DK Shivakaumar Statement : ನಾವು ನಮ್ಮ ಧರ್ಮವನ್ನು ರಕ್ಷಿಸಬೇಕು! – ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ರಾಜ್ಯದ ಕಾಂಗ್ರೆಸ್ ಸರಕಾರದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆ

ಉಡುಪಿ – ದೇವರು ವರ ಅಥವಾ ಶಾಪ ನೀಡದೇ ಅವಕಾಶಗಳನ್ನು ಒದಗಿಸುತ್ತಾನೆ. ನಾವು ನಮ್ಮ ಧರ್ಮವನ್ನು ರಕ್ಷಿಸಬೇಕು. ಧರ್ಮವನ್ನು ರಕ್ಷಿಸುವುದು, ಕಾಪಾಡುವುದು ಆವಶ್ಯಕವಾಗಿದೆ; ಯಾವುದೇ ಧರ್ಮದಲ್ಲಿ ‘ಯಾರಿಗೂ ತೊಂದರೆ ಕೊಡಿ’ ಎಂದು ಹೇಳಿಲ್ಲ. (ಒಂದು ಧರ್ಮದಲ್ಲಿ ಮಾತ್ರ ‘ಇತರ ಧರ್ಮದವರನ್ನು ಕೊಲ್ಲಿರಿ, ಅವರ ಹೆಂಡತಿಯರು ಮತ್ತು ಆಸ್ತಿಯನ್ನು ವಶಪಡಿಸಿಕೊಳ್ಳಿ, ಅವರ ದೇವಸ್ಥಾನಗಳನ್ನು ಧ್ವಂಸಗೊಳಿಸಿರಿ’ ಎಂದು ಹೇಳಲಾಗಿದೆ, ಇದರ ಬಗ್ಗೆ ಡಿ.ಕೆ. ಶಿವಕುಮಾರ ಹೇಳುತ್ತಾರೆಯೇ ? – ಸಂಪಾದಕರು) ಯಾರು ದೇವಸ್ಥಾನದ ಸೇವೆ ಮಾಡುತ್ತಾರೆಯೋ ಅವರಿಗೆ ಯಾವಾಗಲೂ ದೇವರ ಆಶೀರ್ವಾದ ಸಿಗುತ್ತದೆ. ಭಕ್ತಿಯಿಲ್ಲದೆ ಯಾರೂ ಜೀವನ ನಡೆಸಲು ಸಾಧ್ಯವಿಲ್ಲ ಎಂದು ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮಾರ್ಗದರ್ಶನ ಮಾಡಿದರು. ಅವರು ಉಡುಪಿ ಜಿಲ್ಲೆಯ ಕಾಪೂ ನಗರದ ಶ್ರೀ ಹಳೆಮಾರಿಗುಡಿ (ಮಾರಿಯಮ್ಮ ದೇವಿಯ ಹಳೆಯ ದೇವಸ್ಥಾನ) ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದು,

1. ಭಕ್ತ ಮತ್ತು ಭಗವಂತನ ನಡುವಿನ ಸಂಬಂಧವು ಎಲ್ಲಿ ದೃಢವಾಗುತ್ತದೆಯೋ, ಆ ಸ್ಥಳವೇ ದೇವಸ್ಥಾನವಾಗಿದೆ. (ಹಾಗಿದ್ದರೆ ಸರಕಾರವು ದೇವಸ್ಥಾನವನ್ನು ಭಕ್ತರಿಗೆ ಬಿಟ್ಟುಕೊಡದೆ ಅದನ್ನು ಸರಕಾರೀಕರಣ ಏಕೆ ಮಾಡುತ್ತದೆ? ಈಗಲಾದರೂ ದೇವಸ್ಥಾನಗಳನ್ನು ಆದಾಯದ ಮೂಲವಾಗಿ ನೋಡದೆ ಭಕ್ತರಿಗೆ ಬಿಟ್ಟುಕೊಡುತ್ತಾರೆಯೇ? – ಸಂಪಾದಕರು)

2. ಯಾವುದೇ ಧರ್ಮವಿರಲಿ, ಅದರ ತತ್ವಜ್ಞಾನ ಒಂದೇ ಆಗಿರುತ್ತದೆ. (ಹಾಗಾದರೆ ಒಂದು ಧರ್ಮದಲ್ಲಿ  ಮಾತ್ರ ಭಯೋತ್ಪಾದಕರು ಏಕೆ ನಿರ್ಮಾಣವಾಗುತ್ತಾರೆ? ಅಲ್ಲಿ ಸಂತರು ಏಕೆ ನಿರ್ಮಾಣವಾಗುವುದಿಲ್ಲ? – ಸಂಪಾದಕರು)

3. ಮಾರಿಯಮ್ಮ ದೇವಿಯ ಮೊದಲ ಪ್ರಸಾದ ಸಿಗುವುದು ನನಗೆ ಅದೃಷ್ಟದ ವಿಷಯವಾಗಿದೆ. ನಾನು ಇಲ್ಲಿಗೆ ಉಪಮುಖ್ಯಮಂತ್ರಿಯಾಗಿ ಬಂದಿಲ್ಲ, ಭಕ್ತನಾಗಿ ಬಂದಿದ್ದೇನೆ. (ಪ್ರತಿಯೊಬ್ಬ ಭಕ್ತನೂ ಇದೇ ಭಾವನೆಯಿಂದ ದೇವಸ್ಥಾನಕ್ಕೆ ಬರುತ್ತಾನೆ; ಆದರೆ ದೇವಸ್ಥಾನದ ಸರಕಾರೀಕರಣದಿಂದ ಅವನು ಭಕ್ತಿಭಾವದಿಂದ ಅರ್ಪಿಸಿದ ಹಣವನ್ನು ದೇವಸ್ಥಾನಕ್ಕೆ ಬಳಸದೆ ಅದರಲ್ಲಿ ಭ್ರಷ್ಟಾಚಾರವಾಗುತ್ತಿದೆ. ಇದರ ಬಗ್ಗೆ ಶಿವಕುಮಾರ ಅವರು ಕ್ರಮ ಕೈಗೊಳ್ಳುತ್ತಾರೆಯೇ? – ಸಂಪಾದಕರು)

4. ರಾಜ್ಯದಾದ್ಯಂತ ನಾಗರಿಕರು ಸರಕಾರದ ಬೆಂಬಲವಿಲ್ಲದೆ ಸ್ವಂತ ಪ್ರಯತ್ನದಿಂದ ದೇವಸ್ಥಾನವನ್ನು ನಿರ್ಮಿಸಿದ್ದಾರೆ. (ಭಕ್ತರು ದೇವರ ಮೇಲಿನ ಶ್ರದ್ಧೆಯಿಂದ ದೇವಸ್ಥಾನಗಳನ್ನು ನಿರ್ಮಿಸುತ್ತಾರೆ, ಆದರೆ ಸರಕಾರವು ಅಲ್ಲಿಗೆ ಬರುವ ಹಣದ ಮೇಲೆ ಕಣ್ಣಿಟ್ಟು ಅದನ್ನು ಲೂಟಿ ಮಾಡಲು ಪ್ರಯತ್ನಿಸುತ್ತದೆ. ಇದಕ್ಕಾಗಿ ಸಣ್ಣಪುಟ್ಟ ವಿವಾದಗಳ ನೆಪವೊಡ್ಡಿ ದೇವಸ್ಥಾನಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗುತ್ತದೆ. ಅಂತಹ ದೇವಸ್ಥಾನಗಳಿಗೆ ನ್ಯಾಯ ಯಾವಾಗ ಸಿಗುವುದು? – ಸಂಪಾದಕರು) ಇಂತಹ ಘಟನೆಯನ್ನು ನಾನು ಎಲ್ಲಿಯೂ ನೋಡಿಲ್ಲ. ಇಲ್ಲಿಗೆ ಬಂದಾಗ ನನಗೆ ಬಹಳ ಸಂತೋಷವಾಯಿತು. ನಾನು ನನ್ನ ಹೆಂಡತಿ ಮತ್ತು ಕುಟುಂಬದವರನ್ನು ಇಲ್ಲಿಗೆ ಕಳುಹಿಸುತ್ತೇನೆ, ಎಂದು ಹೇಳಿದರು.

5. ನಾನು ಯಾವುದೇ ದೇವಸ್ಥಾನಕ್ಕೆ ಭೇಟಿ ನೀಡಿದರೂ ಅಥವಾ ಧಾರ್ಮಿಕ ವಿಷಯದ ಬಗ್ಗೆ ಮಾತನಾಡಿದರೂ ಅದು ಚರ್ಚೆಯ ವಿಷಯವಾಗುತ್ತದೆ. ಒಮ್ಮೆ ನಾನು ಒಂದು ಸ್ಥಳದಲ್ಲಿ ಯೇಸುವಿನ ವಿಗ್ರಹವನ್ನು ಪ್ರೋತ್ಸಾಹಿಸಿದೆ, ಆದ್ದರಿಂದ ನಿಮ್ಮ ಜಿಲ್ಲೆಯ ಜನರು ನನ್ನನ್ನು ‘ಯೇಸು ಕುಮಾರ್’ (ಯೇಸುವಿನ ಮಗ) ಎಂದು ಕರೆದರು. ಮತ್ತೊಮ್ಮೆ ಸಂಸದರೊಬ್ಬರು ಮುಸಲ್ಮಾನರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದಾಗ, ‘ಅವರು (ಮುಸಲ್ಮಾನರು) ಸಹ ನಮ್ಮ ಸಹೋದರರು, ಅವರಿಲ್ಲದೆ ನಾವು ಬದುಕಲು ಸಾಧ್ಯವಿಲ್ಲ. ನಾವು ಮಾಂಸವನ್ನು ಕತ್ತರಿಸಬಹುದೇ? ಅವರು ಅದೇ ಕೆಲಸ ಮಾಡುತ್ತಾರೆ. ಪ್ರತಿಯೊಬ್ಬರೂ ತಮ್ಮ ಕೆಲಸವನ್ನು ಮಾಡಬೇಕು’ ಎಂದು ಹೇಳಿದ್ದೆ. (ಹಿಂದೂಗಳಲ್ಲಿ ಖಾಟಿಕ ಸಮಾಜವಿದೆ ಮತ್ತು ಅವರು ಮಾಂಸ ಮಾರಾಟದ ಕೆಲಸ ಮಾಡುತ್ತಾರೆ. ಹಲಾಲ (ಹಲಾಲ ಮಾಂಸ ಎಂದರೆ ಪ್ರಾಣಿಗಳ ಬಾಯಿಯನ್ನು ಮೆಕ್ಕಾದ ದಿಕ್ಕಿಗೆ ಮಾಡಿ ಅವುಗಳ ಕತ್ತಿನ ನರವನ್ನು ಕತ್ತರಿಸಿ ಅವುಗಳನ್ನು ನರಳುತ್ತಾ ಸಾಯಲು ಬಿಡಲಾಗುತ್ತದೆ.) ಮಾಂಸದ ಹೆಸರಿನಲ್ಲಿ ಈ ಹಿಂದೂ ಖಾಟಿಕ ಸಮಾಜವನ್ನು ಮರೆತಿರುವುದರಿಂದ, ಈಗ ಹಿಂದೂಗಳು ಕೇವಲ ಮುಸಲ್ಮಾನರಿಂದ ಹಲಾಲ ಮಾಂಸವನ್ನು ತಿನ್ನಬೇಕಾಗಿದೆ, ಇದನ್ನು ಶಿವಕುಮಾರ ಏಕೆ ಹೇಳುವುದಿಲ್ಲ? – ಸಂಪಾದಕರು)

