ ಉದ್ಘೋಷಗಳು

ರಾಜಮಾತಾ ಜೀಜಾಯಿಯವರು ಶಿವಾಜಿ ಮಹಾರಾಜರಿಂದ ರೋಹಿಡೇಶ್ವರನ ಮಂದಿರದಲ್ಲಿ ಹಿಂದವೀ ಸ್ವರಾಜ್ಯ ಸ್ಥಾಪನೆಯ ಪ್ರತಿಜ್ಞೆಯನ್ನು ಮಾಡಿಸಿದರು. ಛತ್ರಪತಿ ಶಿವಾಜಿ ಮಹಾರಾಜರು ಅವರ ಕಾಲದಲ್ಲಿನ ಎಲ್ಲ ಇಸ್ಲಾಮೀ ಆಡಳಿತ ಗಳನ್ನು ಮೆಟ್ಟಿನಿಂತು ‘ಹಿಂದವೀ ಸ್ವರಾಜ್ಯದ ಸ್ಥಾಪನೆ’ಯನ್ನು ಮಾಡಿದರು. ಆಗ ಸಮರ್ಥ ರಾಮದಾಸಸ್ವಾಮಿಗಳು ಮುಂದಿನಂತೆ ಹೇಳಿದರು ಪಾಪಿ ಔರಂಗಜೇಬ ನಾಶವಾದನು. ಮ್ಲೇಂಚ್ಛರ ಸಂಹಾರ ವಾಯಿತು. ಅವನಿಂದ ಭಗ್ನವಾದ ಕ್ಷೇತ್ರಗಳನ್ನು ಪುನಃ ನಿರ್ಮಿಸ ಲಾಯಿತು. ಈ ಭೂಮಿ ಪುನಃ ‘ಆನಂದವನ’ವಾಯಿತು. ನೀಚ, ಪಾತಕೀ, ಭೇದವನ್ನು ನಿರ್ಮಾಣ ಮಾಡುವವರು, ದೇವತೆಗಳ ಮೂರ್ತಿಗಳನ್ನು ಒಡೆದು ಎಸೆಯುವ ಜನರು ನಾಶವಾಗಿ ಈ ಭೂಮಿಯು ಪುನಃ ‘ಆನಂದವನ’ವಾಯಿತು. ಈ ದೇಶಕ್ಕೆ ತೊಂದರೆಗಳನ್ನು ಕೊಡುವ ಜನರು ಇಲ್ಲವಾದರು ಮತ್ತು ಈ ಪೃಥ್ವಿಯು ನಿರ್ಮಲವಾಯಿತು. ಆದ್ದರಿಂದ ಈ ಭೂಮಿಯು ಪುನಃ ‘ಆನಂದವನ’ವಾಯಿತು. ಸ್ನಾನಸಂಧ್ಯಾ, ಜಪತಪ ಇತ್ಯಾದಿ ಅನುಷ್ಠಾನಗಳನ್ನು ಮಾಡಲು ಈಗ ಅನುಕೂಲ ವಾತಾವರಣ ನಿರ್ಮಾಣವಾಯಿತು. ಈ ಭೂಮಿಯು ಪುನಃ ‘ಆನಂದವನ’ವಾಯಿತು. ಬಂಡುಕೋರ, ಪಾಖಂಡಿ (ನಾಸ್ತಿಕ ವೃತ್ತಿ) ನಷ್ಟವಾಯಿತು ಮತ್ತು ಶುದ್ಧ ಅಧ್ಯಾತ್ಮ ಹೆಚ್ಚಾಯಿತು. ಎಲ್ಲರಿಗೂ ‘ಶ್ರೀರಾಮನೇ ಕರ್ತಾ ಮತ್ತು ಶ್ರೀರಾಮನೇ ಭೋಕ್ತಾ ಆಗಿದ್ದಾನೆ’, ಎಂಬ ಅರಿವು ಮೂಡಿತು. ಈ ಭೂಮಿಯು ಪುನಃ ‘ಆನಂದವನ’ವಾಯಿತು.

