‘ಹಿತಚಿಂತಕರು ಮತ್ತು ಅರ್ಪಣೆದಾರರು ಸಾಧನೆ ಮಾಡಿ ಆಧ್ಯಾತ್ಮಿಕ ಪ್ರಗತಿ ಮಾಡಿಕೊಳ್ಳಬೇಕು, ಎಂಬ ಶುದ್ಧ ಉದ್ದೇಶದಿಂದ ಧರ್ಮಕಾರ್ಯ ಮಾಡುವ ಪರಾತ್ಪರ ಗುರು ಡಾ. ಆಠವಲೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

‘ಒಮ್ಮೆ ಒಬ್ಬ ಸಾಧಕನು ಪರಾತ್ಪರ ಗುರು ಡಾ. ಆಠವಲೆಯವರಿಗೆ, “ಸನಾತನ ಸಂಸ್ಥೆಯ ಕಾರ್ಯ ಹೆಚ್ಚುತ್ತಿದೆ. ಆದ್ದರಿಂದ ನಮಗೆ ಇನ್ನೂ ಹೊಸ ಆಶ್ರಮ ನಿರ್ಮಿಸ ಬೇಕಾಗಬಹುದು. ನನ್ನ ಪರಿಚಯದ ಕೆಲವು ಶ್ರೀಮಂತ ವ್ಯಕ್ತಿಗಳಿದ್ದಾರೆ. ಅವರಿಗೆ ಸನಾತನದ ಕಾರ್ಯದ ಬಗ್ಗೆ ಹೇಳಿ ನಾನು ಅವರನ್ನು ಆಶ್ರಮ ನೋಡಲು ಕರೆಯಬಹುದೇ ? ಇದರಿಂದ ಆಶ್ರಮ ನಿರ್ಮಾಣದ ಕಾರ್ಯಕ್ಕೆ ಧನ ಪ್ರಾಪ್ತವಾಗಬಹುದು, ಎಂದು ಕೇಳಿದೆನು. ಅದಕ್ಕೆ ಪರಾತ್ಪರ ಗುರು ಡಾಕ್ಟರರು, “ನಮಗೆ ಕೇವಲ ಹೊಸ ಆಶ್ರಮ ನಿರ್ಮಾಣ ಮಾಡಲಿಕ್ಕಿಲ್ಲ, ಸನಾತನದ ಹಿತಚಿಂತಕರು ಹಾಗೂ ಅರ್ಪಣೆದಾರರ ಸಾಧನೆಯಾಗಿ ಅವರ ಆಧ್ಯಾತ್ಮಿಕ ಪ್ರಗತಿಯಾಗಬೇಕು. ಅದಕ್ಕಾಗಿ ಅವರನ್ನು ಆಶ್ರಮ ನೋಡಲು ಕರೆದುಕೊಂಡು ಬಾ, ಎಂದರು.

ಈ ಮೇಲಿನ ಪ್ರಸಂಗದಿಂದ ಕಲಿಯಲು ಸಿಕ್ಕಿದ ಅಂಶಗಳು

೧. ‘ಪ್ರತಿಯೊಬ್ಬರ ಆಧ್ಯಾತ್ಮಿಕ ಪ್ರಗತಿಯಾಗಬೇಕು, ಎಂಬುದು ಸನಾತನ ಸಂಸ್ಥೆಯ ಕೇಂದ್ರಬಿಂದು ಆಗಿದೆ. ಪರಾತ್ಪರ ಗುರು ಡಾಕ್ಟರರು ಯಾವಾಗಲೂ ಈ ತತ್ತ್ವಕ್ಕನುಸಾರ ವರ್ತಿಸುತ್ತಾರೆ. ಅದರ ಒಂದು ಉದಾಹರಣೆ ಮೇಲಿನಂತಿದೆ.

೨. ಸಮಾಜದಲ್ಲಿ ಕೆಲವು ಸಂಪ್ರದಾಯಗಳ ಒಲವು ‘ಸಾಧನೆ ಮಾಡುವುದು ಅಥವಾ ಆಧ್ಯಾತ್ಮಿಕ ಪ್ರಗತಿ ಮಾಡಿಕೊಳ್ಳುವುದಾಗಿರದೆ, ‘ಹೆಚ್ಚೆಚ್ಚು ಹಣ ಸಂಪಾದಿಸುವುದೇ, ಆಗಿದೆ. ಪರಾತ್ಪರ ಗುರು ಡಾಕ್ಟರರು ನಿಸ್ವಾರ್ಥ ಉದ್ದೇಶದಿಂದ ಹಾಗೂ ನಿರಪೇಕ್ಷ ಪ್ರೀತಿಯಿಂದ ಸಮಾಜದ ಆಧ್ಯಾತ್ಮಿಕ ಪ್ರಗತಿಗಾಗಿ ಪ್ರಯತ್ನಿಸುತ್ತಿದ್ದಾರೆ. ಇಂತಹ ಗುರುಗಳು ಕಲಿಯುಗದಲ್ಲಿ ಸಿಗುವುದು ದುರ್ಲಭವಾಗಿದೆ. ‘ಪರಾತ್ಪರ ಗುರು ಡಾಕ್ಟರರು ನಮಗೆ ಗುರುರೂಪದಲ್ಲಿ ಲಭಿಸಿದ್ದಾರೆ, ಅದಕ್ಕಾಗಿ ಈಶ್ವರ ಚರಣಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.

– ಶ್ರೀ. ರಾಮ ಹೊನಪ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೪.೨.೨೦೨೨)