ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಅಮೃತ ವಚನಗಳು

ಶ್ರೀಚಿತ್‌ಶಕ್ತಿ(ಸೌ.) ಅಂಜಲೀ ಗಾಡಗೀಳ

೧. ಓರ್ವ ಸಾಧಕನು ಮನಸ್ಸಿನಲ್ಲಿ ಭಜನೆಯನ್ನು ಗುಣಗುಟ್ಟುತ್ತಿರುವಾಗ, ಅದೇ ಸಮಯದಲ್ಲಿ ಶ್ರೀಚಿತ್‌ಶಕ್ತಿ(ಸೌ.) ಅಂಜಲಿ ಮುಕುಲ ಗಾಡಗೀಳ ಇವರೂ ಅದೇ ಭಜನೆಯನ್ನು ಹೇಳುವುದು,ಇದರ ಬಗ್ಗೆ ಅವರು ಹೇಳಿದ ಶಾಸ್ತ್ರ

‘ಒಮ್ಮೆ ಓರ್ವ ಸಾಧಕನು ಚತುಷ್ಚಕ್ರ ವಾಹನದಲ್ಲಿ (ಕಾರಿನಲ್ಲಿ) ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಜೊತೆಗೆ ಕುಳಿತಿರುವಾಗ ಅವನು ಮನಸ್ಸಿನಲ್ಲಿ ಒಂದು ಭಜನೆಯನ್ನು ಗುಣಗುಟ್ಟುತ್ತಿದ್ದನು. ಅದೇ ಸಮಯದಲ್ಲಿ ಪಕ್ಕದಲ್ಲಿ ಕುಳಿತಿದ್ದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರೂ ಅದೇ ಭಜನೆಯನ್ನು ಹೇಳತೊಡಗಿದರು. ಇದನ್ನು ನೋಡಿ ಆ ಸಾಧಕನು ಒಮ್ಮೆಲೇ ಆಶ್ಚರ್ಯದಿಂದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರನ್ನು ನೋಡಿ, ”ನಾನೂ ಇದೇ ಭಜನೆಯನ್ನು ಮನಸ್ಸಿನಲ್ಲಿ ಗುಣುಗುಟ್ಟುತ್ತಿದ್ದೆ’’ ಎಂದು ಹೇಳಿದನು. ಅದಕ್ಕೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರವರು, ”ಸಂತರ ಮನಸ್ಸು ಸುತ್ತಮುತ್ತಲಿನ ಚಲನವಲನಗಳ ಬಗ್ಗೆ ಜಾಗರೂಕವಾಗಿರುತ್ತದೆ. ಸಾಧನೆಯಿಂದ ಅವರ ಸೂಕ್ಷ್ಮ ಮನಸ್ಸು ಜಾಗೃತವಾಗಿರುವುದರಿಂದ ಕೆಲವೊಮ್ಮೆಅದು ಸುತ್ತಮುತ್ತಲಿನ ಸ್ಪಂದನಗಳೊಂದಿಗೆ ಏಕರೂಪವಾಗುವುದರಿಂದ ಸಂತರಿಗೆ ಸುತ್ತಮುತ್ತಲಿನ ಘಟನೆಗಳ ಅರಿವಾಗುತ್ತದೆ. ಇದು ಹಾಗೆಯೇ ಆಯಿತು. ಆದುದರಿಂದ ಸಾಧಕನ ಮನಸ್ಸಿನಲ್ಲಿ ನಡೆಯುತ್ತಿದ್ದ ಭಜನೆಯ ಸ್ಪಂದನಗಳನ್ನು ನನಗೆ ಗುರುತಿಸಲು ಬಂದಿತು ಮತ್ತು ಅದೇ ಭಜನೆಯು ನನ್ನ ಬಾಯಲ್ಲಿ ಬಂದಿತು’’, ಎಂದು ಹೇಳಿದರು.