೭. ಜನರಲ್ಲಿ ಶ್ರೀರಾಮನ ನಾಮ ಮತ್ತು ಚರಿತ್ರೆಯ ಆಸಕ್ತಿ ಮೂಡಿಸಲು ಸಂತ ತುಳಸೀದಾಸರು ಮಾಡಿದ ಕಾರ್ಯ

ಅಕ್ಬರನು ಅನೇಕ ಹಿಂದೂಗಳನ್ನು ಗುಲಾಮರನ್ನಾಗಿ ಮಾಡಿ ಅಸಂಖ್ಯ ಸ್ತ್ರೀಯರನ್ನು ತನ್ನ ಜನಾನಖಾನೆಯಲ್ಲಿ ಸೇರಿಸಿದನು. ಅವನ ಈ ಅತ್ಯಾಚಾರದಿಂದ ಹಿಂದೂಗಳಲ್ಲಿನ ಪ್ರತಿಕಾರಶಕ್ತಿ ನಾಶವಾಗಬಾರದೆಂದು, ಸಂಸ್ಕೃತಿಯ ಮೇಲಿನ ನಿಷ್ಠೆಯ ಬಲ ಕಡಿಮೆಯಾಗಬಾರದೆಂದು, ಹಿಂದೂ ಧರ್ಮ ಮತ್ತು ಹಿಂದೂ ರಾಷ್ಟ್ರ ಪಾರತಂತ್ರ್ಯದ ಗುಲಾಮಗಿರಿಯಲ್ಲಿ ಲುಪ್ತವಾಗಬಾರದೆಂದು, ಆ ಕಾಲದಲ್ಲಿನ ಸಂತರು ‘ನಾವು ಪ್ರಭು ಶ್ರೀರಾಮನ ವಾರಸುದಾರರಾಗಿದ್ದು ನಮ್ಮ ಸಂಸ್ಕೃತಿ, ನಮ್ಮ ರಾಷ್ಟ್ರ ಮತ್ತು ಧರ್ಮವನ್ನು ರಕ್ಷಿಸಲು ನಮ್ಮ ಮಾನಸಿಕ ಮತ್ತು ಭಾವನಿಕ ಶಕ್ತಿಯನ್ನು ಹೆಚ್ಚಿಸಬೇಕು’, ಎಂಬ ಬೋಧನೆಯನ್ನು ನೀಡಲು ಜೀವದ ಹಂಗಿಲ್ಲದೆ ಶ್ರಮಿಸುತ್ತಿದ್ದರು. ಅದಕ್ಕಾಗಿಯೇ ಪ್ರಭು ಶ್ರೀರಾಮರ ಚರಿತ್ರೆಯನ್ನು ಜನರ ಮುಂದೆ ಮಂಡಿಸುತ್ತಿದ್ದರು. ಅಕ್ಬರನ ಕಾಲದಲ್ಲಿ ಸಂತ ತುಳಸೀದಾಸರು ಶ್ರೀರಾಮರ ನಾಮ ಮತ್ತು ಚರಿತ್ರೆಯ ಬಗ್ಗೆ ಜನರಲ್ಲಿ ಆಸಕ್ತಿ ಮೂಡಿಸಲು ದ್ವಿಪದಿಯಂತಹ, ಚತುಷ್ಪದಿಯಂತಹ ಅನೇಕ ಸಾಹಿತ್ಯಗಳನ್ನು ಉಪಯೋಗಿಸಿದರು. ಪ್ರಭು ಶ್ರೀರಾಮರ ಚರಿತ್ರೆಯು ಮಾನವನ ಪ್ರತಿಕೂಲತೆಯನ್ನು ದೂರಗೊಳಿಸಲು ಪ್ರೇರಣೆ ನೀಡುವುದಾಗಿದೆ. ಅಷ್ಟು ಮಾತ್ರವಲ್ಲ, ಅದರೊಂದಿಗೆ ಪರಿಸ್ಥಿತಿಯನ್ನು ಎದುರಿಸಿ ದುಷ್ಟರ ಮುಂದೆ ತಲೆಬಾಗದಿರುವ ಬೋಧನೆಯನ್ನು ನೀಡುವುದಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡೇ ಸಂತ ತುಳಸೀದಾಸರು ರಾಮನಾಮದ ಮಹಿಮೆಯನ್ನು ಹಾಡುತ್ತ ಜನರಿಗೆ ಶ್ರೀರಾಮರ ಪರಾಕ್ರಮದ ಸ್ಮರಣೆಯನ್ನು ಮಾಡಿಕೊಟ್ಟರು.

