ನ್ಯಾಯವ್ಯವಸ್ಥೆಗೂ ಅಧ್ಯಾತ್ಮಕ್ಕೂ ಏನು ಸಂಬಂಧ ? ಮತ್ತು ಎಷ್ಟು ?

ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ

ಸಮಾಜದಲ್ಲಿ ‘ವಕೀಲಿ’ವೃತ್ತಿಯನ್ನು ಪ್ರತಿಷ್ಠಿತ (ಘನತೆಯ) ವಿಷಯವೆಂದು ಪರಿಗಣಿಸಲಾಗುತ್ತದೆ. ನ್ಯಾಯವಾದಿಗಳು ಹೇಗೆ ರಾಜಕೀಯ ಮುಖಂಡರಿಗೆ ಕಾನೂನಿನ ವಿಷಯದಲ್ಲಿ ಸಹಾಯ ಮಾಡುತ್ತಾರೆಯೋ, ಹಾಗೆಯೇ ಅವರು ಸಾಮಾಜಿಕ ಸಂಸ್ಥೆ, ಕಾರ್ಮಿಕ ಸಂಘಟನೆ, ದೇವಸ್ಥಾನ ಮುಂತಾದ ವಿವಿಧ ಘಟಕಗಳಿಗೂ ಮಾರ್ಗವನ್ನು ತೋರಿಸುತ್ತಾರೆ. ಆದುದರಿಂದ ‘ನ್ಯಾಯವಾದಿಗಳು’ ಸಮಾಜದ ಅವಿಭಾಜ್ಯ ಘಟಕವಾಗಿದ್ದಾರೆ. ಇಂತಹ ನ್ಯಾಯವಾದಿಗಳಿಗೆ ಸಾಧನೆಯನ್ನು ಮಾಡುವ ಆವಶ್ಯಕತೆಯನ್ನು ವಿವರಿಸುವ ಈ ಲೇಖನವನ್ನು ನಾವು ನೋಡುವವರಿದ್ದೇವೆ. ಹಿಂದಿನ ಸಂಚಿಕೆಯಲ್ಲಿ ಮುದ್ರಣವಾದ ಲೇಖನದಲ್ಲಿ ನಾವು ನ್ಯಾಯಾಲಯದಲ್ಲಿ ವಿಷಯಗಳನ್ನು ನಿಖರವಾಗಿ ಮಂಡಿಸುವಾಗ ನ್ಯಾಯವಾದಿಗಳಲ್ಲಿ ‘ನಾನು ಹೇಳಿದ್ದೇ ಸರಿ ಅಥವಾ ನಿಜ’, ಎಂಬ ಘಾತಕ ಪ್ರವೃತ್ತಿ ನಿರ್ಮಾಣವಾಗುವ ಸಾಧ್ಯತೆ ಇರುವುದು, ನ್ಯಾಯವಾದಿಗಳಿಗೆ ಸಾಧನೆ ಮತ್ತು ಅಧ್ಯಾತ್ಮವನ್ನು ಕಲಿತುಕೊಳ್ಳುವ ಆವಶ್ಯಕತೆ ಎಲ್ಲಕ್ಕಿಂತ ಹೆಚ್ಚಿರುವುದು ಮತ್ತು ಕರ್ಮಫಲನ್ಯಾಯಕ್ಕನುಸಾರ ಅಪರಾಧಿ ವ್ಯಕ್ತಿಯು ನಿರಪರಾಧಿಯೆಂದು ಬಿಡುಗಡೆಯಾಗುವುದು ಅಥವಾ ನಿರಪರಾಧಿಗೆ ಶಿಕ್ಷೆಯಾಗುವುದು’, ಇವುಗಳ ಬಗ್ಗೆ ಓದಿದೆವು. ಇಂದು ಈ ಲೇಖನದ ಕೊನೆಯ ಭಾಗವನ್ನು ಇಲ್ಲಿ ಕೊಡುತ್ತಿದ್ದೇವೆ.

