ಕಾಂಗ್ರೆಸ್ ಒತ್ತಾಯಿಸಿದರೆ ಅಸ್ಸಾಂನಲ್ಲಿ ಗೋಮಾಂಸದ ಮೇಲೆ ನಿಷೇಧ!

ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಅವರ ಮನವಿ

ಗುವಾಹಾಟಿ (ಅಸ್ಸಾಂ) – ಗೋಮಾಂಸವನ್ನು ನಿಷೇಧಿಸಬೇಕೆಂದು ನಾನು ರಾಕಿಬುಲ್ ಹುಸೇನ್ ಅವರಿಗೆ ಹೇಳಲು ಬಯಸುತ್ತೇನೆ; ಏಕೆಂದರೆ ಅದು ತಪ್ಪು ಎಂದು ಸ್ವತಃ ಅವರೇ ಹೇಳಿದ್ದಾರೆ. ಅವರು ನನಗೆ ಕೇವಲ ಈ ವಿಷಯವನ್ನು ಲಿಖಿತ ರೂಪದಲ್ಲಿ ಬರೆದು ಕೊಟ್ಟರೆ ಸಾಕು, ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಕಾಂಗ್ರೆಸ್ಸಿನ ಸಂಸದ ರಕಿಬುಲ್ ಹುಸೇನ್ ಅವರಿಗೆ ಮನವಿ ಮಾಡಿದ್ದಾರೆ. ಕಳೆದ ತಿಂಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ದಿಪ್ಲು ರಂಜನ್ ಶರ್ಮಾ ಅವರು ಕಾಂಗ್ರೆಸ್ ಸಂಸದ ರಕಿಬುಲ್ ಅವರ ಪುತ್ರ ತಂಜೀಲ್ ಅವರನ್ನು 24,501 ಮತಗಳಿಂದ ಸೋಲಿಸಿದ್ದರು. ಈ ಫಲಿತಾಂಶದ ಬಳಿಕ ಸಂಸದ ರಕಿಬುಲ್ ಹುಸೇನ್ ಅವರು ಬಿಜೆಪಿ ಗೋಮಾಂಸ ಹಂಚಿರುವುದಾಗಿ ಆರೋಪಿಸಿದ್ದರು. ಈ ಬಗ್ಗೆ ಮುಖ್ಯಮಂತ್ರಿ ಶರ್ಮಾ ಅವರು ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ. ಸೋಲಿನ ದುಃಖದ ಸಂದರ್ಭದಲ್ಲಿಯೂ ಕೂಡ ರಕಿಬುಲ್ ಹುಸೇನ್ ಅವರು ಗೋಮಾಂಸ ತಿನ್ನುವುದು ತಪ್ಪಲ್ಲವೇ? ಎಂದು ಒಳ್ಳೆಯ ಮಾತನ್ನು ಹೇಳಿದರು ಎಂದು ಮುಖ್ಯಮಂತ್ರಿ ಶರ್ಮಾ ಹೇಳಿದರು. ಪ್ರತಿಪಕ್ಷಗಳು ಈ ಸೂತ್ರವನ್ನು ಮಂಡಿಸಿರುವುದು ನನಗೆ ಖುಷಿ ತಂದಿದೆ. ಗೋಮಾಂಸ ಹಂಚುವುದು ತಪ್ಪು ಎಂದು ಸ್ವತಃ ಕಾಂಗ್ರೆಸ್ ಸಂಸದರೇ ಅಭಿಪ್ರಾಯಪಟ್ಟಿದ್ದಾರೆ. ಕಾಂಗ್ರೆಸ್ಸಿನ ಪ್ರದೇಶಾಧ್ಯಕ್ಷ ಭೂಪೆನ್ ಕುಮಾರ್ ಬೋರಾ ಅವರು ನನಗೆ ಪತ್ರ ಬರೆದು ಈ ಬಗ್ಗೆ ಮನವಿ ಮಾಡಿದರೆ, ನಾನು ಖಂಡಿತ ಗೋಮಾಂಸ ನಿಷೇಧಿಸಲು ಸಿದ್ಧ ಎಂದು ಸಿಎಂ ಹೇಳಿದರು.

ಅಸ್ಸಾಂನ ಕಾನೂನು ಹೇಳುವುದೇನು?

‘ಅಸ್ಸಾಂ ಜಾನುವಾರು ಸಂರಕ್ಷಣಾ ಕಾಯ್ದೆ 2021’ ರ ಪ್ರಕಾರ ಅಸ್ಸಾಂನಲ್ಲಿ ಗೋಮಾಂಸ ತಿನ್ನುವುದು ಕಾನೂನು ಬಾಹಿರವಲ್ಲ; ಆದರೆ ಹಿಂದೂಗಳು, ಜೈನರು ಮತ್ತು ಸಿಖ್ಖರು ಬಹುಸಂಖ್ಯಾತರಾಗಿರುವ ಪ್ರದೇಶಗಳಲ್ಲಿ ಮತ್ತು ದೇವಾಲಯ ಅಥವಾ ವೈಷ್ಣವ ಮಠ ಪ್ರದೇಶದಲ್ಲಿ ಗೋಹತ್ಯೆ ಹಾಗೂ ಗೋಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ.