ಆಂಗ್ಲರು ೧೯೪೯ ರಲ್ಲಿ ಸ್ಥೂಲದಲ್ಲಿ ಭಾರತವನ್ನು ತೊರೆದಿದ್ದಾರೆ; ಆದರೆ ಅವರ ರೂಢಿ, ಪರಂಪರೆಗಳು, ಪದ್ಧತಿಗಳು, ಆಡಳಿತ ವ್ಯವಸ್ಥೆಯ ನಿಯಮಗಳು, ಮಾತ್ರವಲ್ಲ, ಕಾನೂನುಗಳನ್ನು ಸಹ ಇಲ್ಲಿ ಬಿಟ್ಟು ಹೋಗಿದ್ದಾರೆ. ಸ್ವಾತಂತ್ರ್ಯದ ನಂತರವೂ, ಅವು ನಮಗೆಷ್ಟು ಮೈಗೂಡಿವೆ ಯೆಂದರೆ, ನಾವು ಇನ್ನೂ ‘ಅವು ನಮ್ಮದೇ ಆಗಿವೆ ಎಂದು ಭಾವಿಸುತ್ತೇವೆ. ಚಹಾ ಕುಡಿಯುವುದು, ಆಸನ ಮತ್ತು ಮೇಜಿನ ಮೇಲೆ ಕುಳಿತು ಚಮಚದಿಂದ ಆಹಾರ ಸೇವಿಸುವುದು ಇಲ್ಲಿಂದ ಹಿಡಿದು ಮದುವೆಯ ಆರತಕ್ಷತೆ ಸಮಾರಂಭ (ರಿಸೆಪ್ಶನ್) ಆಚರಣೆ; ಆಸ್ಪತ್ರೆಗಳು, ಮಹಾವಿದ್ಯಾಲಯಗಳು, ರಸ್ತೆಗಳು, ನಿಲ್ದಾಣಗಳ ಹೆಸರಿನಿಂದ ಹಿಡಿದು ಸಾರ್ವಜನಿಕ ರಜಾದಿನಗಳ ವರೆಗೆ; ಆಡಳಿತಾತ್ಮಕ ‘ಬಾಬುನಿಂದ ಗುಮಾಸ್ತರ ಶಿಕ್ಷಣದ ವರೆಗೆ; ಸೈನ್ಯದ ಪರೇಡ್ ಮತ್ತು ಇತರ ಮಾನ-ಸನ್ಮಾನಗಳ ಪದ್ಧತಿ ಯಿಂದ ಹಿಡಿದು ಸಂವಿಧಾನದ ಕಾನೂನುಗಳ ವರೆಗಿನ ಅನೇಕ ವಿಷಯಗಳನ್ನು ಆಂಗ್ಲರ ಅಧಿಕಾರ ಹೋಗಿದ್ದರೂ ಇದ್ದ ಹಾಗೆ ಮುಂದುವರಿಸಿದೆವು. ಸ್ವಾಭಿಮಾನವನ್ನು ಕಳೆದು ಕೊಂಡಿರುವ ಮತ್ತು ಪಾಶ್ಚಿಮಾತ್ಯ ಪದ್ಧತಿಗಳನ್ನು ‘ಉನ್ನತ ಎಂದು ಪರಿಗಣಿಸಿದ ನೆಹರೂ ಮತ್ತು ಕಾಂಗ್ರೆಸ್ ಸರಕಾರದ ಕುಸಂಸ್ಕೃತಿಯಲ್ಲಿ ಸರ್ವೋಚ್ಚ ಮೌಲ್ಯಗಳನ್ನು ಕಾಪಾಡುವ ಸನಾತನ ಭಾರತೀಯ ಸಂಪ್ರದಾಯವು ಸಂಪೂರ್ಣ ನಿರ್ಲಕ್ಷ ಕ್ಕೊಳಗಾಯಿತು. ಈಗ ಸಂಸ್ಕೃತಿಪಾಲನೆಯು ಸಂವಿಧಾನದ ಮೊದಲ ಪುಟದಲ್ಲಿ, ಪ್ರಭು ಶ್ರೀರಾಮನ ಚಿತ್ರದವರೆಗೆ ಮಾತ್ರ ಸೀಮಿತವಾಗಿದೆ; ಆದರೆ ನಿಜವಾದ ಅರ್ಥದಲ್ಲಿ ರಾಮರಾಜ್ಯ ಬರಲು ಅದು ರಾಜ್ಯಭಾರದ ತನಕ ತಲುಪಲಿಲ್ಲ.
