ಯುಗಾದಿ ಹಿಂದೂಗಳ ಮಹತ್ವದ ಹಬ್ಬವಾಗಿದೆ. ಹಿಂದೂಗಳ ಹೊಸ ವರ್ಷ ಈ ದಿನದಿಂದ ಪ್ರಾರಂಭವಾಗುತ್ತದೆ. ಈ ದಿನದಂದು ಪೃಥ್ವಿಯ ಮೇಲೆಬ್ರಹ್ಮನ ಮತ್ತುವಿಷ್ಣುವಿನ ತತ್ತ್ವಗಳು ಅಗಾಧ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತವೆ. ಇದೇ ದಿನದಂದು ವನವಾಸವನ್ನು ಮುಗಿಸಿ ಮರಳಿದ ಪ್ರಭು ಶ್ರೀರಾಮನನ್ನು ಮುಂಬಾಗಿಲಿನಲ್ಲಿ ಬ್ರಹ್ಮಧ್ವಜ ನಿಲ್ಲಿಸಿ ಪ್ರಜೆಗಳು ಸ್ವಾಗತಿಸಿದರು. ಅಂದಿನಿಂದ ಬ್ರಹ್ಮಧ್ವಜ ಸ್ಥಾಪನೆಯು ಪ್ರಾರಂಭವಾಗಿದೆ. ಈ ದಿನದಂದು ಪ್ರಜಾಪತಿಯ ಲಹರಿಗಳು ದೊಡ್ಡ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತವೆ. ಈ ಲಹರಿಗಳ ಮಾಧ್ಯಮದಿಂದ ಪ್ರತ್ಯಕ್ಷ ಈಶ್ವರನ ತತ್ತ್ವವುಕಾರ್ಯನಿರತವಾಗಿರುತ್ತದೆ. ಅಲ್ಲದೇ ಈ ದಿನದಂದು ರಾಮತತ್ತ್ವ ಶೇ. ೧೦೦ ರಷ್ಟು ಅಧಿಕ ಕಾರ್ಯನಿರತವಾಗಿರುತ್ತದೆ. ಬ್ರಹ್ಮ ಧ್ವಜದ ಮಾಧ್ಯಮದಿಂದ ಕಾರ್ಯನಿರತವಾಗಿರುವ ಈಶ್ವರನ ಶಕ್ತಿಯು ಜೀವಕ್ಕೆ ಲಾಭದಾಯಕವಾಗಿರುತ್ತದೆ.