ಹಿಂದೂ ಸಾಮ್ರಾಜ್ಯದ ಬುನಾದಿ ಹಾಕಿದ ಸಾಮ್ರಾಟ ಹರಿಹರ ಮತ್ತು ಬುಕ್ಕರಾಯ !

ಸಾಮ್ರಾಟ ಬುಕ್ಕರಾಯ ಪುಣ್ಯತಿಥಿ ನಿಮಿತ್ತ (ಮಾರ್ಚ್ ೮, ಫಾಲ್ಗುಣ ಕೃಷ್ಣ ಪ್ರತಿಪದಾ)

ಶಂಕರಾಚಾರ್ಯ ವಿದ್ಯಾರಣ್ಯಸ್ವಾಮಿಗಳ ಮಾರ್ಗದರ್ಶನದಲ್ಲಿ ವಿಜಯನಗರದ ಸಾಮ್ರಾಜ್ಯವನ್ನು ಕಟ್ಟಿದ ನಂತರ ಹರಿಹರ ಮತ್ತು ಬುಕ್ಕರಾಯರು ವಿಜಯನಗರದ ವೈಭವಶಾಲಿ ಹಿಂದೂ ಸಾಮ್ರಾಜ್ಯದ ಅಡಿಪಾಯವನ್ನು ಹಾಕಿದರು. (ಇ.ಸ. ೧೩೩೬ ರಿಂದ ೧೩೭೬)

ಹರಿಹರ ಮತ್ತು ಬುಕ್ಕರಾಯರ ಸುಸಜ್ಜ ಪಡೆಗಳು ದಕ್ಷಿಣ ಭಾರತದಲ್ಲಿ ಕೆರಳಿದ ಮೊಗಲ್ ಆಕ್ರಮಣಕಾರರನ್ನು ಹತ್ತಿಕ್ಕಿದವು. ಹರಿಹರ ಇವರ ನಿಧನದ ನಂತರ ಸಾಮ್ರಾಟ ಬುಕ್ಕರಾಯರು ಮಧುರೆಯ ಸುಲ್ತಾನನೊಂದಿಗೆ ಮಾಡಿದ ಭೀಕರ ಯುದ್ಧದಲ್ಲಿ ಸುಲ್ತಾನನು ಕೊಲ್ಲಲ್ಪಟ್ಟನು ಮತ್ತು ದಕ್ಷಿಣ ಭಾರತವು ಬುಕ್ಕರಾಯರ ಆಳ್ವಿಕೆಗೆ ಒಳಪಟ್ಟಿತು. ಸಾಮ್ರಾಟ ಬುಕ್ಕರಾಯರು ವೈದಿಕ ಧರ್ಮದ ಪುನರುತ್ಥಾನಕ್ಕಾಗಿ ದೇಶಾದ್ಯಂತ ವಿದ್ವಾನರನ್ನು ಒಟ್ಟುಗೂಡಿಸಿ ವೇದಗ್ರಂಥಗಳ ಮೇಲೆ ಹೊಸ ಭಾಷ್ಯಗಳನ್ನು ಬರೆಯಿಸಿಕೊಂಡರು ಮತ್ತು ಹಿಂದೂ ಧರ್ಮದಲ್ಲಿ ಆವರಿಸಿದ್ದ ದುಷ್ಪವೃತ್ತಿಗಳನ್ನು ನಿಯಂತ್ರಿಸಿದರು. (೧೪.೮.೨೦೦೭)