೬. ಅಪರಾಧಿಯ ಕೃತಿ ಈ ಜನ್ಮದಲ್ಲಿನದ್ದಾಗಿತ್ತೋ ಅಥವಾ ಪೂರ್ವಜನ್ಮದ ಕೃತಿಯ ಪರಿಣಾಮವಾಗಿತ್ತೋ ? ಇದರ ಬಗ್ಗೆ ಕ್ರಿಮಿನಲ್ ಪ್ರಕ್ರಿಯೆ ಸಂಹಿತೆಯಲ್ಲಿ ವಿಚಾರವನ್ನು ಮಾಡಿಲ್ಲ

ನಮ್ಮದು ಇದೊಂದೇ ಜನ್ಮವಲ್ಲ, ಅದು ಈ ಮೊದಲೂ ಆಗಿತ್ತು ಮತ್ತು ಈಗ ಸಾಧನೆಯನ್ನು ಮಾಡದಿದ್ದರೆ ಮುಂದೆಯೂ ಜನ್ಮಗಳು ಆಗುವವು. ಇದು ಭಾರತೀಯ ಉಪಖಂಡದಲ್ಲಿ ಜನಿಸಿದ ಎಲ್ಲರಿಗೂ ಅನ್ವಯಿಸುತ್ತದೆ. ಇದರಲ್ಲಿ ಜೈನ್, ಬೌದ್ಧ ಮತ್ತು ಸಿಕ್ಖ ಈ ಎಲ್ಲ ಧರ್ಮಗಳು ಬರುತ್ತವೆ. ಒಂದು ವೇಳೆ ನಾವು ಈ ದೃಷ್ಟಿಯಿಂದ ಕರ್ಮಫಲನ್ಯಾಯವನ್ನು ನೋಡಿದರೆ, ಅಪರಾಧಿ, ನಿರಪರಾಧಿ ಮತ್ತು ಶಿಕ್ಷೆ ಇವೆಲ್ಲವೂ ಹೆಚ್ಚು ಸ್ಪಷ್ಟವಾಗಬಹುದು. ಈ ಜನ್ಮದಲ್ಲಿನ ಕೃತಿಯು ಈ ಜನ್ಮದ್ದಾಗಿತ್ತೋ ಅಥವಾ ಅದು ಹಿಂದಿನ ಜನ್ಮದ ಕೃತಿಯ ಪರಿಣಾಮವಾಗಿತ್ತೋ ? ಈ ರೀತಿಯ ವಿಚಾರ ಭಾರತೀಯ ದಂಡ ಸಂಹಿತೆ ಅಥವಾ ಕ್ರಿಮಿನಲ್ ಪ್ರಕ್ರಿಯೆ ಸಂಹಿತೆಯಲ್ಲಿ ಎಲ್ಲಿಯೂ ಬರುವುದಿಲ್ಲ. ಬುದ್ಧಿಯ ಸ್ತರದಲ್ಲಿ ಪುರಾವೆಗಳ ಆಧಾರದಲ್ಲಿ ತೀರ್ಪನ್ನು ಕೊಡಲಾಗುತ್ತದೆ.ಇದರಿಂದಾಗಿ ತಾಂತ್ರಿಕ ದೃಷ್ಟಿಯಿಂದ ಶುದ್ಧ ತೀರ್ಪುಗಳೂ ಯೋಗ್ಯವಿದೆ ಎಂದು ನಮಗೆ ನಂಬಿಕೆ ಬರುವುದಿಲ್ಲ. ನಮಗೆ ನಡೆಯುತ್ತಿರುವುದು ಯೋಗ್ಯವಾಗಿಲ್ಲ’, ಎಂಬುದು ತಿಳಿಯುತ್ತದೆ; ಆದರೆ ಹೊಸದಾಗಿ ಏನು ಮಾಡಬೇಕು ? ಎಂಬುದು ತಿಳಿಯುವುದಿಲ್ಲ. ಇದು ಯಾರಲ್ಲಿ ಸದ್ವಿವೇಕಬುದ್ಧಿ ಇದೆಯೋ, ಅವರಿಗಾಗಿ ಇದೆ. ‘ನ್ಯಾಯಾಲಯದಲ್ಲಿ ಏನು ಸಿದ್ಧವಾಗುತ್ತದೆಯೋ, ಅದೇ ನಿಜವಾಗಿರುತ್ತದೆ, ಆದರೆ ‘ನ್ಯಾಯವಾದಿವೃತ್ತಿ ಇದು ಹಣ ಸಂಪಾದಿಸುವ ಒಂದು ಸಾಧನವಾಗಿದೆ’, ಎಂದು ಯಾರಿಗೆ ಅನಿಸುತ್ತದೆಯೋ ಅವರಿಗಾಗಿ ಇದು ನಂಬುವಂತಹದ್ದಲ್ಲ.

೭. ಬಹುದೊಡ್ಡ ನ್ಯಾಯವ್ಯವಸ್ಥೆಯ ಅವಶ್ಯಕತೆ ಬೀಳುತ್ತಿದೆ, ಹಾಗಾದರೆ ಇದು ಸಮಾಜವು ಅಧೋಗತಿಯತ್ತ ಹೋಗುತ್ತಿರುವುದರ ಲಕ್ಷಣವೇ ?

