ಸನಾತನದ ಸದ್ಗುರು (ಸುಶ್ರೀ (ಕು.)) ಅನುರಾಧಾ ವಾಡೆಕರ ಇವರಆಜ್ಞಾಚಕ್ರದ ಭಾಗ ಪ್ರಕಾಶಮಾನವಾಗಿ ಮತ್ತು ಅವರ ತಲೆಯ ಹಿಂದೆಪ್ರಭಾವಲಯ ಕಾಣಿಸುವುದು, ಈ ಬಗ್ಗೆ ಅವರಿಗೆ ಬಂದ ಅನುಭೂತಿಗಳು

ಫಾಲ್ಗುಣ ಕೃಷ್ಣ ಪಕ್ಷ ದ್ವಾದಶಿ (೧೯.೩.೨೦೨೩) ರಂದು ಸದ್ಗುರು (ಸುಶ್ರೀ (ಕು.)) ಅನುರಾಧಾ ವಾಡೆಕರ ಇವರ ೫೦ ನೇ ಹುಟ್ಟುಹಬ್ಬವಿದೆ. ಆ ನಿಮಿತ್ತದಿಂದ…

ಸದ್ಗುರು (ಸುಶ್ರೀ (ಕು.)) ಅನುರಾಧಾ ವಾಡೆಕರ

ಸದ್ಗುರು (ಸುಶ್ರೀ (ಕು.)) ಅನುರಾಧಾ ವಾಡೆಕರಜೀವವು ತನು, ಮನ, ಬುದ್ಧಿ, ಚಿತ್ತ, ಅಹಂ ಮತ್ತು ಪ್ರಕೃತಿ ಇವು ನಿರ್ಮಿಸಿದ ತನ್ನ ಅಸ್ತಿತ್ವದ, ಅಂದರೆ ಸರ್ವಸ್ವದ ತ್ಯಾಗವನ್ನು ಮಾಡಿದ ನಂತರ ಅವನಿಗೆ ಈಶ್ವರೇಚ್ಛೆಯಿಂದ ಕಾರ್ಯವನ್ನು ಮಾಡಿ ಈಶ್ವರಸ್ವರೂಪನಾಗಲು ಸಾಧ್ಯವಾಗುತ್ತದೆ. ಸಾಧನೆಯಿಂದ ಆಧ್ಯಾತ್ಮಿಕ ಉನ್ನತಿಯಾಗುತ್ತಿರುವಾಗ ವ್ಯಕ್ತಿಯ ದೇಹದಲ್ಲಿ ದೈವೀ ಬದಲಾವಣೆಗಳು ಕಂಡುಬರುತ್ತವೆ. ಈ ದೈವೀ ಬದಲಾವಣೆಗಳು ವ್ಯಕ್ತಿಯಲ್ಲಿ ಹೆಚ್ಚಳವಾಗುತ್ತಿರುವ ದೇವತ್ವದ ಅನುಭೂತಿ ನೀಡುತ್ತವೆ. ಸನಾತನದ ಧರ್ಮಪ್ರಚಾರಕರಾದ ಸದ್ಗುರು (ಸುಶ್ರೀ (ಕು.)) ಅನುರಾಧಾ ವಾಡೆಕರ ಇವರ ದೇಹದಲ್ಲಿ ಆಗಿರುವ ಬುದ್ಧಿಗೆ ಮೀರಿದ ಕೆಲವು ದೈವೀ ಬದಲಾವಣೆಗಳು ಮತ್ತು ಅವುಗಳ ಬಗ್ಗೆ ಅವರಿಗೆ ಬಂದ ಅನುಭೂತಿಗಳನ್ನು ಈ ಲೇಖನದಲ್ಲಿ ನೋಡೋಣ.