6. ನಾನು ಅವರನ್ನು (ಮುಸಲ್ಮಾನರನ್ನು) ‘ಬ್ರದರ್ಸ್’ (ಸಹೋದರ) ಎಂದು ಕರೆದಿದ್ದಕ್ಕೆ ನನ್ನನ್ನು ಬೇರೆಯದೇ ಹೆಸರಿನಿಂದ ಕರೆಯಲಾಯಿತು. (ಹಿಂದೂಗಳೇ ಮುಸಲ್ಮಾನರನ್ನು ಸಹೋದರ ಎಂದು ಕರೆಯುತ್ತಾರೆ; ಆದರೆ ಮುಸಲ್ಮಾನರು ಹಿಂದೂಗಳನ್ನು ‘ಕಾಫಿರ್’ (ಇಸ್ಲಾಂ ಅನ್ನು ನಂಬದವರು, ವಿಗ್ರಹಾರಾಧಕರು) ಎಂದು ಕರೆಯುತ್ತಾರೆ ಮತ್ತು ಇದರಿಂದಲೇ ಹಿಂದೂಗಳನ್ನು ಕಾಶ್ಮೀರ ಸೇರಿದಂತೆ ಇತರ ಸ್ಥಳಗಳಿಂದ ಹೊರಹಾಕಲಾಗುತ್ತದೆ, ಇದನ್ನು ಶಿವಕುಮಾರ ಏಕೆ ಹೇಳುವುದಿಲ್ಲ? – ಸಂಪಾದಕರು)

7. ನಾನು ಶಿವನ ದೇವಸ್ಥಾನಕ್ಕೆ ಹೋದರೂ ಜನರು ನನ್ನನ್ನು ಬೇರೆಯದೇ ರೀತಿಯಲ್ಲಿ ಕರೆಯುತ್ತಾರೆ. ನಾನು ಕುಂಭಮೇಳದಲ್ಲಿ ಭಾಗವಹಿಸಿದ್ದೆ, ಅಲ್ಲಿ ನೀರಿಗೆ ಜಾತಿ, ಧರ್ಮ ಅಥವಾ ರಾಜಕೀಯ ಪಕ್ಷ ಇರುತ್ತದೆಯೇ? ಕುಂಭಮೇಳದಲ್ಲಿ ಭಾಗವಹಿಸುವುದು ತಪ್ಪೇ? ಜನರು ಏನೇನೋ ಮಾತನಾಡುತ್ತಾರೆ. (ಕಾಂಗ್ರೆಸ್ಸಿಗರು ದೇವಸ್ಥಾನಗಳಿಗೆ ಹೋದಾಗ, ಅವರು ಭಕ್ತರಾಗಿ ಹೋಗುವುದಿಲ್ಲ, ಬದಲಿಗೆ ರಾಜಕೀಯ ಸ್ವಾರ್ಥಕ್ಕಾಗಿ ಹೋಗುತ್ತಾರೆ, ಇದುವರೆಗಿನ ಇತಿಹಾಸವೇ ಹಾಗೆ ಇದೆ. ಶಿವಕುಮಾರ ಮಹಾಕುಂಭಕ್ಕೆ ಹೋದರು; ಆದರೆ ಅವರು ರಾಮಮಂದಿರಕ್ಕೆ ಹೋಗಲಿಲ್ಲ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಇಬ್ಬರೂ ಆ ಸ್ಥಳಗಳಿಗೆ ಹೋಗಿಲ್ಲ, ಇದರ ಬಗ್ಗೆ ಶಿವಕುಮಾರ್ ಮಾತನಾಡಬೇಕು! – ಸಂಪಾದಕರು)

ಸಂಪಾದಕೀಯ ನಿಲುವು

ಡಿ.ಕೆ. ಶಿವಕುಮಾರ್ ಹಿಂದೂ ಧರ್ಮವನ್ನು ಹೇಗೆ ಮತ್ತು ಯಾವಾಗ ರಕ್ಷಿಸುತ್ತಾರೆ ಎಂದು ಘೋಷಿಸಬೇಕು. ಇದಕ್ಕಾಗಿ ಅವರು ಏನು ಮಾಡುತ್ತಾರೆ ಎಂಬುದನ್ನು ಹಿಂದೂಗಳಿಗೆ ತಿಳಿಸಬೇಕು!