ಸದ್ಯ ಹೊಸ ಹೊಸ ಕಾನೂನುಗಳನ್ನು ರೂಪಿಸಲಾಗುತ್ತಿದೆ. ಅಪರಾಧಿಗಳನ್ನು ಹಿಡಿಯಲು ಎಲ್ಲೆಡೆ ದೊಡ್ಡ ಪ್ರಮಾಣದಲ್ಲಿ ‘ಸಿಸಿಟಿವಿ’ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಸಾವಿರಾರು ಪೊಲೀಸರ ವೆಚ್ಚ ಮತ್ತು ನ್ಯಾಯಾಲಯಗಳ ಹೆಚ್ಚುತ್ತಿರುವ ಸಂಖ್ಯೆ, ಇದು ಸಾಮಾಜದ ಪ್ರಗತಿಯ ಸಂಕೇತವೋ ಅಥವಾ ಅಧೋಗತಿಯ ಸಂಕೇತವೋ ?

೭ ಅ. ಕೌಟುಂಬಿಕ ನ್ಯಾಯಾಲಯದ ದೊಡ್ಡ ಕಟ್ಟಡ ನಿರ್ಮಾಣವು ವಿಕಾಸವಲ್ಲ ! : ಕೊರೊನಾ ಮಹಾಮಾರಿಯ ಕಾಲದ ನಂತರ ಅನೇಕ ದಿನಗಳ ಬಳಿಕ ನಾನು ಪುಣೆಯ ನ್ಯಾಯಾಲಯಕ್ಕೆ ಹೋಗಿದ್ದೆ. ಅಲ್ಲಿ ಒಂದು ಹೊಸ ಕಟ್ಟಡ ನಿರ್ಮಾಣವಾಗಿರುವುದು ಕಾಣಿಸಿತು. ಅದು ಕೌಟುಂಬಿಕ ನ್ಯಾಯಾಲಯದ ಕಟ್ಟಡವೆಂದು ತಿಳಿಯಿತು. ಸ್ವಲ್ಪದರಲ್ಲಿ ಗಂಡ-ಹೆಂಡತಿಯರ ನಡುವಿನ ವಾದಗಳ ವಿಷಯದ ತೀರ್ಪುಗಳನ್ನು ನೀಡಲು ಈ ಪ್ರತ್ಯೇಕವಾದ ವಿಶಾಲ ಕಟ್ಟಡವನ್ನು ಕಟ್ಟಲಾಗಿದೆ. ಈಗ ಇದನ್ನು ನೋಡಿ “ನ್ಯಾಯ ಬೇಗನೇ ಸಿಗಬೇಕೆಂದು ಅನುಕೂಲ ಮಾಡಿದ್ದಾರೆ’, ಎಂದು ಯಾರಾದರೂ ಹೇಳಬಹುದು. ಇದನ್ನು ನಾವು ವಿಕಾಸವೆನ್ನಬೇಕೆ ? ಗಂಡ-ಹೆಂಡತಿಯರ ನಡುವಿನ ಭಿನ್ನಾಭಿಪ್ರಾಯ ಹೆಚ್ಚಾಗುತ್ತಿವೆ, ಹಾಗಾಗಿ ಅರ್ಜಿಗಳು ಹೆಚ್ಚಾಗುತ್ತಿವೆ. ‘ಅರ್ಜಿಗಳು ಹೆಚ್ಚಾಗುತ್ತಿವೆ ಎಂದು ಅವುಗಳ ಶೀಘ್ರ ಇತ್ಯರ್ಥಕ್ಕಾಗಿ ಅಗತ್ಯವಿರುವ ವ್ಯವಸ್ಥೆಯನ್ನು ನಿರ್ಮಿಸುತ್ತಿದ್ದೇವೆ ಎನ್ನುವುದು ಅಭಿಮಾನದ ವಿಷಯವಲ್ಲ. ಇದು ಸಮಾಜದ ಪ್ರಗತಿಯ ಸಂಕೇತವಲ್ಲ. ಇಂತಹ ಪ್ರಕರಣಗಳಿಗಾಗಿ ನ್ಯಾಯಾಧೀಶರ ಆವಶ್ಯಕತೆ ಬೀಳಬಾರದು.

