ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ದೇವದ (ಪನವೆಲ)ನ ಸನಾತನ ಆಶ್ರಮದಲ್ಲಿ ಭಾವಪೂರ್ಣ ವಾತಾವರಣದಲ್ಲಿ ನೆರವೇರಿದ ‘ಮೇಧಾ-ದಕ್ಷಿಣಾಮೂರ್ತಿ ಯಾಗ !’

ದೇವದ (ಪನವೇಲ) – ಸಪ್ತರ್ಷಿ ಜೀವ ನಾಡಿಪಟ್ಟಿಯ ಮಾಧ್ಯಮದಿಂದ ಸಪ್ತರ್ಷಿಗಳ ಆಜ್ಞೆಯಂತೆ ಇಲ್ಲಿನ ಸನಾತನದ ಆಶ್ರಮದಲ್ಲಿ ಫಾಲ್ಗುಣ ಕೃಷ್ಣ ದಶಮಿ, ಅಂದರೆ ೧೭  ಮಾರ್ಚ್ ಈ ದಿನದಂದು ಭಗವಾನ ಶಿವನ ಗುರುರೂಪ ವಾಗಿರುವ ಶ್ರೀ ದಕ್ಷಿಣಾಮೂರ್ತಿ ದೇವತೆಯ ಕೃಪೆಗಾಗಿ ‘ಮೇಧಾ ದಕ್ಷಿಣಾಮೂರ್ತಿ ಯಾಗ’ವು ಅತ್ಯಂತ ಭಾವಪೂರ್ಣ ವಾತಾವರಣದಲ್ಲಿ ನೆರವೇರಿತು. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಆಧ್ಯಾತ್ಮಿಕ ಉತ್ತಾರಾಧಿಕಾರಿಗಳು ಮತ್ತು ಮಹಾಲಕ್ಷ್ಮೀಸ್ವರೂಪ ರಾಗಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ವಂದನೀಯ ಉಪಸ್ಥಿತಿಯಲ್ಲಿ ನೆರವೇರಿದ ಈ ಯಜ್ಞಸಮಾರಂಭಕ್ಕೆ ಸನಾತನದ ಪುರೋಹಿತರಾದ ಶ್ರೀ. ಸಿದ್ಧೇಶ ಕರಂದೀಕರ, ಶ್ರೀ. ಅಮರ ಜೋಶಿ ಮತ್ತು ಶ್ರೀ.ಈಶಾನ್ ಜೋಶಿ ಇವರು ಪೌರೋಹಿತ್ಯವನ್ನು ಮಾಡಿದರು.

ಎಡಗಡೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಭಾವಚಿತ್ರ, ಮಧ್ಯದಲ್ಲಿ ಗುರುರೂಪದಲ್ಲಿನ ಶಿವನ ಪ್ರತೀಕವಾಗಿರುವ ಕಲಶ ಮತ್ತು ಬ್ರಹ್ಮದೇವನ ಮಾನಸಪುತ್ರನಾಗಿರುವ ೪ ಶಿಷ್ಯಂದಿರ ಪ್ರತೀಕವಾಗಿರುವ ೪ ಕಲಶಗಳು ಮತ್ತು ಬಲಗಡೆ ಭಗವಾನ ಶಿವನ ರೂಪವಾಗಿರುವ ಆದಿಗುರು ಶ್ರೀ ದಕ್ಷಿಣಾಮೂರ್ತಿಯ ಛಾಯಾಚಿತ್ರ

ಯಜ್ಞದ ಆರಂಭದಲ್ಲಿ ಶಾಂತಿಸೂಕ್ತವನ್ನು ಹೇಳಲಾಯಿತು. ಸಮಿಧೆ (ಯಜ್ಞದ ಕಟ್ಟಿಗೆ), ಚರು (ಧಾರ್ಮಿಕ ವಿಧಿಗಾಗಿ ಮಾಡಿದ ಅನ್ನ) ಮತ್ತು ಘೃತ (ತುಪ್ಪ) ಇವುಗಳ ಆಹುತಿಯನ್ನು ಈ ಸಮಯದಲ್ಲಿ ನೀಡಲಾಯಿತು. ಪೂರ್ಣಾಹುತಿಯ ನಂತರ ‘ಶ್ರೀ ದಕ್ಷಿಣಾಮೂರ್ತಿ ದೇವತೆಗೆ ಭಾವಪೂರ್ಣ ಆರತಿಯನ್ನು ಮಾಡಿ ನಂತರ ಈ ಚೈತನ್ಯದಾಯಕ ಸಮಾರಂಭವು ಮುಕ್ತಾಯ ಗೊಂಡಿತು. ಅನಂತರ ಸದ್ಗುರು, ಸಂತರು ಮತ್ತು ಸಾಧಕರು ಯಜ್ಞನಾರಾಯಣನ ಮತ್ತು ದೇವತೆಗಳ ದರ್ಶನವನ್ನು ಪಡೆದರು.

