ಮದರಸಾಗಳನ್ನು ನಿಲ್ಲಿಸಿ !

೧. ವೇತನ ಪಡೆಯುವ ಜನಪ್ರತಿನಿಧಿಗಳ ಕೆಲಸದ ವರದಿಯನ್ನು ತೆಗೆದುಕೊಳ್ಳಿರಿ !

ದೆಹಲಿ ಶಾಸಕರ ವೇತನವನ್ನು ಶೇ. ೬೭ ರಷ್ಟು ಹೆಚ್ಚಿಸ ಲಾಗಿದ್ದು, ಮುಖ್ಯಮಂತ್ರಿಗಳು, ಸಚಿವರು ಮೊದಲಾದವರ ವೇತನವನ್ನು ಶೇ.೧೩೬ ರಷ್ಟು ಹೆಚ್ಚಿಸಲಾಗಿದೆ. ಶಾಸಕರಿಗೆ ೯೦ ಸಾವಿರ, ಸಚಿವರಿಗೆ ೧ ಲಕ್ಷ ೭೦ ಸಾವಿರ ರೂಪಾಯಿ ದೊರೆಯಲಿದೆ.

೨. ಎಲ್ಲಾ ರಾಜ್ಯಗಳು ಇಂತಹ ನಿರ್ಧಾರ ಕೈಗೊಳ್ಳಬೇಕು !

ಚೈತ್ರ ನವರಾತ್ರಿ ಉತ್ಸವವನ್ನು ಸಂಭ್ರಮದಿಂದ ಆಚರಿಸುವಂತೆ ಉತ್ತರಪ್ರದೇಶ ಸರಕಾರವು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ತಿಳಿಸಿದೆ. ದೇವಿಯ ದೇವಾಲಯಗಳು ಮತ್ತು ಶಕ್ತಿಪೀಠಗಳಲ್ಲಿ ದುರ್ಗಾ ಸಪ್ತಶತಿ ಮತ್ತು ಅಖಂಡ ರಾಮಾಯಣವನ್ನು ಪಠಿಸಲು ಆದೇಶಿಸಲಾಗಿದೆ.

೩. ಸಾಮ್ಯವಾದಿಗಳ ರಾಜ್ಯದಲ್ಲಿ ಹದಗೆಟ್ಟ ಕಾನೂನು ಮತ್ತು ಸುವ್ಯವಸ್ಥೆ !

ಪಾಲಕ್ಕಾಡ್ (ಕೇರಳ)ದಲ್ಲಿ ಭಾಜಪದ ದಿನೇಶ ಮತ್ತು ವಿಷ್ಣು ಎಂಬ ೨ ಕಾರ್ಯಕರ್ತರ ಮೇಲೆ ಸಶಸ್ತ್ರ ಹಲ್ಲೆ ನಡೆಸಲಾಗಿದೆ. ಈ ವೇಳೆ ವಿಷ್ಣು ಇವರ ತಾಯಿ ವಿಷ್ಣು ಇವರನ್ನು ರಕ್ಷಿಸಲು ಮುಂದಾದಾಗ ಆರೋಪಿಗಳು ತಾಯಿಯನ್ನೂ ಥಳಿಸಿದ್ದಾರೆ.

೪. ಮೆಹಬೂಬಾರವರೇ, ಕಾಶ್ಮೀರದ ದೇವಾಲಯಗಳನ್ನು ಸಹ ಪುನಃಸ್ಥಾಪಿಸಿ !

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಪೂಂಚ್‌ನಲ್ಲಿರುವ ನವಗ್ರಹ ದೇವಸ್ಥಾನಕ್ಕೆ ತೆರಳಿ ಶಿವಲಿಂಗಕ್ಕೆ ಜಲಾಭಿಷೇಕ ಮಾಡಿ ಪೂಜೆ ಸಲ್ಲಿಸಿದರು. ಈ ಕೃತಿಯನ್ನು ಇಸ್ಲಾಂವಿರೋಧಿ ಎಂದು ದೇವಬಂದ್ ಟೀಕಿಸಿದೆ.

೫. ಇದನ್ನು ಎಲ್ಲಾ ರಾಜ್ಯಗಳಲ್ಲಿ ಮಾಡಬೇಕು !

ಅಸ್ಸಾಂನಲ್ಲಿ ನಾವು ೬೦೦ ಮದರಸಾಗಳನ್ನು ಮುಚ್ಚಿದ್ದೇವೆ ಮತ್ತು ಎಲ್ಲಾ ಮದರಸಾಗಳನ್ನು ಮುಚ್ಚಲು ನಾನು ಉದ್ದೇಶಿಸಿದ್ದೇನೆ; ಏಕೆಂದರೆ ನಮಗೆ ಮದರಸಾಗಳ ಬದಲಾಗಿ ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

೬. ಗೋವಿನ ರಕ್ಷಣೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ !

ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರಕಾರವು ಮದ್ಯ ಮಾರಾಟದಲ್ಲಿ ಪ್ರತಿ ಬಾಟಲಿಗೆ ೧೦ ರೂಪಾಯಿಗಳ ಗೋಮಾತಾ ಸುಂಕ ವಿಧಿಸಲು ನಿರ್ಧರಿಸಿದೆ.

೭. ಮದರಸಾಗಳನ್ನು ನಿಲ್ಲಿಸಿ !

ಮೌಲಾನಾ ಸರ್ಜನ್ ಬರ್ಕತಿಯ ಮನೆ ಸೇರಿದಂತೆ ೮ ಸ್ಥಳಗಳ ಮೇಲೆ ಜಮ್ಮು ಮತ್ತು ಕಾಶ್ಮೀರದ ರಾಜ್ಯ ತನಿಖಾ ಸಂಸ್ಥೆ ದಾಳಿ ನಡೆಸಿದೆ. ಅವನು ಮದರಸಾದ ಹೆಸರಿನಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಉತ್ತೇಜಿಸಲು ಪ್ರಯತ್ನಿಸಿದನು.