ಇತ್ತೀಚಿಗೆ ಇಸ್ಲಾಮಿಕ್ ಜಿಹಾದಿ ಚಟುವಟಿಕೆಗಳಲ್ಲಿ ಚೀನಾದ ಕೈವಾಡ ಹೆಚ್ಚಾಗಿದೆ. ಈ ಬದಲಾವಣೆಯಿಂದ ಚೀನಾ ಕೇವಲ ರಾಜ್ಯವನ್ನಾಳುವ ವರ್ಗಗಳೊಂದಿಗೆ ಮಾತುಕತೆ ನಡೆಸುವುದರ ಬದಲು ವಿದೇಶದಲ್ಲಿನ ಭಯೋತ್ಪಾದಕ ಗುಂಪುಗಳಿಗೆ ಆಶ್ರಯ ನೀಡುವ ಕಡೆಗೆ ಹೊರಳಿದೆ. ಈ ಹೆಜ್ಜೆ ಭಾರತದ ಮೇಲೆ ವ್ಯಾಪಕ ಪರಿಣಾಮ ಬೀರುತ್ತಿದೆ. ಬಾಂಗ್ಲಾದೇಶದ ಆಗಿನ ಪ್ರಧಾನಿ ಶೇಖ್ ಹಸೀನಾ ಇವರು ರಾಜೀನಾಮೆ ನೀಡುವ ಒಂದು ತಿಂಗಳು ಮೊದಲು ಅವರ ಚೀನಾದೊಂದಿಗಿನ ಸಂಬಂಧ ಹದಗೆಡುತ್ತಿತ್ತು ಇದರ ಪರಿಣಾಮವೆಂದು ಹಸೀನಾ ಇವರಿಗೆ ಅಪೇಕ್ಷಿತ ಸ್ವಾಗತ ಸಿಗಲಿಲ್ಲ ಮತ್ತು ಅದರಿಂದಾಗಿ ಅವರ ಪ್ರವಾಸವನ್ನು ಮೊಟಕುಗೊಳಿಸಲಾಯಿತು ಎಂದು ಆ ಸಮಯದಲ್ಲಿ ಪ್ರಕಟವಾದ ವಿವಿಧ ವರದಿಗಳಿಂದ ಗಮನಕ್ಕೆ ಬರುತ್ತದೆ. ಹಸೀನಾ ವಿರುದ್ಧ ಮುಂಬರುವ ಅಧಿಕಾರ ಬದಲಾವಣೆಯ ಬಗ್ಗೆ ಚೀನಾಗೆ ರಹಸ್ಯ ಮಾಹಿತಿ ಇತ್ತು ಮತ್ತು ಅದು ಸಂಚು ರೂಪಿಸುವಲ್ಲಿ ನೇರ ಕೈವಾಡ ಇತ್ತು ಎಂಬುದನ್ನು ಸೂಚಿಸುತ್ತದೆ. ಈ ಲೇಖನದಲ್ಲಿ ಈ ಬಗೆಗಿನ ಚರ್ಚೆಯನ್ನು ನಾವು ಮಾಡುವವರಿದ್ದೇವೆ.