  • ಸದ್ಗುರು ಅನುರಾಧಾ ವಾಡೆಕರರ ಪ್ರಭಾವಲಯದ ಛಾಯಾಚಿತ್ರಗಳು !
  • ತಜ್ಞರು, ಅಧ್ಯಯನಕಾರರು ಮತ್ತು ವೈಜ್ಞಾನಿಕ ದೃಷ್ಟಿಕೋನದಿಂದ ಸಂಶೋಧನೆ ಮಾಡುವವರಿಗೆ ವಿನಂತಿ !
ವಿವಾಹ ಸಮಾರಂಭವೊಂದರಲ್ಲಿ ತೆಗೆದ ಛಾಯಾಚಿತ್ರದಲ್ಲಿ ಎಡದಿಂದ ಸೌ. ರೂಪಾಲಿ ಬರಾಲೆ, ಸದ್ಗುರು (ಸುಶ್ರೀ (ಕು.)) ಅನುರಾಧಾ ವಾಡೆಕರ್ ರವರ ತಲೆಯ ಸುತ್ತ ಕಾಣಿಸುತ್ತಿರುವ ಪ್ರಭಾವಲಯ (ವರ್ಷ ೨೦೨೧),ಸೌ. ಸಂಗೀತಾ ಪಾಟೀಲ ಮತ್ತು ಸೌ. ಅನಿತಾ ಕರಮಳಕರ
ಸದ್ಗುರು (ಸುಶ್ರೀ (ಕು.)) ಅನುರಾಧಾ ವಾಡೆಕರ ಇವರ ಹಣೆಯ ಮೇಲೆ ಪ್ರಕಾಶಮಾನವಾಗಿರುವ ಭಾಗ

ವಿವಾಹ ಸಮಾರಂಭವೊಂದರಲ್ಲಿ ತೆಗೆದ ಛಾಯಾಚಿತ್ರದಲ್ಲಿ ಎಡದಿಂದ ಸೌ. ರೂಪಾಲಿ ಬರಾಲೆ, ಸದ್ಗುರು (ಸುಶ್ರೀ (ಕು.)) ಅನುರಾಧಾ ವಾಡೆಕರ್ ರವರ ತಲೆಯ ಸುತ್ತ ಕಾಣಿಸುತ್ತಿರುವ ಪ್ರಭಾವಲಯ (ವರ್ಷ ೨೦೨೧), ಸೌ. ಸಂಗೀತಾ ಪಾಟೀಲ ಮತ್ತು ಸೌ. ಅನಿತಾ ಕರಮಳಕರ ಸದ್ಗುರು (ಸುಶ್ರೀ (ಕು.)) ಅನುರಾಧಾ ವಾಡೆಕರ ಇವರ ಹಣೆಯ ಮೇಲೆ ಪ್ರಕಾಶಮಾನವಾಗಿರುವ ಭಾಗ’ಸಂತರ ದೇಹದಲ್ಲಿನ ಬುದ್ಧಿಗೆ ಮೀರಿದ ಬದಲಾವಣೆಗಳ ಬಗ್ಗೆ ಸಂಶೋಧನೆಯನ್ನು ಮಾಡಿ ಅವುಗಳ ಕಾರ್ಯ ಕಾರಣಭಾವವನ್ನು ಶೋಧಿಸಲು ಸಾಧಕರು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ಸದ್ಗುರು (ಸುಶ್ರೀ (ಕು.)) ಅನುರಾಧಾ ವಾಡೆಕರ ಇವರ ಆಜ್ಞಾಚಕ್ರ ಮತ್ತು ಹಣೆಯ ಭಾಗ ಪ್ರಕಾಶಮಾನವಾಗುವುದರ ಹಿಂದಿನ ಕಾರಣವೇನು ? ಎಂಬುದರ ಬಗ್ಗೆ ತಜ್ಞರು, ಅಧ್ಯಯನಕಾರರು, ಈ ವಿಷಯದ ಶಿಕ್ಷಣವನ್ನು ಪಡೆಯುವ ವಿದ್ಯಾರ್ಥಿಗಳು ಮತ್ತು ವೈಜ್ಞಾನಿಕ ದೃಷ್ಟಿಯಿಂದ ಸಂಶೋಧನೆ ಮಾಡುವವರು ನಮಗೆ ಸಹಾಯ ಮಾಡಿದರೆ ನಾವು ಅವರಿಗೆ ಕೃತಜ್ಞರಾಗಿರುವೆವು.’