ಕೆಲವರು ಹೀಗೆಯೂ ಹೇಳಬಹುದು, ಜಗಳಗಳು ಇತ್ತೀಚೆಗೆ ಮಾತ್ರವಲ್ಲ ನೂರಾರು ವರ್ಷಗಳಿಂದ ನಡೆಯುತ್ತಿವೆ, ಅವು ಈಗ ಹೆಚ್ಚು ಬೆಳಕಿಗೆ ಬರುತ್ತಿವೆ, ಆ ಅರ್ಥದಿಂದ ಅದು ಪ್ರಗತಿಯೇ ಆಗಿದೆ. ವ್ಯಕ್ತಿ ಸ್ವಾತಂತ್ರ್ಯಕ್ಕೆ ಜೈ ಎನ್ನುವವರು ಈ ರೀತಿ ಹೇಳಬಹುದು. ‘ಜಗಳ, ವಾದಗಳು ಬೆಳಕಿಗೆ ಬರುವುದೆಂದರೆ ಪ್ರಗತಿಯಲ್ಲ’, ‘ಈ ವಿಷಯವನ್ನು ಪರಸ್ಪರರಲ್ಲಿನ ಚರ್ಚೆಯಿಂದ, ಹಿರಿಯರ ನೆರವಿನಿಂದ, ಕುಟುಂಬಭಾವನೆಯಿಂದ ಬಗೆಹರಿಸಬೇಕು’, ಇದು ಪ್ರಗತಿಯಲ್ಲವೇ ? ಇದರ ಮೂಲವನ್ನು ಹುಡುಕುವಾಗ ನಾವು ಪುನಃ ಅಲ್ಲಿಗೇ ಬರುತ್ತೇವೆ. ಗಂಡ-ಹೆಂಡತಿಯರಲ್ಲಿನ ಜಗಳಗಳೆಂದರೆ ಷಡ್ರಿಪುಗಳ ಪ್ರಕಟೀಕರಣವಾಗಿರುತ್ತದೆ. ‘ಅತ್ತೆಯೊಂದಿಗೆ ಹೊಂದಾಣಿಕೆ ಆಗುವುದಿಲ್ಲ’, ‘ನಾನು ಹೇಳಿದಂತೆ ಮನೆಯಲ್ಲಿ ನಡೆಯಬೇಕು’, ಎಂದು ಒಬ್ಬರದ್ದಾದರೂ ನಿಲುವು ಇರುತ್ತದೆ, ಅಂದರೆ ಅದು ಒಂದು ಷಡ್ರಿಪು ಆಗಿದೆ ಅಥವಾ ಕರ್ಮಫಲ ನ್ಯಾಯವಾಗಿದೆ ಅಥವಾ ಎರಡರದ್ದೂ ಮಿಶ್ರಣವಾಗಿರುತ್ತದೆ.

ಈ ಅಡಚಣೆಯನ್ನು ನ್ಯಾಯವಾದಿಗಳು ನ್ಯಾಯಾಲಯದಲ್ಲಿ ಮಂಡಿಸಲಾರರು; ಆದರೆ ಯಾವ ನ್ಯಾಯವಾದಿಗೆ ‘ನನಗೆ ಸ್ವಲ್ಪ ಹಣ ಕಡಿಮೆ ಸಿಕ್ಕರೂ ನಡೆದೀತು; ಆದರೆ ನನಗೆ ಕಕ್ಷಿದಾರನ ಅಂತಿಮ ಹಿತವನ್ನು ನೋಡುವುದಿದೆ’ ಎಂಬ ನಿಜವಾಗಿಯೂ ತಳಮಳವಿದೆಯೋ ಅವನು ಕಕ್ಷಿದಾರನಿಗೆ ಇದರ ಬಗ್ಗೆ ಖಂಡಿತ ಹೇಳಬೇಕು.

೮. ಷಡ್ರಿಪುಯುಕ್ತ ವ್ಯಕ್ತಿಗಳ ಸಂಪರ್ಕ ಬರುವ ನ್ಯಾಯವಾದಿಗಳು ಸಾಧನೆಯನ್ನು ಮಾಡುವುದು ಆವಶ್ಯಕವಾಗಿದೆ

