‘ಅನೇಕ ಸಲ ಸನಾತನ ಸಂಸ್ಥೆಯ ಸಾಧಕರು ಸಮಾಜದಲ್ಲಿನ ಆಧುನಿಕ ವೈದ್ಯರು, ವಕೀಲರು ಮುಂತಾದ ಗಣ್ಯ ವ್ಯಕ್ತಿಗಳನ್ನು ಸಂಪರ್ಕಿಸಲು ಹೋಗುತ್ತಾರೆ. ಅವರ ಜ್ಞಾನವನ್ನು ನೋಡಿ ಅನೇಕ ಸಾಧಕರಿಗೆ ಅವರಷ್ಟು ಬೌದ್ಧಿಕ ಕ್ಷಮತೆ ನಮ್ಮಲ್ಲಿಲ್ಲ ಅಥವಾ ಕಡಿಮೆ ಶಿಕ್ಷಣ ಪಡೆದ ಕೆಲವು ಸಾಧಕರಿಗೆ ‘ಅವರಿಗೆ ಸಾಧನೆಯ ಬಗ್ಗೆ ಹೇಗೆ ತಿಳಿಸಿ ಹೇಳುವುದು ಮತ್ತು ಸಂಸ್ಥೆಯ ಕಾರ್ಯದ ಬಗ್ಗೆ ಹೇಗೆ ಮನವರಿಕೆ ಮಾಡಿಕೊಡುವುದು ?’, ಎಂಬ ಕೀಳರಿಮೆ ಅನಿಸುತ್ತದೆ. ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ವಿವಿಧ ವಿಷಯಗಳ ಸಂಕಲನ ಮಾಡಿದ ಗ್ರಂಥಸಂಪತ್ತು ಅತ್ಯಮೂಲ್ಯವಾಗಿದ್ದು ಪೃಥ್ವಿಯ ಮೇಲೆ ಎಲ್ಲಿಯೂ ಲಭ್ಯವಿರದ ಜ್ಞಾನವು ಸನಾತನದ ಗ್ರಂಥಗಳಲ್ಲಿದೆ. ಅದರೊಂದಿಗೆ ಕಳೆದ ಕೆಲವು ವರ್ಷಗಳಲ್ಲಿ ಸಮಾಜದಲ್ಲಿನ ಎಲ್ಲ ಸ್ತರಗಳಲ್ಲಿನ ವ್ಯಕ್ತಿಗಳು ಸನಾತನ ಸಂಸ್ಥೆಯ ಅಧ್ಯಾತ್ಮಪ್ರಸಾರದ ಕಾರ್ಯವನ್ನು ಗಮನದಲ್ಲಿಟ್ಟುಕೊಂಡು ಮತ್ತು ಅದಕ್ಕನುಸಾರ ಕೃತಿಗಳನ್ನು ಮಾಡಿದ್ದರಿಂದ ಅವರಿಗೆ ಬಂದ ಅನುಭೂತಿಗಳಿಂದ ಸನಾತನದ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಆದುದರಿಂದ ಸಾಧಕರೇ, ನಮ್ಮ ಗುರುಗಳು ನೀಡಿದ ಜ್ಞಾನ ಅಮೂಲ್ಯವಾಗಿದ್ದರಿಂದ ಸಂಪರ್ಕ ಮಾಡುವಾಗ ಕೀಳರಿಮೆಯನ್ನು ಇಟ್ಟುಕೊಳ್ಳಬೇಡಿರಿ !
– ಸದ್ಗುರು ಸ್ವಾತಿ ಖಾಡ್ಯೆ, ಧರ್ಮಪ್ರಚಾರಕರು, ಸನಾತನ ಸಂಸ್ಥೆ.