ಈ ಯಜ್ಞವಿಧಿಗಳ ಕಾರ್ಯಕಾರಣಭಾವವನ್ನು ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟದ ಸನಾತನದ ಸಾಧಕ ಶ್ರೀ. ವಿನಾಯಕ ಶಾನಭಾಗ ಇವರು ಸಹಜಸುಲಭ ಶೈಲಿಯಲ್ಲಿ ಮಂಡಿಸಿದರು. ಅತ್ಯಂತ ಭಾವಪೂರ್ಣ ರೀತಿಯಲ್ಲಿ ಮಾಡಿದ ನಿರೂಪಣೆಯಲ್ಲಿ ಅವರು ಹಿಂದೂ  ರಾಷ್ಟ್ರದ ಸ್ಥಾಪನೆಯಲ್ಲಿ ಕಾಲಗತಿಗನುಸಾರ, ಹಾಗೆಯೇ ಆಪತ್ಕಾಲದ ದೃಷ್ಟಿಯಿಂದ ಈ ಯಜ್ಞಸಮಾರಂಭದ ಮಹತ್ವವನ್ನು ವಿವರಿಸಿದರು. ಅವರ ದೈವೀವಾಣಿಯಿಂದಾಗಿ ಎಲ್ಲರಿಗೂ ಈ ಸಮಾರಂಭವನ್ನು ಭಾವದ ಸ್ತರದಲ್ಲಿ ಅನುಭವಿಸಲು ಸಾಧ್ಯವಾಯಿತು.

ಭಗವಾನ ಶಿವನ ರೂಪವಾಗಿರುವ ಆದಿಗುರು ಶ್ರೀ ದಕ್ಷಿಣಾಮೂರ್ತಿ !

ಸೃಷ್ಟಿಯ ನಿರ್ಮಿತಿಯ ಸಮಯದಲ್ಲಿ ಬ್ರಹ್ಮದೇವರ ಪುತ್ರ ಸನಕ, ಸನಂದನ, ಸನಾತನ ಮತ್ತು ಸನತ್ಕುಮಾರ ಈ ೪ ಮಾನಸಪುತ್ರರ ಸೃಷ್ಟಿಯಾಯಿತು. ಅವರಿಗೆ ಸೃಷ್ಟಿಯನ್ನು ಸೃಷ್ಟಿಸಲು ಹೇಳಿದಾಗ ಈ ೪ ಪುತ್ರರು, ‘ನಮಗೆ ಆತ್ಮತತ್ತ್ವದ ಜ್ಞಾನವನ್ನು ಅರಿತುಕೊಳ್ಳುವುದಿದೆ’ ಎಂದು ಹೇಳಿದರು. ಅನಂತರ ಆ ನಿವೃತ್ತಿ ಮಾರ್ಗದ ಋಷಿಗಳು (ಬ್ರಹ್ಮದೇವರ ಮಾನಸಪುತ್ರರು) ಉತ್ತರ ದಿಕ್ಕಿಗೆ ಮುಖ ಮಾಡಿ ನಡೆಯತೊಡಗಿದರು. ಅತಿ ಉತ್ತರ ದಿಕ್ಕಿನಲ್ಲಿರುವ ಮಾನಸ ಸರೋವರದ ಬಳಿಗೆ ದಿವ್ಯ ವಟವೃಕ್ಷದ ಛಾಯೆಯಲ್ಲಿ ಭಗವಾನ ಶಿವರು ಗುರುರೂಪದಲ್ಲಿ ಶಿಲೆಯ ಮೇಲೆ ವಿರಾಜಮಾನರಾಗಿದ್ದರು. ಶ್ರೀ ದಕ್ಷಿಣಾಮೂರ್ತಿಗಳ ಕೃಪೆಯಿಂದ ಈ ನಾಲ್ಕೂ ಋಷಿಗಳಿಗೆ ಜ್ಞಾನಪ್ರಾಪ್ತವಾಯಿತು. ಈ ರೀತಿ ಸೃಷ್ಟಿಯ ನಿರ್ಮಿತಿಯ ಸಮಯದಲ್ಲಿ ಶ್ರೀ ದಕ್ಷಿಣಾಮೂರ್ತಿ ಇವರು ಮೊದಲ ಗುರುರೂಪವಾಗಿದ್ದಾರೆ ! ಆದುದರಿಂದ ಭಗವಾನ ಶಿವನೇ ಆದಿಗುರು ಆಗಿದ್ದಾರೆ !