೧. ಬಾಂಗ್ಲಾದೇಶದ ರಾಜಕೀಯ ಉತ್ಕ್ರಾಂತಿ ಮತ್ತು ಅದರಲ್ಲಿ ಸೇನೆಯ ಪಾಲ್ಗೊಳ್ಳುವಿಕೆ
ಬಾಂಗ್ಲಾದೇಶದ ಅರಾಜಕತೆಯ ನಂತರ ಶೇಖ್ ಹಸೀನಾ ಇವರು ಢಾಕಾ ಬಿಟ್ಟು ಭಾರತಕ್ಕೆ ಓಡಿ ಹೋದರು; ಏಕೆಂದರೆ ಜನರು ಭದ್ರತೆಯನ್ನು ಉಲ್ಲಂಘಿಸಿ ಅವರ ಮನೆಯನ್ನು ಪ್ರವೇಶಿಸಿದ್ದರು. ಅನಂತರ ಬಾಂಗ್ಲಾದೇಶದ ಸೇನೆಯು ಅಧಿಕಾರವನ್ನು ಘೋಷಿಸಿತು. ಅಲ್ಲಿನ ಸೇನಾ ಮುಖ್ಯಸ್ಥನು ತಮ್ಮ ನಾಯಕರ ವಿರುದ್ಧವೇ ವಿದೇಶಿ ಶಕ್ತಿಗಳ ಪಕ್ಷ ವಹಿಸಿದನು. ಬಾಂಗ್ಲಾದ ಇತಿಹಾಸವು ಸೇನಾ ಮುಖ್ಯಸ್ಥರು ತಮ್ಮ ದೇಶದ ವಿರುದ್ಧ ವಿದೇಶಿ ಶಕ್ತಿಗಳೊಂದಿಗೆ ಕೈಜೋಡಿಸಿದ ಉದಾಹರಣೆಗಳಿಂದ ತುಂಬಿದೆ. ಇದರಿಂದ ಬಾಂಗ್ಲಾದೇಶದ ಸೇನೆಯ ಮುಖ್ಯಸ್ಥ ಜನರಲ್ ವಕಾರ್-ಉಝ್-ಜಮಾನ್ ಇವರು ಚೀನಾದ ಪಕ್ಷ ವಹಿಸುತ್ತಿದ್ದಾರೆಯೇ ? ಎಂಬ ಪ್ರಶ್ನೆ ಮೂಡುತ್ತದೆ
೨. ಚೀನಾದ ದಕ್ಷಿಣ ಏಷ್ಯಾದ ಧೋರಣಾತ್ಮಕ ಚಲನವಲನಗಳು
ಚೀನಾವು ಪಾಕಿಸ್ತಾನದ ‘ಐ.ಎಸ್.ಐ.’ ಈ ಗುಪ್ತಚರ ಸಂಸ್ಥೆ ಮತ್ತು ಮುಸಲ್ಮಾನರೊಂದಿಗೆ ಉತ್ತಮ ಬಾಂಧವ್ಯವಿರುವ ಇತರ ವರ್ಗಗಳ ಸಹಾಯದಿಂದ ಬಾಂಗ್ಲಾದೇಶದಲ್ಲಿ ನೇರ ಹಸ್ತಕ್ಷೇಪ ಮಾಡುವುದು ಒಂದು ಸುನಿಯೋಜಿತ ಹೆಜ್ಜೆಯಾಗಿದೆ. ಭಾರತವನ್ನು ಎದುರಿಸಲು, ಚೀನಾ ಈ ಪ್ರದೇಶದಲ್ಲಿ ಪಾಕಿಸ್ತಾನದ ಸಹಾಯ ಪಡೆಯಲು ಆರಂಭಿಸಿದೆ. ಪಾಕಿಸ್ತಾನವು ಚೀನಾಕ್ಕೆ ಉತ್ತರದ ಕಡೆಯಿಂದ ಹಿಂದ್ ಮಹಾಸಾಗರದಲ್ಲಿ ಪ್ರವೇಶ ನೀಡಿತು. ಇದರೊಂದಿಗೆ ಭಯೋತ್ಪಾದಕ ಗುಂಪುಗಳಿಗೆ ಚೀನಾದ ಬೆಂಬಲ ಗಣನೀಯವಾಗಿ ಹೆಚ್ಚಾಗಿದೆ. ಇದರಲ್ಲಿ ಕಾಶ್ಮೀರದಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರಿಗೆ ಸಹಾಯ ಮಾಡುವುದು, ‘ಐಸಿಸ್-ಕೆ’ ಮತ್ತು ಪೂರ್ವ ತುರ್ಕಿಸ್ತಾನದಲ್ಲಿನ ಸಶಸ್ತ್ರ ದಂಗೆಕೋರರನ್ನು ನಿಗ್ರಹಿಸಲು ತಾಲಿಬಾನ್‌ಗೆ ಮಾನ್ಯತೆ ನೀಡುವುದು ಈ ವಿಷಯಗಳು ಒಳಗೊಂಡಿವೆ. ಸರಕಾರಿ ಸಿಬ್ಬಂದಿಗಳನ್ನು ತೊಡಗಿಸಿಕೊಳ್ಳುವುದರಿಂದ ಭಯೋತ್ಪಾದನಾ ಗುಂಪುಗಳನ್ನು ಬೆಂಬಲಿಸುವ ಈ ಬದಲಾವಣೆಯು ಚೀನಾದ ಕಾರ್ಯನೀತಿಯ ಒಂದು ಮಹತ್ವಪೂರ್ಣ ಹೆಜ್ಜೆಯಾಗಿದೆ.
