ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಕೋಲಾಹಲ
ಶ್ರೀನಗರ (ಜಮ್ಮು-ಕಾಶ್ಮೀರ) – ನವೆಂಬರ್ 8 ರಂದು, ಅಂದರೆ ಸತತ ನಾಲ್ಕನೇ ದಿನವೂ ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಭಾರಿ ಕೋಲಾಹಲ ನಡೆದಿದೆ. ಅವಾಮಿ ಇತ್ತೆಹಾದ್ ಪಕ್ಷದ ಶಾಸಕ ಖುರ್ಷಿದ್ ಅಹ್ಮದ್ ಶೇಖ್ ಅವರು 370 ನೇ ವಿಧಿಯನ್ನು ಪುನಃ ಮರಳಿ ತರುವುದಕ್ಕಾಗಿ ಫಲಕವನ್ನು ಎತ್ತಿ ತೋರಿಸಲು ಪ್ರಯತ್ನಿಸಿದರು. ಅವರನ್ನು ವಿರೋಧ ಪಕ್ಷದ ನಾಯಕರು ಕೂಡಲೇ ತಡೆದರು. ಈ ಸಂದರ್ಭದಲ್ಲಿ ಶಾಸಕರ ನಡುವೆ ಹಿಂದಿನ ದಿನದಂತೆ ಈ ಬಾರಿಯೂ ವಾಗ್ವಾದ ನಡೆದಿದೆ. ಒಬ್ಬ ಶಾಸಕರು ಮೇಜಿನ ಮೇಲೆ ಹತ್ತಿದರು. ಭದ್ರತಾ ಸಿಬ್ಬಂದಿಯವರು ಖುರ್ಷಿದ್ ಅಹ್ಮದ್ ಅವರನ್ನು ಹೊರಗೆಳೆದರು. ಆನಂತರ ಭಾಜಪದ ಎಲ್ಲ ನಾಯಕರು ಸಭಾತ್ಯಾಗ ಮಾಡಿದರು.
ಸಂಪಾದಕೀಯ ನಿಲುವುಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ನೇ ವಿಧಿಯನ್ನು ಎಂದಿಗೂ ಹಿಂಪಡೆಯಲು ಸಾಧ್ಯವಿಲ್ಲ, ಎಂದು ತಿಳಿದಿದ್ದರೂ ಮತಕ್ಕಾಗಿ ರಾಜಕಾರಣ ಮಾಡುವುದಕ್ಕಾಗಿಯೇ ಶಾಸಕರ ಈ ಪ್ರಯತ್ನ ಇದೆ, ಇದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ! |