ತಮಿಳುನಾಡಿನ ಭಾಜಪದ ೧೩ ನಾಯಕರು ಅಣ್ಣಾದ್ರಮುಕ ಪಕ್ಷದಲ್ಲಿ ಪ್ರವೇಶ !

ಅಣ್ಣಾದ್ರಮುಕ ಪ್ರಮುಖ ಫಲಾನಿಸ್ವಾಮಿ

ಚೆನ್ನೈ – ತಮಿಳುನಾಡಿನ ಭಾಜಪದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ೧೩ ನಾಯಕರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಾ, ಅಣ್ಣಾದ್ರಮುಕ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇದರ ವಿರುದ್ಧ ಭಾಜಪದ ನಾಯಕರು ಪ್ರತಿಭಟನೆ ಮಾಡುತ್ತಾ ಅಣ್ಣಾದ್ರಮುಕನ ಪ್ರಮುಖ ಫಲಾನಿಸ್ವಾಮಿ ಇವರ ಮೇಲೆ ಮೈತ್ರಿ ತತ್ವದ ಉಲ್ಲಂಘನೆ ಮಾಡಿರುವ ಆರೋಪ ಮಾಡಿದ್ದಾರೆ. ಅಣ್ಣಾದ್ರಮುಕ ಮಾತ್ರ ಭಾಜಪದ ಈ ಆರೋಪ ತಳ್ಳಿಹಾಕಿದೆ. ಮಾರ್ಚ್ ೫ ರಂದು ಭಾಜಪದ ಇತರ ೫ ನಾಯಕರು ಭಾಜಪದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಇದರಲ್ಲಿ ಭಾಜಪದ ಮಾಹಿತಿ ಮತ್ತು ತಂತ್ರಜ್ಞಾನ ಶಾಖೆಯ ಪ್ರಮುಖ ನಿರ್ಮಲ ಕುಮಾರ ಇವರ ಸಮಾವೇಶ ಕೂಡ ಇದೆ. ನಿರ್ಮಲ ಕುಮಾರ ಇವರು, ‘ಭಾಜಪದ ಪ್ರದೇಶಾಧ್ಯಕ್ಷ ಅಣ್ಣಾಮಲೈ ಇವರ ಆಡಳಿತಾರೂಢ ದ್ರಮುಕ ಪಕ್ಷದ ನಾಯಕರ ಜೊತೆಗೆ ಹೊಂದಾಣಿಕೆ ಇದೆ’, ಎಂದು ಆರೋಪಿಸಿದ್ದರು.