೩. ಬಾಂಗ್ಲಾದೇಶ ಮೇಲಾದ ಪರಿಣಾಮ
ಬಾಂಗ್ಲಾದೇಶದ ಸಂಸ್ಥಾಪಕ ಶೇಖ್ ಮುಜಿಬುರ್ ರಹಮಾನ್ ಇವರ ಮಗಳಾದ ಶೇಖ್ ಹಸೀನಾ ಇವರು ‘ಜಮಾತ್-ಎ-ಇಸ್ಲಾಮಿ ಬಾಂಗ್ಲಾದೇಶ (ಜಮಾತ್)’ ಮತ್ತು ಅದರ ವಿದ್ಯಾರ್ಥಿ ಘಟಕವಾದ ‘ಛಾತ್ರಶಿಬಿರ’ ಇವುಗಳಂತಹ ಗುಂಪುಗಳ ವಿರುದ್ಧ ನಿಲುವು ಹೊಂದಿರುವುದು ಇಸ್ಲಾಮಿಗಳಿಗೆ ಇಷ್ಟವಾಗಲಿಲ್ಲ. ‘ಮುಸ್ಲಿಂ ಬ್ರದರಹುಡ್’ನೊಂದಿಗೆ (ಇಸ್ಲಾಮಿ ರಾಷ್ಟ್ರಗಳೊಂದಿಗೆ) ಈ ಗುಂಪುಗಳ ಗಾಢ ನಂಟಿತ್ತು. ಅವರು ವಿರೋಧಿ ಪಕ್ಷವಾದ ‘ಬಾಂಗ್ಲಾದೇಶ ನ್ಯಾಶನಾಲಿಸ್ಟ್ ಪಾರ್ಟಿ (ಬಿ.ಎನ್.ಪಿ.)’ ಮತ್ತು ಬಹುಶಃ ಸಶಸ್ತ್ರ ಪಡೆಗಳಲ್ಲಿ ನುಸುಳಿದ್ದಾರೆ.
೪. ಭಾರತಕ್ಕಾಗುವ ಭೂ-ರಾಜಕೀಯ ಪರಿಣಾಮ
ಹಸೀನಾರ ಮೇಲೆ ಅವಿಶ್ವಾಸ ತೋರುವ ಚೀನಾ ಢಾಕಾದಂತಹ ಕೈಗೊಂಬೆ ಸರಕಾರಕ್ಕೆ ಆದ್ಯತೆ ನೀಡುತ್ತದೆ; ಏಕೆಂದರೆ ಆ ಸರಕಾರ ಭಾರತದ ವಿರುದ್ಧ ಕಾರ್ಯತಂತ್ರದ ಲಾಭ ಮಾಡಿಕೊಡಬಹುದು. ಬಾಂಗ್ಲಾದೇಶದ ಈ ರಾಜಕೀಯ ಅಸ್ಥಿರತೆ ಮತ್ತು ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಹೋರಾಟಗಳಿಂದಾಗಿ ‘ಬಿಮ್‌ಸ್ಟೆಕ್ (ಬೆ ಆಫ್ ಬಂಗಾಲ ಇನಿಶಿಯೆಟಿವ್ ಫಾರ್ ಮಲ್ಟಿಸೆಕ್ಟರಲ್ ಟೆಕ್ನಿಕಲ್ ಯಾಂಡ್ ಇಕನಾಮಿಕ್ಸ್ ಕಾರ್ಪೋರೇಶನ್)’ ಮತ್ತು ‘ಐ.ಎಮ್.ಈ.ಸಿ. (ಇಂಡಿಯಾ ಮಿಡಲ್ ಈಸ್ಟ್ ಯುರೋಪ್ ಇಕಾನಾಮಿಕ್ ಕಾರಿಡೊರ್)’ ಇವುಗಳಂತಹ ಭಾರತದ ಪ್ರಾದೇಶಿಕ ಉಪಕ್ರಮ ಗಳಿಗೆ ಅಪಾಯ ನಿರ್ಮಾಣವಾಗಿದೆ.