‘ದ್ರಷ್ಟಾ ದೃಶ್ಯವಶಾತ್ ಬದ್ಧಃ |’, ಈ ಸಂಸ್ಕೃತ ವಚನದ ಅರ್ಥ ನೋಡುವವನು ದೃಶ್ಯದಲ್ಲಿ ಬದ್ಧನಾಗುತ್ತಾನೆ. ಅವನಿಗೆ ಯಾವುದು ಸತತವಾಗಿ ಕಾಣಿಸುತ್ತಿರುತ್ತದೆಯೋ, ಅದುವೇ ಅವನು ಮಾಡತೊಡಗುತ್ತಾನೆ. ಆಸ್ಪತ್ರೆಯಲ್ಲಿ ಮೊದಲ ಬಾರಿ ಶವವಿಚ್ಛೇದನೆಯನ್ನು ನೋಡುವ ವೈದ್ಯಕೀಯ ವಿದ್ಯಾರ್ಥಿ ಮೊದಲಿಗೆ ತಲೆತಿರುಗಿ ಬೀಳಬಹುದು, ಅವನಿಗೆ ಹೊಟ್ಟೆ ತೊಳೆಸಿದಂತಾಗಬಹುದು; ಆದರೆ ಕಾಲಾಂತರದಲ್ಲಿ ಅವನಿಗೆ ಅದರ ಬಗ್ಗೆ ಏನೂ ಅನಿಸುವುದಿಲ್ಲ. ಅದೇ ರೀತಿ ನ್ಯಾಯವಾದಿಗಳು ಸಹ ಷಡ್ರಿಪುಯುಕ್ತ ಜನರ ಜೊತೆಗೆ ಇರುತ್ತಾರೆ. ಕಾಲಾಂತರದಲ್ಲಿ ಅವರಿಗೂ ಅದರ ಅಭ್ಯಾಸವಾಗುತ್ತದೆ. ಜನರಲ್ಲಿ ಕಾಣಿಸುವ ತಪ್ಪು ನಡುವಳಿಕೆಗಳು ‘ಸಾಮಾನ್ಯ ವಿಷಯವಾಗಿದೆ’ ಎಂದು ಅನಿಸತೊಡಗುತ್ತದೆ. ಒಂದು ಸಲ ಈ ಸ್ಥಿತಿ ನಿರ್ಮಾಣವಾಯಿತೆಂದರೆ, ನ್ಯಾಯವಾದಿಗಳು ಸತ್ಯ-ಸುಳ್ಳು, ಒಳ್ಳೆಯದು-ಕೆಟ್ಟದ್ದು, ನೈತಿಕ-ಅನೈತಿಕ ಇವುಗಳ ನಡುವಿನ ರೇಖೆಯನ್ನು ಪರೋಕ್ಷವಾಗಿ ಕಡಿಮೆ ಮಾಡುತ್ತಾ ಹೋಗುತ್ತಾರೆ.

‘ಹಣ ಗಳಿಸುವುದು ಮತ್ತು ಸಂವಿಧಾನದಲ್ಲಿ ಹೇಳಿದಂತೆ ತಮ್ಮ ಕಕ್ಷಿದಾರರನ್ನು ರಕ್ಷಿಸುವುದು, ಇದು ನನ್ನ ಏಕೈಕ ಕರ್ತವ್ಯವಾಗಿದೆ ಎಂದು ನ್ಯಾಯವಾದಿಗೆ ಅನಿಸುತ್ತಿರುತ್ತದೆ, ಹಾಗೆಯೇ ಅದು ಯೋಗ್ಯವೇ ಆಗಿದೆ ಎಂದು ಸಿದ್ಧಪಡಿಸಲು ಅವನು ತನ್ನ ಬುದ್ಧಿಯನ್ನು ಉಪಯೋಗಿಸತೊಡಗುತ್ತಾನೆ. ‘ದೊರಕಿದ ಮೊಕದ್ದಮೆಯನ್ನು ನೈತಿಕತೆಯ ಆಧಾರದಲ್ಲಿ ತಿರಸ್ಕರಿಸಬಾರದು ಎಂಬ ತತ್ತ್ವವನ್ನು ನ್ಯಾಯವ್ಯವಸ್ಥೆಯು ಹಾಕಿ ಕೊಟ್ಟಿದ್ದರಿಂದ ಧರ್ಮ-ಅಧರ್ಮ, ಯೋಗ್ಯ-ಅಯೋಗ್ಯ ಇವೆಲ್ಲ ಚರ್ಚೆಗಳು ಹಿಂದೆ ಬೀಳುತ್ತವೆ. ಇಂತಹ ಸ್ಥಿತಿಯಲ್ಲಿ ಅದು ಕಪ್ಪು ಕೋಟು ಧರಿಸಿದ ಮತ್ತು ಬೌದ್ಧಿಕ ಸ್ತರದಲ್ಲಿ ಅಪರಾಧವನ್ನು ಮಾಡುವ ಗೂಂಡಾಗಳಾಗಿ ರೂಪಾಂತರವಾಗುವುದಿಲ್ಲವೇ ? ಮತ್ತು ಹಾಗಾದರೆ ಹಿಂದಿನ ಜನ್ಮದ ಪುಣ್ಯದಿಂದಾಗಿ ಅಥವಾ ಸಾಧನೆಯಿಂದ ಸಿಕ್ಕಿದ ವೈಭವವನ್ನು ವ್ಯರ್ಥ ಮಾಡಿ, ನ್ಯಾಯವಾದಿಗಳು ತಮ್ಮ ಆಯುಷ್ಯವನ್ನು ಹಾಳು ಮಾಡಿಕೊಳ್ಳುವುದಿಲ್ಲವೇ ? ಆದುದರಿಂದ ನ್ಯಾಯವಾದಿಗಳು ಸಾಧನೆಯನ್ನು ಮಾಡುವುದು ಆವಶ್ಯಕವಾಗಿದೆ.

