ಭಾರತೀಯ ಕಾಲಗಣನೆಯ ಮಹತ್ವ !

‘ಭಾರತೀಯ ಕಾಲಗಣನೆಯಲ್ಲಿ ಯುಗ ಪದ್ಧತಿಯ ವಿಚಾರವನ್ನು ಮಾಡಲಾಗುತ್ತದೆ. ಸತ್ಯ (ಕೃತ), ತ್ರೇತಾ, ದ್ವಾಪರ ಮತ್ತು ಕಲಿ ಹೀಗೆ ೪ ಯುಗಗಳಿವೆ. ಕಲಿಯುಗದಲ್ಲಿ ೪ ಲಕ್ಷ ೩೨ ಸಾವಿರ ವರ್ಷಗಳಿವೆ. ಅದರ ೨, ೩ ಮತ್ತು ೪ ಪಟ್ಟು ಅನುಕ್ರಮವಾಗಿ ದ್ವಾಪರ, ತ್ರೇತಾ ಮತ್ತು ಸತ್ಯ (ಕೃತ) ಈ ಯುಗಗಳಿವೆ. ಈ ೪ ಯುಗಗಳ ಒಂದು ಮಹಾಯುಗವಾಗುತ್ತದೆ. ಅಂದರೆ ಅದು ಕಲಿಯುಗದ ೧೦ ಪಟ್ಟು ಇರುತ್ತದೆ. ಮಹಾಯುಗ ೪೩ ಲಕ್ಷ ೨೦ ಸಾವಿರ ವರ್ಷಗಳದ್ದಾಗಿದೆ. ಇಂತಹ ೧ ಸಾವಿರ ಮಹಾಯುಗಗಳೆಂದರೆ ೧ ಕಲ್ಪ. ಇದು ಬ್ರಹ್ಮದೇವನ ಒಂದು ದಿನವಾಗಿದೆ. ಒಂದು ಕಲ್ಪದಲ್ಲಿ ೧೪ ಮನು ಆಗುತ್ತವೆ. ಪ್ರತಿಯೊಂದು ಮನುವಿನಲ್ಲಿ ೭೧ ಮಹಾಯುಗಗಳಾಗುತ್ತವೆ. ಈಗ ನಡೆಯುತ್ತಿರುವ ಮನ್ವಂತರ (ಮನು) ೭ ನೇ ಮನು ಆಗಿದ್ದು ಇದರಲ್ಲಿನ ೨೭ ಮಹಾಯುಗಗಳು ಹೋಗಿ ೨೮ ನೇ ಮಹಾಯುಗ ನಡೆಯುತ್ತಿದೆ. ಕಲಿಯುಗದ ಒಟ್ಟು ಅವಧಿಯಲ್ಲಿ ಈಗ ೫ ಸಾವಿರದ ೧೨೩ ವರ್ಷಗಳು ಕಳೆದಿವೆ. ಇನ್ನೂ ೪ ಲಕ್ಷ ೨೬ ಸಾವಿರದ ೮೭೭ ವರ್ಷ ಬಾಕಿ ಇವೆ.

‘ಚೈತ್ರ ಶುಕ್ಲ ಪಕ್ಷ ಪಾಡ್ಯದಂದು ಸಂವತ್ಸರ ಆರಂಭವಾಗುತ್ತದೆ. ಇದು ಹಿಂದೂ ಹೊಸ ವರ್ಷದ ಮೊದಲ ದಿನವಾಗಿದೆ. ಪೂರ್ವಾಫಾಲ್ಗುಣಿ ಇದು ಸಂವತ್ಸರದ ಕೊನೆಯ ರಾತ್ರಿ ಮತ್ತು ಉತ್ತರಾಫಾಲ್ಗುನಿ ಇದು ಸಂವತ್ಸರದ ಮೊದಲ ರಾತ್ರಿ ಆಗಿದೆ. ಇದರ ಅರ್ಥ ಸಂವತ್ಸರದ ಕೊನೆಯ ರಾತ್ರಿ ಪೂರ್ವಾಫಾಲ್ಗುಣಿ ನಕ್ಷತ್ರದಲ್ಲಿ ಚಂದ್ರ ಇರುತ್ತಾನೆ ಮತ್ತು ಸಂವತ್ಸರದ ಪ್ರಾರಂಭದ ದಿನ ಉತ್ತರಾಫಾಲ್ಗುಣಿ ನಕ್ಷತ್ರದಲ್ಲಿ ಚಂದ್ರನ ಭ್ರಮಣ (ಸಂಚಾರ) ನಡೆದಿರುತ್ತದೆ. ಸಂವತ್ಸರವೆಂದರೆ ‘ಸಮ + ವಸಂತಿ + ಋತುವಃ |’, ಅಂದರೆ ಎಲ್ಲ ಋತುಗಳು ಯಾವುದರಲ್ಲಿ ಬರುತ್ತವೆಯೊ, ಅಂತಹ ಕಾಲ ಅಥವಾ ವರ್ಷ. ಜ್ಯೋತಿಷ್ಯಶಾಸ್ತ್ರದಲ್ಲಿ ೬೦ ಸಂವತ್ಸರಗಳಿವೆ. ಪ್ರತಿಯೊಂದು ಸಂವತ್ಸರಕ್ಕೆ ಬೇರೆ ಬೇರೆ ಹೆಸರುಗಳಿವೆ. ೬೦ ವರ್ಷಗಳ ೧ ಚಕ್ರ ಇರುತ್ತದೆ. ಅಂದರೆ ೬೦ ವರ್ಷಗಳ ನಂತರ ಪುನಃ ಅದೇ ಸಂವತ್ಸರ ಬರುತ್ತದೆ. ಸಂವತ್ಸರದ ಫಲವನ್ನು ಅದರ ಹೆಸರಿಗನುಸಾರ ತಿಳಿದುಕೊಳ್ಳಬೇಕು. ೨೨ ಮಾರ್ಚ್‌ನಿಂದ ‘ಶೋಭಕೃತ್’ ಸಂವತ್ಸರ ಆರಂಭವಾಗುತ್ತಿದೆ.’

– ಸೌ. ಪ್ರಾಜಕ್ತಾ ಜೋಶಿ, ಜ್ಯೋತಿಷ್ಯ ಫಲಿತ ವಿಶಾರದೆ, ವಾಸ್ತು ವಿಶಾರದೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಫೋಂಡಾ ಗೋವಾ.