
‘ಪ.ಪೂ. ಡಾಕ್ಟರರು ‘ಓರ್ವ ಸಾಧಕಿಯ ಆಧ್ಯಾತ್ಮಿಕ ಉನ್ನತಿಯು ೨೦ ವರ್ಷಗಳ ನಂತರ ಆಗುವುದು, ಎಂದು ಹೇಳಿದ್ದರು. ಅನಂತರ ಜವಾಬ್ದಾರ ಸಾಧಕಿಯು ಆ ಸಾಧಕಿಗೆ ಸಹಾಯ ಮಾಡಲು ಎಷ್ಟೇ ಪ್ರಯತ್ನಿಸಿದರೂ ಅವಳಲ್ಲಿ ಸಾಧನೆಯ ವಿಷಯದಲ್ಲಿ ಯಾವುದೇ ಅರಿವು ಮೂಡುತ್ತಿರಲಿಲ್ಲ. ಪ.ಪೂ. ಡಾಕ್ಟರರು ಅವಳ ಬಗ್ಗೆ ತೆಗೆದ ಉದ್ಗಾರದ ನಂತರ ಸುಮಾರು ೧೬ ವರ್ಷಗಳ ನಂತರ ಅವಳಲ್ಲಿ ಸಾಧನೆಯ ಬಗ್ಗೆ ಅಂತರ್ಮುಖತೆ ಬರತೊಡಗಿದ್ದು ಅವಳ ಆಧ್ಯಾತ್ಮಿಕ ಉನ್ನತಿಯಾಗುತ್ತಿದೆ. ಇದರಿಂದ ಸಚ್ಚಿದಾನಂದ ಪರಾತ್ಪರ ಗುರು ದೇವರ ೨೦ ವರ್ಷಗಳ ಹಿಂದಿನ ನುಡಿಗಳು ಯಾವ ರೀತಿ ನಿಜವಾಗುತ್ತಿದೆ ಎಂದು ಗಮನಕ್ಕೆ ಬರುತ್ತದೆ ಮತ್ತು ಅವರ ದಾರ್ಶನಿಕತೆಯ ಅನುಭವ ಬರುತ್ತದೆ.
ಸಾಧಕರೇ ‘ಆಧ್ಯಾತ್ಮಿಕ ಉನ್ನತಿ ಯಾವಾಗ ಆಗುವುದು ?, ಎಂಬ ಬಗ್ಗೆ ಕಾಳಜಿ ಮಾಡದೇ ಪರಾತ್ಪರ ಗುರುದೇವರ ಮೇಲೆ ಶ್ರದ್ಧೆಯನ್ನಿಟ್ಟು ತಳಮಳದಿಂದ ಪ್ರಯತ್ನಿಸುತ್ತಿರಿ !
– ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೫.೧೨.೨೦೨೨)
ಋಷಿಋಣ ತೀರಿಸುವ ಸುಲಭ ಮಾರ್ಗವೆಂದರೆ ಋಷಿಗಳ ಆಜ್ಞಾಪಾಲನೆ ಮಾಡುವುದು !
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
ಸಾಧನೆಯ ಅತ್ಯಾವಶ್ಯಕತೆ !