ಸ್ವಾತಂತ್ರ್ಯ ವೀರ ಸಾವರ್ಕರ್ ಅವರನ್ನು ‘ಕ್ಷಮಾವೀರ’ ಎಂದು ಕರೆಯುವುದು ಸರಿಯಲ್ಲ !

ರಾಹುಲ್ ಗಾಂಧಿ ಉಪಸ್ಥಿತಿಯಲ್ಲಿ ವಿರೋಧ ಪಕ್ಷಗಳ ಸಭೆಯಲ್ಲಿ ಶರದ್ ಪವಾರ್ ನಿಲುವು !

ನವ ದೆಹಲಿ – ಸ್ವಾತಂತ್ರ್ಯ ವೀರ್ ಸಾವರ್ಕರ್ ಮತ್ತು ರಾ.ಸ್ವ. ಸಂಘದ ನಡುವೆ ಯಾವುದೇ ಸಂಬಂಧವಿಲ್ಲ. ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಅವರನ್ನು ‘ಕ್ಷಮಾವೀರ’ ಎಂದು ಕರೆಯುವುದು ಸರಿಯಲ್ಲ. ನಮ್ಮ ಮುಂದೆ ಚರ್ಚಿಸಲು ಇನ್ನೂ ಹಲವು ಪ್ರಮುಖ ಸೂತ್ರಗಳಿವೆ. ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್ ಇಲ್ಲಿ ನಡೆದ ವಿರೋಧ ಪಕ್ಷಗಳ ಸಭೆಯಲ್ಲಿ ತಮ್ಮ ನಿಲುವನ್ನು ವ್ಯಕ್ತಪಡಿಸಿದರು. ಈ ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಉಪಸ್ಥಿತರಿದ್ದರು. ‘ಶರದ್ ಪವಾರ್ ಅವರ ಅಭಿಪ್ರಾಯವನ್ನು ನಾನು ಗೌರವಿಸುತ್ತೇನೆ’ ಎಂದು ರಾಹುಲ್ ಗಾಂಧಿ ಈ ಸಮಯದಲ್ಲಿ ಹೇಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಶರದ್ ಪವಾರ್ ಅವರ ಅಭಿಪ್ರಾಯವನ್ನು ಗೌರವಿಸುವುದಾಗಿ ಹೇಳಿದ್ದಾರೆ. ಶರದ್ ಪವಾರ್ ಅವರ ಅಭಿಪ್ರಾಯಕ್ಕೆ ಮಿತ್ರ ಪಕ್ಷಗಳಲ್ಲಿನ ಹಲವು ಸಂಸದರು ಒಪ್ಪಿಗೆ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಪ್ರತಿಪಕ್ಷ ನಾಯಕರಿಗೆ ಔತಣಕೂಟ ಏರ್ಪಡಿಸಲಾಗಿತ್ತು. ಇದಕ್ಕೂ ಮುನ್ನ ಈ ಸಭೆ ನಡೆಸಲಾಗಿತ್ತು. ಇದೇ ಮೊದಲ ಬಾರಿಗೆ ರಾಹುಲ್ ಗಾಂಧಿ ವಿರೋಧ ಪಕ್ಷಗಳ ಸಭೆಯಲ್ಲಿ ಭಾಗವಹಿಸಿದ್ದರು. ಶಿವಸೇನೆ (ಉದ್ಧವ್ ಠಾಕ್ರೆ ಬಣ) ಮತ್ತು ತೃಣಮೂಲ ಕಾಂಗ್ರೆಸ್ ನಾಯಕರು ಈ ಬಾರಿ ಹಾಜರಿರಲಿಲ್ಲ.

(ಸೌಜನ್ಯ : CNN-News18)

ಸಂಪಾದಕೀಯ ನಿಲುವು

ಇದನ್ನು ‘ತಡವಾಗಿ ಹೊಳೆಯುವುದು ಜಾಣತನ’ ಎಂದು ಕರೆಯಬೇಕೇ ಅಥವಾ ಜನರ ಮನಸ್ಸಿನ ಆಕ್ದಿಂರೋಶದಿಂದ ಬದಲಾದ ನಿಲುವು ಎಂದು ಕರೆಯಬೇಕು ?

ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಅವರನ್ನು ಅವಮಾನಿಸಿದ ರಾಹುಲ್ ಗಾಂಧಿ ಕ್ಷಮೆ ಕೇಳುತ್ತಾರೆಯೇ ? ಇಲ್ಲವಾದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿ ಈ ಪ್ರಕರಣದಲ್ಲಿ ಶಿಕ್ಷೆ ಸಿಗುವಂತೆ ಪ್ರಯತ್ನ ಮಾಡಬೇಕು !