೯. ನ್ಯಾಯವಾದಿಗಳು ತಮ್ಮ ವೃತ್ತಿಯನ್ನು ಆಧ್ಯಾತ್ಮಿಕ ದೃಷ್ಟಿಕೋನದಿಂದ ನೋಡಬೇಕು !

ಆಧುನಿಕ ವೈದ್ಯರು ಕೊರೊನಾ ಅಥವಾ ಇತರ ಸಾಂಕ್ರಾಮಿಕ ರೋಗಗಳಿಂದ ತಮ್ಮ ಜೀವದ ರಕ್ಷಣೆಯನ್ನು ಮಾಡಿಕೊಳ್ಳಲು ಆವಶ್ಯಕವಿದ್ದಾಗ ಮಾಸ್ಕ್ ಧರಿಸುವುದು, ಕೈಗಳನ್ನು ತೊಳೆದುಕೊಳ್ಳುವುದು ಇಂತಹ ಕಾಳಜಿಗಳನ್ನು ವಹಿಸುತ್ತಾರೆ. ಪುರೋಹಿತರು ಇತರರಿಗಾಗಿ ಆಧ್ಯಾತ್ಮಿಕ ವಿಧಿಯನ್ನು ಮಾಡಿದ ನಂತರ ಗಾಯತ್ರಿ ಮಂತ್ರ, ಸಂಧ್ಯಾ, ವಿಶ್ವದೇವ ಮುಂತಾದ ಉಪಾಸನೆಯನ್ನು ಮಾಡುವುದು ಆವಶ್ಯಕವಾಗಿರುತ್ತದೆ. ಹೀಗಿರುವಾಗ ಸ್ವಭಾವದೋಷ ಮತ್ತು ಷಡ್ರಿಪುಗಳಿಂದ ತುಂಬಿಕೊಂಡ ಜನರ ನಡುವೆ ಯಾವಾಗಲೂ ಓಡಾಡುತ್ತಿರುವಾಗ ನ್ಯಾಯವಾದಿಗಳಿಗೆ ಏನೂ ಮಾಡುವ ಆವಶ್ಯಕತೆ ಇಲ್ಲವೇ ?

ಈ ವಿಷಯಗಳು ತುಂಬಾ ಜಟಿಲವಾಗಿವೆ; ಆದುದರಿಂದ ನ್ಯಾಯವಾದಿಗಳು ಅವುಗಳನ್ನು ದುರ್ಲಕ್ಷಿಸಬಹುದು ಮತ್ತು ಹಣ ಸಂಪಾದನೆಯ ವಿಚಾರ ದೃಢವಾಗಬಹುದು. ನ್ಯಾಯವಾದಿಗಳ ಅಯೋಗ್ಯ ವಿಷಯಗಳ ಪರಿಣಾಮವು ಅವರ ಕುಟುಂಬದವರ ಜೀವನದ ಮೇಲೆಯೂ ಆಗಬಹುದು. ಇದನ್ನು ಗಮನದಲ್ಲಿಟ್ಟುಕೊಂಡು ಅವರು ತಮ್ಮ ವೃತ್ತಿಯನ್ನು ಆಧ್ಯಾತ್ಮಿಕ ದೃಷ್ಟಿಕೋನದಿಂದ ನೋಡುವುದು ಆವಶ್ಯಕವಾಗಿದೆ. ಇದರ ಬಗ್ಗೆ ಅವರು ಗಾಂಭೀರ್ಯದಿಂದ ವಿಚಾರ ಮಾಡಬೇಕು; ಏಕೆಂದರೆ ಅವರೂ ಸಾಧನೆಯನ್ನು ಮಾಡುವುದು ಅತ್ಯಂತ ಆವಶ್ಯಕವಾಗಿದೆ.

೧೦. ನ್ಯಾಯವಾದಿ ಎಂದರೆ ಬಾಡಿಗೆಯ ಯೋಧನಲ್ಲ !