೮. ಪ್ರಭು ಶ್ರೀರಾಮರು ರಾಕ್ಷಸೀ ವೃತ್ತಿಯನ್ನು ದುರ್ಲಕ್ಷಿಸದೆ ಅದಕ್ಕಾಗಿ ಹಾಕಿ ಕೊಟ್ಟ ಪಾಠಗಳು

ಇಂದ್ರನ ಮಗ ಜಯಂತನು ಕಾಗೆಯ ರೂಪದಲ್ಲಿ ಬಂದು ಅವನು ಕಪಟ ಕಾರಸ್ತಾನವನ್ನು ಮಾಡಿದನೆಂದು ಪ್ರಭು ಶ್ರೀರಾಮರು, ಅವನಿಗೆ ಪಾಠ ಕಲಿಸಿದರು. ಇಂದ್ರನ ಮಗನೆಂದು ಅವನನ್ನು ಬಿಡಲಿಲ್ಲ. ಶೂರ್ಪನಖೀ ಸ್ತ್ರೀ ಆಗಿದ್ದಾಳೆಂದು ಅವಳ ರಾಕ್ಷಸೀ ವೃತ್ತಿಯನ್ನು ಶ್ರೀರಾಮರು ದುರ್ಲಕ್ಷಿಸಲಿಲ್ಲ. ವಿಶ್ವಾಮಿತ್ರರು ಕೂಡ ‘ತ್ರಾಟಿಕೆ’ ಸ್ತ್ರೀ ಆಗಿದ್ದಾಳೆಂದು ಅವಳ ರಾಕ್ಷಸೀ ವೃತ್ತಿಯನ್ನು ದುರ್ಲಕ್ಷ ಮಾಡಲು ಬರುವುದಿಲ್ಲ, ಎಂಬ ಬೋಧನೆಯನ್ನು ಪ್ರಭು ಶ್ರೀರಾಮರಿಗೆ ನೀಡಿದ್ದರು. ಈ ಬೋಧನೆಯನ್ನು ಗಮನದಲ್ಲಿಟ್ಟುಕೊಂಡೇ ಶ್ರೀರಾಮರು ಶೂರ್ಪನಖಿಗೆ ಯಾವುದೇ ರಿಯಾಯಿತಿ ನೀಡಲಿಲ್ಲ. ಅವಳ ಹೃದಯ ಪರಿವರ್ತನೆ ಮಾಡಲಿಲ್ಲ. ಈ ರೀತಿಯಲ್ಲಿ ಶ್ರೀರಾಮರು ಖರ, ದೂಷಣ, ತ್ರಿಶಿರಾ ಇಂತಹ ಅನೇಕ ರಾಕ್ಷಸರನ್ನು ವಧಿಸಿ ಸರ್ವಸಾಮಾನ್ಯ ಜನತೆ, ಸಜ್ಜನರು, ಋಷಿಗಳು ಮತ್ತು ಸಾಧು ಸಂತರನ್ನು ಭಯಮುಕ್ತಗೊಳಿಸಿ, ಸುರಕ್ಷಿತ ಜೀವನ ನಡೆಸುವಂತೆ ಅನುಕೂಲ ಪರಿಸ್ಥಿತಿಯನ್ನು ನಿರ್ಮಿಸಿದರು. ಇಂತಹ ಪ್ರಭು ಶ್ರೀರಾಮರ ಭೂಮಿಯನ್ನು ಪರದಾಸ್ಯದಲ್ಲಿಡುವುದು ಮತ್ತು ಆ ಧರ್ಮನಾಶವಾಗುವಂತೆ ವರ್ತಿಸುವುದು ಪಾಪವಾಗಿದೆ. ಅದಕ್ಕಾಗಿ ‘ರಾಮಚರಿತಮಾನಸ’ದಂತಹ ಗ್ರಂಥವನ್ನು ರಚಿಸಿ ಪ್ರಭು ಶ್ರೀರಾಮರ ಮಹಿಮೆಯ ಕಥನ ಮಾಡಲು ಸಂತ ತುಳಸೀದಾಸರು ಕೈಯಲ್ಲಿ ಲೇಖನಿಯನ್ನು ಹಿಡಿದರು.