ಮೋದಿ ಸರಕಾರ ಅಧಿಕಾರಕ್ಕೆ ಬಂದಾಗ, ರಾಷ್ಟ್ರ ಮತ್ತು ಧರ್ಮ ನಿಷ್ಠರ ಭರವಸೆಗಳು ಪುಟಿದೆದ್ದವು. ಈಗ ಕೆಲವು ವರ್ಷಗಳ ನಂತರ ಸಂಸ್ಕೃತಿಯ ಪುನರುತ್ಥಾನವಾಗಲು ಕ್ರಮೇಣ ಸರಕಾರಿ ಮಟ್ಟದಲ್ಲಿ ಚಾಲನೆ ದೊರೆಯುತ್ತಿದೆ ಮತ್ತು ಅದು ಸಾಕಾರಗೊಳ್ಳಲು ಆರಂಭವಾಗಿದೆ. ರಾಜಧಾನಿಯಲ್ಲಿ ರಸ್ತೆಗಳು, ಹಾಗೆಯೇ ದೇಶದ ನಗರಗಳು ಮತ್ತು ಕೇಂದ್ರಗಳಿಗೆ ಇತಿಹಾಸ ದಲ್ಲಿದ್ದ ಮೂಲ ಹೆಸರುಗಳು ಬದಲಾಗಿವೆ, ಈಗ ಆ ಮೂಲ ಹೆಸರು ಮರನಾಮಕರಣ ಆರಂಭವಾಗಿದೆ. ಅಂಡಮಾನ್-ನಿಕೋಬಾರ್ ದ್ವೀಪಗಳಲ್ಲಿನ ೩ ದ್ವೀಪಗಳ ಆಂಗ್ಲ ಹೆಸರುಗಳನ್ನು ‘ಶಹೀದ್, ‘ಸ್ವರಾಜ್ಯ ಮತ್ತು ‘ನೇತಾಜಿ ಸುಭಾಷ್ ಚಂದ್ರ ಬೋಸ್ ಎಂದು ಬದಲಾಯಿಸಲಾಯಿತು. ಪ್ರಧಾನಮಂತ್ರಿಯ ನಿವಾಸದ ಹೆಸರನ್ನು ‘೭ ರೇಸ್‌ಕೋರ್ಸ್ನಿಂದ ‘೭ ಲೋಕಕಲ್ಯಾಣ ಮಾರ್ಗ ಎಂದು ಬದಲಾಯಿಸಲಾಯಿತು. ಮೋದಿ ಸರಕಾರವು ಇಲ್ಲಿಯವರೆಗೆ, ಬ್ರಿಟಿಷ್ ಕಾಲದ ಒಂದೂವರೆ ಸಾವಿರ ಕಾನೂನುಗಳು ಮತ್ತು ನಿಯಮಗಳನ್ನು ಬದಲಾಯಿಸಿದೆ. ಆಂಗ್ಲರು ಅವುಗಳನ್ನು ತಮ್ಮ ಲಾಭಕ್ಕಾಗಿ ರಚಿಸಿದ್ದರು ಮತ್ತು ಅವು ಭಾರತೀಯರಿಗೆ ಅನ್ಯಾಯ ಮಾಡುವಂತಿತ್ತು. ಅಂದಿನಿಂದ, ಪಠ್ಯಕ್ರಮದಲ್ಲಿಯೂ ಸನಾತನ ಭಾರತೀಯ ಪರಂಪರೆಯ ಜ್ಞಾನವಿಜ್ಞಾನ ಸಹಿತ ಅನೇಕ ವಿಷಯಗಳು ಬರತೊಡಗಿವೆ ಮತ್ತು ದೇಶದ ಪರಾಕ್ರಮಿ ರಾಷ್ಟ್ರಪುರುಷರ ಸತ್ಯ ಇತಿಹಾಸವೂ ಮುನ್ನೆಲೆಗೆ ಬಂದಿದೆ. ಕಳೆದ ವರ್ಷ ಸ್ವಾತಂತ್ರ್ಯದಿನದಂದು ಪ್ರಧಾನಿ ಮೋದಿಯವರು ಜನರೆದುರು ಮೂರು ಸಂಕಲ್ಪಗಳನ್ನು ಇಟ್ಟರು. ಅವುಗಳಲ್ಲಿ, ಎರಡು