ವಿದೇಶದಲ್ಲಿ ‘ಮರ್ಸಿನರಿ’ (mercenary) ಎಂಬ ಒಂದು ಸಂಕಲ್ಪನೆ ಇದೆ. ‘ಮರ್ಸಿನರಿ’ ಎಂದರೆ ಹಣವನ್ನು ನೀಡುವವರ ಪರವಾಗಿ ಹೋರಾಡುವ ಸೈನಿಕ ಅಥವಾ ಯೋಧ ! ಈ ಶಬ್ದದ ಅರ್ಥ ‘ನೀತಿಯನ್ನು ಧಿಕ್ಕರಿಸಿ ಹಣಕ್ಕಾಗಿ ಕೆಲಸವನ್ನು ಮಾಡುವವನು’, ಎಂದೂ ಆಗುತ್ತದೆ. ನ್ಯಾಯವಾದಿಗಳು ತಮ್ಮ ಕಕ್ಷಿದಾರರಿಗಾಗಿ ಹೋರಾಡುತ್ತಾರೆ. ಅವರಿಂದ ಅದರ ಹಣವನ್ನೂ ಪಡೆಯುತ್ತಾರೆ. ‘ಎಷ್ಟು ದೊಡ್ಡ ಸಾಮಾಜಿಕ ಪ್ರತಿಷ್ಠೆ ಇರುವ ಕಕ್ಷಿದಾರ ಮತ್ತು ಎಷ್ಟು ಗಂಭೀರ ಅವನ ಹಗರಣವೋ, ಅವನಿಂದ ಅಷ್ಟು ಹೆಚ್ಚು ಉತ್ಪನ್ನ. ‘ಇಂತಹ ಕಕ್ಷಿದಾರರಿರುವ ನ್ಯಾಯವಾದಿ ಎಂದರೆ ದೊಡ್ಡ ವ್ಯವಸಾಯವಿರುವ ನ್ಯಾಯವಾದಿ, ಇಂದು ಇಂತಹ ಒಂದು ಪ್ರತಿಷ್ಠೆ ಸಮಾಜದಲ್ಲಿ ನಿರ್ಮಾಣವಾಗುತ್ತಾ ಹೋಗುತ್ತಿದೆ.

ನ್ಯಾಯವಾದಿಗಳಲ್ಲಿರುವ ಬುದ್ಧಿ, ಏಕಾಗ್ರತೆ, ವಾಕ್ಚಾತುರ್ಯ, ಶಬ್ದಸಂಪತ್ತು, ಕಾನೂನಿನ ಸೂಕ್ಷ್ಮತೆಗಳನ್ನು ಕೂಡಲೇ ತಿಳಿದುಕೊಳ್ಳುವ ಕ್ಷಮತೆ, ನ್ಯಾಯಾಧೀಶರು, ಪ್ರತಿಪಕ್ಷಗಳ ವಕೀಲರ ಮನಸ್ಸಿನಲ್ಲಿ ಏನು ನಡೆದಿದೆ ? ಮತ್ತು ಅದರ ಲಾಭವನ್ನು ಹೇಗೆ ಪಡೆಯಬೇಕು ? ಎಂಬುದನ್ನು ತಿಳಿದುಕೊಳ್ಳುವ  ಕ್ಷಮತೆ, ಹಾಗೆಯೇ ಇಂತಹ ಅನೇಕ ಗುಣಗಳು ವ್ಯಕ್ತಿಯು ಕೇವಲ ಅಭ್ಯಾಸದಿಂದ ಪಡೆಯುತ್ತಾನೆ, ಎಂದೇನಿಲ್ಲ. ಒಂದು ವೇಳೆ ಹೀಗಿದ್ದರೆ ಎಲ್ಲ ವಕೀಲರೂ ಒಂದೇ ಕ್ಷಮತೆಯವರಾಗಿರುತ್ತಿದ್ದರು. ಕೆಲವು ವಿಷಯಗಳು ಜನ್ಮದಿಂದಲೇ ಬಂದಿರುತ್ತವೆ, ಅವು ಎಲ್ಲಿಂದ ಬರುತ್ತವೆ ? ಇದಕ್ಕೆ ಉತ್ತರ ವಿಜ್ಞಾನದಲ್ಲಿಲ್ಲ, ‘ಅವು ಪೂರ್ವಜನ್ಮದ ಸಾಧನೆಯಿಂದ ಅಥವಾ ಪೂರ್ವಜನ್ಮದ ಪುಣ್ಯದಿಂದ ಬರುತ್ತವೆ, ಎಂದು ಹೇಳಬೇಕಾಗುತ್ತದೆ. ಹಾಗಾದರೆ ಹಿಂದಿನ ಜನ್ಮದ ಪುಣ್ಯದಿಂದ ಪ್ರಾಪ್ತವಾದ ಗುಣಗಳನ್ನು ನ್ಯಾಯವಾದಿಗಳು ಯಾವುದಕ್ಕೆ ಬಳಸುತ್ತಾರೆ ?