ಭಗವಾನ ಶಿವರ ಕಾಲಡಿಯಲ್ಲಿ ಇರುವ ರಾಕ್ಷಸರೆಂದರೆ ‘ಮದ, ಮೋಹ, ಅಹಂಕಾರ ಮುಂತಾದ ಷಡ್ರಿಪುಗಳನ್ನು ಯಾವಾಗಲೂ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು’ ಎಂಬುದರ ಅಂದರೆ ಸಂಯಮದ, ಇಂದ್ರಿಯ ನಿಗ್ರಹದ ಪ್ರತೀಕವಾಗಿದೆ. ಈ ರೂಪದ ಶಿವನಿಗೆ ೪ ಕೈಗಳಿದ್ದು ಒಂದು ಕೈ ಜ್ಞಾನಮುದ್ರೆಯಲ್ಲಿದ್ದು, ಒಂದು ಕೈಯಲ್ಲಿ ಮಾಲೆ, ಒಂದು ಕೈಯಲ್ಲಿ ದೀವಟಿಗೆಯಿದೆ ಮತ್ತು ಇನ್ನೊಂದು ಕೈಯಲ್ಲಿ ‘ಜ್ಞಾನ’ದ ಪ್ರತೀಕವಾಗಿರುವ ವೇದವಿದೆ.

‘ದಕ್ಷಿಣಾಮೂರ್ತಿ ಯಾಗ’ವು ಸೂಕ್ಷ್ಮ ಧರ್ಮಹೋರಾಟದ ಶಂಖನಾದವೇ ಆಗಿದೆ !

‘ದಕ್ಷಿಣಾಮೂರ್ತಿಯಾಗದ ನಂತರ ಆರತಿ ಬೆಳಗುತ್ತಿರುವ ಶ್ರೀ ಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಜೊತೆಯಲ್ಲಿ ಪುರೋಹಿತರು

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ೧೯೯೦ ರಲ್ಲಿಯೇ ಕಾಲಗತಿ ಗನುಸಾರ ಧರ್ಮದ ವಿರುದ್ಧ ಅಧರ್ಮ ಈ ಸೂಕ್ಷ್ಮ ಹೋರಾಟದ ರಣಕಹಳೆಯನ್ನು ಊದಿದರು ! ಯುಗಯುಗಗಳಿಂದ ನಡೆ ದಿರುವ ಧರ್ಮಸಂಸ್ಥಾಪನೆಯ ಚಕ್ರದಲ್ಲಿ ಸದ್ಯ ಕಲಿಯುಗಾಂತರ್ಗತ ಆರನೇ ಕಲಿಯುಗದ

ಧರ್ಮ ಸಂಸ್ಥಾಪನೆಯ ಕಾಲವು ಸಮೀಪ ಬಂದಿದೆ. ಅದಕ್ಕೂ ಮೊದಲಿನ ಈ ಹೋರಾಟದ ಒಂದು ಭಾಗವೆಂದೇ ಸನಾತನದ ಆಶ್ರಮಗಳಲ್ಲಿ ಇಲ್ಲಿಯವರೆಗೆ ೪೮೦ ಕ್ಕಿಂತ ಹೆಚ್ಚು ಯಜ್ಞಗಳನ್ನು ಮಾಡ ಲಾಗಿದೆ. ಸನಾತನದ ದೇವದ (ಪನವೇಲ)ನಲ್ಲಿ ೧೭ ಮಾರ್ಚ್ ಈ ದಿನದಂದು ನೆರವೇರಿದ ‘ದಕ್ಷಿಣಾಮೂರ್ತಿ ಯಾಗ’ವೂ ಈ ಸೂಕ್ಷ್ಮ ಧರ್ಮಯುದ್ಧದ ಒಂದು ಶಂಖನಾದವೇ ಆಗಿತ್ತು !

ದೇವದ ಆಶ್ರಮದ ಸಾಧಕರು ಅನುಭವಿಸಿದ ಯಜ್ಞ ಸಮಾರಂಭ !