೫. ಚೀನಾದ ದೊಡ್ಡ ರಣನೀತಿ
ಉಯಿಘುರ ಮುಸಲ್ಮಾನರ ವಿಷಯದ ತನ್ನ ಧೋರಣೆಗಳಿಗೆ ಟೀಕೆಗಳನ್ನು ಎದುರಿಸುತ್ತಿದ್ದ ಚೀನಾವು ಜಾಗತಿಕ ಮಟ್ಟದಲ್ಲಿ ಇಸ್ಲಾಮಿ ಸಂಘಟನೆಗಳೊಂದಿಗೆ ನಂಟು ಇಡಲು ಈ ಹೊಸ ತಂತ್ರ ಬಳಸಿತು, ಈಗ ಆ ತಂತ್ರವು ಭಯೋತ್ಪಾದಕ ಸಂಘಟನೆಗಳೊಂದಿಗೆ ಮೈತ್ರಿ ಬೆಳೆಸಲು ವಿಕಸನಗೊಂಡಿವೆ. ಪ್ರಜಾ ಪ್ರಭುತ್ವವನ್ನು ದುರ್ಬಲಗೊಳಿಸಿ ಭೌಗೋಳಿಕ ರಾಜಕೀಯ ಬದಲಾವಣೆಗೆ ವೇಗ ನೀಡುವುದು ಈ ತಂತ್ರದ ಗುರಿಯಾಗಿತ್ತು. ಆದರೂ ‘ಮುಸಲ್ಮಾನ ಬ್ರದರಹುಡ್’ ಮತ್ತು ಅಂತಹ ಗುಂಪುಗಳು ಅನಪೇಕ್ಷಿತವಾಗಿರಬಹುದೆಂದು ಚೀನಾ ಅರ್ಥಮಾಡಿಕೊಳ್ಳಬೇಕು.

೬. ಬಾಂಗ್ಲಾದೇಶದಲ್ಲಿ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಭಾರತವು ಢಾಕಾದೊಂದಿಗೆ ಚರ್ಚೆ ನಡೆಸುವುದು ಆವಶ್ಯಕ
೬ ಅ. ಒಂದು ಯುಗಾಂತ್ಯ : ಶೇಖ್ ಹಸೀನಾ ಇವರ ಹಠಾತ್ ರಾಜೀನಾಮೆ ಮತ್ತು ಬಾಂಗ್ಲಾದೇಶದಿಂದ ಅವರ ಪಲಾಯನ ಇವು ಆ ದೇಶದ ಇತಿಹಾಸದ ಒಂದು ಮಹತ್ವದ ಕ್ಷಣವಾಗಿವೆ. ಹಸೀನಾರ ತಂದೆ ಬಂಗಬಂಧು ಇವರ ಪ್ರತಿಮೆಯ ಮೇಲೆ ದಾಳಿ ಮಾಡುವ ಪ್ರತಿಭಟನಾಕಾರರ ಸ್ಪಷ್ಟ ನಿಲುವು, ಅಂದರೆ ಯಾವ ಯುಗದಲ್ಲಿ ಅವರು ತಮ್ಮ ಪರಂಪರೆಯನ್ನು ಸಂರಕ್ಷಿಸಲು ಪ್ರಯತ್ನಿಸಿದರೋ, ಆ ಯುಗದ ಸಮಾಪ್ತಿಯ ಪ್ರತೀಕವಾಗಿದೆ.