ಸಂಕಲ್ಪಗಳು ‘ಗುಲಾಮಗಿರಿಯ ಪ್ರತಿಯೊಂದು ವಿಚಾರದಿಂದ ಮುಕ್ತಿ ಮತ್ತು ‘ಪರಂಪರೆಯ ಬಗ್ಗೆ ಹೆಮ್ಮೆ. ಪರಸ್ಪರ ಪೂರಕವಾಗಿರುವ ಇವೆರಡೂ ಸಂಕಲ್ಪಗಳನ್ನು ಘೋಷಿಸಿದ ನಂತರ, ಭಾರತದಲ್ಲಿರುವ ಗುಲಾಮಗಿರಿಯ ಅನೇಕ ಕುರುಹು ಗಳು ಅಳಿಸಿ ಹಾಕುವ ಕಾರ್ಯದ ವೇಗಕ್ಕೆ ಚಾಲನೆ ಸಿಕ್ಕಿತು.
ಸೇನಾದಳದಲ್ಲಿ ಬದಲಾವಣೆ
ಗಣರಾಜ್ಯೋತ್ಸವದಂದು ಕಾರ್ಯಕ್ರಮದ ಕೊನೆಯಲ್ಲಿ, ಸೈನ್ಯದ ‘ಬಿಟಿಂಗ್ ದಿ ರಿಟ್ರೀಟ್ ಈ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಲಾಗುತ್ತದೆ . ಈ ಸಂಗೀತ ಕಾರ್ಯಕ್ರಮದಲ್ಲಿ ನುಡಿಸಲಾಗುವ ಪಾಶ್ಚಾತ್ಯ ವಾದ್ಯಗಳನ್ನು ತೆಗೆದು ಅಲ್ಲಿ ಸಾಂಪ್ರದಾಯಿಕ ಭಾರತೀಯ ವಾದ್ಯಗಳ ಸಂಗೀತವನ್ನು ಮೋದಿ ಸರಕಾರವು ಅಧಿಕಾರಕ್ಕೆ ಬಂದ ಕೂಡಲೇ ೨೦೧೫ ರ ಗಣರಾಜ್ಯೋತ್ಸವದಂದು, ಪ್ರಾರಂಭಿಸಿತು ಮತ್ತು ಈ ವರ್ಷ ಅದರಲ್ಲಿನ ಕ್ರೈಸ್ತರ ಪ್ರಾರ್ಥನೆ ಗೀತೆಯನ್ನು ತೆಗೆದು ಅಲ್ಲಿ ಪ್ರಸಿದ್ಧ ದೇಶಭಕ್ತಿ ಗೀತೆಯಾದ ‘ಮೇರೆ ವತನ್ ಕೆ ಲೋಗೊ ಇದರ ಧ್ವನಿಯನ್ನು ನುಡಿಸಲಾಯಿತು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಭಾರತೀಯ ನೌಕಾಪಡೆಯ ‘ಸೇಂಟ್ ಜಾರ್ಜ್‌ನ ಕ್ರಾಸ್ ಈ ಚಿಹ್ನೆ ಇರುವ ಧ್ವಜವನ್ನು ಬದಲಾಯಿಸಿ ಅಲ್ಲಿ ಭಾರತೀಯರ ಮೊದಲ ನೌಕಾಪಡೆಯನ್ನು ಸ್ಥಾಪಿಸಿದ ಛತ್ರಪತಿ ಶಿವಾಜಿ ಮಹಾರಾಜರ ರಾಜಮುದ್ರೆಯ ಆಕಾರ, ತ್ರಿವರ್ಣ ಧ್ವಜ ಮತ್ತು ಅಶೋಕ ಲಾಂಛನವಿರುವ ಹೊಸ ಧ್ವಜವನ್ನು ನಿರ್ಮಿಸಲಾಯಿತು. ಈಗ ಸರಕಾರವು ಸೈನ್ಯದಲ್ಲಿ ಮತ್ತೊಂದು ‘ಆಂಗ್ಲ ಪದ್ಧತಿಯನ್ನು ಮುಚ್ಚಲು ಆದೇಶಿಸಿದೆ. ಸೈನ್ಯದ ಸಾರ್ವಜನಿಕ ಅಥವಾ ಹಿರಿಯ ಅಧಿಕಾರಿಗಳ ಸೇವಾನಿವೃತ್ತಿ ಕಾರ್ಯಕ್ರಮದಲ್ಲಿ ಕುದುರೆ ಬಗ್ಗಿಗಳನ್ನು ಬಳಸುವ ಪದ್ಧತಿಯು ಆಂಗ್ಲರ ಕಾಲದಿಂದ ನಡೆದುಕೊಂಡು ಬಂದಿತ್ತು. ಅದನ್ನು ಈಗ ನಿಲ್ಲಿಸಲಾಗುವುದು ಮತ್ತು ಆ ಕುದುರೆಗಳನ್ನು ಸೈನ್ಯದಲ್ಲಿ ಬಳಸಲಾಗುತ್ತದೆ. ಅಲ್ಲದೆ, ಸೇವಾ ನಿವೃತ್ತಿಯ ಕಾರ್ಯಕ್ರಮದಲ್ಲಿ ‘ಪೈಪ್ ಬ್ಯಾಂಡ್ ವಾದ್ಯವನ್ನು ಬಳಸಲಾಗುತ್ತಿತ್ತು. ಈ ಪದ್ಧತಿಯನ್ನು ಮುಚ್ಚಲು ಸರಕಾರ ಆದೇಶಿಸಿದೆ.
ಅಳಿಸಿ ಬಿಡುವುದೇ ಲೇಸು !
ಇಂತಹ ಬದಲಾವಣೆಯು ಚಿಕ್ಕದೆಂದು ಕಂಡರೂ ಅವು ಹಾಗಿಲ್ಲ. ಅವು ನಮ್ಮ ಧರ್ಮಸಂಸ್ಕೃತಿ, ಸಂಪ್ರದಾಯಗಳು, ರಾಷ್ಟ್ರಪುರುಷರ ಪರಾಕ್ರಮಗಳು ಮತ್ತು ಅದರಿಂದ ಮೂಡುವ ಧರ್ಮ ಮತ್ತು ರಾಷ್ಟ್ರದ ಅಭಿಮಾನವು ನಮ್ಮ ಮಣ್ಣು, ನಮ್ಮ ಭಾವನೆಗಳು ಮತ್ತು ಸಂವೇದನೆಗಳೊಂದಿಗೆ ಸಂಬಂಧ ಹೊಂದಿವೆ. ಇತಿಹಾಸವನ್ನು ಮರೆಯುವವರಿಗೆ ಭವಿಷ್ಯವಿಲ್ಲ. ಧರ್ಮಸಂಸ್ಕೃತಿ ಮತ್ತು ಪರಾಕ್ರಮ ಇವುಗಳ ಭಾವೈಕ್ಯವು ಮುಂದಿನ ಪೀಳಿಗೆಗೆ ಅಸ್ತಿತ್ವದ ಹೋರಾಟಕ್ಕೆ ಪ್ರೇರಣೆ ದೊರೆತು ಅವರ ಉತ್ಸಾಹ ಹೆಚ್ಚಿಸುತ್ತದೆ. ನೂರಾರು ಹಿಂದೂ ರಾಜರ ಪರಾಕ್ರಮವನ್ನು ಮರೆಮಾಚಿ ಮೊಘಲ್ ಆಡಳಿತಗಾರರನ್ನು ವೈಭವೀಕರಣದ ಮಾಡಿದಾಗ, ‘ಭಾರತವು ಮೊಘಲರದ್ದಾಗಿದ್ದರಿಂದ ಇಂದಿಗೂ ಅವರಿಗೆ ದೇಶದ ಮೇಲೆ ಮೊದಲ ಹಕ್ಕಿದೆ ಎಂಬ ವಾತಾವರಣವನ್ನು ಸೃಷ್ಟಿಸುವುದು ಸುಲಭ. ಈ ಪರಿಸ್ಥಿತಿ ಎಲ್ಲಿ ಹೆಚ್ಚಾಗುತ್ತದೋ ಅಲ್ಲಿ ಹಿಂದೂಗಳು ಕೇವಲ ಪಲಾಯನ ಮಾಡಬೇಕಾಗುವುದು ಮಾತ್ರವಲ್ಲ ಅವರ ವಂಶನಾಶವೂ ಆರಂಭವಾಗುತ್ತದೆ. ಕುತುಬಮಿನಾರ್ ಮೂಲದಲ್ಲಿ ‘ವಿಷ್ಣುಸ್ತಂಭ ಮತ್ತು ತಾಜಮಹಲ್ ಇದು ‘ತೇಜೋಮಹಾಲಯವಾಗಿದೆ ಎಂಬುದಕ್ಕೆ ಸ್ಪಷ್ಟ ಪುರಾವೆಗಳಿರುವಾಗ ಈಗಲೂ ಅವುಗಳನ್ನು ವಿದೇಶಿಯರ ಕಲಾಕೃತಿಯೆಂದು ಮೆರೆಸಲಾಗುತ್ತದೆ ಮತ್ತು ಕಾಶಿ ವಿಶ್ವೇಶ್ವರನ ಶಿವಲಿಂಗ ಎದುರು ಕಾಣಿಸುತ್ತಿದ್ದರೂ ಅದಕ್ಕಾಗಿ ನ್ಯಾಯಾಂಗ ಹೋರಾಟ ಮಾಡಬೇಕಾಗುತ್ತಿದೆ. ಇಂದು ದೈನಂದಿನ ಆಹಾರ, ವೇಷಭೂಷಣಗಳು, ಕೇಶವಿನ್ಯಾಸ ಇಲ್ಲಿಂದ ಹಿಡಿದು ನಮ್ಮ ಎಲ್ಲಾ ಕಲೆ, ಸಾಹಿತ್ಯ, ಸಂಗೀತ, ಇವುಗಳ ಮೇಲೆ ವಿದೇಶಿಯರ ಕುಸಂಸ್ಕೃತಿಯ ಎಷ್ಟು ಬಿಗಿ ಹಿಡಿತವಿದೆಯೆಂದರೆ ಅದೇ ನಮ್ಮ ‘ವೃತ್ತಿಯಾಗಿ ಮಾರ್ಪಟ್ಟಿದೆ ಮತ್ತು ಅದರಿಂದ ನಮ್ಮನ್ನು ಪ್ರತ್ಯೇಕಿಸುವುದು ಕಷ್ಟಕರವಾಗಿದೆ. ಅದರಿಂದ ನಮ್ಮ ಅತ್ಯುತ್ತಮ ಸಂಸ್ಕೃತಿಯು ವಿದೇಶಿಯರ ಅಂಧಾನುಕರಣೆಯಿಂದ ಮರೆಮಾಚಿದೆ. ಸಂಸ್ಕೃತ ಭಾಷೆ, ಆಯುರ್ವೇದ ಮತ್ತು ಯೋಗಾಭ್ಯಾಸದಂತಹ ವೈದಿಕ ಶಾಸ್ತ್ರಗಳು ಮತ್ತು ಧಾರ್ಮಿಕ ಕೃತಿಗಳು, ವಿವಿಧ ಸನಾತನ ಉಪಾಸನಾಪದ್ಧತಿಗಳು ಇತ್ಯಾದಿಗಳನ್ನು ಪಾಶ್ಚಾತ್ಯರು ಕೊಂಡಾಡುತ್ತಿದ್ದಾರೆ. ಈಗ ಅವರು ನಿಮಗೆ ಕಲಿಸುವಂತಹ ಪ್ರಮೇಯ ಬರುವ ಮೊದಲೇ, ಅದನ್ನು ಎಲ್ಲದರಲ್ಲೂ ಅಳವಡಿಸಿಕೊಳ್ಳುವುದು ಯೋಗ್ಯವಾಗಿದೆ. ಮೋದಿ ಸರಕಾರ ನಿಧಾನವಾಗಿ ಆ ದಿಕ್ಕಿನಲ್ಲಿ ಒಂದೊಂದು ಹೆಜ್ಜೆ ಇಡುತ್ತಿರುವುದು ಸ್ವಾಗತಾರ್ಹ !