ಸನಾತನದ ದೇವದನ, ಪನವೇಲ ಆಶ್ರಮದಲ್ಲಿ ಸಮಾರಂಭದ ಸಿದ್ಧತೆಯು ಆರಂಭವಾಯಿತು; ಆದರೆ ಕಾರ್ಯಕ್ರಮದ ಸ್ವರೂಪದ ಬಗ್ಗೆ ಸಾಧಕರಿಗೆ ಅಷ್ಟು ಕಲ್ಪನೆ ಇರಲಿಲ್ಲ. ಪ್ರತಿಯೊಬ್ಬರು ‘ಏನಿರಬಹುದು ?’, ಎಂದು ಮನಸ್ಸಿನಲ್ಲೇ ತರ್ಕ ಕಟ್ಟುತ್ತಿದ್ದರು. ಹೀಗಿದ್ದರೂ ಆಶ್ರಮ ಮತ್ತು ಆಶ್ರಮದ ಪರಿಸರದ ವಾತಾವರಣದ ಚೈತನ್ಯದಲ್ಲಿ ಹೆಚ್ಚಳವಾಗುತ್ತಿತ್ತು. ಎಲ್ಲ ಸಾಧಕರಲ್ಲಿ ಬೇರೆಯೇ ಆದ ಉತ್ಸಾಹವು ನಿರ್ಮಾಣವಾಗಿತ್ತು. ೩ ದಿನ ಮುಂಚೆಯೇ ‘ಆಶ್ರಮದಲ್ಲಿ ಧಾರ್ಮಿಕ ವಿಧಿ ಇರಲಿದೆ’, ಎಂದು ಹೇಳಲಾಗಿತ್ತು. ಮರುದಿನ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ಆಗಮನವಾಯಿತು. ಸಾಯಂಕಾಲದ ಸಮಯದಲ್ಲಿ ಅವರ ಆಗಮನದ ನಂತರ ಆಶ್ರಮದ ವಾತಾವರಣವು ಸಂಪೂರ್ಣವಾಗಿ ಬದಲಾಯಿತು. ಚೈತನ್ಯದಲ್ಲಿ ಬಹಳ ಪ್ರಮಾಣದಲ್ಲಿ ಹೆಚ್ಚಳವಾಯಿತು. ಆ ದಿನ ಬಹಳ ಬಿಸಿಲಿತ್ತು, ಆದರೂ ವಾತಾವರಣದಲ್ಲಿ ತಂಪು ನಿರ್ಮಾಣ ವಾಗಿತ್ತು. ಆಹ್ಲಾದಕರ ಗಾಳಿಯು ಬೀಸತೊಡಗಿತು. ಅನಂತರ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಬಂದ ನಂತರ ಎಲ್ಲರ ಆನಂದ ದಲ್ಲಿ ಬಹಳ ಪ್ರಮಾಣದಲ್ಲಿ ಹೆಚ್ಚಳವಾಯಿತು. ‘ರಾಮನಾಥಿ ಆಶ್ರಮದಲ್ಲಿಯೇ ಯಜ್ಞವಿಧಿಗಳು ನೆರವೇರುತ್ತವೆ. ದೇವದ ಆಶ್ರಮದಲ್ಲಿ ಯಜ್ಞವು ಯಾವಾಗ ನಡೆಯುವುದು ?’, ಎಂಬ ಸಾಧಕರ ಈ ಕಾಯುವಿಕೆ ಮುಗಿದು ೧೭ ಮಾರ್ಚ್ ಈ ದಿನದಂದು ‘ನ ಭೂತೋ ನ ಭವಿಷ್ಯತಿ’ ಎಂಬ ರೀತಿಯಲ್ಲಿ ಯಜ್ಞವು ನೆರವೇರಿತು.

ಗುರುದೇವರ ಕೃಪೆಯಿಂದ ಯಜ್ಞದ ನಂತರ ಎಲ್ಲರಿಗೂ ಹೆಚ್ಚಿನ ಪ್ರಮಾಣದಲ್ಲಿ ಊರ್ಜೆ ಮತ್ತು ಚೈತನ್ಯವು ಪ್ರಾಪ್ತವಾಯಿತು. ಪ್ರತಿಯೊಬ್ಬರಿಗೆ ಈ ವಿಷಯದಲ್ಲಿ ಯಾವ ರೀತಿ ಕೃತಜ್ಞತೆ ವ್ಯಕ್ತ ಮಾಡಬೇಕು ?’, ಎಂಬುದೇ ತಿಳಿಯುತ್ತಿರಲಿಲ್ಲ. ಈ ರೀತಿ ಎಲ್ಲರೂ ಬೇರೆಯೇ ಆದ ಭಾವವಿಶ್ವದಲ್ಲಿ ವಿಹರಿಸಿದರು.