ತಮ್ಮ ಗುಣಗಳನ್ನು ಮತ್ತು ಬುದ್ಧಿಯನ್ನು ಬಾಡಿಗೆಗೆ ಕೊಟ್ಟು ಹಣವನ್ನು ಸಂಪಾದಿಸಲು ಬಾಡಿಗೆಯನ್ನು ಯಾರು ಕೊಡುತ್ತಾರೆ ? ಯಾರ ಮೇಲೆ ಅಪರಾಧ ಮಾಡಿರುವ ಆರೋಪ ಇರುತ್ತದೆಯೋ, ಆ ಮನುಷ್ಯ. ನನಗೆ ಇದರಲ್ಲಿ  ನೈತಿಕತೆಯ ಬಗ್ಗೆ ಚರ್ಚೆ ಮಾಡಲಿಕ್ಕಿಲ್ಲ; ಆದರೆ ಇದೆಲ್ಲದಕ್ಕೂ ಒಂದು ಆಧ್ಯಾತ್ಮಿಕ ಭಾಗ ಇರಬಹುದೇ ? ನಮ್ಮ ಗುಣಗಳನ್ನು, ಬುದ್ಧಿವಂತಿಕೆಯನ್ನು ನಾವು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಕುಳಿತ್ತಿದ್ದೇವೆಯೇ ?, ಇಲ್ಲಿ ಅಪರಾಧಿಗಳು ಮತ್ತು ಕಾನೂನುಗಳನ್ನು ಉಲ್ಲಂಘಿಸುವುದನ್ನೇ ಧನ್ಯತೆ ಎಂದು ತಿಳಿದುಕೊಳ್ಳುವ ಗ್ರಾಹಕರೇ ಇರುತ್ತಾರೆ. ಹೀಗಿದ್ದಲ್ಲಿ ನ್ಯಾಯವಾದಿಗಳು ಅದರ ವಿಚಾರ ಮಾಡಬೇಕೇನು ? ಇಷ್ಟಾದರೂ ನ್ಯಾಯವಾದಿಗಳವರೆಗೆ ತಲುಪಬೇಕು, ಎಂಬ ಅಪೇಕ್ಷೆ ಇದೆ.

(ಮುಕ್ತಾಯ)

– ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ, ಅಧ್ಯಕ್ಷರು, ಹಿಂದು ವಿಧಿಜ್ಞ ಪರಿಷದ್ (೩೦.೪.೨೦೨೨)

ಸಾಧಕರಿಗೆ ಸೂಚನೆ ಮತ್ತು ವಾಚಕರಿಗೆ ಹಾಗೂ ಹಿತಚಿಂತಕರಿಗೆ ವಿನಂತಿ !

ಈ ಲೇಖನವನ್ನು ಓದಿದ ನಂತರ ವಕೀಲರು ಅಥವಾ ಸಮಾಜದಲ್ಲಿನ ವ್ಯಕ್ತಿಗಳಲ್ಲಿ ಯಾರಾದರೂ ನ್ಯಾಯಪ್ರಕ್ರಿಯೆಯ ಲೇಖನದಲ್ಲಿ ಹೇಳಿದಂತೆ ಅನುಭವ ಪಡೆದಿದ್ದರೆ, ಅಂತಹವರಿಗೆ ಈ ವಿಷಯದಲ್ಲಿ ಏನಾದರೂ ಹೇಳಲಿಕ್ಕಿದ್ದರೆ, ಅವರು ಈ ಮುಂದಿನ ವಿಳಾಸಕ್ಕೆ ತಮ್ಮ ಅನುಭವವನ್ನು ಕಳುಹಿಸಬೇಕು. ನಿಮ್ಮ ಹೆಸರನ್ನು ಗುಪ್ತವಾಗಿಡಬೇಕೆಂದು ಅನಿಸಿದರೆ ಹಾಗೆ ಮಾಡಲಾಗುವುದು.

ವಿಳಾಸ : ನ್ಯಾಯವಾದಿ ನೀಲೆಶ ಸಾಂಗೋಲಕರ್, ‘ಸುಖಠಣಕರ ರಿಟ್ರೀಟ್, ಫ್ಲಾಟ್ ಕ್ರ. ಎಜಿ-೪, ವಾಗದೋರ, ನಾಗೇಶಿ, ಫೋಂಡಾ, ಗೋವಾ. ೪೦೩೪೦೧

ಸಂಪರ್ಕ ಕ್ರ. : ೯೫೯೫೯೮೪೮೪೪

ವಿ-ಅಂಚೆ : [email protected]