ಎಲ್ಲ ಸಾಧಕರಿಗೆ ಆಧಾರವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಸಚ್ಚಿದಾನಂದ ಪರಭ್ರಹ್ಮ ಡಾ. ಆಠವಲೆ

ಮಹರ್ಷಿಗಳ ಆಜ್ಞೆಯಂತೆ ಪರಾತ್ಪರ ಗುರು ಡಾ. ಆಠವಲೆಯವರ ೮೦ ನೇಯ ಜನ್ಮೋತ್ಸವದ ನಿಮಿತ್ತ ನಡೆದ ಅವರ ‘ರಥೋತ್ಸವ ಸಮಾರಂಭದ ಸಮಯದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ದರ್ಶನ ಪಡೆಯುವ ತೀವ್ರ ಇಚ್ಛೆಯು ಪೂರ್ಣವಾಗುವುದು

 ‘ಅನೇಕ ಸಾಧಕರಿಗೆ ನನ್ನನ್ನು ನೋಡುವ ಇಚ್ಛೆಯಾಗಿತ್ತು; ಆದರೆ ನನ್ನ ಪ್ರಾಣಶಕ್ತಿ ಕಡಿಮೆ ಇರುವುದರಿಂದ ನನಗೆ ಕೋಣೆಯಿಂದ ಹೊರಗೆ ಬರಲು ಸಾಧ್ಯವಾಗುವುದಿಲ್ಲ. ‘ನನ್ನನ್ನು ನೋಡಬೇಕೆಂಬ ಸಾಧಕರ ಇಚ್ಛೆಯು ಪೂರ್ಣವಾಗಬೇಕೆಂದು ಮಹರ್ಷಿಗಳು ನನ್ನ ‘ರಥೋತ್ಸವವನ್ನು ಮಾಡಲು ಹೇಳಿದರು, ಎಂಬುದು ನನ್ನ ಗಮನಕ್ಕೆ ಬಂದಿತು. – ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

‘ನಾನು ಸಾಧನೆಯನ್ನು ಮಾಡಲು ಪ್ರಾರಂಭಿಸಿದಾಗಿನಿಂದ ನನಗೆ ಸಚ್ಚಿದಾನಂದ ಪರಬ್ರಹ್ಮ ಗುರುದೇವರ ದರ್ಶನವನ್ನು ಪಡೆಯುವ ತೀವ್ರ ಇಚ್ಛೆಯಾಗಿತ್ತು. ನನಗೆ ಸಾಧನೆ ಮಾಡಲು ಮನೆಯಲ್ಲಿ ವಿರೋಧವಿದೆ. ನಾನು ಕೆಲಸ ಮಾಡುವ ಸ್ಥಳಕ್ಕೆ ಹೋಗುವಾಗ-ಬರುವಾಗ ಉದ್ದೇಶಪೂರ್ವಕವಾಗಿ ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದ ಮುಂದೆ ಹೋಗುತ್ತಿದ್ದೆನು. ನಾನು ಆಶ್ರಮದ ಎದುರಿಗೆ ನಿಂತು ಪ್ರಾರ್ಥನೆಯನ್ನು ಮಾಡುತ್ತಿದ್ದೆನು. ಆ ಸಮಯದಲ್ಲಿ ನನಗೆ ‘ಗುರುದೇವರು ಕಾಣಿಸುವರು, ಎಂದೆನಿಸುತ್ತಿತ್ತು.

ಮಹರ್ಷಿಗಳ ಆಜ್ಞೆಗನುಸಾರ ಪರಾತ್ಪರ ಗುರು ಡಾ. ಆಠವಲೆಯವರ ೮೦ ನೇಯ ಜನ್ಮೋತ್ಸವದ ನಿಮಿತ್ತ ಅವರ ‘ರಥೋತ್ಸವ ಸಮಾರಂಭವನ್ನು ಆಚರಿಸಲಾಯಿತು. ನನ್ನ ಅದೃಷ್ಟ ಚೆನ್ನಾಗಿತ್ತು, ಗುರುದೇವರ ‘ರಥೋತ್ಸವ ಸಮಾರಂಭವನ್ನು ನನಗೆ ಪ್ರತ್ಯಕ್ಷ ನೋಡುವ ಅವಕಾಶ ಸಿಕ್ಕಿತು. ಆ ಸಮಯದಲ್ಲಿ ನನಗೆ ರಥದಲ್ಲಿ ಮೊದಲಬಾರಿ ಸಚ್ಚಿದಾನಂದ ಪರಬ್ರಹ್ಮ ಗುರುದೇವರ ದರ್ಶನವಾಯಿತು. ಆಗ ನನಗೆ ತುಂಬಾ ಆನಂದವಾಯಿತು.

– ಓರ್ವ ಸಾಧಕಿ, ಫೊಂಡಾ, ಗೋವಾ. (೭.೨.೨೦೨೩)