೨. ಈಶ್ವರೀ ಜ್ಞಾನದ ಮಾಧ್ಯಮದಿಂದಾಗುವ ಸಾಧನೆ

ಕೇವಲ ಜ್ಞಾನಪ್ರಾಪ್ತಿ ಮಾಡಿಕೊಳ್ಳುವುದು ಮತ್ತು ಅದಕ್ಕನುಸಾರ ಆಚರಣೆ ಮಾಡದಿರುವುದು, ಇದು ಒಂದು ರೀತಿಯಲ್ಲಿ ಅಜ್ಞಾನವೇ ಆಗಿದೆ. ‘ಮೊದಲು ಜ್ಞಾನಾರ್ಜನೆ ಮಾಡುವುದು ಮತ್ತು ಅದರಂತೆ ಸ್ವತಃ ಆಚರಣೆ ಮಾಡುವುದು ಮತ್ತು ನಂತರ ಆ ಜ್ಞಾನವನ್ನು ಸಮಷ್ಟಿಗೆ ಕೊಡುವುದು’, ಇದು ಈಶ್ವರೀ ಜ್ಞಾನದ ಮಾಧ್ಯಮದಿಂದ ಆಗುವ ಸಾಧನೆಯಾಗಿದೆ.

೨ ಅ. ಜ್ಞಾನದಲ್ಲಿನ ಚೈತನ್ಯ ಯೋಗ್ಯ ರೀತಿಯಲ್ಲಿ ಕಾರ್ಯ ಮಾಡಲು ಜ್ಞಾನಾರ್ಜನೆಯಲ್ಲಿನ ‘ಶ್ರೀ ಗುರುಗಳ ಸಂಕಲ್ಪ’ ಮಹತ್ವದಾಗಿದೆ ! :ಯಾವ ಜ್ಞಾನವು ಈಶ್ವರನ ಕೃಪೆಯಿಂದ ದೊರಕಿದೆಯೋ,  ಯಾವುದರ ಸಾಕ್ಷಾತ್ಕಾರವು ಅನುಭವದಿಂದ ಮತ್ತು ಅನುಭೂತಿ ಯಿಂದಾಗಿದೆಯೋ, ಇಂತಹ ಅಹಂಶೂನ್ಯ ಜ್ಞಾನದಲ್ಲಿ ದೈವೀ ಚೈತನ್ಯ ಇರುತ್ತದೆ. ಇದೇ ದೈವೀ ಚೈತನ್ಯವು ಮುಂದೆ ಭಗವಂತನ ರೂಪದಲ್ಲಿ ಕಾರ್ಯವನ್ನು ಮಾಡುತ್ತದೆ. ಜ್ಞಾನದಲ್ಲಿನಚೈತನ್ಯವು ಯೋಗ್ಯ ರೀತಿಯಲ್ಲಿ ಕಾರ್ಯ ಮಾಡಲು ಮುಖ್ಯವಾಗಿ ಜ್ಞಾನಾರ್ಜನೆಯಲ್ಲಿನ ‘ಶ್ರೀಗುರುಗಳ ಸಂಕಲ್ಪವು’ ಮಹತ್ವದಾಗಿದೆ.

೨ ಆ. ‘ಈಶ್ವರೀ ಜ್ಞಾನದ’ ಫಲನಿಷ್ಪತ್ತಿ : ಕಾಲಕ್ಕನುಸಾರ ಸಾಧನೆಗಾಗಿ ಅವಶ್ಯಕ ಜ್ಞಾನ, ಜ್ಞಾನ ಪಡೆಯುವ ಸಾಧಕನ ಸಾಧನೆಯ ತಳಮಳ ಮತ್ತು ಅವನ ಸ್ವಂತದ ಸಾಧನೆ ಮತ್ತು ಕೊನೆಗೆ ಸಾಧನೆಗಾಗಿ ಜ್ಞಾನದ ಪ್ರತ್ಯಕ್ಷ ಲಾಭ ಮಾಡಿಕೊಳ್ಳುವ ಜೀವದ ಜಿಜ್ಞಾಸುವೃತ್ತಿ ಈ ಎಲ್ಲ ಘಟಕಗಳ ಮೇಲೆ ಈಶ್ವರೀ ಜ್ಞಾನದ ಫಲಶೃತಿಯು ಅವಲಂಬಿಸಿರುತ್ತದೆ.’

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ (೨೯.೪.೨೦೨೦)