೬ ಆ. ಬಾಂಗ್ಲಾದೇಶದ ಸ್ಥಿತಿಯಿಂದ ಭಾರತದ ಮೇಲಾದ ಪರಿಣಾಮಗಳು : ಭಾರತದ ಭದ್ರತೆಗೆ, ವಿಶೇಷವಾಗಿ ಈಶಾನ್ಯ ದೇಶಗಳ ಭದ್ರತೆಗೆ ಬಾಂಗ್ಲಾದೇಶದ ಸ್ಥಿರತೆ ಮಹತ್ವದ್ದಾಗಿದೆ. ಸಂಕಷ್ಟದಲ್ಲಿರುವ ಹಿಂದೂ ನಿರಾಶ್ರಿತರ ಸಂಭಾವ್ಯ ಆಗಮನವನ್ನು ಭಾರತ ಬೆಂಬಲಿಸಬೇಕು. ಪ್ರಧಾನಿ ನರೇಂದ್ರ ಮೋದಿಯವರ ಸರಕಾರ ಕಳೆದ ದಶಕದಲ್ಲಿ ಬಾಂಗ್ಲಾದೇಶದೊಂದಿಗಿನ ಯಶಸ್ವಿ ಸ್ನೇಹ ಸಂಬಂಧವನ್ನು ಈಗ ಮುಂದುವರೆಸಬೇಕು.
೬ ಇ. ಭಾರತದ ಮುಂದಿನ ದಾರಿ : ಭಾರತ ಢಾಕಾದಲ್ಲಿ ಎಲ್ಲ ರಾಜಕೀಯ ಶಕ್ತಿಗಳೊಂದಿಗೆ ಚರ್ಚೆ ಮಾಡಬೇಕು ಮತ್ತು ಬಾಂಗ್ಲಾದೇಶದ ಸೇನೆಯೊಂದಿಗೆ ಬಲಿಷ್ಠ ಸಂಬಂಧವನ್ನು ಇಟ್ಟುಕೊಳ್ಳಬೇಕು. ಬಾಂಗ್ಲಾದೇಶದ ಹೊಸ ಸರಕಾರದ ರಚನೆ ಏನೇ ಆಗಿರಲಿ, ವಿಕಾಸಾತ್ಮಕ ಪಾಲುದಾರಿಕೆಯನ್ನು ಬಲಪಡಿಸುವುದು ಮತ್ತು ಜನರಲ್ಲಿನ ಪರಸ್ಪರ ಸಂಬಂಧವೃದ್ಧಿ, ಇದು ಭಾರತದ ಉತ್ತಮ ಸೇವೆಯಾಗಬಹುದು. ಬಾಂಗ್ಲಾದೇಶದ ರಾಜಕೀಯ ಅಸ್ಥಿರತೆ ಈ ಪ್ರದೇಶದ ಭಾರತದ ಪಾಲ್ಗೊಳ್ಳುವಿಕೆ ಮತ್ತು ಜಾಗರೂಕತೆಯ ಮಹತ್ವವನ್ನು ಒತ್ತಿಹೇಳುತ್ತದೆ. ಢಾಕಾದಲ್ಲಿ ಎಲ್ಲ ಪಾಲುದಾರರೊಂದಿಗೆ ಸಂಬಂಧವನ್ನು ಕಾಪಾಡಿ, ಭಾರತ ತನ್ನ ಪಕ್ಕದಲ್ಲಿರುವ ದೇಶಗಳಲ್ಲಿ ಸ್ಥಿರತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.