– ವ್ಯವಸ್ಥಾಪಕರು, ಸನಾತನ ಆಶ್ರಮ, ರಾಮನಾಥಿ, ಗೋವಾ.

ಸಂಪರ್ಕ : ಶ್ರೀ. ರೂಪೇಶ ರೆಡಕರ, ವಿ-ಅಂಚೆ ವಿಳಾಸ : [email protected]

ಸದ್ಗುರು (ಸುಶ್ರೀ (ಕು.)) ಅನುರಾಧಾ ವಾಡೆಕರ ಇವರ ಉಚ್ಚ ಆಧ್ಯಾತ್ಮಿಕ ಅನುಭೂತಿಗಳು

೧. ‘ನನಗೆ ನನ್ನ ಆಜ್ಞಾಚಕ್ರದಲ್ಲಿ ಸಂವೇದನೆಗಳ ಅರಿವಾಗುತ್ತದೆ.

೨. ದಿನದಲ್ಲಿ ಕೆಲವು ಸಮಯ ನನಗೆ ‘ನನ್ನ ಉಸಿರಾಟ ಒಂದೇ ಲಯದಲ್ಲಿ ಆಗುತ್ತಿದೆ’, ಎಂಬುದು ಅನುಭವಿಸಲು ಸಿಗುತ್ತದೆ.

೩. ಯಾವ ಕಾರಣಗಳಿಲ್ಲದೇ ಆಗಾಗ ನಾನು ಆನಂದದ ಸ್ಥಿತಿಯನ್ನು ಅನುಭವಿಸುತ್ತೇನೆ ಮತ್ತು ನನ್ನಲ್ಲಿ ಸ್ಥಿರತೆಯ ಅರಿವಾಗುತ್ತದೆ.

೪. ೧.೧೨.೨೦೨೧ ರಂದು ನಾನು ರಾಮನಾಥಿ (ಗೋವಾ)ಯಲ್ಲಿನ ಸನಾತನದ ಆಶ್ರಮದಲ್ಲಿ ಸಾಧಕ ಶ್ರೀ. ಅಕ್ಷಯ ಪಾಟೀಲ ಇವರ ವಿವಾಹದ ಸಮಯದಲ್ಲಿ ಅವರ ಸಂಬಂಧಿಕರೊಂದಿಗೆ ಛಾಯಾಚಿತ್ರವನ್ನು ತೆಗೆಸಿಕೊಂಡೆನು. ‘ಛಾಯಾಚಿತ್ರ ಹೇಗೆ ಬಂದಿದೆ ?’, ಎಂದು ನೋಡಿದಾಗ ನನಗೆ ನನ್ನ ತಲೆಯ ಸುತ್ತಲು ಹಳದಿ ಬಣ್ಣದ ಪ್ರಭಾವಲಯ ಕಾಣಿಸಿತು. ‘ನನ್ನ ಮುಖವೂ ಪ್ರಕಾಶಮಾನವಾಗಿರುವುದು ಅರಿವಾಯಿತು ಮತ್ತು ನನ್ನ ಮುಖದ ಮೇಲಿನಿಂದ ತೇಜ ಹರಡುತ್ತಿರುವುದು ಕಾಣಿಸಿತು.’

– (ಸದ್ಗುರು) ಸುಶ್ರೀ (ಕುಮಾರಿ) ಅನುರಾಧಾ ವಾಡೆಕರ (೧೭.೧೨.೨೦೨೧)

ಅನುಭೂತಿ : ಇಲ್ಲಿ ನೀಡಿದ ಸಾಧಕರ ಅನುಭೂತಿಗಳು ‘ಭಾವವಿದ್ದಲ್ಲಿ ದೇವ ಎಂಬಂತೆ ಆಯಾ ಸಾಧಕರಿಗೆ/ಸಂತರಿಗೆ ಬಂದ ವೈಯಕ್ತಿಕ  ಅನುಭೂತಿಯಾಗಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು