ಹಿಂದೂಗಳು ಶ್ರೇಷ್ಠ ಹಿಂದೂ ಧರ್ಮದ ಬಗ್ಗೆ ಧರ್ಮಾಭಿಮಾನವನ್ನು ಹೆಚ್ಚಿಸಿ ! – ಡಾ. ಎಸ್.ಆರ್. ಲೀಲಾ, ಮಾಜಿ ವಿಧಾನ ಪರಿಷತ್ ಸದಸ್ಯರು

ಹಿಂದೂ ಜನಜಾಗೃತಿ ಸಮಿತಿಯಿಂದ ಬೆಂಗಳೂರಿನ ಚೆನ್ನಮ್ಮನ ಕೆರೆ, ಅಚ್ಚುಕಟ್ಟು ಇಲ್ಲಿ ಹಿಂದೂ ರಾಷ್ಟ್ರ-ಜಾಗೃತಿ ಸಭೆ !

(ಎಡದಿಂದ) ಸೌ. ದೇವಕಿ ಮುಂಡರೀಕ, ದೀಪಪ್ರಜ್ವಲನೆಯನ್ನು ಮಾಡುತ್ತಿರುವ ಡಾ. ಎಸ್.ಆರ್. ಲೀಲಾ ಮತ್ತು ಶ್ರೀ. ಮೋಹನ ಗೌಡ

ಬೆಂಗಳೂರು : ಹಿಂದೂ ಧರ್ಮವು ಅತ್ಯಂತ ಪುರಾತನವಾಗಿದ್ದು, ಶ್ರೀರಾಮ-ಕೃಷ್ಣರಂತಹ ಯುಗಪುರುಷರ ಆದರ್ಶವನ್ನು ಹೊಂದಿದೆ. ಇಂತಹ ಶ್ರೇಷ್ಠ ಧರ್ಮದ ಕುರಿತು ಪ್ರತಿಯೊಬ್ಬ ಹಿಂದೂಗಳು ಧರ್ಮಾಭಿಮಾನವನ್ನು ಹೆಚ್ಚಿಸಬೇಕಿದೆ. ಇತಿಹಾಸದಲ್ಲಿ ಪರಾಕ್ರಮಿ ರಾಜರು ಆಗಿ ಹೋಗಿದ್ದಾರೆ. ಅವರ ಪರಾಕ್ರಮ ಇತಿಹಾಸವನ್ನು ನೆನೆದು ನಾವು ಹಿಂದೂ ರಾಷ್ಟ್ರವನ್ನು ಸ್ಥಾಪಿಸೋಣ ಎಂದು ವಿಧಾನ ಪರಿಷತ್‌ನ ಮಾಜಿ ಸದಸ್ಯರಾದ ಡಾ. ಎಸ್. ಆರ್. ಲೀಲಾ ಇವರು ಕರೆ ನೀಡಿದರು. ಅವರು ಹಿಂದೂ ಜನಜಾಗೃತಿ ಸಮಿತಿಯಿಂದ ಬೆಂಗಳೂರಿನ ಬನಶಂಕರಿ ಮೂರನೇ ಹಂತ, ಚೆನ್ನಮ್ಮನ ಕೆರೆ ಅಚ್ಚುಕಟ್ಟು ಇಲ್ಲಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾದ ಹಿಂದೂ ರಾಷ್ಟ್ರ-ಜಾಗೃತಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಶ್ರೀ. ಮೋಹನ ಗೌಡ ಹಾಗೂ ಸನಾತನ ಸಂಸ್ಥೆಯ ಸೌ. ದೇವಕಿ ಮುಂಡರೀಕ ಇವರೂ ಉಪಸ್ಥಿತರಿಗೆ ರಾಷ್ಟ್ರ-ಧರ್ಮದ ಬಗ್ಗೆ ಮಾರ್ಗದರ್ಶನವನ್ನು ಮಾಡಿದರು.

ಹಿಂದೂಗಳ ರಕ್ಷಣೆಗಾಗಿ ಭಾರತವನ್ನು ‘ಹಿಂದೂ ರಾಷ್ಟ್ರ’ವೆಂದು ಘೋಷಿಸಿ – ಶ್ರೀ. ಮೋಹನ ಗೌಡ

ಶ್ರೀ. ಮೋಹನ ಗೌಡ

ಈ ಬಾರಿ ಹೋಳಿ ಹಬ್ಬದ ಸಮಯದಲ್ಲಿ ದೇಶದಾದ್ಯಂತ ಹಿಂದೂಗಳ ಮೇಲೆ ಆಕ್ರಮಣವಾಗಿದೆ. ಶಿವರಾತ್ರಿಯ ಸಮಯದಲ್ಲಿ ಹಿಂದೂಗಳ ಮೇಲೆ ಆಕ್ರಮಣ ನಡೆದಿದೆ. ಹೀಗೆ ಪ್ರತಿ ಹಬ್ಬದ ಸಮಯದಲ್ಲಿ ಹಿಂದೂಗಳ ಮೇಲೆ ಆಕ್ರಮಣ ನಡೆಯುತ್ತಿದೆ. ಬಹುಸಂಖ್ಯಾತ ಹಿಂದೂಗಳಿರುವ ಭಾರತದಲ್ಲಿ ಇಂದು ಹಿಂದೂಗಳು ಸುರಕ್ಷಿತವಾಗಿದ್ದಾರೆಯೇ ? ಇಂದು ದೇಶಾದ್ಯಂತ ಹಿಂದೂ ನಾಯಕರ ಹತ್ಯೆ, ಲವ್ ಜಿಹಾದ್, ಮತಾಂತರದ ಪ್ರಕರಣಗಳು ಮುಗಿಲು ಮಟ್ಟಿದ್ದು ಹಿಂದೂಗಳ ಅಸ್ತಿತ್ವದ ಪ್ರಶ್ನೆ ನಿರ್ಮಾಣವಾಗಿದೆ. ಹಾಗಾಗಿ ಇಂದು ಹಿಂದೂಗಳು ಸ್ವತಃ ಜಾಗೃತರಾಗುವುದು ಅತ್ಯವಶ್ಯಕವಾಗಿದೆ.

ಭಾರತವನ್ನು ‘ಹಿಂದೂ ರಾಷ್ಟ್ರ ಎಂದು ಏಕೆ ಘೋಷಿಸಲಾಗುವುದಿಲ್ಲ ? – ಶ್ರೀ. ಸುನೀಲ ಘನವಟ, ಹಿಂದೂ ಜನಜಾಗೃತಿ ಸಮಿತಿ

ಸುನೀಲ್ ಘನವಟ

‘೧೯೪೭ ರಲ್ಲಿ ದೇಶದ ವಿಭಜನೆಯಾಯಿತು. ಇಸ್ಲಾಮಿ ರಾಷ್ಟ್ರವೆಂದು ಪಾಕಿಸ್ತಾನದ ನಿರ್ಮಾಣವಾಯಿತು. ಉಳಿದ ರಾಷ್ಟ್ರವು ‘ಹಿಂದೂ ರಾಷ್ಟ್ರವೆಂದು ಘೋಷಿಸಬಹುದಾಗಿತ್ತು; ಆದರೆ ಹಾಗೆ ಆಗಲಿಲ್ಲ. ೧೯೭೬ ರಲ್ಲಿ ೪೨ ನೇ ತಿದ್ದುಪಡಿ ಯನ್ನು ಮಾಡುತ್ತ ದೇಶಕ್ಕೆ ‘ಜಾತ್ಯಾತೀತ ರಾಷ್ಟ್ರ ಎಂದು ಘೋಷಿಸಲಾಯಿತು. ಜಗತ್ತಿನಲ್ಲಿ ೧೫೭ ಕ್ರೈಸ್ತರ, ೫೨ ಮುಸಲ್ಮಾನರ, ೧೨ ಬೌದ್ಧರ ಮತ್ತು ಯಹೂದಿ ರಾಷ್ಟ್ರಗಳಿವೆ. ಭಾರತದ ಒಟ್ಟು ಜನಸಂಖ್ಯೆಗಳಲ್ಲಿ ಶೇ. ೮೦ ರಷ್ಟು ಹಿಂದೂಗಳಿರುವಾಗ ಭಾರತವನ್ನು ‘ಹಿಂದೂ ರಾಷ್ಟ್ರವೆಂದು ಏಕೆ ಘೋಷಿಸಲಾಗುವುದಿಲ್ಲ ? ಆದ್ದರಿಂದ ಈ ದೇಶವು ಹಿಂದೂ ರಾಷ್ಟ್ರವೆಂದು ಘೋಷಿಸುವವರೆಗೆ ನಾವು ಸುಮ್ಮನಿರುವುದಿಲ್ಲ.

– ಶ್ರೀ. ಸುನೀಲ ಘನವಟ, ಹಿಂದೂ ಜನಜಾಗೃತಿ ಸಮಿತಿ.