೬ ಈ. ಬಾಂಗ್ಲಾದೇಶದಿಂದ ಸಂಭಾವ್ಯ ಹಗೆತನ : ಒಂದು ವೇಳೆ ‘ಜಮಾತ್-ಎ-ಇಸ್ಲಾಮಿ’ ಮತ್ತು ‘ಬಾಂಗ್ಲಾದೇಶ ನ್ಯಾಶನಾಲಿಸ್ಟ್ ಪಾರ್ಟಿ (ಬಿ.ಎನ್.ಪಿ.)’ ಇವುಗಳಂತಹ ವಿರೋಧಿ ಪಕ್ಷಗಳು ಅಧಿಕಾರಕ್ಕೆ ಬಂದರೆ ಭಾರತದ ಬಾಂಗ್ಲಾದೇಶದೊಂದಿಗಿನ ಸಂಬಂಧ ಕೆಡಬಹುದು. ಆದುದರಿಂದ ಈಗಾಗಲೇ ಒತ್ತಡದಲ್ಲಿ ರುವ ದಕ್ಷಿಣ ಏಷ್ಯಾದ ಪ್ರದೇಶಕ್ಕೆ ಪಕ್ಕದ ಇನ್ನೊಬ್ಬ ಶತ್ರು ಸೇರಬಹುದು. ಬಾಂಗ್ಲಾದೇಶದಲ್ಲಿ ಸ್ನೇಹಿಯಲ್ಲದ ಆಡಳಿತದ ಸಾಧ್ಯತೆ ಎಂದರೆ, ಭಾರತದ ನಾಲ್ಕೂ ಬದಿಗಳಿಂದ ಶತ್ರುಗಳು ಸುತ್ತುವರೆದಿರುವಂತಹ ಪರಿಸ್ಥಿತಿ ನಿರ್ಮಾಣವಾಗಬಹುದು.
೬ ಎ. ಬಾಂಗ್ಲಾದೇಶದಲ್ಲಿನ ಜಾತ್ಯತೀತ ವಿರೋಧಿ ಶಕ್ತಿಗಳು : ಶೇಖ್ ಹಸೀನಾ ಇವರ ಮುಖ್ಯ ರಾಜಕೀಯ ವಿರೋಧಿ ಪಕ್ಷ ಜಮಾತ್-ಎ-ಇಸ್ಲಾಮಿ ಮತ್ತು ನ್ಯಾಶನಾಲಿಸ್ಟ್ ಪಾರ್ಟಿ ಇವು ಬಾಂಗ್ಲಾದೇಶದ ಜಾತ್ಯತೀತ ಅಡಿಪಾಯದ ವಿರುದ್ಧ ಇಸ್ಲಾಮಿಕ್ ಉಪಸ್ಥಿತಿಯನ್ನು ಸಮರ್ಥಿಸುತ್ತದೆ. ಬಾಂಗ್ಲಾದೇಶ ನ್ಯಾಶನಾಲಿಸ್ಟ್ ಪಾರ್ಟಿಯ ಸಂಸ್ಥಾಪಕ ಝಿಯಾ ಉರ್ ರೆಹಮಾನ್ ಇವರು ಬಾಂಗ್ಲಾದೇಶದ ಸಂವಿಧಾನದಿಂದ ‘ಜಾತ್ಯತೀತ’ ಈ ಶಬ್ದವನ್ನು ತೆಗೆದಿದ್ದಾರೆ. ಇದರಿಂದ ಅವರ ವೈಚಾರಿಕ ನಿಲುವು ಸ್ಪಷ್ಟವಾಗು ತ್ತದೆ. ಎರಡೂ ಗುಂಪುಗಳು ಐತಿಹಾಸಿಕವಾಗಿ ಜಾತ್ಯತೀತ ವಿರೋಧಿಗಳಾಗಿವೆ ಮತ್ತು ಅವರಿಗೆ ಜನಸಂಖ್ಯೆಯನ್ನು ಒಟ್ಟು ಗೂಡಿಸಲು ಮತ್ತು ಪಾಕಿಸ್ತಾನದ ‘ಐ.ಎಸ್.ಐ.’ನಿಂದ ಹಣ ಪಡೆಯಲು ಗಮನಾರ್ಹ ಬೆಂಬಲ ಸಿಗುತ್ತಿದೆ.