೯. ಹಿಂದೂ ರಾಷ್ಟ್ರವನ್ನು ಜೀವಂತವಾಗಿಡಲು ಸಂತರ ಪ್ರಯತ್ನ

ಇದು ಮಹಾರಾಣಾ ಪ್ರತಾಪರಂತಹ ವೀರಪುರುಷರ ಭೂಮಿಯಾಗಿತ್ತು. ಸಂತರ ಹಾಗೆಯೆ ಈ ವೀರ ರಾಜರು ಶ್ರೀರಾಮ, ಶ್ರೀಕೃಷ್ಣರ ಉತ್ತರಧಿಕಾರವನ್ನು ಮುಂದೆ ನಡೆಸುತ್ತಿದ್ದರು. ಅವರು ಶತ್ರುಗಳ ಮುಂದೆ ತಲೆ ತಗ್ಗಿಸಲಿಲ್ಲ. ದೇಶದಲ್ಲಿ ಪರಕೀಯರ ಆಡಳಿತ ಬಂದಿತು. ಆದರೂ ಆ ಕಾಲದಲ್ಲಿನ ಸಂತರು ಶ್ರೀರಾಮರ ಚರಿತ್ರೆಯನ್ನು ಹಿಂದೂ ಸಮಾಜದಿಂದ ವಿಸ್ಮರಣೆಯಾಗಲು ಬಿಡಲಿಲ್ಲ. ರಾಜಕೀಯ ದೃಷ್ಟಿಯಲ್ಲಿ ‘ಹಿಂದೂಗಳ ರಾಷ್ಟ್ರ ಅಸ್ತಿತ್ವದಲ್ಲಿಲ್ಲದಿದ್ದರೂ ಸಾಂಸ್ಕೃತಿಕ ಮತ್ತು ಧಾರ್ಮಿಕ ದೃಷ್ಟಿಯಲ್ಲಿ ಹಿಂದೂ ರಾಷ್ಟ್ರವನ್ನು ಜೀವಂತವಾಗಿಡಲು ಎಲ್ಲ ಸಂತ ಮಹಾತ್ಮರು ಅಪಾರ ಕಷ್ಟಪಟ್ಟರು. ಅದಕ್ಕಾಗಿ ಅವರು ಪ್ರಭು ಶ್ರೀರಾಮರ ಚರಿತ್ರೆಯ, ಅಂದರೆ ರಾಮಾಯಣದ ಆಧಾರವನ್ನು ಪಡೆದರು.

೧೦. ‘ಹಿಂದೂ ರಾಷ್ಟ್ರದ ಮೊದಲ ದಿನ’, ಈ ವಿಷಯದಲ್ಲಿ ಸ್ವಾತಂತ್ರ್ಯವೀರ ಸಾವರಕರರು ಮಾಡಿದ ವಿವೇಚನೆ

ಸ್ವಾತಂತ್ರ್ಯವೀರ ಸಾವರಕರರೂ ಆಂಗ್ಲರು ನಮ್ಮ ದೇಶ ವನ್ನು ಆಳುತ್ತಿರುವಾಗ ಹಿಂದೂ ಬಾಂಧವರಿಗೆ ಸ್ವತ್ವದ ಅರಿವಾಗ ಬೇಕೆಂದು ‘ಹಿಂದುತ್ವ ಎಂಬ ಗ್ರಂಥವನ್ನು ರಚಿಸಿದರು. ಅದರ ಜೊತೆಗೆ ಮುಸಲ್ಮಾನರ ಆಕ್ರಮಕತೆ ಮತ್ತು ಮತಾಂತರದ ರಾಷ್ಟ್ರಘಾತಕ ಕುಕೃತ್ಯಗಳಿಗೆ ಕಡಿವಾಣ ಹಾಕಲು ಶುದ್ಧಿ ಚಳುವಳಿಯನ್ನು ಆರಂಭಿಸಿದರು. ‘ಪ್ರಭು ಶ್ರೀರಾಮರ ವಂಶಪರಂಪರೆಯನ್ನು ಕಾಪಾಡಲಿಕ್ಕಿದ್ದರೆ, ಹಿಂದೂಗಳ ಸಂಖ್ಯಾಬಲ ಸ್ಥಿರವಾಗಿ ಉಳಿಯಬೇಕು. ಅದು ಸ್ವಲ್ಪವೂ ಕಡಿಮೆಯಾಗಬಾರದು’, ಎಂದು ಸಾವರಕರರು ಬಹಳಷ್ಟು ಶ್ರಮಿಸಿದರು. ಸಾವರಕರರು ಬರೆದಿರುವ ‘ಹಿಂದುತ್ವ ಈ ಗ್ರಂಥದಲ್ಲಿ ‘ಹಿಂದೂ ರಾಷ್ಟ್ರದ ಮೊದಲ ದಿನ ಯಾವುದು ?’, ಎಂದು ಹೇಳುವಾಗ ಅವರು ಮುಂದಿನಂತೆ ಬರೆದಿದ್ದಾರೆ, ‘ಅಯೋಧ್ಯೆಯ ಮಹಾಪ್ರತಾಪಿ ರಾಜಾ ರಾಮಚಂದ್ರರು ಲಂಕೆಯಲ್ಲಿ ತಮ್ಮ ವಿಜಯದ ಹೆಜ್ಜೆಯನ್ನಿಟ್ಟರು ಮತ್ತು ಉತ್ತರ ಹಿಮಾಲಯದಿಂದ ದಕ್ಷಿಣ ಸಮುದ್ರದವರೆಗೆ ಎಲ್ಲ ಭೂಮಿಯನ್ನು ಏಕಾಧಿಕಾರದಲ್ಲಿ ತಂದರು. ಅದೇ ದಿನ ಸ್ವರಾಷ್ಟ್ರ ಮತ್ತು ಸ್ವದೇಶ ನಿರ್ಮಾಣದ ಮಹಾನ ಕಾರ್ಯವನ್ನು ಹಿಂದೂಗಳು ಅಂಗೀಕರಿಸಿದ್ದರು, ಆ ಕಾರ್ಯ ಪರಿಪೂರ್ಣವಾಯಿತು, ಭೌಗೋಲಿಕ ಸೀಮೆಯ ದೃಷ್ಟಿಯಿಂದಲೂ ಕೂಡ ಅವರು ಅಂತಿಮ ಸೀಮೆಯನ್ನು ಪಡೆದುಕೊಂಡರು. ಯಾವ ದಿನ ಅಶ್ವಮೇಧದ ವಿಜಯೀ ಕುದುರೆ ಎಲ್ಲಿಯೂ ಪ್ರತಿಕಾರವಾಗದೆ ಅಜೇಯವಾಗಿ ಅಯೋಧ್ಯೆಗೆ ಹಿಂತಿರುಗಿ ಬಂದಿತೋ, ಯಾವ ದಿನ ಆ ಪ್ರಚಂಡ ಪ್ರಭು ರಾಮಚಂದ್ರರ, ಆ ಲೋಕಾಭಿರಾಮ ರಾಜಭದ್ರದ ಸಾಮ್ರಾಜ್ಯ

ಸಿಂಹಾಸನದ ಮೇಲೆ ಸಾಮ್ರಾಟನ ಚಕ್ರವರ್ತಿತ್ವದ ನಿದರ್ಶಕವೆಂದು ಶ್ವೇತ ವಸ್ತ್ರವನ್ನು ಹಿಡಿಯಲಾಯಿತು. ಅದೇ ದಿನ ಆರ್ಯರೆಂದು ಹೇಳಿಸಿಕೊಳ್ಳುವ ನೃಪಶ್ರೇಷ್ಠರು ಮಾತ್ರವಲ್ಲ (ರಾಜ ಮಹಾರಾಜರು), ಹನುಮಂತ, ಸುಗ್ರೀವ, ವಿಭೀಷಣ ಇವರೂ ಸಹ ಆ ಸಿಂಹಾಸನಕ್ಕೆ ಭಕ್ತಿಪೂರ್ವಕ ರಾಜನಿಷ್ಠೆಯನ್ನು ಸಾದರ ಪಡಿಸಿದರೋ, ಅದೇ ದಿನ ನಮ್ಮ ನಿಜವಾದ ‘ಹಿಂದೂ ರಾಷ್ಟ್ರದ ಹಿಂದೂ ಜಾತಿಯ ಜನ್ಮ ದಿನವಾಯಿತು. ಅದೇ ನಮ್ಮ ನಿಜವಾದ ರಾಷ್ಟ್ರದಿನ ! ಏಕೆಂದರೆ ಆರ್ಯ ಮತ್ತು ಅನಾರ್ಯರು ಪರಸ್ಪರರಲ್ಲಿ ಸಂಪೂರ್ಣ ಒಂದಾಗಿ ಆ ದಿನ ಹೊಸತಾದ ಒಂದು ಸಂಘಟಿತ ರಾಷ್ಟ್ರಕ್ಕೆ ಜನ್ಮ ನೀಡಿತು. ಇಲ್ಲಿನ ಪ್ರತಿಯೊಂದು ಗುಹೆ, ಪ್ರತಿಯೊಂದು ದಿನ್ನೆ ಮಹರ್ಷಿ ವ್ಯಾಸ, ಆದಿಶಂಕರಾಚಾರ್ಯ, ಸಮರ್ಥ ರಾಮದಾಸ ಸ್ವಾಮಿಗಳು, ಜಗದ್ಗುರು ಸಂತ ತುಕಾರಾಮ ಮಹಾರಾಜರನ್ನು ನೆನಪು ಮಾಡಿ ಕೊಡುತ್ತವೆ. ಭಗೀರಥನು ಇಲ್ಲಿ ರಾಜ್ಯವನ್ನು ಮಾಡಿದನು, ಪ್ರಭು ಶ್ರೀರಾಮರು ಇಲ್ಲಿಯೆ ವನವಾಸವನ್ನು ಭೋಗಿಸಿದರು, ಶ್ರೀಕೃಷ್ಣನು ತನ್ನ ಮಧುರ ಕೊಳಲಿನ ಧ್ವನಿಯಿಂದ ಆಕಾಶವನ್ನೆಲ್ಲ ವ್ಯಾಪಿಸಿದ್ದನು, ಅದೇ ಭೂಮಿ ನಮ್ಮ ಹುತಾತ್ಮರ ವೀರಭೂಮಿ ಮತ್ತು ಯೋಗಿಗಳ ಕರ್ಮಭೂಮಿ ಆಗಿದೆ.’

೧೧. ಕೃತಜ್ಞತೆ

‘ಈ ಪ್ರಾಣಪ್ರಿಯ ಮಾತೃಭೂಮಿಯ ರಕ್ಷಣೆಗಾಗಿ ಹೋರಾಡುವ, ಶತ್ರುವಿಗೆ ಕಹಿ ಅನುಭವಗಳನ್ನು ನೀಡುವ ಪ್ರಬಲ ಇಚ್ಛಾಶಕ್ತಿಯ ಪರಂಪರೆ ಮತ್ತು ಪ್ರೇರಣೆ ಅನಂತ ಕಾಲ ಭಾವೀ ಪೀಳಿಗೆಗೆ ಸಿಗಲಿ’, ಎಂದು ಶ್ರೀರಾಮಚಂದ್ರರಲ್ಲಿ ಪ್ರಾರ್ಥನೆ ಮತ್ತು ಎಲ್ಲ ಪೂರ್ವಜರಿಗೆ ಕೃತಜ್ಞತಾಪೂರ್ವಕ ವಂದನೆ !

– ಶ್ರೀ. ದುರ್ಗೇಶ ಜಯವಂತ ಪರೂಳಕರ, ಹಿಂದುತ್ವನಿಷ್ಠ ವ್ಯಾಖ್ಯಾನಕಾರರು ಮತ್ತು ಲೇಖಕರು, ಡೊಂಬಿವಿಲಿ. (೧.೨.೨೦೨೩)