೭. ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವುದು
ತನ್ನ ಗಡಿಯ ಸಂಭಾವ್ಯ ಹಗೆತನವನ್ನು ಗಮನದಲ್ಲಿಟ್ಟು ಕೊಂಡು ಭಾರತ ಎಲ್ಲವನ್ನೂ ಒಳಗೊಂಡಿರುವ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವ ಮಾರ್ಗವನ್ನು ಕಂಡು ಹಿಡಿಯಬೇಕು ಮತ್ತು ಆಗ್ನೇಯ ಏಷ್ಯಾ, ‘ಇಂಡೋ – ಫೆಸಿಫಿಕ್’ ಶಕ್ತಿ ಮತ್ತು ಮಧ್ಯಪೂರ್ವದೊಂದಿಗೆ ತನ್ನ ವಿಸ್ತರಣೆಯಿಂದ ಅಕ್ಕ ಪಕ್ಕದ ವ್ಯಾಪಾರ ಬೆಳೆಸಬೇಕು. – ಬ್ರಿಗೇಡಿಯರ್ ಹೇಮಂತ ಮಹಾಜನ (ನಿವೃತ್ತ), ಐತಿಹಾಸಿಕ ದೃಷ್ಟಿಯಿಂದ ಭಾರತ ಒಂದು ಬಲಿಷ್ಠ, ಆರ್ಥಿಕ ಮತ್ತು ಸಾಂಸ್ಕೃತಿಕ ರಾಜಧಾನಿಯಾಗಿದೆ ಮತ್ತು ದೇಶದ ಸಮೃದ್ಧಿ ಯನ್ನು ಭದ್ರಪಡಿಸಲು ಅದರ ಭೌಗೋಳಿಕ ಸ್ಥಿತಿಯ ಮತ್ತು ಸಾಗರ ವ್ಯಾಪಾರದ ಲಾಭವನ್ನು ಪಡೆದುಕೊಳ್ಳುತ್ತಿದೆ.
ಭಾರತ ಈಗ ಎಲ್ಲ ಕ್ಷೇತ್ರಗಳಲ್ಲಿ ಆಧುನಿಕೀಕರಣ ಮಾಡಿಕೊಳ್ಳುವ ಮತ್ತು ಜಾಗತಿಕ ಬೇಡಿಕೆಯನ್ನು ಪೂರ್ಣಗೊಳಿಸುವ ದೃಷ್ಟಿಯಿಂದ ತನ್ನ ಅಭಿವೃದ್ಧಿಯ ಮಾರ್ಗದಲ್ಲಿದೆ. ಭಾರತದ ವಿಸ್ತರಣಾವಾದಿಯಲ್ಲದ ಗುರುತು ಮತ್ತು ಆದರ್ಶವಾದಿ ಏಕೀಕರಣವು ಅದನ್ನು ಜಗತ್ತಿನ ಬಹುಪಾಲು, ವಿಶೇಷವಾಗಿ ಜಾಗತಿಕ ದಕ್ಷಿಣಕ್ಕೆ ಸ್ನೇಹಿತನನ್ನಾಗಿ ಮಾಡಿದೆ.
೭ ಅ. ವ್ಯಾಪಾರ ಮತ್ತು ಕಾರ್ಯತಂತ್ರದ ಸಂಬಂಧಗಳ ವಿಸ್ತಾರ : ಸಾಗರ ಮಾರ್ಗದಿಂದ ವ್ಯಾಪಾರವನ್ನು ತೆರೆಯುವುದು, ಪಾಲುದಾರ ದೇಶಗಳೊಂದಿಗೆ ಸಂಬಂಧವನ್ನು ಬಲಗೊಳಿಸುವುದು, ವಿಸ್ತಾರವಾದಿ ಶಕ್ತಿಗಳನ್ನು ಎದುರಿಸಲು ಸೇನಾ ಶಕ್ತಿಯನ್ನು ರಫ್ತು ಮಾಡುವುದು ಮತ್ತು ಪ್ರಾಚೀನ ಜ್ಞಾನವನ್ನು ಪ್ರಸಾರ ಮಾಡುವುದು ಇವುಗಳಿಂದ ಭಾರತಕ್ಕೆ ತನ್ನ ಸುತ್ತಮುತ್ತಲಿರುವ ಶತ್ರುಗಳನ್ನು ಎದುರಿಸಲು ಸಹಾಯವಾಗುತ್ತದೆ. ವ್ಯಾಪಾರ ಮತ್ತು ಕಾರ್ಯತಂತ್ರದ ಸಂಬಂಧವನ್ನು ಹೆಚ್ಚಿಸಿ ಭಾರತ ತನ್ನ ಸ್ಥಿತಿಯನ್ನು ಬಲಿಷ್ಠಗೊಳಿಸಬಹುದು ಮತ್ತು ಈ ಪ್ರದೇಶದಲ್ಲಿ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಬಹುದು.
೮. ಬಾಂಗ್ಲಾದೇಶದಲ್ಲಿ ಉತ್ಕ್ರಾಂತಿಯಾಗುತ್ತಿರುವಾಗ ಭಾರತ ಸಕ್ರಿಯವಾಗಿರುವುದು ಆವಶ್ಯಕ
ಬಾಂಗ್ಲಾದೇಶದ ರಾಜಕೀಯ ಉತ್ಕ್ರಾಂತಿಯು ಭಾರತವು ಜಾಗರೂಕ ಮತ್ತು ಸಕ್ರಿಯವಾಗಿರಬೇಕು ಎಂದು ಒತ್ತಿಹೇಳುತ್ತದೆ. ಢಾಕಾದ ಎಲ್ಲ ರಾಜಕೀಯ ಶಕ್ತಿಗಳೊಂದಿಗೆ ಚರ್ಚೆ ನಡೆಸಿ, ಬಾಂಗ್ಲಾದೇಶದ ಸೇನೆಯೊಂದಿಗೆ ಬಾಂಧವ್ಯವನ್ನು ಬಲಪಡಿಸುವ ಮತ್ತು ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವ ಮೂಲಕ ಸಂಭಾವ್ಯ ಪ್ರತಿಕೂಲ ನೆರೆಹೊರೆಯವರು ಒಡ್ಡುವ ಸವಾಲುಗಳನ್ನು ಭಾರತ ಎದುರಿಸಬಹುದು. ಹೆಚ್ಚುತ್ತಿರುವ ಅಸ್ಥಿರ ಪ್ರದೇಶಗಳಲ್ಲಿ ಭಾರತ ತನ್ನ ಹಿತಸಂಬಂಧಗಳನ್ನು ಭದ್ರಪಡಿಸಲು ಐತಿಹಾಸಿಕ ಶಕ್ತಿಗಳ ಲಾಭ ಪಡೆಯುವುದು, ವ್ಯಾಪಾರ ಮತ್ತು ರಾಜನೈತಿಕ ಸಂಬಂಧಗಳನ್ನು ವಿಸ್ತರಿಸುವುದು, ಇದು ಭಾರತದ ಮುಂದಿನ ಮಾರ್ಗವಾಗಿರಬೇಕು.
– ಬ್ರಿಗೇಡಿಯರ್ ಹೇಮಂತ ಮಹಾಜನ (ನಿವೃತ್ತ), ಪುಣೆ.